ವಾರ ಭವಿಷ್ಯ (ಮೇ7-13): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ

ಗ್ರಹಗತಿಗಳ ಸ್ಥಾನದ ಮೇಲೆ ಭವಿಷ್ಯ ಹೇಳಲಾಗುವುದು. ಈ ವಾರ ಅಂದರೆ ಮೇ 7-13ರವರೆಗಿನ ವಾರ ಭವಿಷ್ಯ ಇಲ್ಲಿ ನೀಡಲಾಗಿದೆ. ಈ ವಾರ ಯಾರಿಗೆ ಒಳ್ಳೆಯದು, ಯಾವ ರಾಶಿಯವರು ಆರ್ಥಿಕ ಲಾಭ ಗಳಿಸುತ್ತಾರೆ, ಯಾರು ಸ್ವಲ್ಪ ಜಾಗ್ರತೆವಹಿಸಬೇಕೆಂದು ನೋಡೋಣ ಬನ್ನಿ:

weekly horoscope

ಮೇಷ ರಾಶಿ
ವಾರದ ಆರಂಭವು ನಿಮಗೆ ತುಂಬಾ ದುಬಾರಿಯಾಗಲಿದೆ. ಈ ಸಮಯದಲ್ಲಿ ದೊಡ್ಡ ಖರ್ಚಿನಿಂದಾಗಿ, ನಿಮ್ಮ ಬಜೆಟ್ ಪ್ಲ್ಯಾನ್ ಉಲ್ಟಾ ಆಗುವುದು. ಈ ಅವಧಿಯಲ್ಲಿ ಆರೋಗ್ಯದ ಸಮಸ್ಯೆ ಕಾಡುವುದು. ವಾರದ ಮಧ್ಯದಲ್ಲಿ ನೀವು ಕುಟುಂಬದಲ್ಲಿ ಒತ್ತಡವನ್ನು ಎದುರಿಸಬಹುದು. ಮನೆಯಲ್ಲಿ ಪರಿಸ್ಥಿತಿ ಚೆನ್ನಾಗಿರಲ್ಲ, ಮನಸ್ತಾಪಗಳು ಹೆಚ್ಚಾಗಬಹುದು. ಕಚೇರಿಯಲ್ಲಿ ಅಪೂರ್ಣ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಿ. ಉದ್ಯಮಿಗಳು ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಈ ಅವಧಿಯಲ್ಲಿ ನೀವು ಉತ್ತಮ ಪರಿಹಾರವನ್ನು ಪಡೆಯಬಹುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿನ: ಸೋಮವಾರ

ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ವಾರ ನಿಮಗೆ ತುಂಬಾ ಕಾರ್ಯನಿರತವಾಗಿರಲಿದೆ. ನಿಮಗಾಗಿ ಸ್ವಲ್ಪವೂ ಸಮಯ ಸಿಗಲ್ಲ, ಆದರೂ ನೀವು ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ನಡವಳಿಕೆಯ ಬಗ್ಗೆ ನೀವು ಹೆಚ್ಚು ಜಾಗ್ರತೆ ವಹಿಸಬೇಕು. ಅನಗತ್ಯ ಕೋಪವು ನಿಮ್ಮ ವ್ಯವಹಾರದಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಇದಲ್ಲದೆ, ಇದು ನಿಮ್ಮ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡುವುದು ಒಳ್ಳೆಯದು. ಸಂಗಾತಿಗೆ ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರುತ್ತದೆ. ಈ ಸಮಯದಲ್ಲಿ, ನೀವು ಅವರನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಬುಧವಾರ

ಮಿಥುನ ರಾಶಿ
ಪ್ರೇಮಿಗಳಿಗೆ ಈ ವಾರ ಅನುಕೂಲಕರವಲ್ಲಮ ಹಲವು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸಂಗಾತಿಯ ಮೇಲಿನ ನಂಬಿಕೆ ಇಡಬೇಕು. ಇತರರ ಮಾತಿಗೆ ಮಣಿದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದ ಬಗ್ಗೆ ಹೇಳುವುದಾದರೆ ಉದ್ಯೋಗಿಗಳು ಕಚೇರಿಯಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಈ ಸಮಯದಲ್ಲಿ, ನಿಮ್ಮ ನೆಚ್ಚಿನ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನೀವು ಟೀಮ್‌ವರ್ಕ್‌ಗೆ ಗಮನ ನೀಡಿದರೆ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ವಾರ ಉದ್ಯಮಿಗಳಿಗೆ ಮಿಶ್ರ ಫಲಿತಾಂಶ. ನೀವು ದೊಡ್ಡ ಲಾಭವನ್ನು ನಿರೀಕ್ಷಿಸುತ್ತಿದ್ದರೆ, ಈ ಅವಧಿಯಲ್ಲಿ ನೀವು ನಿರಾಶೆ ಅನುಭವಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವುದು ಒಳ್ಳೆಯದು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ದಿನ: ಶುಕ್ರವಾರ

ಕರ್ಕ ರಾಶಿ
ಈ ವಾರ ಉದ್ಯಮಿಗಳಿಗೆ ಒಳ್ಳೆಯದಿದೆ. ಈ ಹಿಂದೆ ಅಪೂರ್ಣವಾಗಿದ್ದ ಕೆಲಸವು ಈ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ. ವಾರದ ಮಧ್ಯದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಆಲಸ್ಯ ಮತ್ತು ಸೋಮಾರಿತನವನ್ನು ತ್ಯಜಿಸಲು ಉದ್ಯೋಗಿಗಳಿಗೆ ಸಲಹೆ ನೀಡಲಾಗಿದೆ. ನಿಮ್ಮ ಮೇಲಿನ ಕೆಲಸದ ಹೊರೆ ಸ್ವಲ್ಪ ಹೆಚ್ಚಾಗಬಹುದು. ನಿಮ್ಮ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಆದರೆ ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕು. ಅತಿಯಾಗಿ ಖರ್ಚು ಮಾಡಿದರೆ ಭವಿಷ್ಯದಲ್ಲಿ ಅಡೆತಡೆ ಉಂಟಾಗಬಹುದು. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಸೋಮವಾರ

ಸಿಂಹ ರಾಶಿ
ಯಾವುದೇ ಪ್ರಮುಖ ವೃತ್ತಿ ಸಂಬಂಧಿತ ಸಮಸ್ಯೆಯು ಕೊನೆಯಾಗಲಿದೆ. ಈ ಸಮಯದಲ್ಲಿ, ನೀವು ಸರಿಯಾಗಿ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ನೀವು ಉದ್ಯಮಿಯಾಗಿದ್ದರೆ ಮತ್ತು ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದರೆ, ಈ ವಾರ ಲಾಭ ಗಳಿಸುವಿರಿ. ನಿಮ್ಮ ವ್ಯಾಪಾರದಲ್ಲಿ ಬೆಳವಣಿಗೆ ಆಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಶುಭ ಕಾರ್ಯ ದೊರೆಯಲಿದೆ. ಹಣಕ್ಕೆ ಸಂಬಂಧಿಸಿದ ಚಿಂತೆಗಳಿಂದ ಮುಕ್ತಿ ಪಡೆಯಬಹುದು. ನಿಮ್ಮ ಆದಾಯ ಹೆಚ್ಚಾಗಬಹುದು. ವಾರಾಂತ್ಯದಲ್ಲಿ ಪ್ರಯಾಣ ಮಾಡುವ ಅವಕಾಶ ಸಿಗಲಿದೆ. ನಿಮ್ಮ ಈ ಪಯಣ ತುಂಬಾ ಆಹ್ಲಾದಕರವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ, ಈ ಅವಧಿಯಲ್ಲಿ ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ದಿನ: ಶನಿವಾರ

ಕನ್ಯಾ ರಾಶಿ
ನೀವು ಸ್ವಲ್ಪ ಸಮಯದಿಂದ ಕೆಲಸದ ಒತ್ತಡ ಅನುಭವಿಸುತ್ತಿದ್ದರೆ, ಈ ವಾರ ನಿಮಗೆ ಉತ್ತಮವಾಗಿದೆ. ಈ ಅವಧಿಯಲ್ಲಿ, ನೀವು ನಿಮ್ಮ ನೆಚ್ಚಿನ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು. ಇದರಿಂದ ನೀವು ತುಂಬಾ ರಿಫ್ರೆಶ್ ಆಗಿರುತ್ತೀರಿ. ಈ ಸಮಯವು ಉದ್ಯೋಗಿಗಳಿಗೆ ತುಂಬಾ ಆಹ್ಲಾದಕರವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ, ನೀವು ದೊಡ್ಡ ಪ್ರಗತಿಯನ್ನು ಸಾಧಿಸಬಹುದು. ವ್ಯಾಪಾರಸ್ಥರಿಗೆ ಅಧಿಕ ಲಾಭ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 28
ಅದೃಷ್ಟದ ದಿನ: ಮಂಗಳವಾರ

ತುಲಾ ರಾಶಿ
ಈ ಸಮಯದಲ್ಲಿ ನೀವು ನಿಮ್ಮ ವೈವಾಹಿಕ ಜೀವನದ ಕಡೆ ಅಧಿಕ ಗಮನ ಹರಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ನೀವು ದೂರವಾಗಿದ್ದರೆ, ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ಶೀಘ್ರದಲ್ಲೇ ನೀವು ಅದರ ಉತ್ತಮ ಫಲಿತಾಂಶಗಳನ್ನು ಸಹ ಪಡೆಯಬಹುದು. ಹಣದ ವಿಷಯದಲ್ಲಿ ಈ ಸಮಯವು ನಿಮಗೆ ಉತ್ತಮವಾಗಿರಲಿದೆ. ನೀವು ಹವ್ಯಾಸಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಕೆಲಸದ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ಕಚೇರಿಯಲ್ಲಿ ನಿಮ್ಮ ಚಿಕ್ಕ ಕೆಲಸವನ್ನೂ ಎಚ್ಚರಿಕೆಯಿಂದ ಮಾಡಲು ಪ್ರಯತ್ನಿಸಿ. ಈ ಅವಧಿಯಲ್ಲಿ, ನೀವು ಯಾವುದೇ ತಪ್ಪು ಮಾಡಿದರೆ, ನಂತರ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಉದ್ಯಮಿಗಳಿಗೆ ಈ ವಾರ ಲಾಭದಾಯವಾಗಿದೆ. ನಿಮ್ಮ ವ್ಯಾಪಾರ ಹೆಚ್ಚಾಗುತ್ತದೆ. ಆರೋಗ್ಯದ ವಿಷಯದಲ್ಲಿ, ಈ ಸಮಯವು ನಿಮಗೆ ಏರಿಳಿತಗಳಿಂದ ತುಂಬಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 30
ಅದೃಷ್ಟದ ದಿನ: ಬುಧವಾರ

ವೃಶ್ಚಿಕ ರಾಶಿ
ವ್ಯಾಪಾರಸ್ಥರಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಉದ್ಯೋಗಿಗಳಿಗೆ ಈ ಸಮಯ ಸವಾಲಿನಿಮದ ಕೂಡಿರುತ್ತದೆ. ನೀವು ಕೆಲಸದ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಈ ವಾರ ಸರಿಯಾದ ಸಮಯ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಇರಲಿದೆ. ಆರೋಗ್ಯ ಸಮಸ್ಯೆಗಳಿರಬಹುದು, ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 17
ಅದೃಷ್ಟದ ದಿನ: ಭಾನುವಾರ

ಧನು ರಾಶಿ
ನೀವು ಉದ್ಯಮಿಯಾಗಿದ್ದರೆ ಮತ್ತು ದೊಡ್ಡ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಒಳ್ಳೆಯ ಅವಕಾಶವನ್ನು ಪಡೆಯಬಹುದು. ಆದರೆ, ನೀವು ಯಾವುದೇ ರೀತಿಯ ಆತುರವನ್ನು ಮಾಡದಿದ್ದರೆ ಅದು ಉತ್ತಮವಾಗಿರುತ್ತದೆ. ಸರ್ಕಾರಿ ನೌಕರಿ ಮಾಡುವವರ ಹಠಾತ್ ವರ್ಗಾವಣೆ ಆಗಬಹುದು. ಉದ್ಯೋಗಿಗಳಿಗೆ ಅನುಕೂಲಕರವಾಗಿದೆ. ಹಣಕಾಸಿನ ಸ್ಥಿತಿ ಹದಗೆಡುವ ಲಕ್ಷಣಗಳಿವೆ. ಹಣದ ವಿಚಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಮನೆಯಲ್ಲಿ ಪರಿಸ್ಥಿತಿ ಉತ್ತಮವಾಗುವುದು. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 23
ಅದೃಷ್ಟದ ದಿನ: ಮಂಗಳವಾರ

ಮಕರ ರಾಶಿ
ಕೆಲಸದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ನಿಮ್ಮ ಕೆಲಸ ತಾತ್ಕಾಲಿಕವಾಗಿದ್ದರೆ, ಈ ಸಮಯದಲ್ಲಿ ಕೆಲಸದ ಅಭದ್ರತೆ ಕಾಡಬಹುದು. ವ್ಯಾಪಾರಸ್ಥರು ಈ ವಾರ ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಕಾನೂನು ವಿಷಯಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ, ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಹಣದ ವಿಷಯದಲ್ಲಿ, ಈ ವಾರ ನಿಮಗೆ ಮಿಶ್ರಫಲ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿದರೆಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗಲ್ಲ, ಇದರಿಂದ ಕುಟುಂಬದಲ್ಲಿ ಸಮಸ್ಯೆ ಬರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ನಿದ್ದೆ ಕೆಟ್ಟ ಕೆಲಸ ಮಾಡಲು ಹೋಗಬೇಡಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ದಿನ: ಭಾನುವಾರ

ಕುಂಭ ರಾಶಿ
ವಾರದ ಆರಂಭದಲ್ಲಿ, ನೀವು ಕೆಲಸದಲ್ಲಿ ತುಂಬಾ ನಿರತರಾಗಿರುತ್ತೀರಿ. ಇದಲ್ಲದೆ, ಹೆಚ್ಚುತ್ತಿರುವ ಕುಟುಂಬದ ಜವಾಬ್ದಾರಿಗಳಿಂದಾಗಿ, ನಿಮಗಾಗಿ ಸಮಯ ಸಿಗುವುದಿಲ್ಲ. ವೈವಾಹಿಕ ಜೀವನವು ಸುಂದರ ತಿರುವು ಪಡೆಯಬಹುದು. ಈ ವಾರ ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ದೈನಂದಿನ ಖರ್ಚು ಹೆಚ್ಚಾಗಲಿದೆ. ಇದಲ್ಲದೆ, ಮನೆಯ ಯಾವುದೇ ಸದಸ್ಯರ ಅನಾರೋಗ್ಯದ ಕಾರಣ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಕೆಲಸದ ವಿಷಯದಲ್ಲಿ, ಈ ವಾರ ನಿಮಗೆ ಮಿಶ್ರಫಲ. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿನ: ಗುರುವಾರ

ಮೀನ ರಾಶಿ
ಆಸ್ತಿ ವ್ಯವಹಾರ ಮಾಡುವವರಿಗೆ ಈ ವಾರ ಉತ್ತಮವಾಗಿದೆ. ಮತ್ತೊಂದೆಡೆ, ಈ ಸಮಯವು ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ಜನರಿಗೆ ಸಹ ಪ್ರಯೋಜನಕಾರಿಯಾಗಲಿದೆ. ಉದ್ಯೋಗಸ್ಥರು ದೀರ್ಘಾವಧಿಯಿಂದ ಬಡ್ತಿಗಾಗಿ ಶ್ರಮಿಸುತ್ತಿದ್ದರೆ, ಈ ವಾರ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರವು ಉತ್ತಮವಾಗಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ಸಂಗಾತಿಯ ಮನಸ್ಸು ನೋಯಿಸಬೇಡಿ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿನ: ಶನಿವಾರ

English summary

Weekly Rashi Bhavishya for May 7 to 13, 2023

Weekly Horoscope in Kannada - Read horoscope for May 7 to 13 predictions for all 12 zodiac signs and know about love, finance, health, and career.
Story first published: Friday, May 5, 2023, 22:02 [IST]
X
Desktop Bottom Promotion