Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಕಯಾಕ್‌ನಲ್ಲಿದ್ದ ವ್ಯಕ್ತಿಯನ್ನು ನುಂಗಿದ ತಿಮ್ಮಿಂಗಿಲ, ಆದರೂ ತಿಮ್ಮಿಂಗಿ ಹೊಟ್ಟೆಯಿಂದ ಬಂದ: ರೋಚಕ ವೀಡಿಯೋ ವೈರಲ್
ತಿಮ್ಮಿಂಗಲ ಹೊಟ್ಟೆಯೊಳಗೆ ಹೋದರೆ ಹೊರಗಡೆ ಬರುವುದುಂಟೇ? ಆದರೆ ತಿಮಿಂಗಿಲ ಹೊಟ್ಟೆಯೊಳಗಡೆ ಹೋಗಿ ನಿಮಿಷಾರ್ಧದಲ್ಲಿ ಹೊರ ಬಂದ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಈ ಎಲ್ಲಾ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದ್ದು ವೀಡಿಯೋ ವೈರಲ್ ಆಗಿದೆ. ಬೃಹದಾಕಾರದ ತಿಮ್ಮಿಂಗಲ ಜೊತೆಗೆ ಕಯಾಕ್ ನುಂಗಿದೆ, ಆ ದೃಶ್ಯವೇ ಭಯಾನಕವಾಗಿದೆ, ಆದರೆ ಆ ವ್ಯಕ್ತಿ ತಿಮ್ಮಿಂಗಲ ಹೊಟ್ಟೆಯಿಂದ ಹೊರ ಬೀಳುತ್ತಿರುವ ದೃಶ್ಯ ಕೂಡ ಅಷ್ಟೇ ರೋಚಕವಾಗಿದೆ.

ಕಯಾಕ್ ಕೆಳಗಡೆಯಿಂದ ಇದ್ದಕ್ಕಿದ್ದಂತೆ ಮೇಲೆ ಬಂದ ತಿಮ್ಮಿಂಗಲ
ಆಡ್ರಿಯಾನ್ ಸಿಮ್ನಾಕಾಸ್ ಎಂಬ ವ್ಯಕ್ತಿ ತಂದೆ ಜೊತೆ ಕಯಾಕರ್ ಪೆಡಲಿಂಗ್ ಮಾಡ್ತಾ ಸಮುದ್ರದಲ್ಲಿ ಹೋಗ್ತಾ ಇದ್ದರು, ತಂದೆ ಮಗ ಪೆಡಲಿಂಗ್ ಮಾಡುತ್ತಿರುವ ದೃಶ್ಯವನ್ನು ಖುಷಿಯಿಂದ ವೀಡಿಯೋ ಮಾಡ್ತಾ ಇದ್ದರು, ಆದರೆ ಮುಂದೇನು ಆಗುತ್ತೆ ಅಂತ ಚಿಕ್ಕ ಸುಳಿವು ಅವರಿಗೆ ಇರಲಿಲ್ಲ, ಅವರು ಹೋಗುತ್ತಿದ್ದ ಕಡೆ ಬೃಹದಾಕಾರದ ತಿಮ್ಮಿಂಗಲ ಇತ್ತು, ಇದ್ದಕ್ಕಿದ್ದಂತೆ ನೀರಿನಿಂದ ಮೇಲೆ ಬಂದ ತಿಮ್ಮಿಂಗಲ ಹಳದಿ ಬಣ್ಣದ ಕಯಾಕ್ ನುಂಗಿದೆ, ಇದೀಗ ಈ ವೀಡಿಯೋವನ್ನು ಅಸೋಸಿಯೇಟೆಡ್ ಪ್ರೆಸ್ X ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಈ ಘಟನೆ ನಡೆಯುವಾಗ ತಂದೆ ಕೆಲವೇ ಮೀಟರ್‌ಗಳಷ್ಟು ದೂರವಿದ್ದರು
ಮಗನನ್ನು ಕಯಾಕ್ ಜೊತೆ ತಿಮ್ಮಿಂಗಲ ನುಂಗಿದಾಗ ಸ್ವಲ್ಪವೇ ದೂರದಲ್ಲಿದ್ದ ತಂದೆ ಮಗನಿಗೆ "Stay calm, stay calm," ಎಂದ ಧೈರ್ಯ ತುಂಬುವ ಪ್ರಯತ್ನ ಮಾಡಿದರು.
Humpback whale swallows kayaker off Chile before releasing him. pic.twitter.com/UuUatMGUxN
— The Associated Press (@AP) February 13, 2025
ನಾನು ಸತ್ತೇ ಎಂದೇ ಯೋಚಿಸಿದ್ದೆ
ಆಂಡ್ರಿಯನ್ ನನ್ನ ತಿಮ್ಮಿಂಗಲ ನುಂಗಿದಾಗ ನಾನು ಸತ್ತೇ ಎಂದು ಯೋಚಿಸಿದ್ದೆ, ನಂತರ ನೋಡಿದರೆ ನಾನು ತೇಲಲಾರಂಭಿಸಿದೆ, ನನಗೆ ಏನಾದರು ಆಗಬಹುದು, ನನ್ನ ತಂದೆಗೆ ಏನಾದರು ಆಗಬಹುದು ಎಂದು ಭಯಪಟ್ಟೆ, ನಾವು ತಡ ಮುಟ್ಟುವುದಿಲ್ಲ ಕಾಣುತ್ತೆ ಎಂದೆಲ್ಲಾ ಆಲೋಚಿಸಿದ್ದೆ ಎಂದು ಹೇಳಿದ್ದಾರೆ.
ತಿಮ್ಮಿಂಗಲ ನುಂಗಿದ ಕೆಲವೇ ನಿಮಿಷದಲ್ಲಿ ಆ ವ್ಯಕ್ತಿ ಮತ್ತು ಕಯಾಕ್ ಹೊರಹಾಕಿತು
ತಿಮಿಂಗಿಲಕ್ಕೆ ನುಂಗಿದ ಮೇಲೆ ತಾನು ನುಂಗಿರುವುದು ಆಹಾರವಲ್ಲ ಎಂದು ತಿಳಿದಿರಬಹುದು ಕಯಾಕ್ ಹೊರಗೆ ಉಗುಳಿದೆ, ಕಯಾಕ್ ಜೊತೆಗೆ ಆ ವ್ಯಕ್ತಿಯು ಅದೃಷ್ಟದಿಂದ ಹೊರ ಬಂದಿದ್ದಾರೆ, ನಂತರ ತಂದೆ-ಮಗ ಇಬ್ಬರು ಬೇಗನೆ ತಡ ಸೇರಿದ್ದಾರೆ.
ಅದೃಷ್ಟವಿದ್ದರೆ ಸಾವು ಕೂಡ ದೂರಾಗುತ್ತೆ
ಸುಮ್ಮನೆ ದಾರಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ಅಪಘಾತದಿಂದ ಸತ್ತ ಎಷ್ಟೋ ಉದಾಹರಣೆಗಳಿವೆ, ಆದರೆ ಈ ವ್ಯಕ್ತಿ ತಿಮಿಂಗಿಲ ಹೊಟ್ಟೆಯೊಳಗೆ ಹೋಗಿ ಹೊರ ಬಂದು ಜೀವಂತವಾಗಿದ್ದಾರೆ. ನಿಜಕ್ಕೂ ಅದೃಷ್ಟ ಮಾಡಿರಬೇಕು, ಈಗ ಆ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.



Click it and Unblock the Notifications
