Latest Updates
-
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ!
ಹಳೆಯ 5 ರೂಪಾಯಿ ನಾಣ್ಯ ಏನಾದವು..? ಎಲ್ಲಿಯೂ ಕಾಣಿಸಲ್ಲ ಏಕೆ ಗೊತ್ತಾ?
ನಾವು ಎಷ್ಟೊಂದು ನಾಣ್ಯಗಳು, ನೋಟುಗಳ ಬಳಸುತ್ತೇವೆ. ಎಲ್ಲಾ ವ್ಯವಹಾರವನ್ನು ಹಣದ ಮೂಲಕ ಮಾಡುತ್ತಿರುತ್ತೇವೆ. ಹಾಗೆ ಆಗಾಗ ಹೊಸ ಹೊಸ ನಾಣ್ಯಗಳು, ನೋಟುಗಳು ಬರುವುದು, ಹಳೆಯ ನೋಟುಗಳು, ನಾಣ್ಯಗಳು ಚಲಾವಣೆಯಿಂದ ದೂರಾಗುವುದು ಕೂಡ ನಾವು ನೋಡುತ್ತಿರುತ್ತೇವೆ. ಈಗ 2 ಸಾವಿರ ರೂಪಾಯಿಯ ನೋಟು ಸದ್ದಿಲ್ಲದೆ ನಮ್ಮ ನಡುವೆ ಮರೆಯಾಗಿದೆ. ಹೀಗೆ ಯಾವುದಾದರೊಂದು ಅಚ್ಚರಿಗಳು ನಮ್ಮ ನಡುವೆ ನಡೆಯುತ್ತಿರುತ್ತವೆ.
ಈಗ ಹಳೆಯ 5 ರೂಪಾಯಿ ನಾಣ್ಯ ಕೂಡ ನಮ್ಮ ನಡುವಿಂದ ಮರೆಯಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಹೌದು ಹಳೆಯ 5 ರೂಪಾಯಿ ನಾಣ್ಯಗಳು ಈಗ ಕಾಣಿಸುತ್ತಿಲ್ಲ. ಅದರ ಬದಲಾಗಿ ಹೊಸದಾಗಿ ಬಂದಿರುವ ಚಿನ್ನದ ಬಣ್ಣದಲ್ಲಿರುವ ಹೊಸ ನಾಣ್ಯಗಳು ಎಲ್ಲೆಡೆ ಕಾಣಸಿಗುತ್ತವೆ. ಹಾಗಾದ್ರೆ ಹಳೆಯ ಭಾರವಾದ 5 ರೂಪಾಯಿಯ ನಾಣ್ಯಗಳು ಏನಾದವು?

ಹಳೆಯ 5 ರೂಪಾಯಿ ನಾಣ್ಯಗಳು ದೊಡ್ಡದಾಗಿದ್ದವು ಅದರಲ್ಲಿ ಐದಾರು ಎಳೆಗಳು ಇರುತ್ತಿದ್ದವು. ದಪ್ಪವಾಗಿ ತೂಕವಾಗಿದ್ದ ಈ ನಾಣ್ಯಗಳು ಈಗ ಮರೆಯಾಗಿವೆ. ಎಲ್ಲಿಯೀ ಅಲ್ಲೊಂದು ಇಲ್ಲೊಂದು ಮಾತ್ರವೇ ಕಾಣಿಸುತ್ತಿವೆ. ಹಾಗಾದ್ರೆ ಮಾರುಕಟ್ಟೆಯಿಂದ ಏಕಾಏಕಿ ಈ ನಾಣ್ಯಗಳು ಮರೆಯಾಗಿದ್ದೇಕೆ. ಇದರ ಹಿಂದಿನ ಉದ್ದೇಶ ಏನಾಗಿತ್ತು ಎಂಬುದನ್ನು ನಾವಿಲ್ಲಿ ತಿಳಿಯೋಣ.
ಈ 5 ರೂಪಾಯಿ ನಾಣ್ಯವನ್ನು ಸಾಮಾನ್ಯವಾಗಿ ಕುಪ್ರೊ-ನಿಕಲ್ ಎಂಬ ಲೋಹ ಬಳಸಿ ಮಾಡಲಾಗುತ್ತಿತ್ತು. ಈ ಲೋಹ ದುಬಾರಿಯಾಗಿತ್ತಲ್ಲದೆ ಈಗ ಈ ಲೋಹವು ಈಗ ದುಬಾರಿಯಾಗಿರುವ ಜೊತೆಗೆ ಇದರ ಲಭ್ಯತೆ ಕೂಡ ಕಡಿಮೆಯಾಗುತ್ತಿದೆ. ಈ ನಾಣ್ಯಗಳು ಈಗ ಮರೆಯಾಗುತ್ತಿರಲು ಇದು ಕೂಡ ಒಂದು ಕಾರಣವಾಗಿದೆ. ಹಾಗೆ ಇದಕ್ಕಿಂತಲೂ ಮುಖ್ಯವಾದ ಕಾರಣಗಳನ್ನು ನಾವಿಲ್ಲಿ ಪಟ್ಟಿ ಮಾಡಬಹುದು.
ಬಾಂಗ್ಲಾದೇಶಕ್ಕೆ 5 ರೂ. ನಾಣ್ಯ ಅಕ್ರಮ ರವಾನೆ
ಈ ಹಳೆಯ 5 ರೂಪಾಯಿ ನಾಣ್ಯಗಳು ಪಕ್ಕದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಆರೋಪಗಳಿದ್ದವು. ಈ ಆರೋಪ ಆರ್‌ಬಿಐ ಗಮನಕ್ಕೂ ಕೂಡ ಬಂದಿತ್ತು. ಗಡಿಯಲ್ಲಿ ಅಕ್ರಮವಾಗಿ ಈ ನಾಣ್ಯಗಳ ರವಾನಿಸುತ್ತಿದ್ದರು ಇದನ್ನು ತಡೆಯುವ ಉದ್ದೇಶದಿಂದ ಆರ್‌ಬಿಐ ಹಳೆಯ 5 ರೂಪಾಯಿ ನಾಣ್ಯಗಳ ಚಲಾವಣೆಗೆ ಬ್ರೇಕ್ ಹಾಕಿತ್ತು ಎನ್ನಲಾಗಿದೆ.
ಬಾಂಗ್ಲಾದಲ್ಲಿ ಈ ನಾಣ್ಯ ಏನು ಮಾಡುತ್ತಿದ್ದರು?
ಬಾಂಗ್ಲಾದೇಶದಲ್ಲಿ ಈ ನಾಣ್ಯಗಳ ಬಳಸಿಕೊಂಡು ಬ್ಲೇಡ್ ತಯಾರಿಕೆ ಮಾಡುತ್ತಿದ್ದರಂತೆ. ಈ ನಾಣ್ಯಕ್ಕೆ ಬಳಸಿದ್ದ ಲೋಹಗಳು ಬ್ಲೇಡ್ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು. ಈ ಲೋಹವನ್ನು ಖರೀದಿಸಿ ಬ್ಲೇಡ್ ತಯಾರಿಸಲು ಹೆಚ್ಚು ವೆಚ್ಚವಾಗುತ್ತಿತ್ತು, ಆದ್ರೆ ಈ ನಾಣ್ಯಗಳಿಂದ 6ಕ್ಕೂ ಹೆಚ್ಚು ಬ್ಲೇಡ್‌ಗಳು ತಯಾರಾಗುತ್ತಿದ್ದವಂತೆ. 5 ರೂಪಾಯಿಯಲ್ಲಿ 12 ರೂಪಾಯಿ ಮೌಲ್ಯದ ಬ್ಲೇಡ್‌ಗಳ ತಯಾರಿಸಲಾಗುತ್ತಿತ್ತು. ಇದರಿಂದ ಬಾಂಗ್ಲಾದಲ್ಲಿ ಬ್ಲೇಡ್ ತಯಾರಿಕೆ ಲಾಭದಾಯಕವಾಗಿತ್ತು.
ಈ ಎಲ್ಲಾ ಕಾರಣಕ್ಕೆ 5 ರೂಪಾಯಿ ನಾಣ್ಯಗಳು ಭಾರತದಲ್ಲಿ ಚಲಾವಣೆಯಲ್ಲಿದ್ದರೂ ಕೂಡ ಸಂಖ್ಯೆಗಳು ಕ್ಷೀಣಿಸುತ್ತಿರುವುದು ಗಮನಕ್ಕೆ ಬಂದಿತ್ತು, ಹೀಗಾಗಿ ಆರ್‌ಬಿಐ ಈ ಹಳೆಯ 5 ರೂಪಾಯಿ ನಾಣ್ಯಗಳ ಬದಲಿಗೆ ಹೊಸ ರೀತಿ ವಿನ್ಯಾಸದಲ್ಲಿ ನಾಣ್ಯಗಳ ಹೊರತಂದಿತು. ಅಲ್ಲದೆ ಹಳೆಯ ನಾಣ್ಯಗಳ ಚಲಾವಣೆಯೂ ಕೂಡ ಇದರಿಂದ ಕಡಿಮೆಯಾಗ ತೊಡಗಿತು. ಈಗ ಅಲ್ಲಲ್ಲಿ ಮಾತ್ರ ಹಳೆಯ 5 ರೂಪಾಯಿ ನಾಣ್ಯಗಳು ನೋಡಲು ಸಿಗುತ್ತಿವೆ.
ಇನ್ನೊಂದು ಕಡೆ ಈ 5 ರೂಪಾಯಿ ನಾಣ್ಯಗಳ ಹೊರತರುವುದು ಕೂಡ ವೆಚ್ಚದಾಯಕವಾಗಿತ್ತು, ಒಂದು ನಾಣ್ಯ ಬರೋಬ್ಬರಿ 9 ಗ್ರಾಮ್ ತೂಕ ಬರುತ್ತಿದ್ದವು. ಈ ಎಲ್ಲಾ ಅಂಶಗಳ ಗಮನದಲ್ಲಿಟ್ಟುಕೊಂಡ ಆರ್‌ಬಿಐ ನಾಣ್ಯದ ಮುದ್ರಣ ನಿಲ್ಲಿಸಿತ್ತು.



Click it and Unblock the Notifications