Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಈ ಚಿತ್ರದಲ್ಲಿ ಮೊದಲು ನಿಮಗೆ ಕಂಡಿದ್ದೇನು? ನಿಮ್ಮ ವ್ಯಕ್ತಿತ್ವ ಏನೆಂಬುದು ಇಲ್ಲಿದೆ!
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಂತಹ ಹಲವು ಫೋಟೋಗಳು ನಿಮಗೆ ಒಂದಿಷ್ಟು ಕೆಲಸ ಕೊಡುತ್ತವೆ. ಅದ್ರಲ್ಲೂ ಆಪ್ಟಿಕಲ್ ಇಲ್ಯೂಷನ್ ಹಾಗೆ ಒಂದಿಷ್ಟು ಸವಾಲುಗಳನ್ನು ನೀಡುವಂತಹ ಫೋಟೋಗಳ ನೋಡಿರಬಹುದು. ಅದ್ರಲ್ಲೂ ಕೆಲವೊಂದು ಫೋಟೋಗಳು ನಿಮ್ಮ ವ್ಯಕ್ತಿತ್ವ ಬಹಿರಂಗಪಡಿಸುವಂತಹ ಚಿತ್ರಗಳಾಗಿರುತ್ತವೆ.
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಒಬ್ಬರ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತವೆ. ಈ ರೀತಿಯ ಚಿತ್ರಗಳಲ್ಲಿ ಅನೇಕ ವಿಷಯಗಳು ಅಡಗಿರುತ್ತವೆ. ನಾವು ಈ ಚಿತ್ರಗಳನ್ನು ನೋಡಿದಾಗ ನಮ್ಮ ಮೆದುಳು ಮೊದಲು ಏನನ್ನು ಗ್ರಹಿಸುತ್ತದೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಪಾತ್ರವನ್ನು ವ್ಯಾಖ್ಯಾನಿಸಲಾಗುತ್ತದೆ. ಮನೋವಿಶ್ಲೇಷಣೆಯಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಧ್ಯಯನಗಳು ತೋರಿಸಿವೆ.

ಪ್ರತಿ ಬಾರಿ ನಾವು ಈ ರೀತಿಯ ಚಿತ್ರಗಳನ್ನು ನೋಡಿದಾಗ, ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಕಾಣಿಸಬಹುದು. ಅಥವಾ ಮೊದಲು ನೋಡಿದಾಗ ಕಂಡಿದ್ದ ಚಿತ್ರ ಮತ್ತೊಮ್ಮೆ ನೋಡಿದಾಗ ಬದಲಾಗಬಹುದು. ಹಾಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಕೂಡ ಜನರಲ್ಲಿ ಕುತೂಹಲ ಮೂಡಿಸಿದೆ.
ಕೆಲವೊಂದು ಫೋಟೋಗಳು ನಮ್ಮ ವ್ಯಕ್ತಿತ್ವವನ್ನು ಸಹ ವಿವರಿಸುತ್ತವೆ. ಅದ್ರಲ್ಲಿ ಈ ಮೇಲಿನ ಫೋಟೋ ಕೂಡ ನಿಮ್ಮ ವ್ಯಕ್ತಿತ್ವ ಹೇಳಲಿದೆ. ಆಪ್ಟಿಕಲ್ ಇಲ್ಯೂಷನ್ ಚಿತ್ರವಾಗಿರುವ ಈ ಫೋಟೋವನ್ನು ನೀವು ಮೊದಲು ನೋಡಿದ ತಕ್ಷಣ ಏನು ನೋಡಿದ್ದೀರಿ ಎಂಬ ಆದಾರದ ಮೇಲೆ ನಿಮ್ಮ ವ್ಯಕ್ತಿತ್ವ ಅಳೆಯಬಹುದು.
ಮೊದಲು ಈ ಫೋಟೋ ನೋಡಿದಾಗ ಕೆಲವರಿಗೆ ಎರಡು ಮುಖಗಳು ಕಾಣಿಸಿರಬಹುದು. ಹಾಗೆ ಚಿಟ್ಟೆ ಇಲ್ಲವೆ ಬಿಂದಿ ಕಾಣಿಸಬಹುದು. ಈ ಮೂರು ರೀತಿಯ ಚಿತ್ರವಿವರಣೆಯನ್ನು ನಾವಿಂದು ತಿಳಿದುಕೊಳ್ಳೋಣ.
ಚಿಟ್ಟೆ
ಈ ಫೋಟೋವನ್ನು ನೋಡಿದ ತಕ್ಷಣ ನಿಮಗೆ ಚಿಟ್ಟೆ ನೋಡಿರುವ ಅನುಭವವಾಗಿರಬಹುದು. ನೀವು ಕನಸನ್ನು ಹೆಚ್ಚಾಗಿ ಕಾಣುವ ಮಂದಿ, ಸೃಜನಶೀಲತೆ ಮತ್ತು ಸ್ವಾತಂತ್ರ್ಯದ ಸಂಕೇತಗಳಾಗಿವೆ. ಹಾಗೆ ಆದರ್ಶ ಮತ್ತು ಹೊಸ ವಸ್ತುವನ್ನು ಹುಡುಕುವಂತಹ ವ್ಯಕ್ತಿತ್ವ ಹೊಂದಿರುವ ಮಂದಿ. ನಿಮ್ಮ ಸಂಬಂಧಗಳಿಗೆ ಬಹಳ ಪ್ರಾಮುಖ್ಯತೆ ನೀಡುವ ಮಂದಿ. ನೀವು ಯಾರೊಂದಿಗಾದರು ಮಾತುಕತೆಯಲ್ಲಿ ತೊಡಗಿದ್ದರೆ ಅವರಿಂದ ಬಹಳಷ್ಟು ವಿಚಾರ ಆಲಿಸುತ್ತೀರಿ. ಪ್ರಯಾಣ ಮಾಡಲು ಇಚ್ಛಿಸುವ ಮಂದಿ. ನಿಮ್ಮ ಗ್ರಹಿಕಾ ಶಕ್ತಿ ಚೆನ್ನಾಗಿರುತ್ತದೆ. ಸಂಪಾದನೆಯಲ್ಲಿ ಆಸಕ್ತಿ ಹೊಂದಿರುವ ಮಂದಿ.
ಎರಡು ಮುಖಗಳು
ಈ ಚಿತ್ರದಲ್ಲಿ ನಿಮ್ಮ ಕಣ್ಣುಗಳು ಮೊದಲು ಎರಡು ಮುಖಗಳನ್ನು ನೋಡಿದರೆ, ನೀವು ಸಂಬಂಧಗಳಿಂದ ಮಾರ್ಗದರ್ಶಿಸಲ್ಪಟ್ಟ ವ್ಯಕ್ತಿ. ಚಿತ್ರದಲ್ಲಿ ನೀವು ಮಹಿಳೆಯ ಮುಖ ನೋಡಿದರೆ ನೀವು ಭಾವನಾತ್ಮಕ ವ್ಯಕ್ತಿಗಳು, ನಿಮ್ಮಲ್ಲಿ ದೊಡ್ಡ ಸಾಧನೆ ಮಾಡಲು ಆತ್ಮಸ್ಥೈರ್ಯ ಹೆಚ್ಚು. ನಿಮ್ಮ ಸಂಬಂಧಗಳಲ್ಲಿ ಮನಸ್ತಾಪಗಳ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ದಾಂಪತ್ಯ ವಿಚಾರವಾಗಿ ನೀವು ತಾಳ್ಮೆಯಲ್ಲಿ ಇರುವ ಮಂದಿ. ವಿದ್ಯಾರ್ಥಿಗಳಾದರೆ ನೀವು ಓದಿನ ಕಡೆ ಬಹಳ ಏಕಾಗೃತೆ ಇಡುವ ವ್ಯಕ್ತಿ.
ಬಿಂದಿ
ಈ ಚಿತ್ರವನ್ನು ನೋಡಿದ ತಕ್ಷಣ ಮೊದಲು ಬಿಂದಿ ಕಾಣಿಸಿದರೆ ಸಮತೋಲನದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಸರಳ ವ್ಯಕ್ತಿತ್ವದ ಮಂದಿ. ನಿಮ್ಮ ಕೆಲಸಗಳನ್ನು ನೀವೊಬ್ಬರೇ ಮುಗಿಸಬೇಕು ಎಂದು ಬಯಸುವವರು. ಸಂಬಂಧಗಳಿಗೆ ಬೆಲೆ ನೀಡುವ ನೀವು, ಇತರರಿಗೆ ಸಹಾಯ ಮಾಡಲು ಯಾವಾಗಲು ಮುಂದಿರುವವರು. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಶ್ರಮ ಹಾಕುವವರು. ಬೇರೆಯವರ ಸಂತೋಷಕ್ಕೆ ನೀವು ಎಂತಹ ಕೆಲಸವನ್ನಾದರು ಮಾಡುವವರು.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications