Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಂಖ್ಯಾಶಾಸ್ತ್ರ ಪ್ರಕಾರ ವಾರ ಭವಿಷ್ಯ: ಜುಲೈ 22ರಿಂದ 29ರವರೆಗೆ ಈ ವಾರ ನಿಮಗೆ ಹೇಗಿರಲಿದೆ?
ಸಂಖ್ಯಾ ಶಾಸ್ತ್ರದ ಪ್ರಕಾರ ಜುಲೈ 22ರಿಂದ 29ರವರೆಗಿನ ಭವಿಷ್ಯ ಹೇಳಲಾಗಿದೆ. ಸಂಖ್ಯಾ ಶಾಸ್ತ್ರದಲ್ಲಿ 1 ರಿಂದ 9 ರವರೆಗೆ ಸಂಖ್ಯೆಗಳಿದೆ. ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿ ಸಂಖ್ಯೆ ತಿಳಿಯಲು ನಿಮ್ಮ ಜನ್ಮ ದಿನಾಂಕವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಜನ್ಮ ದಿನಂಕ 11 ಆಗಿದ್ದರೆ 1+1 = 2 ಈ ರೀತಿ ಲೆಕ್ಕ ಮಾಡಬಹುದು. ಹಾಗಾದ್ರೆ ಈ ವಾರದ ಸಾಪ್ತಾಹಿಕ ಸಂಖ್ಯಾ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.
ಸಂಖ್ಯೆ 1 ( ಜನ್ಮ ದಿನಾಂಕ 1,10,19,28)
ಈ ವಾರ ನೀವು ನಿರೀಕ್ಷಿಸದೆ ಇರುವ ಅವಕಾಶಗಳು ದೊರೆಯಲಿದೆ, ಇವುಗಳನ್ನು ಸರಿಯಾಗಿ ಬಳಸಿಕೊಂಡರೆ ನೀವು ಒಳ್ಳೆಯ ಲಾಭ ಪಡೆಯಬಹುದು. ಈ ಅವಧಿಯಲ್ಲಿ ನೀವು ತಾಳ್ಮೆಯಿಂದ ಪ್ರತಿಯೊಂದು ಪರಿಸ್ಥಿತಿ ನಿಭಾಯಿಸಿದಷ್ಟು ನಿಮಗೆ ಒಳ್ಳೆಯದು. ಧ್ಯಾನ ಮಾಡಿ, ನಿಮ್ಮ ಆರೋಗ್ಯಕ್ಕಾಗಿ ಆಹಾರಕ್ರಮದ ಕಡೆ ಗಮನಹರಿಸಿ.
ಅದೃಷ್ಟದ ದಿನ: ಗುರುವಾರ
ಅದೃಷ್ಟದ ಸಂಖ್ಯೆ 27

ಸಂಖ್ಯೆ 2 ( ಜನ್ಮ ದಿನಾಂಕ 2,11,20,29)
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಚೆನ್ನಾಗಿದೆ. ನಿಮ್ಮ ಗುರಿ ಮುಟ್ಟಲು ಟೀಂ ವರ್ಕ್ ಮಾಡಿದರೆ ಒಳ್ಳೆಯದು. ನಿಮ್ಮ ವೃತ್ತಿ ಬದುಕಿನಲ್ಲಿ ಸ್ಪೆಷಲ್ ವ್ಯಕ್ತಿಯ ಆಗಮನ ನಿಮ್ಮ ಬದುಕನ್ನು ಬದಲಾಯಿಸಬಹುದು. ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಿದೆ, ದೈಹಿಕ ವ್ಯಾಯಾಮದ ಕಡೆ ಗಮನಹರಿಸಿ. ಈ ವಾರ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸಮತೋಲನದಲ್ಲಿಡಲು ಸಾಧ್ಯವಾಗುವುದು.
ಅದೃಷ್ಟದ ದಿನ: ಬುಧವಾರ
ಅದೃಷ್ಟದ ಸಂಖ್ಯೆ:19
ಅದೃಷ್ಟದ ಬಣ್ಣ: ಹಸಿರು ಮಿಶ್ರಿತ ನೀಲಿಬಣ್ಣ
ಸಂಖ್ಯೆ 3 (ಜನ್ಮ ದಿನಾಂಕ 3,12,21,30)
ವೃತ್ತಿ ಬದುಕಿನಲ್ಲಿ ಆಗುವ ಬದಲಾವಣೆಗೆ ಸಿದ್ಧರಾಗಿ, ಹೆಚ್ಚಿ ಚಿಂತಿಸಬೇಕಾಗಿಲ್ಲ ಉತ್ತಮ ಅವಕಾಶಗಳು ದೊರೆಯಲಿದೆ. ಬದಲಾವಣೆಯನ್ನು ಧನಾತ್ಮಕ ಮನಸ್ಥಿತಿಯಿಂದ ಸ್ವೀಕರಿಸಿ. ನಿಮ್ಮ ಮಾತಿನ ಮೇಲೆ ನಿಗಾ ಇರಲಿ, ಅತಿಯಾಗಿ ಮಾನಸಿಕ ಒತ್ತಡ ತೆಗೆದುಕೊಳ್ಳಲು ಹೋಗಬೇಡಿ.
ಅದೃಷ್ಟದ ದಿನ: ಸೋಮವಾರ
ಅದೃಷ್ಟದ ಸಂಖ್ಯೆ:22
ಅದೃಷ್ಟದ ಬಣ್ಣ: ಹಳದಿ
ಸಂಖ್ಯೆ 4 ( ಜನ್ಮ ದಿನಾಂಕ 4,13,22,31)
ನಿಮ್ಮ ಕಠಿಣಶ್ರಮಕ್ಕೆ ಉತ್ತಮಫಲ ಸಿಗಲಿದೆ. ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆ ಇರಲಿದೆ, ನಿಮ್ಮಿಬ್ಬರ ನಡುವೆ ಬಾಂಧವ್ಯ ತುಂಬಾ ಗಟ್ಟಿಯಾಗಲಿದೆ. ನೀವು ನಿಮ್ಮ ಆರೋಗ್ಯದ ಕಡೆ ಗಮನಹರಿಸಿ.ಆರೋಗ್ಯಕರ ಆಹಾರಕ್ರಮ ಪಾಲಿಸಿ. ಒಟ್ಟಿನಲ್ಲಿ ಈ ವಾರ ನಿಮಗೆ ಉತ್ತಮವಾಗಿದೆ.
ಅದೃಷ್ಟದ ದಿನ ಭಾನುವಾರ
ಅದೃಷ್ಟದ ಸಂಖ್ಯೆ:15
ಅದೃಷ್ಟದ ಬಣ್ಣ: ಪೀಚ್
ಸಂಖ್ಯೆ 5 ( ಜನ್ಮ ದಿನಾಂಕ 5,14,23)
ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ಇರಬೇಡಿ, ವೃತ್ತಿ ಬದುಕಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. ವೈಯಕ್ತಿಕ ಜೀವನದ ದೃಷ್ಟಿಯಿಂದ ಒಳ್ಳೆಯದಿದೆ. ನಿಮ್ಮದೇ ಮನಸ್ಥಿತಿಯ ವ್ಯಕ್ತಿಗಳ ಜೊತೆ ಬೆರೆತು ಕೆಲಸ ಮಾಡಲು ಸಾಧ್ಯವಾಗುವುದು.
ಅದೃಷ್ಟದ ದಿನ: ಶುಕ್ರವಾರ
ಅದೃಷ್ಟದ ಸಂಖ್ಯೆ :20
ಅದೃಷ್ಟದ ಬಣ್ಣ: ಮೆರೂನ್
ಸಂಖ್ಯೆ 6 (ಜನ್ಮ ದಿನಾಂಕ 6,15,24)
ಕೆಲಸದ ಜಾಗದಲ್ಲಿ ಜಾಗ್ರತೆವಹಿಸಿ. ಕೆಲಸದ ವಿಷಯದಲ್ಲಿ ಅಧಿಕಶ್ರಮ ಹಾಕಿ. ಪ್ರೇಮಿಗಳಿಗೆ ಈ ದಿನ ಅನುಕೂಲಕರವಾಗಿದೆ. ನಿದ್ದೆ ಸರಿಯಾಗಿ ಮಾಡಿ. ನಿದ್ದೆ ಕಡಿಮೆಯಾದರೆ ತೊಂದರೆಯಾಗಬಹುದು. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಧನಾತ್ಮಕವಾಗಿರಿ.
ಅದೃಷ್ಟದ ಬಣ್ಣ: ಮಂಗಳವಾರ
ಅದೃಷ್ಟದ ಬಣ್ಣ: 26
ಅದೃಷ್ಟದ ಬಣ್ಣ: ಹಸಿರು
ಸಂಖ್ಯೆ 7 (ಜನ್ಮ ದಿನಾಂಕ 7,16,25)
ವೃತ್ತಿ ಬದುಕಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. ನೀವು ನಿಮ್ಮ ಭಾವನೆಗಳನ್ನು ಸಂಗಾತಿ ಮುಂದೆ ವ್ಯಕ್ತಪಡಿಸಿದರೆ ಒಳ್ಳೆಯದು, ಇದರಿಂದ ನಿಮ್ಮಿಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಕೆಲಸದ ಬಿಡುವಿನಿಂದ ಸ್ವಲ್ಪ ಬ್ರೇಕ್ ತೆಗೆದು ನಿಮ್ಮವರಿಗಾಗಿ ಸಮಯ ನೀಡಿ.
ಅದೃಷ್ಟದ ದಿನ : ಶನಿವಾರ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಬಣ್ಣ: ಲ್ಯಾವೆಂಡರ್
ಸಂಖ್ಯೆ 8 ( ಜನ್ಮ ದಿನಾಂಕ 8,17,26)
ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಮೇಲೆ ನಂಬಿಕೆ ಇಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಕೆಬೇಡ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಧನಾತ್ಮಕವಾಗಿರಿ, ಆತ್ಮವಿಶ್ವಾಸದಿಂದ ಮುಂದುವರೆಯಿರಿ.
ಅದೃಷ್ಟದ ದಿನ: ಭಾನುವಾರ
ಅದೃಷ್ಟದ ಸಂಖ್ಯೆ: 28
ಅದೃಷ್ಟದ ಬಣ್ಣ: ಪರ್ಪಲ್
ಸಂಖ್ಯೆ 9 (ಜನ್ಮ ದಿನಾಂಕ 9,18,27)
ನಂಬಿಕೆ ಕಳೆದುಕೊಳ್ಳಬೇಡಿ, ನಿಮ್ಮ ಗುರಿ ಮಟ್ಟುವತ್ತ ಮಾತ್ರ ಗಮನಹರಿಸಿ. ಇದು ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿಯೊಂದಲು ಸಹಕಾರಿಯಾಗಲಿದೆ. ಸಂಗಾತಿಯೊಂದಿಗೆ ಬಾಂಧವ್ಯ ಉತ್ತಮವಾಗಿರಲಿ. ಆಹಾರಕ್ರಮ, ವ್ಯಾಯಾಮದ ಕಡೆ ಗಮನಹರಿಸಿ.
ಅದೃಷ್ಟದ ದಿನ: ಸೋಮವಾರ
ಅದೃಷ್ಟದ ಸಂಖ್ಯೆ 17
ಅದೃಷ್ಟದ ಬಣ್ಣ : ನೀಲಿ



Click it and Unblock the Notifications
