Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ನವರಾತ್ರಿಯಲ್ಲಿ ಯಾವ ಕನಸು ಬೀಳುವುದು ಶುಭ ಸಂಕೇತ? ನಿಮಗೂ ಈ ಕನಸು ಬಿದ್ದಿದ್ಯಾ?
ದೇಶದಾದ್ಯಂತ ಈಗ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಅದ್ದೂರಿಯಾಗಿ ನವರಾತ್ರಿ ಆಚರಣೆ ನಡೆಯುತ್ತಿದ್ದು, ಅಕ್ಟೋಬರ್ 2ರಂದು ವಿಜಯದಶಮಿ ಆಚರಣೆಗೆ ಹಾಗೆ ಮೈಸೂರಿನ ಜಂಬೂಸವಾರಿಗೆ ಕ್ಷಣ ಗಣನೆ ಆರಂಭಗೊಂಡಿದೆ. ಇಡೀ ವಾರದಲ್ಲಿ ದೇವಿಯ ಆರಾಧನೆ ನಡೆಯಲಿದ್ದು, ಲಕ್ಷಾಂತರ ಮಂದಿ ಭಕ್ತರು ದೇವಿಯ ದರ್ಶನಕ್ಕೆ ದೂರ ದೂರದ ಪ್ರಯಾಣ ಮಾಡುತ್ತಾರೆ.
ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ನವರಾತ್ರಿಯನ್ನು ಬಹಳ ಪ್ರಮುಖ ವಿದ್ಯಮಾನದ ದಿನ ಎಂದು ಪರಿಗಣಿಸಲಾಗಿದೆ. ಅದ್ರಲ್ಲೂ ನವರಾತ್ರಿಯ ವಾರದಂದು ನಿಮಗೆ ಕನಸುಗಳು ಬೀಳುವುದು ಕೂಡ ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಅದ್ರಲ್ಲೂ ಈ ವಾರದಲ್ಲಿ ನಿಮಗೆ ಒಂದೊಂದು ರೀತಿಯ ಕನಸುಗಳು ಬೀಳುವುದು ಒಂದೊಂದು ರೀತಿಯಲ್ಲಿ ಶುಭ ಹಾಗೂ ಅಶುಭ ಪ್ರಭಾವ ತರಲಿದೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ನವರಾತ್ರಿಯ ಸಮಯದಲ್ಲಿ ಯಾವ ಕನಸುಗಳು ಯಾವ ಅರ್ಥವನ್ನು ತರಲಿದೆ. ನಿಮಗೆ ಯಾವ ರೀತಿ ಕನಸುಗಳು ಬಿದ್ದಿವೆ. ಯಾರಿಗೆ ಯಾವ ಕನಸು ಬೀಳುವುದು ಉತ್ತಮ ಎಂಬೆಲ್ಲಾ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಕನಸಿನಲ್ಲಿ ಸಿಂಹ ಅಥವಾ ಜಿಂಕೆ ಕಾಣಿಸಿಕೊಳ್ಳುವುದು
ನಿಮಗೆ ಕನಸಿನಲ್ಲಿ ಸಿಂಹ ಅಥವಾ ಜಿಂಕೆ ಕಾಣಿಸಿಕೊಂಡಿರಬಹುದು. ನವರಾತ್ರಿ ಸಮಯದಲ್ಲಿ ಈ ರೀತಿ ಪ್ರಾಣಿಗಳು ಕನಸಿನಲ್ಲಿ ಬರುವುದು ಶುಭವೆಂದು ಪರಿಗಣಿಸಲಾಗುತ್ತದೆ. ಸಿಂಹವು ಪ್ರಗತಿಯ ಸಂಕೇತವಂತೆ. ನೀವು ದೇವಿಯ ಆಶೀರ್ವಾದ ಪಡೆದಿದ್ದರೆ ನಿಮ್ಮಲ್ಲೂ ಪ್ರಗತಿಯ ಮುನ್ಸೂಚನೆ ಇದ್ದಾಗ ಕನಸಿನಲ್ಲಿ ಸಿಂಹ ದರ್ಶನವಾಗಲಿದೆ, ಹಾಗೆ ಶತ್ರುಗಳ ಮೇಲೆ ನಿಮ್ಮ ಯಶಸ್ಸಿನ ಸಂಕೇತವು ಇದು ಆಗಿರಲಿದೆ. ಹಾಗೆ ಜಿಂಕೆ ಕಾಣಿಸಿಕೊಂಡರೆ ನಿಮ್ಮ ವ್ಯವಹಾರಗಳು ವೇಗ ಪಡೆಯಲಿವೆ ಎಂಬರ್ಥವಂತೆ. ನಿಮ್ಮಿಂದಾಗಿ ಮತ್ತಷ್ಟು ಉತ್ತಮ ಕೆಲಸಗಳು, ಸಮಾಜದಲ್ಲಿ ನಿಮಗೆ ಗೌರವ ಘನತೆ ಹೆಚ್ಚಾಗುವ ಸಮಯ ಎಂದು ಪರಿಗಣಿಸಲಾಗುತ್ತದೆ.
ಕನಸಿನಲ್ಲಿ ದುರ್ಗಾದೇವಿ ಅಥವಾ ಪಾರ್ವತಿ ಕಾಣಿಸುವುದು
ನವರಾತ್ರಿ ಸಮಯದಲ್ಲಿ ನಿಮಗೆ ದುರ್ಗಾದೇವಿ ಅಥವಾ ಪಾರ್ವತಿ ದೇವಿ ಕನಸಿನಲ್ಲಿ ಬಂದರೆ ಅತ್ಯಂತ ಶುಭದಾಯಕವಂತೆ. ಇದು ನಿಮ್ಮ ದಾಂಪತ್ಯ, ಕೌಟುಂಬಿಕ ವಿಚಾರದಲ್ಲಿ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗಿದೆ. ಭವಿಷ್ಯದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸಿನ ಸಂಕೇತ ಎನ್ನಲಾಗುತ್ತದೆ. ಹಾಗೆ ದೇವಿಯ ದರ್ಶನವು ನಿಮ್ಮ ಉದ್ಯೋಗದಲ್ಲಿರುವವರಿಗೆ ಮತ್ತು ವ್ಯಾಪಾರ ವಲಯದಲ್ಲಿರುವವರಿಗೆ ಲಾಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಬಹುತೇಕರಲ್ಲಿ ಈ ಸಮಯ ಸಂತೋಷದ ವಾತಾವರಣಕ್ಕೆ ಕಾರಣವಾಗಲಿದೆ.
ಕನಸಿನಲ್ಲಿ ಮೊಲ ಅಥವಾ ನವಿಲು
ನಿಮ್ಮ ಕನಸಿನಲ್ಲಿ ಅದರಲ್ಲೂ ನವರಾತ್ರಿಯ ಈ ವಾರದಲ್ಲಿ ಮೊಲ ಹಾಗೆ ನವಿಲು ಬಂದರೆ ಶುಭವಾಗಲಿದೆ. ವಿದ್ಯಾರ್ಥಿ ವರ್ಗವು ಈ ಸಮಯದಿಂದ ಅದೃಷ್ಟದ ದಿನ ನೋಡುವಿರಿ. ನಿಮ್ಮ ಬುದ್ದಿವಂತಿಕೆಯ ಕಾರಣದಿಂದ ದೊಡ್ಡ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪಡೆಯುತ್ತೀರಿ. ನವಿಲನ್ನು ಕನಸಿನಲ್ಲಿ ನೋಡುವುದು ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯುವ ಮುನ್ಸೂಚನೆಯಂತೆ.
ಕನಸಿನಲ್ಲಿ ದೊಡ್ಡ ಹೂವು ನೋಡುವುದು
ನವರಾತ್ರಿಯ ವಾರದಲ್ಲಿ ನಿಮ್ಮ ಕನಸಿನಲ್ಲಿ ದೊಡ್ಡ ಹೂವುಗಳನ್ನು ನೋಡುವುದು ನಿಮಗೆ ಅದೃಷ್ಟವಂತೆ. ದೇವಿಯ ಆಶೀರ್ವಾದ ಪಡೆಯಲು ಹೂವುಗಳ ಅರ್ಪಿಸುವುದು ನೋಡಬಹುದು. ಹೀಗಾಗಿ ಹೂವಿನ ಕನಸು ಬೀಳುವುದು ನಿಮ್ಮ ಕನಸುಗಳ ಈಡೇರಿಸಿಕೊಳ್ಳಲು ಪರೋಕ್ಷವಾಗಿ ಕಾರಣವಾಗಲಿದೆ. ಹಾಗೆ ನಿಮ್ಮಲ್ಲಿ ಯಾವುದಾದರು ಕೆಲಸ ಬಾಕಿ ಉಳಿದರೆ ಅದು ಸಮರ್ಪಿತ ಭಾವದಲ್ಲಿ ಮಾಡಿ ಮುಗಿಸುವಿರಿ. ಆದ್ರೆ ಕನಸಿನಲ್ಲಿ ನೀವು ಕಮಲ, ತಾವರೆ, ಬ್ರಹ್ಮ ಕಮಲದಂತಹ ದೊಡ್ಡ ಹೂವುಗಳನ್ನು ನೋಡುವಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications











