Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಅಯ್ಯೋ... ಇಂಥ ವಿಚಿತ್ರ ಮದುವೆಗಳ ಬಗ್ಗೆ ಕೇಳಿದ್ದೀರಾ? ವಧು ಬಗ್ಗೆ ಯೋಚಿಸಿದರೆ ಪಾಪ ಅನಿಸುತ್ತೆ
ಮದುವೆ ಎಂದರೆ ಒಂದೊಂದು ಆಚರಣೆ ಇರುತ್ತದೆ, ಆದರೆ ಕೆಲವೊಂದು ಆಚರಣೆಗಳು ತುಂಬಾ ವಿಚಿತ್ರವಾಗಿರುತ್ತದೆ, ಎಷ್ಟು ವಿಚಿತ್ರವಾಗಿರುತ್ತದೆ ಎಂದರೆ ಹೀಗೂ ಇರುತ್ತಾ ಎನ್ನುವಷ್ಟು ವಿಚಿತ್ರ ಅನಿಸುತ್ತೆ, ಅಂಥ ವಿಚಿತ್ರ ಮದುವೆ ಆಚರಣೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:
ಸ್ಕಾಟ್‌ಲ್ಯಾಂಡ್‌ನಲ್ಲಿ ವಧುವನ್ನು ಕಪ್ಪಾಗಿಸುವ ಸಂಪ್ರದಾಯ
ಮದುವೆ ದಿನ ವಧುವನ್ನು ಎಷ್ಟು ಸುಂದರವಾಗಿ ಕಾಣಲು ಸಾಧ್ಯವೋ ಅಷ್ಟು ಚೆನ್ನಾಗಿ ಅಲಂಕಾರ ಮಾಡಲಾಗುವುದು. ಬ್ಯೂಟಿಷಿಯನ್ ಬಂದು ವಧುವನ್ನು ಅಲಂಕರಿಸುತ್ತಾಳೆ, ಅಲಂಕಾರಕ್ಕಾಗಿಯೇ ಒಂದಿಷ್ಟು ಹಣವನ್ನು ಸುರಿಯಲಾಗುವುದು. ಆದರೆ ಸ್ಕಾಟ್‌ಲ್ಯಾಂಡ್‌ನಲ್ಲಿ ವಧು ಮಾಡುವ ಪಾಡು ಕೇಳಿದರೆ ಪಾಪ ಅನಿಸದೆ ಇರಲ್ಲ. ಮೊಟ್ಟೆ, ಮೀನು ಈ ವಸ್ತುಗಳನ್ನು ಆಕೆಗೆ ಎರಚಲಾಗುವುದು, ಅಷ್ಟು ಮಾತ್ರವಲ್ಲ ನಂತರ ಜೋಡಿಯನ್ನು ಮರಕ್ಕೆ ಕಟ್ಟಲಾಗುವುದು, ಅವರೇ ಅದರಿಂದ ಬಿಡಿಸಿಕೊಂಡು ಬಂದರೆ ಮದುವೆ, ಎಂಥ ವಿಚಿತ್ರವಲ್ಲ.

ಚೀನಾದಲ್ಲಿ ವಧುವಿಗೆ ಬಾಣ ಬಿಡುವುದು
ಚೀನಾದಲ್ಲಿ ಯುಗುರ್ ಎಂಬ ಅಲ್ಪಸಂಖ್ಯಾತ ಸಮುದಾಯವಿದೆ, ಅವರಲ್ಲಿ ಮದುಮಗಳಿಗೆ ಮದುಮಗ ಬಿಲ್ಲಿನಿಂದ ಬಾಣ ಬಿಡಬೇಕು. ನಂತರ ಹುಡುಗ ಹುಡುಗಿ ಬಳಿ ಹೋಗಿ ಬಾಣವನ್ನು ಮುರಿಯಬೇಕು, ನಾವಿಬ್ಬರು ಬದುಕಿನಲ್ಲಿ ಎಲ್ಲಾ ಕಷ್ಟಸುಖಗಳಲ್ಲಿ ಅನುಸರಿಸಿಕೊಂಡು ಹೋಗುತ್ತೇವೆ ಎಂಬುವುದು ಈ ಸಂಪ್ರದಾಯದ ಉದ್ದೇಶವಂತೆ.
ಹುಡುಗಿ ಮುಖಕ್ಕೆ ಉಗಿಯುವುದು
ಕೀನ್ಯಾದಲ್ಲಿ ಈ ಪದ್ಧತಿ ಇದೆ. ಹುಡುಗನ ತಂದೆ ಬಂದು ಸೊಸೆಯ ಹಣೆಗೆ, ಎದೆಗೆ ಉಗಿಯುತ್ತಾನೆ, ಆಗ ಅವಳು ಅಲ್ಲಿಂದ ಓಡಿ ಹೋಗಿ ಪತಿ ಜೊತೆ ಹೋಗಬೇಕು, ಹೀಗೆ ಓಡುವಶಗ ತಿರುಗಿ ನೋಡಬಾರದು, ತಿರುಗಿ ನೋಡಿದರೆ ಕಲ್ಲೇಟು ಬೀಳುತ್ತದೆ.
ಮುತ್ತು ನೀಡುವುದು
ಹುಡುಗ-ಹುಡುಗಿ ಮುತ್ತು ನೀಡುವುದು ಸಹಜ, ಆದರೆ ಸ್ವೀಡನ್‌ನಲ್ಲಿ ಮದುಮಗ, ಮದುಮಗಳು ಹೊರಗಡೆ ಬಂದರೆ ಅಲ್ಲಿರುವ ಅವಾಹಿತರು ಅವರಿಗೆ ಮುತ್ತು ನೀಡುತ್ತಾರೆ, ಅವರಿಂದ ತಪ್ಪಿಸಿಕೊಂಡು ಹೋಗಬೇಕು, ಹುಡುಗಿಯರು ಮುತ್ತು ನೀಡುತ್ತಾರೆ ಕೆಲ ಹುಡುಗರು ಹಾಗೇ ನಿಂತುಕೊಳ್ಳಬಹುದು ಯಾರಿಗೆ ಗೊತ್ತು ಅಲ್ವಾ? ಇಬ್ಬರೂ ಯಾರ ಕಣ್ಣಿಗೆ ಬೀಳದೆ ಜೊತೆಯಾಗಬೇಕು, ಇಬ್ಬರು ಜೊತೆಯಲ್ಲಿ ನಿಂತ ಮೇಲೆ ಯಾರೂ ಮುತ್ತು ನೀಡಲು ಬರುವುದಿಲ್ಲ, ಈ ಸಂಪ್ರದಾಯ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ತುಂಬಾನೇ ಹಿಂಸೆ ಅನಿಸುವುದು ಅಲ್ವಾ?
ಮನುಷ್ಯರೇ ಕಾರ್ಪೆಟ್ ಆಗಬೇಕು
ಫ್ರೆಂಚ್‌ನ ಪೋಲಿನೇಷ್ಯಾದಲ್ಲಿ ಮದುವೆ ದಿನ ಹುಡುಗ-ಹುಡುಗಿ ನಡೆದುಕೊಂಡು ಬರುವಾಗ ಅವರು ನೆಲದ ಮೇಲೆ ಕಾಲಿಡುವುದಿಲ್ಲ, ಬದಲಿಗೆ ಅವರ ಕುಟುಂಬಸ್ಥರು ನೆಲದ ಮೇಲೆ ಮಗುಚಿ ಮಲಗುತ್ತಾರೆ, ಅವರು ನಡೆದುಕೊಂಡು ಹೋಗಬೇಕು. ಪಾಪ ಮನೆಯವರ ಗತಿ, ನಮ್ಮಲ್ಲಿ ಈ ರೀತಿ ಇದ್ದರೆ ಯಾರೂ ಮದುವೆಗೇ ಬರಲ್ಲ ಕಾಣುತ್ತೆ ಅಲ್ವಾ?
ನಗುವಂತೆಯೇ ಇಲ್ಲ
ಮದುವೆಯೆಂದರೆ ಖುಷಿ, ಆದರೆ ಆ ಖುಷಿಯ ದಿನ ಕಾಂಗೋದಲ್ಲಿ ನಗುವಂತೆಯೇ ಇಲ್ಲ. ಫೋಟೋಶೂಟ್‌ನಲ್ಲೂ ನಗುವಂತೆ ಇಲ್ಲ. ನಕ್ಕರೆ ಅದನ್ನು ಅಪಮರ್ಯಾದೆ ಎಂದು ಪರಿಗಣಿಸಲಾಗುವುದು. ಇಲ್ಲಿ ಮದುವೆಯಲ್ಲಿ ನಗದೇ ಇದ್ದರೆ ಈ ಮದುವೆಯಲ್ಲಿ ಏನೋ ಸಮಸ್ಯೆಯಿದೆ ಎಂದು ಬಂದವರು ಅಂದುಕೊಳ್ಳುತ್ತಾರೆ ಅಲ್ವಾ?
ಬೆಂಕಿ ತರುವುದು
ದಕ್ಷಿಣ ಆಫ್ರಿಕಾದಲ್ಲಿ ಈ ಸಂಪ್ರದಾಯ, ಇದೊಂದು ರೀತಿ ಚೆನ್ನಾಗಿ ಇದೆ. ಹುಡುಗ ಹಾಗೂ ಹುಡುಗಿಯ ಪೋಷಕರು ತಮ್ಮ-ತಮ್ಮ ಮನೆಗಳಿಂದ ಬೆಂಕಿ ತರಬೇಕು, ಆ ಬೆಂಕಿಯನ್ನು ನವದಂಪತಿ ಹೋಗುವ ಹೊಸ ಮನೆಗೆ ತಂದು ಬೆಂಕಿ ಹಾಕಬೇಕು. ಒಂದು ರೀತಿ ಕ್ಯಾಂಫೈರ್ ರೀತಿ. ಮನೆಯಿಂದ ತಂದ ಬೆಂಕಿಯ ಬಿಸಿಯಂತೆ ಅವರ ದಾಂಪತ್ಯ ಸುಖಕರವಾಗಿರಲಿ ಎಂದು ಬಯಸಿ ಈ ಸಂಪ್ರದಾಯ ಮಾಡಲಾಗುವುದು.



Click it and Unblock the Notifications
