Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕನಸಿನಲ್ಲಿ ಹಣ ಸಿಕ್ಕಂತೆ ಅಥವಾ ಕಳೆದುಕೊಂಡಂತೆ ಕನಸು ಬಿದ್ದರೆ ಏನರ್ಥ?
ಕನಸುಗಳು ಎಲ್ಲರಿಗೂ ಬೀಳುತ್ತದೆ, ಆದರೆ ಕೆಲವೊಂದು ಕನಸುಗಳು ತುಂಬಾ ಸುಂದರವಾಗಿರುತ್ತದೆ, ನಂತರ ನಮಗೆ ಎಚ್ಚ್ರವಾದಾಗ ಛೇ ಎಂಂಥ ಸುಂದರವಾದ ಕನಸು ಹಾಗೇ ಆಗಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ವಾ ಎಂದನಿಸುವುದು ಅಲ್ವಾ , ಆದರೆ ಇನ್ನು ಕೆಲ ಕನಸು ಒಂದು ರೀತಿ ಸಣ್ಣ ತಳಮಳ ಉಂಟು ಮಾಡುತ್ತದೆ, ಇನ್ನು ಕೆಲವೊಮ್ಮೆ ಈ ಕನಸು ಏಕೆ ಬಿತ್ತು ಎಂದು ಡಿಕೋಡ್ ಮಾಡಲು ಹೋಗುತ್ತೇವೆ ಅಂಥ ಕನಸುಗಳಲ್ಲೊಂದು ಹಣದ ಕನಸು.
ನಾಣ್ಯದ ಕನಸು ಬೀಳುತ್ತೆ, ನೋಟು ಕಂತೆಗಳ ಕನಸು ಬೀಳಬಹುದು ಅಥವಾ ಹಣ ಕಳೆದುಕೊಂಡಂತೆ ಕನಸು ಬೀಳಬಹುದು, ಯಾವ ಕನಸಿಗೆ ಏನರ್ಥ ಎಂದು "Dream Guidance: Interpret Your Dreams and Create the Life You Desire" ನಲ್ಲಿ ಹೇಳಲಾಗಿದೆ.

ನಿಮಗೆ ಹಣ ಸಿಕ್ಕಂತೆ ಕಂಡರೆ ಏನರ್ಥ?
ನಾವು ನಡೆದು ಹೋದಾಗ ಹಣ ಸಿಕ್ಕಂತೆ ಕನಸು ಬೀಳುವುದು ಅಥವಾ ನಮ್ಮ ಪರ್ಸಿನಲ್ಲಿ ಹಣವಿರುವಂತೆ ಕನಸು ಕಾಣುವುದು ನೀವು ನಿಮ್ಮ ಸಾಧನೆಯನ್ನು ಅಥವಾ ನಿಮ್ಮ ಕೆಲಸವನ್ನು ನೀವು ಮೆಚ್ಚಿಕೊಂಡಿದ್ದು ಅದರಿಂದ ನಿಮಗೆ ಖಂಡಿತ ಒಳಿತಾಗುತ್ತದೆ ಎಂದು ಮನಸ್ಸಿನಲ್ಲಿದ್ದಾಗ ಈ ರೀತಿ ಕನಸು ಬೀಳಬಹುದು. ಒಂದು ವೇಳೆ ನೀವು ನಿಮ್ಮದಲ್ಲದ ಹಣ ಸಿಕ್ಕಂತೆ ಕನಸು ಕಂಡರೆ ನಿಮಗೆ ಬೇರೆಯವರಿಂದ ಒಳಿತಾಗಲಿದೆ ಎಂದರ್ಥ.
ಹಣ ಕಳೆದು ಹೋದಂತೆ ಕನಸು ಬಿದ್ದರೆ
ನೀವು ಹಣವನ್ನು ಕಳೆದುಕೊಂಡಂತೆ ಅಥವಾ ನಿಮ್ಮ ಪರ್ಸ್ ಕಳೆದು ಹೋದಂತೆ ಕನಸು ಬಿದ್ದರೆ ಅದು ನಿಮ್ಮ ಭವಿಷ್ಯದ ಬಗ್ಗೆ ನಿಮಗಿರುವ ಆತಂಕವನ್ನು ಸೂಚಿಸಬಹುದು. ನಿಮ್ಮಲ್ಲಿ ಹಣ ನಷ್ಟವಾಗಬಹುದೇ ಎಂಬ ಭಯವಿದ್ದರೆ ಕೂಡ ಈ ರೀತಿ ಕನಸು ಬೀಳಬಹುದು. ಯಾವುದೋ ಅವ್ಯಕ್ತ ಭಯದಿಂದ ಈ ರೀತಿ ಉಂಟಾಗುತ್ತದೆ, ನಿಮ್ಮ ಭಾವನೆಗಳೇ ಕನಸಿನ ರೂಪದಲ್ಲಿ ಬಂದಿರಬಹುದು.
ನೀವು ಹಣವನ್ನು ಬೇರೆಯವರಿಗೆ ಕೊಡ್ತಾ ಇರುವಂತೆ ಕನಸು ಕಂಡರೆ
ನೀವು ಹಣವನ್ನು ಬೇರೆಯವರಿಗೆ ನೀಡ್ತಾ ಇರುವಂತೆ ಕನಸು ಕಂಡರೆ ಎಲ್ಲೋ ಒಂದು ಕಡೆ ನಿಮ್ಮ ಮನಸ್ಸಿನಲ್ಲಿ ಹಣ ಕಳೆದುಕೊಳ್ಳುವ ಭಯವಿದೆ ಎಂದರ್ಥ. ಆಸ್ತಿಕಳೆದುಕೊಳ್ಳಬಹುದು ಅಥವಾ ಕೆಲಸ ಕಳೆದುಕೊಳ್ಳಬಹುದು ಎಂಬ ಆತಂಕವಿದ್ದಾಗ ಈ ಬಗೆಯ ಕನಸು ಬೀಳುವುದು. ನಿಮಗೆ ಬಡತನದ ಭಯ ಕಾಡ್ತಾ ಇರಬಹುದು ಅಥವಾ ಹಣ ಲಾಸ್ ಆಗುತ್ತಿದೆ ಎಂದು ಆಲೋಚಿಸುತ್ತಿರಬಹುದು. ಈ ರೀತಿಯ ಭಾವನೆಗಳಿದ್ದಾಗ ಹಣವನ್ನು ನೀಡ್ತಾ ಇರುವಂತೆ ಕನಸು ಬೀಳಬಹುದು.
ಬೇರೆಯವರು ಹಣ ಕೊಡುವಂತೆ ಒತ್ತಾಯ ಮಾಡುವಂತೆ ಕನಸು ಬಿದ್ದರೆ
ಬೇರೆ ವ್ಯಕ್ತಿ ಕನಸಿನಲ್ಲಿ ಬಂದು ಪಡೆದ ಹಣ ಕೊಡು ಎಂದು ಒತ್ತಾಯ ಬೀಡುವಂತೆ ಕನಸು ಬಿದ್ದರೆ ನೀವು ಸಾಲ ಮಾಡಿದ್ದು ಆ ಹಣ ಮರಳಿ ಕೊಡುವುದು ಹೇಗೆ ಎಂಬ ಆತಮಕ ನಿಮ್ಮಲ್ಲಿದ್ದಾಗ ಈ ಬಗೆಯ ಕನಸು ಬೀಳಬಹುದು ಅಥವಾ ಪಡೆದ ಸಾಲ ಮುಗೀತು ಎಂಬ ತೃಪ್ತಿ ಭಾವ ನಿಮ್ಮಲ್ಲಿದ್ದಾಗ ಕೂಡ ಹಣ ಮರಳಿ ಕೊಡದಿದ್ದರೆ ಕೇಳಿ ತೊಂದರೆ ಕೊಡುತ್ತಿದ್ದರು ಸದ್ಯ ಮರಳಿ ಕೊಟ್ಟೇ ಅಲ್ಲ ಎಂಬ ತೃಪ್ತಿ ನಿಮ್ಮಲ್ಲಿದ್ದಾಗ ಕೂಡ ಈ ರೀತಿ ಕನಸು ಬೀಳಬಹುದು.
ಈ ರೀತಿಯೂ ಹೇಳಲಾಗುವುದು:
ನಿಮ್ಮ ಕನಸಿನಲ್ಲಿ ಕಾಯಿನ್ ಸಿಕ್ಕಂತೆ ಕನಸು ಕಂಡರೆ
ಇದು ಅದೃಷ್ಟದ ಸಂಕೇತ ಎಂದು ಹೇಳಲಾಗುವುದು, ಈ ರೀತಿ ಕನಸು ಬಿದ್ದರೆ ನಿಮ್ಮ ಬದುಕಿನಲ್ಲಿ ನೀವು ಕನಸು ಕಂಡಂತೆ ಎಲ್ಲವೂ ಆಗಲಿದೆ ಎಂಬುವುದರ ಸೂಚನೆಯೂ ಆಗಿರಬಹುದು, ಬಯಸಿದ ಕೆಲಸ ಸಿಗಬಹುದು.
ಪರ್ಸ್‌ನಲ್ಲಿ ಹಣವಿದ್ದಂತೆ ಕಂಡರೆ
ಈ ರೀತಿಯ ಕನಸು ಬಿದ್ದರೆ ನಿಮಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ, ಅಲ್ಲದೆ ವೃತ್ತಿ ಬದುಕಿನಲ್ಲಿ ,ಕುಟುಂಬ ಜೀವನದಲ್ಲಿ ಅಭಿವೃದ್ಧಿ ಕಾಣುತ್ತದೆ ಎಂದು ಸೂಚಿಸುತ್ತದೆ.
ಕೊಳೆಯಾದ ಹಣ ಕನಸಿನಲ್ಲಿ ಬಂದರೆ
ಇದು ಒಳ್ಳೆಯ ಸೂಚನೆಯಲ್ಲ ಎಂದು ಹೇಳಲಾಗುವುದು.
ಹಣ ಗೆದ್ದಂತೆ ಕನಸು ಕಂಡರೆ
ಈ ರೀತಿಯ ಕನಸು ಬಿದ್ದರೆ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ ಎಂಬುವುದರ ಸೂಚನೆಯಾಗಿದೆ.
ಹಣ ಕಳೆದುಕೊಂಡಂತೆ ಕನಸು ಕಂಡರೆ
ವೃತ್ತಿ ಬದುಕು ಅಥವಾ ಸಂಬಂಧದಲ್ಲಿ ಏನಾದರೂ ಏರಳಿತವಿದ್ದರೆ ಈ ರೀತಿಯ ಕನಸು ಬೀಳುತ್ತದೆ ಎಂದು ಹೇಳಲಾಗುವುದು.



Click it and Unblock the Notifications