ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ (ಅಕ್ಟೋಬರ್ 7-14)ನಿಮಗೆ ಹೇಗಿರಲಿದೆ?

ಸಂಖ್ಯಾಶಾಸ್ತ್ರ ಪ್ರಕಾರ ಅಕ್ಟೋಬರ್‌ 7-14ರವರೆಗಿನ ಭವಿಷ್ಯ ನೀಡಲಾಗಿದೆ ನೋಡಿ.... ನಿಮ್ಮ ಜನ್ಮ ಸಂಖ್ಯೆ 23 ಆಗಿದ್ದರೆ ನಿಮ್ಮ ಸಂಖ್ಯೆ 2+3=5, ಈ ರೀತಿ ನಿಮ್ಮ ಜನ್ಮ ಸಂಖ್ಯೆಯನ್ನು ತಿಳಿಯಬಹುದು.

ಸಂಖ್ಯೆ 1 (ಜನ್ಮ ಸಂಖ್ಯೆ1,10,19,28)
ಸಂಗಾತಿಯೊಂದಿಗೆ ಈ ಅವಧಿಯಲ್ಲಿ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತೀರಿ. ನಿಮ್ಮ ಸಂಗಾತಿಯಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಈ ಅವಧಿ ಅನುಕಲಕರವಾಗಿದೆ. ಈ ಸಮಯದಲ್ಲಿ, ನೀವು ದೊಡ್ಡ ಕಂಪನಿಯಿಂದ ಉತ್ತಮ ಜಾಬ್ ಆಫರ್ ಪಡೆಯಬಹುದು. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ.

numerology prediction of October 8 To 14

ಸಂಖ್ಯೆ 2 ( ಜನ್ಮ ಸಂಖ್ಯೆ 2,11,20,29)

ವಿದ್ಯಾರ್ಥಿಗಳಿಗೆ ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಅಜಾಗರೂಕತೆಯಿಂದ ಖರ್ಚು ಹೆಚ್ಚಾಗುವುದು. ಸಂಗಾತಿಯೊಂದಿಗಿನ ಸಂಬಂಧ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಇರಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಕಾಳಜಿವಹಿಸಬೇಕು.

ಸಂಖ್ಯೆ 3 (ಜನ್ಮ ಸಂಖ್ಯೆ 3,12,21,30)
ನಿಮ್ಮ ಸಂಪೂರ್ಣ ಗಮನವು ನಿಮ್ಮ ಗುರಿಯ ಮೇಲಿದ್ದರೆ ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಉತ್ತಮ ಫಲ ಪಡೆಯುತ್ತೀರಿ. ವೈಯಕ್ತಿಕ ಜೀವನದಲ್ಲಿ ಖುಷಿ ಇರಲಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ.

ಸಂಖ್ಯೆ 4 (ಜನ್ಮ ಸಂಖ್ಯೆ 4,13,22,31)
ನೀವು ದುಬಾರಿ ವಸ್ತುವನ್ನು ಖರೀದಿಸಲು ಯೋಜಿಸಬಹುದು. ಆದರೆ ಇದರಿಂದ ನಿಮ್ಮ ಬಜೆಟ್‌ ಮೇಲೆ ಪರಿಣಾಮ ಬೀರುವುದು, ಪ್ರೇಮ ಜೀವನದಲ್ಲಿ ಏರಿಳಿತಗಳಿರಲಿದೆ. ನಿಮ್ಮ ಸಂಬಂಧದಲ್ಲಿ ದೂರವಿರಬಹುದು. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಸಂಖ್ಯೆ 5 (ಜನ್ಮ ಸಂಖ್ಯೆ 5,14,23)
ವಿದ್ಯಾರ್ಥಿಗಳಿಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ನೀವು ಉನ್ನತ ಶಿಕ್ಷಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ನೀವು ಯಶಸ್ಸನ್ನು ಪಡೆಯಬಹುದು. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಎಲ್ಲವೂ ಸರಿಹೋಗಲಿದೆ.

ಸಂಖ್ಯೆ 6 (ಜನ್ಮ ಸಂಖ್ಯೆ 6,15,24)
ಅನಗತ್ಯ ವಿಷಯಗಳಿಗೆ ನಿಮ್ಮ ಸಂಗಾತಿಯೊಂದಿಗೆ ಜಗಳವಾಡಲು ಹೋಗಬೇಡ. ಈ ಸಮಯವು ಉದ್ಯೋಗಿಗಳಿಗೆ ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಕಾರ್ಯಕ್ಷಮತೆ ಕುಸಿಯಬಹುದು. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸಬಹುದು. ನೀವು ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಮನೆಯ ವಾತಾವರಣ ಖುಷಿಯಿಂದ ಕೂಡಿರಲಿದೆ.

ಸಂಖ್ಯೆ 7 (ಜನ್ಮ ಸಂಖ್ಯೆ 7,16,25)
ನಿಮ್ಮ ವೈವಾಹಿಕ ಜೀವನದ ಸಂತೋಷವನ್ನು ಕಾಪಾಡಿಕೊಳ್ಳಲು, ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಗೌರವಿಸಬೇಕು. ಸಣ್ಣ ವಿಷಯಗಳಿಗೆ ಜಗಳಗಳನ್ನು ತಪ್ಪಿಸಿ. ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಒಳ್ಳೆಯದು. ಪರೀಕ್ಷೆಯಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸಬಹುದು. ಕೆಲಸದ ದೃಷ್ಟಿಯಿಂದ ಈ ವಾರ ನಿಮಗೆ ಮಹತ್ವದ್ದಾಗಿದೆ. ಇದು ಬದಲಾವಣೆಯ ಸಮಯ, ಧನಾತ್ಮಕ ಬದಲಾವಣೆಯ ಸಾಧ್ಯತೆ ಇದೆ.

ಸಂಖ್ಯೆ 8 (ಜನ್ಮ ಸಂಖ್ಯೆ 8,17,26)
ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಶ್ರಮಕ್ಕೆ ಉತ್ತಮ ಫಲ ನೀಡಲಿದೆ. ವಾರದ ಕೊನೆಯಲ್ಲಿ ನೀವು ಹಣವನ್ನು ಸ್ವೀಕರಿಸುತ್ತೀರಿ. ಈ ಅವಧಿಯಲ್ಲಿ, ನೀವು ಯಾವುದೇ ಹಳೆಯ ಸಾಲದಿಂದಲೂ ಪರಿಹಾರವನ್ನು ಪಡೆಯಬಹುದು.

ಸಂಖ್ಯೆ 9 (ಜನ್ಮ ಸಂಖ್ಯೆ 9,18,27)
ಕೋಪ, ಅಹಂಕಾರ ಎರಡೂ ನಿಮ್ಮ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ, ಆದ್ದರಿಂದ ಜಾಗ್ರತೆ. ಈ ವಾರ ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು. ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಸರಿಯಾಗಿ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ವ್ಯಾಪಾರಿಗಳು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ಅವರು ಲಾಭದ ಬದಲು ನಷ್ಟವನ್ನು ಅನುಭವಿಸಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ.

English summary

Weekly Prediction: Numerology Prediction Of October 8 To October 14

Here are numerology prediction of October 8 To October 14, read on....
Story first published: Saturday, October 7, 2023, 15:44 [IST]
X
Desktop Bottom Promotion