Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ನಿಮ್ಮ ರಾಶಿಯ ಪ್ರಕಾರ ನೀವು ಯಾವ ವಿಚಾರಕ್ಕೆ ಹೆಚ್ಚು ಭಯ ಪಡುತ್ತೀರಿ ಗೊತ್ತಾ?
ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರ ಗುಣ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಹಾಗೂ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕೌಶಲ್ಯಗಳು ಇರುತ್ತದೆ. ಅದೇ ರೀತಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಚಾರದ ಬಗ್ಗೆ ಭಯ ಇದ್ದೇ ಇರುತ್ತದೆ. ಕೆಲವೊಂದು ಸಾರಿ ನಾವು ಆ ಭಯವನ್ನು ಒಪ್ಪಿಕೊಳ್ಳೋದಕ್ಕೆ ಸಿದ್ಧವಿರೋದಿಲ್ಲ. ಇದರಿಂದ ನಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ.
ಹೀಗಾಗಿ ಪ್ರತಿಯೊಬ್ಬರು ಅವರ ಭಯವನ್ನು ಒಪ್ಪಿಕೊಳ್ಳಬೇಕು. ಹಾಗೂ ಅದರ ವಿರುದ್ಧ ಹೋರಾಡಲು ಸಕಲ ಪ್ರಯತ್ನಗಳನ್ನು ಮಾಡಬೇಕು. ಆಗ ಮಾತ್ರ ನೀವು ಜಯದ ಹಾದಿಯನ್ನು ತಲುಪೋದಕ್ಕೆ ಸಾಧ್ಯ. ನಿಮ್ಮ ರಾಶಿಯ ಪ್ರಕಾರ ನೀವು ಯಾವ ವಿಚಾರಕ್ಕೆ ಹೆಚ್ಚು ಭಯ ಪಡುತ್ತೀರಿ. ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಯಾವಾಗಲೂ ಅಧಿಕಾರದಲ್ಲಿರಲು ತಮ್ಮ ಹೆಸರುವಾಸಿಯಾಗಿರಲು ಇಚ್ಛಿಸುತ್ತಾರೆ. ಈ ರಾಶಿಯವರು ಜನರ ಮೇಲೆ ತಮ್ಮ ನಿಯಂತ್ರಣವನ್ನು ಕಳೆದುಕೊಂಡು ಬಿಡುತ್ತೀವೋ ಎಂಬ ಭಯ ಹೊಂದಿದ್ದಾರೆ. ಇವರು ಎಲ್ಲರಿಗೂ ಪರಿಚಿತವಾಗಿರಬೇಕು ಎಂದು ಬಯಸುತ್ತಾರೆ. ನನ್ನನ್ನು ಜನ ಯಾವಾಗಲೂ ಗುರುತಿಸುತ್ತಾ ಇರಬೇಕು. ತಮ್ಮ ಸುತ್ತ-ಮುತ್ತ ಜನ ಇರಬೇಕು. ಇವರು ಯಾವತ್ತಿಗೂ ಏಕಾಂಗಿಯಾಗಿರಲು ಇಷ್ಟ ಪಡೋದಿಲ್ಲ.
ವೃಷಭ ರಾಶಿ
ವೃಷಭ ರಾಶಿಯವರು ಯಾವಾಗಲೂ ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ. ಆದರೆ ಅದಕ್ಕಿಂತ ಸ್ವಲ್ಪ ಕೆಳಗಾದರೂ ಇವರಿಗೆ ಇಷ್ಟ ಆಗೋದಿಲ್ಲ. ತಮ್ಮ ಪ್ರೀತಿ ಪಾತ್ರರಿಗೆ ಎಲ್ಲವನ್ನೂ ಕೊಡೋದಕ್ಕೆ ಇಷ್ಟ ಪಡುತ್ತಾರೆ. ಆದರೆ ಅವರಿಗೆ ತಮ್ಮ ಪ್ರೀತಿ ಪಾತ್ರರಿಗೆ ಬೇಕಾದುದನ್ನು ಕೊಡೋದಕ್ಕೆ ಆಗುತ್ತೋ ಇಲ್ಲವೋ ಅನ್ನೋ ಭಯ ಕಾಡುತ್ತದೆ. ವೃಷಭ ರಾಶಿಯವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಅವರಿಗೆ ಬೇಕಾದುದು ಸಿಕ್ಕದಿದ್ದಾಗ ನೋವು ಪಟ್ಟುಕೊಳ್ಳುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ತಾನು ಬೇರೆಯವರಿಂದ ಬೋರಿಂಗ್ ಅಂತ ಅನ್ನಿಸಿಕೊಳ್ಳುತ್ತೀನೋ ಅನ್ನೋ ಭಯ ಕಾಡುತ್ತದೆ. ಹೀಗಾಗಿ ಬೇರೆಯವರು ತನನ್ನು ಬೋರಿಂಗ್ ಎಂದು ಹೇಳಬಾರದು ಎಂದು ಅವರನ್ನು ಮೆಚ್ಚಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಾರೆ. ಇವರು ಜೀವನದಲ್ಲಿ ಉತ್ಸಾಹದಿಂದಿರುತ್ತಾರೆ. ಹಾಗೂ ಮೋಜು ಮಾಡುತ್ತಾರೆ. ಇವರು ಆಪ್ತರು ಹಾಗೂ ಸ್ನೇಹಿತರು ಇವರನ್ನು ಮೂಲೆಗುಂಪು ಮಾಡಿದರೆ ಇವರ ಮನಸ್ಸು ಒಡೆದು ಹೋಗುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಕುಟುಂಬದ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಭಯ ಇವರನ್ನು ಹೆಚ್ಚಾಗಿ ಕಾಡುತ್ತಂತೆ. ಈ ರಾಶಿಯವರು ಹೆಚ್ಚು ಅವಲಂಬಿಗಳಾಗಿರುತ್ತಾರೆ. ಇವರು ಎಲ್ಲೇ ಹೋದರು ಜೊತೆಗೆ ಯಾರಾದರೂ ಇರಬೇಕು. ಚಿಕ್ಕ-ಪುಟ್ಟ ಸಲಹೆಗಳನ್ನು ಇವರು ಬೇರೆಯವರಿಂದ ಪಡೆದುಕೊಳ್ಳುತ್ತಾರೆ. ಹಾಗೂ ಇವರಿಗೆ ಎಲ್ಲಿ ಒಬ್ಬಂಟಿಯಾಗಿ ಬಿಡುತ್ತೇನೋ ಎಂಬ ಭಯವಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ತುಂಬಾ ಚಾಲಾಕಿಗಳು. ಆದರೆ ಇವರಿಗೆ ನಿರಾಕರಣೆಯ ಭಯ ಹೆಚ್ಚಾಗಿದೆ. ಯಾರಾದರೂ ತಮ್ಮನ್ನು ನಿರಾಕರಿಸಿ ಬಿಡುತ್ತಾರೋ ಅನ್ನೋ ಆತಂಕ ಇವರನ್ನು ಕಾಡುತ್ತಿರುತ್ತದೆ. ಈ ರಾಶಿಯವರಿಗೆ ಬೇರೆಯವರ ಮುಂದೆ ಶಕ್ತಿ ಪ್ರದರ್ಶನ ಮಾಡುವ ಹುಚ್ಚಿದೆ. ಇವರಿಂದ ಏಕಾಂಗಿಯಾಗಿ ಬದುಕೋದಕ್ಕೆ ಸಾಧ್ಯವೇ ಇಲ್ಲ. ನಾನೆಲ್ಲಿ ಏಕಾಂಗಿಯಾಗಿ ಬಿಡುತ್ತೇನೋ ಎಂಬ ಭಯ ಯಾವತ್ತಿಗೂ ಇವರಲ್ಲಿ ಇದ್ದೇ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಚಂಚಲ ಮನಸ್ಸಿನವರು. ಹೀಗಾಗಿ ಈ ರಾಶಿಯವರು ತಮ್ಮ ನಿಯಂತ್ರಣ ಕಳೆದುಕೊಳ್ಳುವ ಭಯ ಹೊಂದಿದ್ದಾರೆ. ಇವರಲ್ಲಿ ಹಣ ಕಳೆದುಕೊಂಡು ಬಿಡುತ್ತೇನೋ ಎಂಬ ಭಯ ಕಾಡುತ್ತಿರುತ್ತದೆ. ಬಡತನದ ಆಲೋಚನೆಯೇ ಇವರನ್ನು ಜೀವನದ ಉದ್ದಕ್ಕೂ ಕಾಡುತ್ತದೆ. ಆರ್ಥಿಕ ಪರಿಸ್ಥಿತಿ ಕೆಟ್ಟ ಹೋದರೆ ಎಲ್ಲಿ ಸಂತೋಷ ಕಳೆದುಕೊಳ್ಳುತ್ತೇನೋ ಎಂಬ ಭಯ ಇವರಲ್ಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಐಷಾರಾಮಿ ಜೀವನವಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇವರು ಯಾವಾಗಲೂ ಹಣ ಕಳೆದುಕೊಳ್ಳುವ ಭಯದಲ್ಲೇ ಬದುಕುತ್ತಾರೆ. ಬೇರೆಯವರ ಜೊತೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳೋದಕ್ಕೂ ಭಯ ಪಡುತ್ತಾರೆ. ಇವರು ತಮ್ಮ ಪ್ರತಿಯೊಂದು ವಸ್ತುಗಳನ್ನು ಬಹಳ ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸುತ್ತಾರೆ. ಇನ್ನೂ ಇವರ ವಸ್ತುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇತರರ ಮುಂದೆ ಬಹಿರಂಗಗೊಳ್ಳೋದಕ್ಕೆ ಹೆದರುತ್ತಾರೆ. ಬೇರೆಯವರು ಇವರನ್ನು ನೋವು ಮಾಡಿದರೆ ಸಹಿಸಿಕೊಳ್ಳೋದಿಲ್ಲ. ಈ ರಾಶಿಯವರು ಅಷ್ಟು ಬೇಗ ಯಾರ ಜೊತೆಗೂ ಅಷ್ಟು ಸುಲಭವಾಗಿ ಹೊಂದಿಕೊಳ್ಳೋದಿಲ್ಲ. ಈ ರಾಶಿಯವರು ತಮ್ಮ ಸೀಮಿತ ಆಪ್ತ ವಲಯದ ಜೊತೆಗೆ ಇರೋದಕ್ಕೆ ಇಷ್ಟ ಪಡುತ್ತಾರೆ. ಹೊಸ ಜನರನ್ನು ಪರಿಚಯ ಮಾಡಿಕೊಳ್ಳೋದು ಇವರಿಗೆ ಇಷ್ಟ ಆಗೋದಿಲ್ಲ.
ಧನು ರಾಶಿ
ಧನು ರಾಶಿಯವರು ಆತಂಕದ ಸ್ವಭಾವವನ್ನು ಹೊಂದಿರುತ್ತಾರೆ. ವಿವಿಧ ರೀತಿಯ ಫೋಬಿಯಾಗಳಿಗೆ ಹೆಚ್ಚಾಗಿ ಇವರು ಬಲಿಯಾಗುತ್ತಾರೆ. ಇನ್ನೂ ಈ ರಾಶಿಯವರು ತಮ್ಮ ದೌರ್ಬಲ್ಯಗಳನ್ನು ಇತರರ ಮುಂದೆ ಬಹಿರಂಗಪಡಿಸಲು ತುಂಬಾನೇ ಹೆದರುತ್ತಾರೆ. ಇತರರು ತನ್ನನ್ನು ಎಲ್ಲಿ ಆಡಿಕೊಳ್ಳುತ್ತಾರೋ ಅನ್ನೋ ಭಯ ಇವರನ್ನು ಕಾಡುತ್ತಿರುತ್ತದೆ.
ಮಕರ ರಾಶಿ
ಮಕರ ರಾಶಿಯವರು ಹುಟ್ಟು ವಿಜೇತರಾಗಿರುತ್ತಾರೆ. ಈ ರಾಶಿಯವರು ಯಾವಾಗಲೂ ಟಾಪ್ ನಲ್ಲಿ ಇರಬೇಕೆಂದು ಬಯಸುತ್ತಾರೆ. ಎಲ್ಲದರಲ್ಲೂ ನಾನೇ ಮುಂದಿರಬೇಕು ಅಂತ ಅಂದುಕೊಳ್ಳುತ್ತಾರೆ. ಮೊದಲನೇ ಸ್ಥಾನ ಬಾರದಿದ್ದರೆ ಬೇರೆಯವರು ಆಡಿಕೊಳ್ಳುತ್ತಾರೆ ಎಂಬ ಭಯ ಇವರನ್ನು ಕಾಡುತ್ತದೆ. ಇವರು ಎಲ್ಲರಿಗಿಂತಲೂ ಹೆಚ್ಚು ಅಂತರ್ಮುಖಿ ಮತ್ತು ನಾಚಿಕೆ ಸ್ವಭಾವದವರಾಗಿರುತ್ತಾರೆ.
ಕುಂಭ ರಾಶಿ
ಕುಂಭಾ ರಾಶಿಯವರಿಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಇಷ್ಟವಿಲ್ಲ. ಇವರು ಯಾವಾಗಲೂ ಆರಾಮದಾಯಕ ವಲಯದಲ್ಲೇ ಬದುಕೋದಕ್ಕೆ ಇಷ್ಟ ಪಡುತ್ತಾರೆ. ರಿಸ್ಕ್ ತೆಗೆದುಕೊಂಡ್ರೆ ಅದನ್ನು ಎದುರಿಸುವಷ್ಟು ದೈರ್ಯ ಇವರಲ್ಲಿ ಇರೋದಿಲ್ಲ. ಇನ್ನೂ ಇವರಿಗೆ ಆಫಿಸ್ ನಲ್ಲೇ ನಾನೇ ಮುಂದಿರಬೇಕು ಅನ್ನೋ ಆಸೆ ಇದೆ. ಎರಡನೇ ಸ್ಥಾನದಲ್ಲಿ ಇರೋದಕ್ಕೆ ಇವರು ಇಷ್ಟ ಪಡೋದಿಲ್ಲ.
ಮೀನ ರಾಶಿ
ಮೀನ ರಾಶಿಯವರು ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಇವರು ತುಂಬಾನೇ ನಿಷ್ಠಾವಂತರು. ಬೇರೆಯವರು ಇವರನ್ನು ನಿರಾಕರಿಸಿದರೆ ಸಹಿಸಿಕೊಳ್ಳೋದಿಲ್ಲ. ಇವರ ಹೃದಯವೇ ಒಡೆದು ಹೋಗುತ್ತದೆ. ತಮ್ಮನ್ನು ಪ್ರೀತಿಸಿದವರು ಬಿಟ್ಟು ಹೋಗುತ್ತಾರೆ ಅಮ್ಮೋ ಭಯ ಇವರಿಗೆ ಸಹಜವಾಗಿ ಕಾಡುತ್ತದೆ.



Click it and Unblock the Notifications












