Latest Updates
-
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು!
ಸಂಖ್ಯಾಶಾಸ್ತ್ರ : ಸೆಪ್ಟೆಂಬರ್ 30-ಅಕ್ಟೋಬರ್ 6ರ ವಾರ ಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ...
ನಿಮ್ಮ ಜನ್ಮದಿನಾಂಕ 11 ಆಗಿದ್ದರೆ 1+1 =2, ನಿಮ್ಮ ಜನ್ಮ ಸಂಖ್ಯೆ 2 ಆಗಿದೆ..
ಸಂಖ್ಯೆ 1 (ಜನ್ಮ ದಿನಾಂಕ 1,10,19,28)
ಕೆಲಸದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ, ನಿಮ್ಮ ಬಾಕಿಯಿರುವ ಕೆಲವು ಕೆಲಸಗಳು ಪೂರ್ಣಗೊಳ್ಳಲಿದೆ, ನೀವು ಆರ್ಥಿಕ ಲಾಭಗಳನ್ನು ಸಹ ಪಡೆಯಬಹುದು. ಈ ಅವಧಿಯಲ್ಲಿ, ಕುಟುಂಬದ ಸದಸ್ಯರ ಆರೋಗ್ಯದ ಚಿಂತೆ ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಒತ್ತಡ ಹೆಚ್ಚಾಗುತ್ತದೆ. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ಆತುರದಿಂದ ಯಾವುದೇ ಕೆಲಸ ಮಾಡಬೇಡಿ, ನಷ್ಟ ಉಂಟಾಗಬಹುದು.

ಸಂಖ್ಯೆ 2 (ಜನ್ಮ ದಿನಾಂಕ 2,11,20,29)
ವ್ಯಾಪಾರಸ್ಥರಿಗೆ ಈ ವಾರ ತುಂಬಾ ಲಾಭದಾಯಕವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಅನೇಕ ಸಣ್ಣ ಪ್ರಯೋಜನಗಳನ್ನು ಪಡೆಯಬಹುದು, ಆದರೆ ನೀವು ಯಾವುದೇ ಡಾಕ್ಯುಮೆಂಟ್‌ಗೆ ತರಾತುರಿಯಲ್ಲಿ ಸಹಿ ಮಾಡಬೇಡಿ, ಚೆನ್ನಾಗಿ ಓದಿ, ಆಲೋಚಿಸಿದ ಬಳಿಕವಷ್ಟೇ ಸಹಿ ಮಾಡಬೇಕು. ಪ್ರಣಯ ಜೀವನದಲ್ಲಿ ಏರಿಳಿತಗಳಿರುತ್ತವೆ. ನಿಮ್ಮ ಮನಸ್ಸಿನಲ್ಲಿ ಹಲವು ರೀತಿಯ ಗೊಂದಲಗಳಿರುತ್ತವೆ.
ಸಂಖ್ಯೆ 3 (ಜನ್ಮ ದಿನಾಂಕ 3,12,21,30)
ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರುತ್ತವೆ.ಆದರೆ ಕೆಲಸದ ಸ್ಥಳದಲ್ಲಿ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಉತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಯಿಂದಾಗಿ ಉನ್ನತ ಅಧಿಕಾರಿಗಳ ಮೆಚ್ಚುಗೆ ಪಡೆಯುತ್ತೀರಿ. ವಾರದ ಕೊನೆಯಲ್ಲಿ ಹಣ ಪಡೆಯುವ ಸಾಧ್ಯತೆ ಇದೆ.
ಸಂಖ್ಯೆ 4 (ಜನ್ಮ ದಿನಾಂಕ 4,13,22,31)
ಈ ವಾರ ನಿಮಗೆ ಕೆಲವು ಹೊಸ ಅವಕಾಶಗಳು ಸಿಗಲಿದೆ. ಈ ಸಮಯದಲ್ಲಿ ನೀವು ಕಡಿಮೆ ದೂರ ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಈ ಪಯಣ ಬಹುಮುಖ್ಯವಾಗಲಿದೆ. ಈ ಸಮಯದಲ್ಲಿ, ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ, ನೀವು ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಒತ್ತಡದಿಂದ ಕೂಡಿರಬಹುದು.
ಸಂಖ್ಯೆ 5 (ಜನ್ಮ ದಿನಾಂಕ 5,14,23)
ಪ್ರೇಮಿಗಳಿಗೆ ಈ ವಾರ ಅನುಕೂಲಕರವಾಗಿದೆ. ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಿಸಲು ನೀವು ನಿರ್ಧರಿಸಬಹುದು. ಉದ್ಯಮಿಗಳು ಬಾಕಿ ಇರುವ ಹಣವನ್ನು ಮರಳಿ ಪಡೆಯಬಹುದು. ಉದ್ಯೋಗಿಗಳಿಗೆ ಪ್ರಗತಿಯ ಸಾಧ್ಯತೆಗಳಿವೆ. ವಾರದ ಕೊನೆಯಲ್ಲಿ ನೀವು ದೊಡ್ಡ ವೆಚ್ಚವನ್ನು ಹೊಂದಿರಬಹುದು.
ಸಂಖ್ಯೆ 6 (ಜನ್ಮ ದಿನಾಂಕ 6,15,24)
ಆರೋಗ್ಯದ ದೃಷ್ಟಿಯಿಂದ ಈ ವಾರ ಅಷ್ಟು ಅನುಕೂಲಕರವಲ್ಲ. ಅನಗತ್ಯ ಚಿಂತೆಗಳು ಕಾಡಬಹುದು. ಹೆಚ್ಚು ಕೆಲಸದ ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಈ ಅವಧಿಯಲ್ಲಿ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು.
ಸಂಖ್ಯೆ 7 ( ಜನ್ಮ ದಿನಾಂಕ 7,16,25)
ಈ ಅವಧಿಯಲ್ಲಿ ಕೋಪ ನಿಯಂತ್ರಿಸಿ, ಅಹಂಕಾರದಿಂದ ವರ್ತಿಸಬೇಡಿ. ವಿದ್ಯಾರ್ಥಿಗಳಿಗೆ ಈ ವಾರ ಶುಭ ಸೂಚನೆಯಿದೆ. ಪರೀಕ್ಷೆಯಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸಬಹುದು. ಈ ವಾರ ಕೆಲಸದ ವಿಷಯದಲ್ಲಿ ಸ್ವಲ್ಪ ನಿರತವಾಗಿರುತ್ತದೆ.
ಸಂಖ್ಯೆ 8 (ಜನ್ಮ ದಿನಾಂಕ 8,17,26)
ಮಕ್ಕಳಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಚಿಂತೆಯಿಂದ ನೀವು ಮುಕ್ತರಾಗಿರುತ್ತೀರಿ. ಈ ಸಮಯವು ದುಡಿಯುವ ಜನರಿಗೆ ಬಹಳ ಮಹತ್ವದ್ದಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವ್ಯಾಪಾರಸ್ಥರು ಕೆಲಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ವಾರದ ಕೊನೆಯಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ.
ಸಂಖ್ಯೆ 9 (ಜನ್ಮ ದಿನಾಂಕ 9,18,27)
ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ, ನೀವು ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ಬಯಸಿದರೆ, ನಿಮ್ಮ ಖರ್ಚುಗಳ ಕಡೆ ಗಮನಹರಿಸಬೇಕು. ಈ ಅವಧಿಯಲ್ಲಿ ನೀವು ಸಾಲ ನೀಡಲು ಹೋಗಬೇಡಿ. ಕೆಲಸದಲ್ಲಿ ಮೇಲಾಧಿಕಾರಿಗಳ ಸಹಾಯ ಸಿಗಲಿದೆ.



Click it and Unblock the Notifications