Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮದ್ಯಪಾನಿಯ ಶ್ವಾಸಕೋಶ ಹೇಗಿರುತ್ತೆ.!? ವೈದ್ಯರು ಹಂಚಿಕೊಂಡ ಫೋಟೋ ಇಲ್ಲಿದೆ..!
ಮದ್ಯಪಾನ ಆರೋಗ್ಯಕ್ಕೆ ಎಷ್ಟೊಂದು ಹಾನಿಕಾರಕ ಎಂಬುದು ನಿಮಗೆಲ್ಲಾ ತಿಳಿದಿರಬಹುದು. ನಿತ್ಯ ಮದ್ಯಪಾನ ಮಾಡುವವರು ಅತೀ ಕಡಿಮೆ ಜೀವಿತಾವಧಿ ಹೊಂದಿರುತ್ತಾರೆ. ಮದ್ಯಪಾನವು ನೇರವಾಗಿ ಶ್ವಾಸಕೋಶ ಹಾಗು ನಮ್ಮ ಮೆದುಳಿನ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಇದರಿಂದ ನಿಮ್ಮ ಆರೋಗ್ಯ ಬಹಳ ಬೇಗ ಹಾಳಾಗುತ್ತದೆ.
ಮದ್ಯಪಾನ ಅದನ್ನು ಸೇವಿಸುವವನನ್ನು ಮಾತ್ರ ಹಾಳು ಮಾಡುವುದಿಲ್ಲ, ಬದಲಿಗೆ ಇಡೀ ಕುಟುಂಬಕ್ಕೆ ಇದೊಂದು ಶಾಪವಾಗಿ ಪರಿಣಮಿಸಲಿದೆ. ಇನ್ನು ಮದ್ಯಾಪಾನ ಕೇವಲ ಆತನ ಆರೋಗ್ಯ ಮಾತ್ರವಲ್ಲ ಸುತ್ತಮುತ್ತಲಿನವರ ಆರೋಗ್ಯವೂ ಸೇರಿ ಇಡೀ ಪರಿಸರವನ್ನೇ ಹಾಳು ಮಾಡುತ್ತದೆ. ಮದ್ಯಪಾನದಿಂದ ವ್ಯಕ್ತಿಯೊಬ್ಬನ ಜೀವನ ಬೀದಿ ಪಾಲಾಗುವ ಅದೆಷ್ಟೋ ಪ್ರಕರಣ ನಾವು ನೋಡಿರುತ್ತೇವೆ.

ಈಗಂತು ಮದ್ಯಪಾನ ಒಂದು ಟ್ರೆಂಡ್ ಎಂಬಂತೆ ಅನುಸರಿಸಲಾಗುತ್ತದೆ. ಕಾಲೇಜು ಹುಡುಗರಿಂದ ಹಿಡಿದು ಎಲ್ಲರೂ ಈಗ ಮದ್ಯಪಾನದ ಪಾರ್ಟಿಯೂ ಕೂಡ ನಡೆಯುವ ಕಾಲವಿದು. ಹಾಗೆ ಮದ್ಯಪಾನ ಒಂದು ಫ್ಯಾಷನ್ ಎನ್ನುವ ಕಾಲ. ಯುವಕರು ಮಾತ್ರವಲ್ಲ ಯುವತಿಯರು ಕೂಡ ಈಗ ಮದ್ಯಪಾನ ಮಾಡುವಂತಹ ಕಾಲವಾಗಿ ಬದಲಾಗಿದೆ.
ಹಾಗೆ ಈ ಮದ್ಯಪಾನದ ಪರಿಣಾಮವಾಗಿ ಮಾನವನ ದೇಹದಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ. ಯಾವೆಲ್ಲಾ ಅನಾರೋಗ್ಯಗಳಿಗೆ ಇದು ಕಾರಣವಾಗಲಿದೆ ಎಂಬುದನ್ನು ಕೂಡ ನಾವು ಪಟ್ಟಿ ಮಾಡಬಹುದು. ಹಲವು ರೀತಿಯ ಕ್ಯಾನ್ಸರ್ ಸೇರಿ ಮೆದುಳಿನ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ. ಹಾಗೆ ಇನ್ನೊಂದು ಕಡೆ ನಮ್ಮ ಶ್ವಾಸಕೋಶ ನೇರವಾಗಿ ಹಾನಿಗೆ ಒಳಗಾಗುತ್ತದೆ.
ಈಗ ಮದ್ಯಪಾನಿಯ ಶ್ವಾಸಕೋಶ ಹಾಗೂ ಮದ್ಯಪಾನ ಮಾಡದೆ ಇರುವಂತಹ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಹೇಗಿರಲಿದೆ ಎಂಬುದನ್ನು ವೈದ್ಯರೊಬ್ಬರು ವಿವರಿಸಿದ್ದಾರೆ. ಡಾ ಸಿರಿಯಾಕ್ ಅಬ್ಬಿ ಫಿಲಿಪ್ಸ್, ಪ್ರಮುಖವಾಗಿ ಆನ್‌ಲೈನ್‌ನಲ್ಲಿ 'ದಿ ಲಿವರ್ ಡಾಕ್' ಎಂದು ಕರೆಯಲ್ಪಡುತ್ತಾರೆ. ಅವರು ಹಂಚಿಕೊಂಡಿರುವ ಎರಡು ಫೋಟೋದಲ್ಲಿ ಒಂದು ಮದ್ಯಪಾನಿಯ ಶ್ವಾಸಕೋಶವೂ ಇದೆ.
ಕೇವಲ 32 ವರ್ಷ ವಯಸ್ಸಿನ, 'ವಾರಾಂತ್ಯದಲ್ಲಿ ಮಾತ್ರ' ಆಲ್ಕೋಹಾಲ್ ಸೇವಿಸುವ ವ್ಯಕ್ತಿಯ ಯಕೃತ್ತಿನ ಒಳಭಾಗವನ್ನು ಮತ್ತು ಅವರು ಸ್ವೀಕರಿಸಿದ ಅವರ ಹೆಂಡತಿಯ ಆರೋಗ್ಯಕರ ಲಿವರ್ ಅನ್ನು ತೋರಿಸಲು ಬಯಸಿದ್ದರು, ಅದು ಅವರ ಪುಟ್ಟ ಮಗಳು ಬೆಳೆಯುವುದನ್ನು ನೋಡಲು ಬದುಕಲು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಆರೋಗ್ಯವಂತ ಆಕೆಯ ಪತ್ನಿಯ ಶ್ವಾಸಕೋಶವು ಗುಲಾಬಿ ಬಣ್ಣದಲ್ಲಿದೆ. ಆದರೆ ಮದ್ಯಪಾನಿಯ ಯಕೃತ್ತಿನ ಬಣ್ಣವು ಗಾಢವಾಗಿರುವುದು, ಅಲ್ಲಲ್ಲಿ ಕಪ್ಪಾಗಿರುವುದನ್ನು ನೋಡಬಹುದು.
ವೈದ್ಯರ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮದ್ಯಪಾನಿಗಳಲ್ಲಿ ಆತಂಕ ಹೆಚ್ಚಿಸಿದೆ. ಮದ್ಯಪಾನಿಯ ಈ ರೀತಿಯ ಯಕೃತ್ತಿನ ಬದಲಾವಣೆಯು ಮದ್ಯಪಾನದ ಅಪಾಯ ಎಷ್ಟಿದೆ ಎಂಬುದನ್ನು ಸೂಚಿಸುತ್ತಿದೆ. ಹಾಗೆ ಅದು ಗಾತ್ರದಲ್ಲಿ ಎಷ್ಟು ಚಿಕ್ಕದಾಗಿ ಸಂಕುಚಿತವಾಗಿದೆ ಎಂಬುದನ್ನು ಕೂಡ ವಿವರಿಸುತ್ತದೆ. ಮದ್ಯಪಾನಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಲು ಶ್ವಾಸಕೋಶ ಸಂಕುಚಿತವಾಗುವುದು ಕಾರಣವಾಗಿರುತ್ತದೆ.
ಈ ಫೋಟೋಗಳ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ. ಆ ವ್ಯಕ್ತಿ ವಾರಕ್ಕೊಮ್ಮೆ ಅಲ್ಲ ಬದಲಿಗೆ ಕುಟುಂಬದವರಿಂದ ಮುಚ್ಚಿಟ್ಟು ವಾರದಲ್ಲಿ ಎಲ್ಲ ದಿನವೂ ಮದ್ಯಪಾನ ಮಾಡಿರಬಹುದು ಎಂಬ ಶಂಕೆ ಹೊರಹಾಕಿದ್ದಾರೆ, ಏಕೆಂದರೆ ಅಪರೂಪಕ್ಕೆ ಮದ್ಯ ಸೇವಿಸಿದರೆ ಇಷ್ಟೊಂದು ಹಾನಿಯಾಗುವ ಸಂಭವವಿಲ್ಲ ಎಂಬುದು ಅವರ ವಾದವಾಗಿದೆ.
ಕೇವಲ ವಾರಾಂತ್ಯದಲ್ಲಿ ಆತ ಇಡೀ ವಾರದ ಮದ್ಯವನ್ನು ಸೇವಿಸಿರಬಹುದು. ಇದರ ಪರಿಣಾಮವಾಗಿ ಆತನಲ್ಲಿ ಈ ರೀತಿಯ ಹಾನಿ ಉಂಟಾಗಿದೆ, ಇಲ್ಲವೆ ಆತ ಮದ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹಾಕಿಕೊಳ್ಳದೆ ಕುಡಿದಿರಬಹುದು. ಅದರ ಪರಿಣಾಮ ನಾವು ಸರಿಯಾಗಿ ನೋಡಬಹುದು ಎಂದು ಬರೆದುಕೊಂಡಿದ್ದಾರೆ.



Click it and Unblock the Notifications