Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಾವು ಪದೇ ಪದೇ ನಿಮ್ಮ ಕನಸಿನಲ್ಲಿ ಬರ್ತಿದ್ಯಾ? ಹಾಗಾದ್ರೆ ಈ ಸೂಚನೆ ಇರಬಹುದು!
ಮನುಷ್ಯನಿಗೆ ಕನಸುಗಳು ಬೀಳೋದು ಸಾಮಾನ್ಯ ಅದ್ರಲ್ಲಿ ಕೆಲವು ಒಳ್ಳೆಯ ಕನಸುಗಳಾದರೆ ಇನ್ನೂ ಕೆಲವು ಕೆಟ್ಟ ಕನಸುಗಳು. ಒಳ್ಳೆಯ ಕನಸುಗಳೆಂದರೆ ಖುಷಿ ಪಡುವ ಜನ ಅದೇ ಕೆಟ್ಟ ಕನಸುಗಳೆಂದರೆ ಸಾಕು ಒಂದು ಸಾರಿ ಬೆಚ್ಚಿ ಬೀಳುತ್ತಾರೆ. ಅದ್ರಲ್ಲೂ ಹಾವಿನ ಕನಸು ಬಿದ್ದರಂತೂ ಕೇಳೋದೇ ಬೇಡ. ಒಂದು ರೀತಿಯ ಭಯ ಮನುಷ್ಯನನ್ನು ಆವರಿಸಿ ಬಿಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯರಿಗೆ ಹಾವಿನ ಕನಸು ಬಿದ್ದರೆ ಏನರ್ಥ? ಅದ್ರಲ್ಲೂ ಬಣ್ಣ ಬಣ್ಣದ ಹಾವುಗಳು ನಿಮ್ಮ ಕನಸಿನಲ್ಲಿ ಬಂದರೆ ಅವುಗಳು ಏನನ್ನು ಸೂಚಿಸುತ್ತವೆ ಎಂದು ತಿಳಿದುಕೊಳ್ಳೋಣ.
1. ಕೆಂಪು ಹಾವು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಂಪು ಹಾವು ನಿಮ್ಮ ಕನಸಿನಲ್ಲಿ ಬಂದರೆ ಒಳ್ಳೆಯದು. ಕೆಂಪು ಹಾವು ನಿಮ್ಮ ಶಕ್ತಿ ಹಾಗೂ ಚೈತನ್ಯದ ಸಂಕೇತ. ಕೆಂಪು ಹಾವು ಕನಸಿನಲ್ಲಿ ಕಂಡರೆ ನೀವು ಜೀವನದಲ್ಲಿ ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬ ಸೂಚನೆಯಾಗಿದೆ. ನೀವು ಮಾಡುವ ಕೆಲಸದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮತ್ತು ನಿಮ್ಮ ಗುರಿಗಳ ಬಗ್ಗೆ ನೀವು ಹೆಚ್ಚು ಕೇಂದ್ರೀಕರಿಸಬೇಕೆಂದು ಅರ್ಥ.

2. ಕಪ್ಪು ಹಾವು
ಕಪ್ಪು ಹಾವು ನಿಮ್ಮ ಕನಸಿನಲ್ಲಿ ಬಂದರೆ ಅದು ನಿಮ್ಮೊಳಗಿನ ಆಂತರಿಕ ಕತ್ತಲೆಯ ಸಂಕೇತವನ್ನು ಸೂಚಿಸುತ್ತದೆ. ಅಪರಾಧ, ಕತ್ತಲೆ ಅಥವಾ ಖಿನ್ನತೆ ಯಾವುದು ಕೂಡ ಆಗಿರಬಹುದು. ಕನಸಿನಲ್ಲಿ ಕಪ್ಪು ಹಾವು ಬಂದರೆ ನಿಮಗೆ ಭವಿಷ್ಯದಲ್ಲಿ ಆಗುವ ಆಪಾಯಗಳ ಸೂಚನೆಯಾಗಿದೆ. ಹೀಗಾಗಿ ಈ ಸಮಯದಲ್ಲಿ ನೀವು ಹೆಚ್ಚಾಗಿ ಸಕಾರಾತ್ಮಕ ಅಂಶಗಳ ಬಗ್ಗೆ ಕೇಂದ್ರೀಕರಿಸುವುದು ತುಂಬಾನೇ ಮುಖ್ಯವಾಗುತ್ತದೆ.
3. ಹಸಿರು ಹಾವು
ಹಸಿರು ಹಾವುಗಳು ನಿಮ್ಮ ಕನಸಿನಲ್ಲಿ ಬಂದರೆ ಇದು ಚಿಕಿತ್ಸೆಗೆ ಸಂಬಂಧಿಸಿದ್ದಾಗಿದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಬಂದ ಹಾವು ಕಡು ಹಸಿರು ಬಣ್ಣದಲ್ಲಿದ್ದರೆ ತಾತ್ವಿಕ ರೀತಿಯ ಚಿಕಿತ್ಸೆ ಹಾಗೂ ಹಾವು ತಿಳಿ ಹಸಿರು ಬಣ್ಣದಲ್ಲಿದ್ದರೆ ದೈಹಿಕ ರೀತಿಯ ಚಿಕಿತ್ಸೆಯನ್ನು ನೀವು ಪಡೆಯಬೇಕೆಂದು ಸೂಚಿಸುತ್ತದೆ. ಇದಿಷ್ಟೇ ಅಲ್ಲದೇ ಕನಸಿನಲ್ಲಿ ಹಸಿರು ಹಾವು ಕಾಣಿಸಿಕೊಂಡರೆ ಆಧ್ಯಾತ್ಮಿಕ ಜಾಗೃತಿಯ ಕಡೆಗೆ ವೈಯಕ್ತಿಕ ಬೆಳವಣಿಗೆ ಮತ್ತು ಚಲನೆಯನ್ನು ಸಹ ಸೂಚಿಸುತ್ತದೆ.
4. ಗುಲಾಬಿ ಹಾವು
ಗುಲಾಬಿ ಹಾವಿನ ಕನಸು ಸಾಮಾನ್ಯವಾಗಿ ಸಂತೋಷ, ಪ್ರೀತಿ ಮತ್ತು ಸಂತೋಷವನ್ನು ಸಂಕೇತಿಸುತ್ತದೆ. ಗುಲಾಬಿಯು ಸ್ತ್ರೀ ಶಕ್ತಿಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದೆ, ಆದ್ದರಿಂದ ನೀವು ಪ್ರಸ್ತುತ ನಿರ್ಲಕ್ಷಿಸುತ್ತಿರುವ ಸ್ತ್ರೀಯರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಎಂಬ ಸಂಕೇತವನ್ನು ಸೂಚಿಸುತ್ತದೆ.
5. ನೀಲಿ ಹಾವು
ನಿಮ್ಮ ಕನಸಿನಲ್ಲಿ ನೀಲಿ ಹಾವನ್ನು ಕಂಡರೆ ಸಾಮಾನ್ಯವಾಗಿ ಅದು ಧನಾತ್ಮಕ ಸಂಕೇತವಾಗಿದೆ. ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎಂದು ಇದು ಸೂಚಿಸುತ್ತದೆ. ಇದು ಸೃಜನಶೀಲತೆ ಮತ್ತು ಬುದ್ಧಿವಂತಿಕೆಯ ಸಂಕೇತವೂ ಆಗಿದೆ. ಆದ್ದರಿಂದ ಕನಸಿನಲ್ಲಿ ನೀಲಿ ಹಾವು ಕಂಡರೆ ಯಾವುದೇ ರೀತಿ ಭಯವಿಲ್ಲ. ನೀವು ಯಾವುದೇ ತೊಂದರೆಗಳಿಲ್ಲದೇ ಆರಾಮಾಗಿ ಇರಬಹುದು.
6. ಹಳದಿ ಹಾವು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಳದಿ ಬಣ್ಣದ ಹಾವಿನ ಕನಸು ಕೂಡ ಧನಾತ್ಮಕ ಸಂಕೇತವಾಗಿದೆ. ಹಳದಿ ಬಣ್ಣವು ಹೆಚ್ಚಾಗಿ ಸಂತೋಷದೊಂದಿಗೆ ಸಂಬಂಧ ಹೊಂದಿದೆ. ಆದರೆ ಹಳದಿ ಹಾವನ್ನು ನೋಡುವುದು ಸಂತೋಷವೇನೋ ಸರಿ ಆದರೆ ಕೊನೆಯಲ್ಲಿ ನೀವು ಕೊಂಚ ದುಃಖವನ್ನು ಅನುಭವಿಸುತ್ತೀರಿ. ಆದರೆ ಆರಂಭದಲ್ಲಿ ನೀವು ಎಲ್ಲಾ ರೀತಿ ಖುಷಿಯನ್ನು ಪಡೆಯುತ್ತೀರಿ ಎಂದರ್ಥ.
7. ಬಿಳಿ ಹಾವು
ಬಿಳಿ ಹಾವು ರಹಸ್ಯವನ್ನು ಸೂಚಿಸುತ್ತದೆ. ಇದರ ಅರ್ಥ ನೀವು ಭವಿಷ್ಯದಲ್ಲಿ ಯಾವುದಾದರೂ ದೊಡ್ಡ ರಹಸ್ಯವನ್ನು ಮರೆ ಮಾಚುತ್ತೀರಿ. ಹಾಗೂ ನಿಮ್ಮಲ್ಲಿರುವ ಒಂದು ರಹಸ್ಯವನ್ನು ನೀವು ಬೇರೆ ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಎಂಬುವುದನ್ನು ಸೂಚಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರವು ನಿಮ್ಮ ಕನಸಿನಲ್ಲಿ ಕಂಡ ಹಾವುಗಳ ಬಣ್ಣದ ಆಧಾರದ ಮೇಲೆ ಅವುಗಳು ಏನನ್ನೂ ಸೂಚಿಸುತ್ತದೆ ಎಂಬುವುದನ್ನು ತಿಳಿಸುತ್ತದೆ. ಹಾಗಂತ ನೀವು ಇದನ್ನು ನಂಬಲೇಬೇಕು ಅಂತ ನಾವು ಹೇಳುತ್ತಿಲ್ಲ. ನಂಬಿಕೆ ಅನ್ನೋದು ಅವರವರ ಮನಸ್ಥಿತಿಗೆ ಬಿಟ್ಟ ವಿಚಾರ.



Click it and Unblock the Notifications

