Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರು ಯಶಸ್ವಿ ಉದ್ಯಮಿಗಳಾಗುತ್ತಾರಂತೆ!
ಒರ್ವ ಯಶಸ್ವಿ ಉದ್ಯಮಿಯಾಗಿ ಬೆಳೆಯುವುದು ಅಂದರೆ ನಾವು ನೀವು ಅಂದುಕೊಂಡಷ್ಟು ಸುಲಭವಲ್ಲ. ಉದ್ಯಮಿಯಾಗೋದಕ್ಕೆ ದುಡ್ಡು ಒಂದಿದ್ದರೆ ಸಾಲೋದಿಲ್ಲ. ಅದರ ಜೊತೆಗೆ ಪರಿಶ್ರಮ, ಬುದ್ಧಿವಂತಿಕೆ ಹಾಗೂ ಉತ್ತಮ ಕೌಶಲ್ಯಗಳು ಇರಬೇಕು. ಹಾಗಿದ್ದಾಗ ಮಾತ್ರ ಗೆಲುವಿನ ದಡ ಸೇರೋದಕ್ಕೆ ಸಾಧ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ಉದ್ಯಮಿಗಳಾಗಿ ತುಂಬಾನೇ ಯಶಸ್ವಿಯಾಗುತ್ತಾರಂತೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ನೋಡೋಣ.
ಮಕರ ರಾಶಿ
ಮಕರ ರಾಶಿಯವರು ಅಂದುಕೊಂಡ ಕೆಲಸವನ್ನು ಖಂಡಿತವಾಗಿ ಸಾಧಿಸುತ್ತಾರೆ.
ಅವರು ಯಾವುದಾದರೂ ಹೊಸ ಉದ್ಯಮವನ್ನು ಸ್ಥಾಪಿಸಿದರೆ ಆ ಕೆಲಸದಲ್ಲಿ ಅವರು ಯಶಸ್ವಿಯಾಗುತ್ತಾರೆ. ಯಾಕೆಂದರೆ ಇವರು ಸಮಯಕ್ಕಾಗಿ ಅಥವಾ ಫಲಿತಾಂಶಕ್ಕಾಗಿ ಕಾಯೋದಿಲ್ಲ. ಬದಲಾಗಿ ಅವರ ಕೆಲಸವನ್ನು ಅವರು ಮಾಡುತ್ತಾರೆ. ಹೀಗಾಗಿ ಯಶಸ್ವಿ ಉದ್ಯಮಿಯಾಗಿ ಬೆಳೆಯುವ ಎಲ್ಲಾಅವಕಾಶಗಳು ಇವರಿಗೆ ಇರುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರು ಕೆಲಸ ಮಾಡುವ ಜನರೊಂದಿಗೆ ಅವರು ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಇವರು ನಂಬಿಕೆಗೆ ಅರ್ಹವಾದ ವ್ಯಕ್ತಿಗಳಾಗಿರುತ್ತಾರೆ. ಇವರು ಯಾವತ್ತಿಗೂ ಜೀವನದಲ್ಲಿ ಕುಗ್ಗೋದಿಲ್ಲ. ಒಂದು ವೇಳೆ ವ್ಯಾಪಾರದಲ್ಲಿ ವೈಫಲ್ಯವನ್ನು ಎದುರಿಸಿದರೆ ಎದೆಗುಂದುವುದಿಲ್ಲ. ಖಿನ್ನತೆಗೆ ಒಳಗಾಗುವುದಿಲ್ಲ. ಈ ರಾಶಿಯವರಲ್ಲಿ ವಿಶ್ವಾಸ ಹೆಚ್ಚಾಗಿರುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರು ಸೃಜನಾತ್ಮಕ ಅಲೋಚನೆಗಳನ್ನು ಹೊಂದಿರುತ್ತಾರೆ. ಇವರು ಯಾರೊಂದಿಗೆ ಬೇಕಾದರೂ ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಹೀಗಾಗಿ ಇವರು ವ್ಯಾಪಾರದಲ್ಲಿ ಯಶಸ್ವಿಯಾಗುತ್ತಾರೆ. ಇವರು ಎಷ್ಟು ಕಷ್ಟಗಳು ಬಂದರೂ ಕೂಡ ಮುನ್ನುಗಿ ಯಶಸ್ವಿ ಸಾಧಿಸುತ್ತಾರೆ.
ಕನ್ಯಾ ರಾಶಿ
ಈ ರಾಶಿಯವರು ಎಲ್ಲದರಲ್ಲೂ ಅವರು ಪರಿಪೂರ್ಣತೆಯನ್ನು ಸಾಧಿಸುತ್ತಾರೆ.
ಈ ರಾಶಿಯವರು ವ್ಯಾಪಾರದಲ್ಲಿ ಅತ್ಯಂತ ನಿಖರ ಮತ್ತು ವಿಶ್ಲೇಷಣಾತ್ಮಕ ಗುಣವನ್ನು ಹೊಂದಿರುತ್ತಾರೆ. ಅವರಲ್ಲಿರುವ ಕೌಶಲ್ಯಗಳೇ ಅವರನ್ನು ಒಬ್ಬ ಯಶಸ್ವಿ ಉದ್ಯಮಿಯನ್ನಾಗಿ ಮಾಡಲು ಉತ್ತೇಜಿಸುತ್ತದೆ. ಈ ರಾಶಿಯವರು ಮಾಡಿದ ಕೆಲಸದಲ್ಲಿ ಸೋಲುವುದಕ್ಕಿಂತ ಹೆಚ್ಚಾಗಿ ಗೆಲುವನ್ನೇ ನೋಡುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ತಾಳ್ಮೆ ಹಾಗೂ ಕೌಶಲ್ಯಗಳು ಹೆಚ್ಚಾಗಿರುತ್ತದೆ. ಇವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಇವರು ತುಂಬಾನೇ ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡುತ್ತಾರೆ. ಇವರು ವ್ಯಾಪಾರದಲ್ಲಿ ಎಷ್ಟೇ ಕಷ್ಟ ಆದರೂ ಕೂಡ ಅದನ್ನು ನಿರ್ವಹಿಸಿಕೊಂಡು ಹೋಗುತ್ತಾರೆ. ಅರ್ಧದಲ್ಲಿ ಯಾವುದೇ ಕೆಲಸವನ್ನು ಬಿಟ್ಟು ಬಿಡುವವರಲ್ಲ ಈ ರಾಶಿಯವರು.
ತುಲಾ ರಾಶಿ
ತುಲಾ ರಾಶಿಯವರು ವ್ಯಾಪಾರದಲ್ಲಿ ಪದೇ ಪದೇ ಸೋಲನ್ನು ಅನುಭವಿಸುತ್ತಾರೆ. ಆದರೂ ಕೂಡ ಇವರು ಸಕಾರಾತ್ಮಕವಾಗಿ ಚಿಂತಿಸುತ್ತಾರೆ. ಮತ್ತು ಕೆಲಸದ ಕಡೆಗೆ ಅವರ ಗಮನವನ್ನು ಕೇಂದ್ರೀಕರಿಸುತ್ತಾರೆ. ಕೆಲಸದ ಕಡೆಗೆ ಅವರ ಸಕಾರಾತ್ಮಕ ದೃಷ್ಟಿಕೋನವೇ ಅವರನ್ನು ಅತ್ಯುತ್ತಮ ಉದ್ಯಮಿಗಳನ್ನಾಗಿ ಮಾಡುತ್ತದೆ.



Click it and Unblock the Notifications
