Latest Updates
-
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು!
ಸಂಖ್ಯಾಶಾಸ್ತ್ರ: ಜೂನ್ 25 ರಿಂದ ಜುಲೈ 1ರವರೆಗಿನ ವಾರ ಭವಿಷ್ಯ ಹೇಗಿರಲಿದೆ ನೋಡಿ
ಸಂಖ್ಯಾ ಶಾಸ್ತ್ರದ ಪ್ರಕಾರ ಜುಲೈ ತಿಂಗಳ ಕೊನೆಯ ವಾರದಲ್ಲಿ ಅನೇಕ ಜನರಿಗೆ ಶುಭ ಫಲಗಳಿದೆ. ಇನ್ನೂ ಅನೇಕ ಜನರಿಗೆ ಅಅಶುಭ ಫಲಗಳಿದೆ. ಸಂಖ್ಯಾ ಶಾಸ್ತ್ರದಲ್ಲಿ 1 ರಿಂದ 9 ರವರೆಗೆ ಸಂಖ್ಯೆಗಳಿದೆ. ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿ ಸಂಖ್ಯೆ ತಿಳಿಯಲು ನಿಮ್ಮ ಜನ್ಮ ದಿನಾಂಕವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಜನ್ಮ ದಿನಂಕ 11 ಆಗಿದ್ದರೆ 1+1 = 2 ಈ ರೀತಿ ಲೆಕ್ಕ ಮಾಡಬಹುದು. ಹಾಗಾದ್ರೆ ಈ ವಾರದ ಸಾಪ್ತಾಹಿಕ ಸಂಖ್ಯಾ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.

ಸಂಖ್ಯೆ 1 ( ಜನ್ಮ ದಿನಾಂಕ 1,10,19,28)
ಈ ವಾರ ನಿಮಗೆ ಅನಿರೀಕ್ಷಿತ ಆರ್ಥಿಕ ಲಾಭಗಳು ಆಗುವ ಸಾಧ್ಯತೆಯಿದೆ. ಕೆಲಸದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ. ನೀವು ಧೈರ್ಯದಿಂದಿದ್ದರೆ ಯಶಸ್ಸಿನ ಏಣಿ ಹತ್ತೋದಕ್ಕೆ ಸಾಧ್ಯವಾಗುತ್ತದೆ. ನೀವು ಉತ್ತಮ ಪ್ರಯತ್ನಗಳನ್ನು ಮಾಡುತ್ತಲೇ ಇರಿ. ದೇವರು ನಿಮಗೆ ಅರ್ಹವಾದದ್ದನ್ನು ಖಂಡಿತ ನೀಡುತ್ತಾನೆ. ಈ ವಾರ ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು ಅಥವಾ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ಬಣ್ಣ : ಹಸಿರು
ಅದೃಷ್ಟದ ದಿನ : ಬುಧವಾರ
ಸಂಖ್ಯೆ 2 ( ಜನ್ಮ ದಿನಾಂಕ 2,11,20,29)
ಹೆಚ್ಚಿನ ವಿಷಯಗಳ ಬಗ್ಗೆ ನೀವು ಎರಡನೇ ಬಾರಿ ಆಲೋಚನೆ ಮಾಡುವ ಸಾಧ್ಯತೆಗಳಿದೆ. ಅದು ನಿಮ್ಮನ್ನು ಮಾನಸಿಕವಾಗಿ ಅಸ್ಥಿರಗೊಳಿಸುತ್ತದೆ. ಈ ವಾರ ಕೆಲವು ತೊಂದರೆಗಳು ನಿಮ್ಮ ದಾರಿಯಲ್ಲಿ ಬರಬಹುದು. ಈ ಬಗ್ಗೆ ತಕ್ಷಣ ಗಮನ ಬೇಕು. ಎಲ್ಲವನ್ನೂ ಸಾಧಿಸಲು ಪ್ರಯತ್ನಿಸಬೇಡಿ. ಏಕೆಂದರೆ ಅದು ನಿಮ್ಮ ಪ್ರಯಾಣವನ್ನು ಕಠಿಣಗೊಳಿಸುತ್ತದೆ. ಈ ವಾರದ ಅಂತ್ಯದ ವೇಳೆಗೆ ನೀವು ಸ್ಥಿರ ಮತ್ತು ಸುರಕ್ಷಿತವಾಗಿರುತ್ತೀರಿ. ನಿಮ್ಮ ತಂದೆ ಅಥವಾ ತಂದೆಯ ಸ್ಥಾನದಲ್ಲಿ ಇರುವವರಿಂದ ಸಲಹೆ ಪಡೆಯಿರಿ.
ಅದೃಷ್ಟದ ಸಂಖ್ಯೆ: 3
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ದಿನ: ಸೋಮವಾರ
ಸಂಖ್ಯೆ 3 (ಜನ್ಮ ದಿನಾಂಕ 3,12,21,30)
ಈ ವಾರ ನೀವು ತುಂಬಾನೇ ಭಾವನಾತ್ಮಕವಾಗಿ ಇರುತ್ತೀರಿ. ಮುಂಬರುವ ವಾರದಲ್ಲಿ ನೀವು ಭಾವನಾತ್ಮಕವಾಗಿ ಇರುತ್ತೀರಿ. ನಿಮ್ಮ ಅಂತಃಪ್ರಜ್ಞೆಯೊಂದಿಗೆ ನೀವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಈ ಶಕ್ತಿಯಿಂದ ಎಲ್ಲವನ್ನೂ ಸುಗಮವಾಗಿ ಕೊಂಡೊಯ್ಯುತ್ತೀರಿ. ಈ ಇಡೀ ವಾರ ನೀವು ಸಂತೋಷ ಮತ್ತು ಆರ್ಥಿಕವಾಗಿ ಸ್ಥಿರವಾಗಿರುತ್ತೀರಿ. ನಿಮ್ಮ ಭೂತಕಾಲದ ಬಗ್ಗೆ ಯೋಚಿಸಬೇಡಿ. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. ಹೀಗಾಗಿ ದೇವರಿಗೆ ಚಿರರುಣಿಯಾಗಿರಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ದಿನ: ಭಾನುವಾರ
ಸಂಖ್ಯೆ 4 ( ಜನ್ಮ ದಿನಾಂಕ 4,13,22,31)
ಈ ವಾರ ನೀವು ಮೋಜಿನ ಪ್ರಯಾಣ ಮಾಡುವ ಸಾಧ್ಯತೆಯಿದೆ. ವೃತ್ತಿಗೆ ಸಂಬಂಧಿಸಿದಂತೆ ನಿಮಗೆ ಹೊಸ ಕಾರ್ಯ ಇರೋದ್ರಿಂದ ನೀವು ಅದರಲ್ಲಿ ಬ್ಯುಸಿಯಾಗಿ ಇರ್ತೀರಿ. ಈ ವಾರ ನೀವು ನಿಮ್ಮ ಗುರಿಯನ್ನು ಸಾಧಿಸಲಾಗುತ್ತದೆ. ಮತ್ತು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಆಚರಿಸುತ್ತೀರಿ. ಆದ್ರೆ ಈ ವಾರದ ಅಂತ್ಯದ ವೇಳೆಗೆ ನೀವು ಕೆಲಸದಲ್ಲಿ ಕಠಿಣ ಸ್ಪರ್ಧೆಯನ್ನು ಅನುಭವಿಸುತ್ತೀರಿ. ಹಾಗೂ ಇದ್ರಿಂದ ಘರ್ಷಣೆ ನಡೆಯುವ ಸಾಧ್ಯತೆಯೂ ಹೆಚ್ಚಾಗಿದೆ.
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ದಿನ: ಬುಧವಾರ
ಸಂಖ್ಯೆ 5 ( ಜನ್ಮ ದಿನಾಂಕ 5,14,23)
ಈ ವಾರದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ನೀವು ಸುರಕ್ಷಿತವಾಗಿ ಮತ್ತು ಆರಾಮದಾಯಕವಾಗಿ ಇರುತ್ತೀರಿ. ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ ಮತ್ತು ಈ ಸಮಯದಲ್ಲಿ ಅದಕ್ಕೆ ಪ್ರಶಂಸೆ ಕೂಡ ದೊರೆಯುತ್ತದೆ. ಕೆಲಸದಲ್ಲಿನ ಎಲ್ಲಾ ಸಮಸ್ಯೆಗಳನ್ನು ಸಲೀಸಾಗಿ ಪರಿಹರಿಸಲು ನಿಮ್ಮಿಂದ ಸಾಧ್ಯವಾಗುತ್ತದೆ. ವಾರವಿಡೀ ನೀವು ಯಾವುದೇ ಪರಿಸ್ಥಿತಿಯಲ್ಲಿದ್ದರೂ ಕೂಡ ಆದಷ್ಟು ಶಾಂತವಾಗಿರಿ. ಏಕೆಂದರೆ ಕೊನೆಯಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತದೆ.
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ದಿನ: ಶುಕ್ರವಾರ
ಸಂಖ್ಯೆ 6 (ಜನ್ಮ ದಿನಾಂಕ 6,15,24)
ಈ ವಾರ ಹೊಸ ಅವಕಾಶಗಳು ನಿಮ್ಮ ದಾರಿಯಲ್ಲಿ ಬರುತ್ತವೆ. ಮತ್ತು ಎಲ್ಲಾ ವಿಚಾರಗಳು ಸುಗಮವಾಗಿ ನಡೆಯುತ್ತದೆ. ಈ ವಾರ ನೀವು ಎಲ್ಲಾ ವಿಚಾರದಲ್ಲೂ ಜಯ ಗಳಿಸಲು ಸಾಧ್ಯವಾಗುತ್ತದೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ಹೊಸ ಸಾಹಸವಾಗಿ ವಿಷಯಗಳನ್ನು ಕೈಗೆತ್ತಿಕೊಳ್ಳಿ ಯಾಕಂದ್ರೆ ಅದ್ರಲ್ಲಿ ನೀವು ಖುಷಿ ಪಡುತ್ತೀರಿ. ಹಿಂದೆ ಆದದ್ದನ್ನೆಲ್ಲಾ ಮರೆತು ನಿಮ್ಮ ಉಜ್ವಲ ಭವಿಷ್ಯದ ಕಡೆಗೆ ಗಮನ ಕೊಡಿ.
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ದಿನ: ಮಂಗಳವಾರ
ಸಂಖ್ಯೆ 7 (ಜನ್ಮ ದಿನಾಂಕ 7,16,25)
ಈ ವಾರವು ನಿಮಗೆ ಋಣಾತ್ಮಕವಾಗಿ ಆರಂಭವಾದರೂ ಕೂಡ ಈ ವಾರದ ಅಂತ್ಯದ ವೇಳೆಗೆ ವಿಷಯಗಳು ಧನಾತ್ಮಕವಾಗಿರುತ್ತವೆ. ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ಸವಾಲುಗಳು ನಿಮ್ಮನ್ನು ನಿರುತ್ಸಾಹಗೊಳಿಸುತ್ತವೆ. ಆದರೆ ಹೊಸ ಆರಂಭವು ನಿಮಗಾಗಿ ಕಾಯುತ್ತಿದೆ. ವಾರವಿಡೀ ನೀವು ನಿಮ್ಮ ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿರುತ್ತೀರಿ. ವಾರದ ಅಂತ್ಯದ ವೇಳೆಗೆ ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ದಿನ: ಗುರುವಾರ
ಸಂಖ್ಯೆ 8 ( ಜನ್ಮ ದಿನಾಂಕ 8,17,26)
ನೀವು ಈ ವಾರವಿಡೀ ಶಾಂತವಾಗಿ ಮತ್ತು ತಾಳ್ಮೆಯಿಂದ ಇರುತ್ತೀರಿ. ಇದು ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ವಾರದ ಮಧ್ಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ನಿಮ್ಮ ಜೀವನದ ಎಲ್ಲಾ ಅಂಶಗಳ ಮೂಲಕ ನೀವು ಸಂತೋಷವನ್ನು ಕಾಣಲಿದ್ದೀರಿ. ಸಂಬಂಧಗಳು ಉತ್ತಮವಾಗಿ ಇರುತ್ತದೆ. ನಿಮ್ಮ ಮಕ್ಕಳು ಮತ್ತು ಸ್ನೇಹಿತರೊಂದಿಗೆ ನೀವು ಉತ್ತಮ ಸಮಯ ಕಳೆಯುತ್ತೀರಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ದಿನ: ಶನಿವಾರ
ಸಂಖ್ಯೆ 9 (ಜನ್ಮ ದಿನಾಂಕ 9,18,27)
ಹೊಸ ವಾರದ ಆರಂಭವು ನಿಮಗೆ ಒತ್ತಡವನ್ನುಂಟು ಮಾಡುತ್ತದೆ. ನೀವು ಒಂಟಿತನವನ್ನು ಅನುಭವಿಸಬಹುದು. ಮತ್ತು ನಿಮ್ಮ ಮನಸ್ಥಿತಿ ಉತ್ತಮವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮಾನಸಿಕ ಖುಷಿಗಾಗಿ ನೀವು ಏನು ಮಾಡುತ್ತಿದ್ದೀರಿ? ಮತ್ತು ನೀವು ಎಲ್ಲಿಗೆ ತಲುಪಲು ಬಯಸುತ್ತೀರಿ? ಎಂಬುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಭಾವನೆಗಳನ್ನು ನಿಗ್ರಹಿಸಬೇಡಿ. ಅವುಗಳನ್ನು ಒಪ್ಪಿಕೊಳ್ಳಲು ಪ್ರಯತ್ನಿಸಿ. ಈ ವಾರದ ಅಂತ್ಯದ ವೇಳೆಗೆ ನಿಮಗೆ ಸ್ವಲ್ಪ ಸಮಾಧಾನ ಸಿಗಲಿದೆ.
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಬಣ್ಣ: ವೈಡೂರ್ಯ
ಅದೃಷ್ಟದ ದಿನ: ಬುಧವಾರ



Click it and Unblock the Notifications