Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಸಂಖ್ಯಾಶಾಸ್ತ್ರ: ಮೇ 1 ರಿಂದ 7ರವರೆಗಿನ ವಾರ ಭವಿಷ್ಯ ಹೇಗಿರಲಿದೆ ನೋಡಿ
ಸಂಖ್ಯಾ ಶಾಸ್ತ್ರದ ಪ್ರಕಾರ ಮೇ ತಿಂಗಳ ಮೊದಲ ವಾರದಲ್ಲಿ ಅನೇಕ ಜನರಿಗೆ ಶುಭ ಫಲಗಳಿದೆ. ಇನ್ನೂ ಅನೇಕ ಜನರಿಗೆ ಅಶುಭ ಫಲಗಳಿದೆ. 1 ರಿಂದ 9 ರವರೆಗೆ ಸಂಖ್ಯಾ ಶಾಸ್ತ್ರದಲ್ಲಿ ಸಂಖ್ಯೆಗಳಿದೆ. ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿ ಸಂಖ್ಯೆ ತಿಳಿಯಲು ನಿಮ್ಮ ಜನ್ಮ ದಿನಾಂಕವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಜನ್ಮ ದಿನಂಕ 12 ಆಗಿದ್ದರೆ 1+2 = 3 ಈ ರೀತಿ ಲೆಕ್ಕ ಮಾಡಬಹುದು. ಹಾಗಾದ್ರೆ ಈ ವಾರದ ಸಾಪ್ತಾಹಿಕ ಸಂಖ್ಯಾ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.
ಸಂಖ್ಯೆ : 1 ( ಜನ್ಮ ದಿನಾಂಕ 1,10,19,28)
ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನೀವು ವಾರಪೂರ್ತಿ ಶಕ್ತಿಯುತವಾಗಿರುತ್ತೀರಿ. ಈ ವಾರ ನೀವು ಅಂದುಕೊಂಡಿದ್ದ ಕೆಲಸ ಸಾಧಿಸಬಹುದು. ನೀವು ಮಾಡುವ ಪ್ರಯತ್ನಗಳೆಲ್ಲವೂ ಶಾಶ್ವತ ಫಲಿತಾಂಶಗಳನ್ನು ನೀಡುತ್ತವೆ. ಆದರೆ ಯಾವುದೇ ಕೆಲಸ ಮಾಡುವಾಗ ಕಾರ್ಯತಂತ್ರ ರೂಪಿಸೋದನ್ನು ಮರೆಯಬೇಡಿ. ನಿಮ್ಮ ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಡಿ.
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ದಿನ: ಶುಕ್ರವಾರ

ಸಂಖ್ಯೆ : 2 ( ಜನ್ಮ ದಿನಾಂಕ 2,11,20,29)
ಯಾವುದೇ ಕಾರಣಕ್ಕೂ ಜಗಳವಾಡೋದಕ್ಕೆ ಹೋಗಬೇಡಿ. ನಿಮಗೆ ಮನಃ ಶಾಂತಿ ಸಿಗುವ ಸ್ಥಳಕ್ಕೆ ಹಿಂತಿರುಗಿ. ಇಷ್ಟು ದಿನ ದಿನ ಅಪೂರ್ಣವಾಗಿದ್ದ ಕೆಲಸಗಳನ್ನೆಲ್ಲಾ ಪೂರ್ತಿ ಮಾಡುತ್ತೀರಿ. ಈ ವಾರ ಅವಕಾಶಗಳನ್ನು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಏಕಾ ಏಕಿ ಹೂಡಿಕೆ ಮಾಡೋದಕ್ಕೆ ಹೋಗಬೇಡಿ. ಯಾರೊಂದಿಗಾದರೂ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ.
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ದಿನ: ಬುಧವಾರ
ಸಂಖ್ಯೆ : 3 (ಜನ್ಮ ದಿನಾಂಕ 3,12,21,30)
ಈ ವಾರ ನಿಮ್ಮ ಆರೋಗ್ಯವು ಸಮಾಧಾನಕರವಾಗಿರುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಫಿಟ್‌ನೆಸ್‌ಗೆ ಗಮನ ಕೊಡೋದನ್ನು ಮರೀಬೇಡಿ. ಈ ವಾರ ನಿಮಗೆ ಕೆಲಸದಲ್ಲಿ ಯಶಸ್ವಿಯಾಗಲು ಪ್ರೇರಣೆ ಸಿಗುತ್ತದೆ. ನಿಮ್ಮ ಬಾಕಿ ಇರುವ ಬಹಳಷ್ಟು ಕೆಲಸಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಆರ್ಥಿಕವಾಗಿ ಯಾವುದೇ ರೀತಿ ಸಂಕಷ್ಟ ಎದುರಾಗೋದಿಲ್ಲ. ಖರ್ಚಿನ ಬಗ್ಗೆ ನಿಗಾ ಇರಲಿ. ನಿಮ್ಮ ಸಂಬಂಧದಲ್ಲಿ ಸಮಸ್ಯೆ ಇದ್ದರೆ ಸಂಗಾತಿಯ ಬಳಿ ಮುಕ್ತವಾಗಿ ಹಂಚಿಕೊಳ್ಳಿ.
ಅದೃಷ್ಟ ಸಂಖ್ಯೆ: 13
ಅದೃಷ್ಟದ ಬಣ್ಣ: ವೈಡೂರ್ಯದ ಬಣ್ಣ
ಅದೃಷ್ಟದ ದಿನ: ಶುಕ್ರವಾರ
ಸಂಖ್ಯೆ : 4 ( ಜನ್ಮ ದಿನಾಂಕ 4,13,22,31)
ಈ ವಾರ ನೀವು ಹೆಚ್ಚು ಸಕ್ರಿಯರಾಗಿರುತ್ತೀರಿ. ನಿಮ್ಮ ಗುರಿಗಳನ್ನು ಉತ್ತಮವಾಗಿ ಹೊಂದಿಸಲು ಮತ್ತು ಸ್ಪಷ್ಟವಾದ ಕಾರ್ಯತಂತ್ರವನ್ನು ರೂಪಿಸಲು ಒಳ್ಳೆಯ ಸಮಯವಿದು. ನಿಮ್ಮ ಯೋಜನೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ನಿಮ್ಮ ಪ್ರಯಾಣದ ಯೋಜನೆಗಳಲ್ಲಿ ಕೊಂಚ ವಿಳಂಬವಾಗಬಹುದು. ಒಂಟಿಯಾಗಿರುವವರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ದಿನ: ಸೋಮವಾರ
ಸಂಖ್ಯೆ : 5 ( ಜನ್ಮ ದಿನಾಂಕ 5,14,23)
ನೀವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅತಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೀರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ನಿಮ್ಮಲ್ಲಿರುವ ಉತ್ತಮ ಏಕಾಗ್ರತೆಯು ನಿಮ್ಮನ್ನು ತಪ್ಪುಗಳನ್ನು ಮಾಡದಂತೆ ತಡೆಯುತ್ತದೆ. ನೀವು ವ್ಯವಹಾರದ ಬಗ್ಗೆ ಈ ವಾರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಯಾಕಂದ್ರೆ ಈ ವಾರ ಸೂಕ್ತವಾಗಿದೆ. ಆದರೆ ಪ್ರಯಾಣದಲ್ಲಿ ಸಮಸ್ಯೆಗಳು ಎದುರಾಗುತ್ತದೆ.
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಬಣ್ಣ: ಬೆಳ್ಳಿ
ಅದೃಷ್ಟದ ದಿನ: ಶನಿವಾರ
ಸಂಖ್ಯೆ : 6 (ಜನ್ಮ ದಿನಾಂಕ 6,15,24)
ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. ನಿಮ್ಮ ಯೋಗ ಮತ್ತು ಧ್ಯಾನದ ದಿನಚರಿಯನ್ನು ಮುಂದುವರಿಸಿ. ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ವೈದ್ಯರನ್ನು ಸಂಪರ್ಕಿಸಬೇಕು. ಈ ವಾರ ಯಾವುದೇ ರೀತಿ ತೊಂದರೆಯಾಗೋದಿಲ್ಲ. ಏಕೆಂದರೆ ಎಲ್ಲವೂ ನಿಮ್ಮ ಪರವಾಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮ ಪ್ರಯಾಣದ ಯೋಜನೆಗಳನ್ನು ನೀವು ಮುಂದೂಡಿದರೆ ಒಳ್ಳೆಯದು.
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ದಿನ: ಶುಕ್ರವಾರ
ಸಂಖ್ಯೆ : 7 (ಜನ್ಮ ದಿನಾಂಕ 7,16,25)
ನಿಮ್ಮ ಶಕ್ತಿಯನ್ನು ಸರಿಯಾದ ಹಾದಿಯಲ್ಲಿ ಸಾಗಿಸುವ ಸಮಯ ಇದು. ಇನ್ನೂ ವೃತ್ತಿಪರ ವಿಚಾರದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ವ್ಯಾಪಾರ ವ್ಯವಹಾರಗಳು ಮತ್ತು ಮಾತುಕತೆಗಳು ನಿಮ್ಮ ಪರವಾಗಿರುತ್ತವೆ. ದೀರ್ಘಾವಧಿಯ ತಂತ್ರಗಳನ್ನು ಹೆಣೆದರೆ ಒಳ್ಳೆಯದು. ಸಂಗಾತಿಯ ಬಗ್ಗೆ ನೀವು ಸೂಕ್ಷ್ಮ ಮತ್ತು ಭಾವೋದ್ರಿಕ್ತರಾಗಿರುವುದು ಮುಖ್ಯವಾಗಿದೆ. ನೀವು ಈ ಸಮಯದಲ್ಲಿ ಸಣ್ಣ ಪ್ರವಾಸವನ್ನು ಆಯೋಜಿಸಬಹುದು.
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ದಿನ: ಗುರುವಾರ
ಸಂಖ್ಯೆ 8 ( ಜನ್ಮ ದಿನಾಂಕ 8,17,26)
ಈ ವಾರದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಆದರೆ ನೀವು ಜಾಗರೂಕರಾಗಿರಬೇಕು. ನೀವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನೀವು ಬೇಗನೆ ಚೇತರಿಸಿಕೊಳ್ಳಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸಂಗಾತಿಯ ಜೊತೆಗೆ ಮಧುರವಾದ ಕ್ಷಣಗಳನ್ನು ಕಳೆಯುತ್ತೀರಿ. ಏನೇ ಇದ್ದರೂ ಅವರ ಜೊತೆಗೆ ಮುಕ್ತವಾಗಿ ಮಾತನಾಡಿ ಬಗೆಹರಿಸಿ.
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ದಿನ: ಬುಧವಾರ
ಸಂಖ್ಯೆ 9 (ಜನ್ಮ ದಿನಾಂಕ 9,18,27)
ಈ ವಾರ ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿ ತೊಂದರೆಯಾಗೋದಿಲ್ಲ. ನಿಮ್ಮ ಕೆಲಸದ ಬಿಡುವಿಲ್ಲದ ಸಮಯದಲ್ಲೂ ನಿಮಗಾಗಿ ಸಮಯ ಕಂಡುಕೊಳ್ಳುತ್ತೀರಿ. ನಿಮ್ಮ ಕೆಲಸಕ್ಕಾಗಿ ಜನ ನಿಮ್ಮನ್ನು ಮೆಚ್ಚುತ್ತಾರೆ. ನೀವು ಈಗ ಸರಿಯಾದ ಹಾದಿಯಲ್ಲಿದ್ದೀರಿ, ಅದನ್ನು ಅನುಸರಿಸಿ. ಮುಂದಿನ ವಾರದಲ್ಲಿ ನಿಮ್ಮ ಆಸ್ತಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಲು ಇದು ಉತ್ತಮ ಸಮಯ.
ಅದೃಷ್ಟದ ಸಂಖ್ಯೆ: 28
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ದಿನ: ಮಂಗಳವಾರ



Click it and Unblock the Notifications