Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
₹1 ಕೋಟಿ ಹಣದಲ್ಲಿ ಏನು ಮಾಡಬಹುದು..? ಉತ್ತರ ಕೇಳಿದರೆ ನಿಮಗೂ ಆತಂಕವಾಗಬಹುದು..?
ಶ್ರೀಮಂತರರಾಗಬೇಕು ಅನ್ನೋ ಆಸೆ, ಕನಸು ಯಾರಿಗೆ ಇರಲ್ಲ ಹೇಳಿ. ಹಣ ಮಾಡಬೇಕು ಅಂತಾನೆ ಮಾನವ ಹುಟ್ಟಿರೋದು. ಭೂಮಿ ಮೇಲೆ ಆಸ್ತಿ ಮಾಡಿಡುವ ಏಕೈಕ ಜೀವಿ ಅಂದ್ರೆ ಅದು ಮಾನವ ಮಾತ್ರ. ಹೀಗಿರುವಾಗ ಆತನಿಗೆ ಶ್ರೀಮಂತನಾಗಬೇಕು, ಹಣ ಮಾಡಬೇಕು ಎನ್ನುವ ಆಸೆ ಇರುವುದು ಸಾಮಾನ್ಯ.
ಆದ್ರೆ ಎಷ್ಟು ಹಣ ಮಾಡಬೇಕು? ಹೇಗೆ ಶ್ರೀಮಂತರಾಗಬೇಕು? ಈ ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ತಾನು ಆರಾಮವಾಗಿ ಜೀವಿಸಬೇಕಾದರೆ ಎಷ್ಟು ಹಣ ಮಾಡಬೇಕು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ ಯಾರಿಗೂ ಎಷ್ಟು ಹಣ ಮಾಡಬೇಕು ಎಂಬ ಸೀಮಿತ ಗುರಿಯಂತು ಇಲ್ಲ. ಎಷ್ಟು ಹಣ ಮಾಡಲು ಸಾಧ್ಯವೋ ಅಷ್ಟು ಮಾಡಬೇಕು ಅನ್ನೋದು ಪ್ರತಿಯೊಬ್ಬರ ಮನದಾಳದ ಮಾತಾಗಿದೆ.

1 ಲಕ್ಷದಿಂದ ಹಿಡಿದು 1 ಕೋಟಿ, ನೂರು ಕೋಟಿ, ಸಾವಿರ ಕೋಟಿ, ಲಕ್ಷ ಲಕ್ಷ ಕೋಟಿ ಸಂಪಾದಿಸುವುದು ಪ್ರತಿಯೊಬ್ಬರ ಕನಸು ಆದರೆ ನನಸಾಗೋದು ಕೆಲವರಿಗೆ ಮಾತ್ರ. ಆದ್ರೆ ಈಗ ಇಲ್ಲೊಂದು ಪ್ರಶ್ನೆ ಎಲ್ಲರ ಮನದಲ್ಲೂ ಹೊಸ ಆತಂಕ, ಹೊಸ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿದೆ. ಅದೇನೆಂದರೆ ನಿಮಗೆ 1 ಕೋಟಿ ರೂಪಾಯಿ ಸಿಕ್ಕರೆ ಏನು ಮಾಡುತ್ತೀರಿ ಎಂಬ ಪ್ರಶ್ನೆ ಈಗ ಬಹುದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಹಾಗಾದ್ರೆ ಈ 1 ಕೋಟಿ ರೂಪಾಯಿ ಸಿಕ್ಕರೆ ಏನು ಮಾಡುತ್ತಾರೆ ಎಂಬ ಪ್ರಶ್ನೆ ಆತಂಕ ಹುಟ್ಟುಹಾಕಿದ್ದು ಏಕೆ? ಅದಕ್ಕೆ ಜನರ ಪ್ರತಿಕ್ರಿಯೆ ಏನಾಗಿತ್ತು, ಕೊನೆಗೆ ಅವರಿಗೆ ಸಿಕ್ಕಿರುವ ಉತ್ತರವೇನು ಎಂಬುದನ್ನು ನೀವೆ ನೋಡಿ.
ಅಕ್ಷತ್ ಶ್ರೀವಾಸ್ತವ ಎಂಬುವರು ಇತ್ತೀಚಿಗೆ ಎಕ್ಸ್ (ಟ್ವಿಟರ್)ನಲ್ಲಿ ಈ ರೀತಿ ಪ್ರಶ್ನೆ ಮಾಡಿದ್ದರು. ನಿಮಗೆ ಒಂದು ಕೋಟಿ ರೂಪಾಯಿ ಸಿಗುತ್ತದೆ? ಇದರಲ್ಲಿ ನೀವು ಏನು ಮಾಡಬಹುದು ಎಂಬುದು ಈ ಪೋಸ್ಟ್‌ನಲ್ಲಿ ಹೇಳಲಾಗಿತ್ತು.
ನೀವು ದೆಹಲಿ ಅಥವಾ ಗುರುಗ್ರಾಮ್‌ನಲ್ಲಿ ಮನೆ ಖರೀದಿಸಲು ಸಾಧ್ಯವಿಲ್ಲ (ಕನಿಷ್ಠ ಒಂದು ಕುಟುಂಬ ವಾಸಕ್ಕೆ ಯೋಗ್ಯವಾಗಿರುವುದಿಲ್ಲ)
ನೀವು ಹೊರವಲಯದಲ್ಲಿ ಬೇಕಾದರೆ ಮನೆ ನೋಡಬಹುದು. ಇದು ಗಂಟೆಗಳಿಗೂ ಹೆಚ್ಚು ಹೊತ್ತಿನ ಪ್ರಯಾಣ.
ನಿಮ್ಮ ಮಕ್ಕಳನ್ನು ವಿದೇಶದಲ್ಲಿ ಎಂಬಿಎ ಮಾಡಲು ಕಳುಹಿಸಲು ಸಾಧ್ಯವಿಲ್ಲ. ಕೆಲವು ದೇಶಗಳನ್ನು ಹೊರತುಪಡಿಸಿ.
ದೆಹಲಿಯ ಬ್ರಿಟಿಷ್ ಶಾಲೆಗೆ 1ನೇ ತರಗತಿ ಮಕ್ಕಳಿಗೆ ವರ್ಷಕ್ಕೆ 95 ಸಾವಿರ ರೂಪಾಯಿ ಫೀಸ್ ಆಗುತ್ತದೆ.
ಇದು ಅಚ್ಚರಿಯಲ್ಲ. ಹೊಸ ಜಗತ್ತಿಗೆ ಸುಸ್ವಾಗತ. ಹೆಚ್ಚು ಹಣ ಮುದ್ರಣ ಮತ್ತು ಸಾಲವು ನಿಮ್ಮ ಕೊಳ್ಳುವ ಶಕ್ತಿಯನ್ನೇ ನಾಶಮಾಡಿದೆ. ಎಂದು ಅವರು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ನೋಡಿದ ಮಂದಿ ನಿಜಕ್ಕೂ ಅಚ್ಚರಿ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ, ಅವರು ಹೇಳಿದ್ದ ಎಲ್ಲಾ ವಿಚಾರಗಳು ಇಂದಿಗೆ ಸತ್ಯವಾಗಿತ್ತು. ಏಕೆಂದರೆ ಮಹಾನಗರಗಳಲ್ಲಿ ಒಂದು ಕೋಟಿ ರೂಪಾಯಿ ಇದ್ದರೆ ಏನು ಮಾಡಲು ಸಾಧ್ಯವಿಲ್ಲ ಎಂಬುದು ಜನರ ಅರಿವಿಗೆ ಬರುತ್ತಿದೆ. ಇದು ಭಯಕ್ಕೆ ಕಾರಣವಾಗಿದೆ.
ಹಾಗಾದರೆ ಎಷ್ಟು ಹಣ ದುರಿಯಬೇಕು. ಒಂದು ಕೋಟಿ ರೂಪಾಯಿ ದುಡಿಯಬೇಕು ಎಂದರೆ ಇಡೀ ಜೀವನ ಕೆಲಸ ಮಾಡಬೇಕಿದೆ. ಈ ರೀತಿ ಕೆಲಸ ಮಾಡಿದ ದುಡಿದ ಹಣ 1ನೇ ತರಗತಿ ಮಗುವಿನ ಶಾಲೆಯ ಫೀಸ್ ಕಟ್ಟಲು ಸಮ ಎಂದಾದರೆ ಬದುಕಿನ ಅರ್ಥವೇ ಕೊಂದಂತೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ನಾವು ಬೆಂಗಳೂರಿಗೆ ಇದನ್ನು ಹೋಲಿಸಿದರೆ ನಗರದ ಹೃದಯಭಾಗದಲ್ಲಿ ಸೈಟ್ ಅಥವಾ ಮನೆ ಖರೀದಿಸಲು ಒಂದು ಕೋಟಿ ವೆಚ್ಚವಾಗಬಹುದು. ಆದರೆ ಅವರು ಹೇಳಿದಂತೆ ಈ ಮನೆಯಲ್ಲಿ ಇಡೀ ಕುಟುಂಬ ಆರಾಮವಾಗಿ ವಾಸಿಸಲು ಸಾಧ್ಯವಾಗುವುದಿಲ್ಲ. ಇನ್ನು ಮಕ್ಕಳ ಶಾಲಾ ಕಾಲೇಜು ಫೀಸ್‌ಗಳೂ ಗಗನಕ್ಕೇರಿದೆ. ಇದು ಇಂದಿನ ದುಬಾರಿ ಜಗತ್ತಿಗೆ ಹಿಡಿದಿರುವ ಕೈಗನ್ನಡಿಯಾಗಿದೆ. ನೀವು 1 ಕೋಟಿ ರೂಪಾಯಿ ದುಡಿದರೆ ಅದೂ ಸಹ ಸಾಕಾಗುವುದಿಲ್ಲ.



Click it and Unblock the Notifications

