Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ವಾರ ಭವಿಷ್ಯ (ಮೇ21-27): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
ಗ್ರಹಗತಿಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು. ಈ ವಾರ ಅಂದರೆ ಮೇ 21-27ರವರೆಗಿನ ವಾರಭವಿಷ್ಯ ಇಲ್ಲಿ ನೀಡಲಾಗಿದೆ. ನಿಮ್ಮ ರಾಶಿಗೆ ಶುಭವೋ ಅಥವಾ ಜಾಗ್ರತೆವಹಿಸಬೇಕಾ ನೋಡೋಣ ಬನ್ನಿ:
ಮೇಷ ರಾಶಿ
ಈ ಸಮಯದಲ್ಲಿ, ನಿಮ್ಮ ಮನೆಯ ವಾತಾವರಣವು ಅಷ್ಟು ಸರಿಯಾಗಿರುವುದಿಲ್ಲ. ಕುಟುಂಬದ ಸದಸ್ಯರಲ್ಲಿ ಆರೋಗ್ಯದಲ್ಲಿ ಹಠಾತ್ ಆರೋಗ್ಯ ಸಮಸ್ಯೆ ಉಂಟಾಗಬಹುದು. ಕೆಲಸದ ಬಗ್ಗೆ ಹೇಳುವುದಾದರೆ ಈ ವಾರ ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಕೆಲವು ಕಾರ್ಯಗಳು ಅಪೂರ್ಣವಾಗಿ ಉಳಿಯಲಿದೆ. ಇದರಿಂದ ಕಚೇರಿಯಲ್ಲಿ ಮೇಲಾಧಿಕಾರಿಗಳು ಅಸಮಧಾನ ವ್ಯಕ್ತಪಡಿಸಬಹುದು. ನೀವು ಉದ್ಯಮಿಯಾಗಿದ್ದರೆ ಉತ್ತಮ ಅವಕಾಶ ಕೈ ತಪ್ಪಿಹೋಗಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಆಯಾಸ, ಮಾನಸಿಕ ಒತ್ತಡ ಹೆಚ್ಚಿರಲಿದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 26
ಅದೃಷ್ಟದ ದಿನ: ಶನಿವಾರ

ವೃಷಭ ರಾಶಿ
ಉದ್ಯೋಗಿಗಳಿಗೆ ಈ ವಾರ ತುಂಬಾ ಅದೃಷ್ಟದ ದಿನವಾಗಿದೆ. ನಿಮ್ಮ ಆದಾಯ ಹೆಚ್ಚಾಗಬಹುದು. ಇದರ ಹೊರತಾಗಿ, ನೀವು ಕೆಲಸಕ್ಕೆ ಸಂಬಂಧಿಸಿದ ವಿದೇಶ ಪ್ರವಾಸದ ಅವಕಾಶವನ್ನು ಸಹ ಪಡೆಯಬಹುದು. ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಪಾಲುದಾರರೊಂದಿಗೆ ವ್ಯಾಪಾರ ಮಾಡುತ್ತಿದ್ದರೆ, ಈ ವಾರ ನೀವು ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ನಿಮ್ಮ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಪಾಲುದಾರರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ದೊಡ್ಡ ಸುಧಾರಣೆ ಕಂಡು ಬರಲಿದೆ. ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ನೀವು ಸಂಪೂರ್ಣ ಕಾಳಜಿ ವಹಿಸಬೇಕು. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ಗೌರವಿಸಿ. ಹಣದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಖರ್ಚು ಕಡಿಮೆ ಇರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯದ ವಿಷಯದಲ್ಲಿ ಈ ಸಮಯವು ನಿಮಗೆ ಸರಾಸರಿಯಾಗಿರುತ್ತದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಸೋಮವಾರ
ಮಿಥುನ ರಾಶಿ
ನೀವು ಉದ್ಯಮಿಯಾಗಿದ್ದರೆ ಮತ್ತು ನೀವು ಇತ್ತೀಚೆಗೆ ದೊಡ್ಡ ನಷ್ಟವನ್ನು ಅನುಭವಿಸಿದ್ದರೆ, ಈ ವಾರ ನಿಮ್ಮ ನಷ್ಟವನ್ನು ತುಂಬಲು ನಿಮಗೆ ಅವಕಾಶ ಸಿಗಲಿದೆ. ನಿಮ್ಮ ಯಾವುದೇ ಕೆಲಸಕ್ಕೆ ಅಡಚನೆ ಉಂಟಾಗಿದ್ದರೆ ಈ ಅವಧಿಯಲ್ಲಿ ಈ ಸಮಸ್ಯೆ ಬಗೆಹರಿಸಬಹುದು. ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಈ ಅವಧಿಯಲ್ಲಿ, ಕೆಲಸದ ಹೊರೆ ನಿಮ್ಮ ಮೇಲೆ ಅಧಿಕವಿರಲಿದೆ. ಇದಲ್ಲದೇ ನಿಮ್ಮ ಮೇಲೆ ಉನ್ನತ ಅಧಿಕಾರಿಗಳ ಒತ್ತಡವೂ ಹೆಚ್ಚಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ನೀವು ಹಣದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡಿ. ಮನೆಯ ವಾತಾವರಣ ಚೆನ್ನಾಗಿರಲಿದೆ. ಈ ಸಮಯದಲ್ಲಿ, ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ, ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ಆರೋಗ್ಯದಲ್ಲಿ ಹಠಾತ್ ಕುಸಿತವು ನಿಮ್ಮ ತೊಂದರೆಗಳನ್ನು ಹೆಚ್ಚಿಸಬಹುದು.
ಅದೃಷ್ಟದ ಬಣ್ಣ: ಗಾಢ ಹಸಿರು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿನ: ಶುಕ್ರವಾರ
ಕರ್ಕ ರಾಶಿ
ಈ ಸಮಯವು ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯವಾಗಿದೆ. ನೀವು ಯಾವುದೇ ಆನ್‌ಲೈನ್ ಕೋರ್ಸ್ ಮಾಡಲು ಯೋಜಿಸುತ್ತಿದ್ದರೆ ಇದು ಸರಿಯಾದ ಸಮಯ. ಹಣದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರುವುದಿಲ್ಲ. ಈ ಅವಧಿಯಲ್ಲಿ ಧನಹಾನಿಯಾಗುವ ಸೂಚನೆಗಳಿವೆ. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಈ ವಾರ ನೀವು ಬಹಳಷ್ಟು ಓಡಬೇಕಾಗಬಹುದು. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣಗಳು ನಿಮಗೆ ತುಂಬಾ ದಣಿವು ಮತ್ತು ಹೊರೆಯಾಗಬಹುದು. ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಕ್ಷೀಣಿಸಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿನ: ಬುಧವಾರ
ಸಿಂಹ ರಾಶಿ
ಉದ್ಯೋಗಸ್ಥರಿಗೆ ಈ ವಾರ ಏರಿಳಿತದಿಂದ ಕೂಡಿರುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಕೂಡ ಉಂಟಾಗಬಹುದು. ಈ ಸಮಯದಲ್ಲಿ ನೀವು ಕೆಲಸವನ್ನು ಬಿಡಲು ಕೂಡ ಆಲೋಚಿಸಬಹುದು. ವ್ಯಾಪಾರಸ್ಥರಿಗೆ ಈ ವಾರ ತುಂಬಾ ಒಳ್ಳೆಯದು. ಹೂಡಿಕೆ ಮಾಡಲು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಇದರಿಂದ ದುಪ್ಪಟ್ಟು ಲಾಭ ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ. ನಿಮ್ಮ ಮನೆಯ ಯಾವುದೇ ಸದಸ್ಯರೊಂದಿಗೆ ನೀವು ಬಿರುಕು ಹೊಂದಿದ್ದರೆ, ಈ ಅವಧಿಯಲ್ಲಿ ಶಾಂತವಾಗಿ ಬಗೆಹರಿಸಲು ಪ್ರಯತ್ನಿಸಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮ್ಮ ಪ್ರಯತ್ನಗಳನ್ನು ನೀವು ವೇಗಗೊಳಿಸಬೇಕು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೋಪ ನಿಯಂತ್ರಿಸಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ದಿನ: ಮಂಗಳವಾರ
ಕನ್ಯಾ ರಾಶಿ
ಈ ಸಮಯದಲ್ಲಿ ನೀವು ಅನಗ್ಯತ ಚರ್ಚೆಯಿಂದ ದೂರವಿರಲು ಸಲಹೆ ನೀಡಲಾಗಿದೆ, ಬೇರೆಯವರ ವಿಚಾರಕ್ಕೆ ಮೂಗು ತೂರಿಸಲು ಹೋಗಬೇಡಿ. ವಾರದ ಮಧ್ಯದಲ್ಲಿ, ಇದ್ದಕ್ಕಿದ್ದಂತೆ ನೀವು ದೂರ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಈ ಪಯಣ ಬಹುಮುಖ್ಯವಾಗಲಿದೆ. ಹಣದ ವಿಷಯದಲ್ಲಿ ಈ ವಾರ ಚೆನ್ನಾಗಿರಲಿದೆ. ಕಡಿಮೆ ಶ್ರಮದಿಂದ ಉತ್ತಮ ಹಣವನ್ನು ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಬಹುದು. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ ಕಂಡು ಬರಲಿದೆ. ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ ಈಗಾಗಲೇ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಹೆಚ್ಚು ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 17
ಅದೃಷ್ಟದ ದಿನ: ಶನಿವಾರ
ತುಲಾ ರಾಶಿ
ತುಲಾ ರಾಶಿಯವರಿಗೆ ಈ ವಾರ ಕಳೆದ ವಾರಕ್ಕಿಂತ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯ ಪ್ರಕಾರ ಪೂರ್ಣಗೊಳ್ಳಲಿದೆ. ಉದ್ಯೋಗಗಳಿಗೆ ಕೆಲಸದ ಹೊರೆ ಕಡಿಮೆಯಾಗಬಹುದು. ಉನ್ನತ ಅಧಿಕಾರಿಗಳೊಂದಿಗಿನ ನಿಮ್ಮ ಹೊಂದಾಣಿಕೆಯು ಉತ್ತಮವಾಗಿರುತ್ತದೆ. ನೀವು ಸರ್ಕಾರಿ ಕೆಲಸಕ್ಕೆ ತಯಾರಿ ನಡೆಸುತ್ತಿದ್ದರೆ, ಅನುಭವಿ ವ್ಯಕ್ತಿಯಿಂದ ಮಾರ್ಗದರ್ಶನ ಪಡೆಯಬಹುದು. ಉದ್ಯಮಿಗಳು ಬಯಸಿದ ಲಾಭವನ್ನು ಪಡೆಯಬಹುದು. ಆದರೂ ನೀವು ಹಣದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಈ ಸಮಯದಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಕಾಳಜಿ ವಹಿಸಬೇಕು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿನ: ಭಾನುವಾರ
ವೃಶ್ಚಿಕ ರಾಶಿ
ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಮಿಶ್ರಫಲ. ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಬಹುದು. ನಿಮ್ಮ ಕೆಲಸವನ್ನು ಬದಿಗಿಟ್ಟು ಆರೋಗ್ಯದ ಕಡೆ ಗಮನ ಹರಿಸಿದರೆ ಉತ್ತಮ. ನಿರ್ಲಕ್ಷ್ಯವು ದುಬಾರಿಯಾಗಲಿದೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ದುಂದು ವೆಚ್ಚ ಮಾಡಬೇಡಿ. ಇದಲ್ಲದೆ, ಈ ಸಮಯದಲ್ಲಿ ನೀವು ಹಣಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಮಾಡಲು ಹೋಗಬೇಡಿ. ಕಚೇರಿಯಲ್ಲಿ ನಡೆಯುವ ರಾಜಕೀಯದ ಬಗ್ಗೆ ಜಾಗರೂಕರಾಗಿರಿ. ಈ ಅವಧಿಯಲ್ಲಿ ಕೆಲ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಸೂಯೆಯಿಂದ ನಿಮ್ಮ ಹೆಸರು ಕೆಡಿಸಲು ಪ್ರಯತ್ನಿಸಬಹುದು. ವ್ಯಾಪಾರಸ್ಥರಿಗೆ ಈ ವಾರ ಸಾಮಾನ್ಯವಾಗಿರಲಿದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಪ್ರೀತಿಪಾತ್ರರ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಗುರುವಾರ
ಧನು ರಾಶಿ
ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸುತ್ತಿದ್ದರೆ ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ವಾರದ ಕೊನೆಯಲ್ಲಿ, ನೀವು ಅದಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಈ ವಾರ ತುಂಬಾ ಚೆನ್ನಾಗಿದೆ. ನೀವು ಪ್ರಗತಿ ಸಾಧಿಸಬಹುದು.ಕೆಲಸದ ಹೊರೆ ಅಧಿಕವಿದ್ದರೂ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದರೆ, ಈ ಸಮಯವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರುವುದು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿನ: ಬುಧವಾರ
ಮಕರ ರಾಶಿ
ಕೆಲಸದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಅದೃಷ್ಟದ ವಾರವಾಗಿದೆ. ನೀವು ನಿಮ್ಮ ಕೆಲಸವನ್ನು ನೀವು ಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ. ವಾರದ ಕೊನೆಯಲ್ಲಿ, ನೀವು ಉತ್ತಮ ಅವಕಾಶವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಸಣ್ಣ ವ್ಯಾಪಾರಸ್ಥರಿಗೆ ಈ ವಾರ ಲಾಭದಾಯಕವಾಗಿರುತ್ತದೆ. ನೀವು ಸ್ಟಾಕ್ ಅನ್ನು ಹೆಚ್ಚಿಸಲು ಯೋಜಿಸುತ್ತಿದ್ದರೆ ಈ ಸಮಯವು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಮನೆಯ ಅಲಂಕಾರವನ್ನು ಬದಲಾಯಿಸಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಇದಲ್ಲದೆ, ನೀವು ಆರಾಮದಾಯಕವಾದ ಕೆಲವು ಬೆಲೆಬಾಳುವ ವಸ್ತುಗಳನ್ನು ಸಹ ಖರೀದಿಸುತ್ತೀರಿ. ಸಂಗಾತಿಯೊಂದಿಗಿನ ಸಂಬಂಧವು ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ದಿನ: ಮಂಗಳವಾರ
ಕುಂಭ ರಾಶಿ
ವಾರದ ಆರಂಭವು ನಿಮಗೆ ಒಳ್ಳೆಯದಲ್ಲ. ಈ ಸಮಯದಲ್ಲಿ ನೀವು ಅನಗತ್ಯ ಚಿಂತೆಗಳಿಂದ ಕೂಡಿರಲಿದೆ. ಇದು ನಿಮ್ಮ ಸಮಯವನ್ನು ಅನಗತ್ಯವಾಗಿ ಯೋಚಿಸುವ ಸಮಯವಲ್ಲ, ಬದಲಿಗೆ ನೀವು ನಿಮ್ಮ ಗುರಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು. ನೀವು ಕೆಲಸವನ್ನು ಮಾಡಿದರೆ ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿ. ಶೀಘ್ರದಲ್ಲೇ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಈ ಅವಧಿಯಲ್ಲಿ ಉದ್ಯಮಿಗಳು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. ಹಣದ ಕೊರತೆಯಿಂದಾಗಿ ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗಿ ಉಳಿಯಬಹುದು, ಆದರೆನೀವು ನಿರಾಶೆಗೊಳ್ಳುವ ಅಗತ್ಯವಿಲ್ಲ ಏಕೆಂದರೆ ನಿಮ್ಮ ಈ ಸಮಸ್ಯೆ ತಾತ್ಕಾಲಿಕವಾಗಿದೆ. ಶೀಘ್ರದಲ್ಲೇ ನಿಮ್ಮ ಈ ಸಮಸ್ಯೆ ಕೊನೆಗೊಳ್ಳುತ್ತದೆ. ವೈಯಕ್ತಿಕ ಜೀವನದಲ್ಲಿ ಕೆಲವು ಏರುಪೇರುಗಳು ಕಂಡುಬರುತ್ತವೆ. ಕೆಲವು ಕುಟುಂಬ ಸದಸ್ಯರ ಅನುಚಿತ ವರ್ತನೆಯು ನಿಮಗೆ ದುಃಖವನ್ನುಂಟುಮಾಡುತ್ತದೆ. ನೀವು ಭಾವನಾತ್ಮಕವಾಗಿ ತುಂಬಾ ದುರ್ಬಲರಾಗುತ್ತೀರಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ದಿನ: ಸೋಮವಾರ
ಮೀನ ರಾಶಿ
ನಿಮ್ಮ ಹೆಚ್ಚುತ್ತಿರುವ ವೆಚ್ಚಗಳನ್ನು ನೀವು ಪರಿಶೀಲಿಸಬೇಕು, ಇಲ್ಲದಿದ್ದರೆ ನಿಮ್ಮ ಭವಿಷ್ಯದ ಯೋಜನೆಗಳಿಗೆ ಅಡ್ಡಿಯಾಗಬಹುದು. ಸಾಲವನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಈ ಅವಧಿಯಲ್ಲಿ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಗಾಢವಾಗಬಹುದು. ನಿಮ್ಮ ನಡುವೆ ಸಾಕಷ್ಟು ಅಂತರವಿರಬಹುದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವುದು ಉತ್ತಮ. ನೀವು ಪರಸ್ಪರ ಪ್ರೀತಿ ಮತ್ತು ಗೌರವದಿಂದ ವರ್ತಿಸಬೇಕು. ವ್ಯಾಪಾರಸ್ಥರಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಯಾವುದೇ ಸ್ಥಗಿತಗೊಂಡ ಯೋಜನೆಯನ್ನು ಮತ್ತೆ ಪ್ರಾರಂಭಿಸಬಹುದು. ಉದ್ಯೋಗಸ್ಥರು ತಮ್ಮ ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತಾರೆ. ಕಚೇರಿಯಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ದೊಡ್ಡ ಯೋಜನೆಯನ್ನು ಮುನ್ನಡೆಸಲು ನಿಮಗೆ ಅವಕಾಶವನ್ನು ನೀಡಬಹುದು. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಚಿಂತಿತರಾಗುತ್ತೀರಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿನ: ಶುಕ್ರವಾರ



Click it and Unblock the Notifications












