Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ ಪ್ರಕಾರ ಜುಲೈ 16-22ರವರೆಗಿನ ವಾರ ಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜುಲೈ 16-22ರವರೆಗಿನ ವಾರ ಭವಿಷ್ಯ ನೋಡುವುದಾದರೆ 1 ಸಂಖ್ಯೆಯವರು ಎಚ್ಚರವಹಿಸಬೇಕು, 2 ಸಂಖ್ಯೆಯವರ ಜೀವನದಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ, ಹೀಗೆ 1-9 ಸಂಖ್ಯೆಗಳ ವಾರ ಭವಿಷ್ಯ ನೀಡಲಾಗಿದೆ ನೋಡಿ:
ಸಂಖ್ಯೆ 1
ಈ ವಾರ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ನಿಮ್ಮ ಹೃದಯದ ಮಾತನ್ನು ಹೆಚ್ಚು ಕೇಳುತ್ತೀರಿ. ಈ ಸಮಯದಲ್ಲಿ ಕುಟುಂಬ ಜೀವನದಲ್ಲಿ ಒತ್ತಡ ಹೆಚ್ಚಿರಲಿದೆ. ಈ ಸಮಯದಲ್ಲಿ ಎಲ್ಲದರಿಂದ ದೂರವಿದ್ದು ಒಂಟಿಯಾಗಿರಲು ಬಯಸುತ್ತೀರಿ. ವಾರದ ಮಧ್ಯದಲ್ಲಿ ನಿಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶ ಸಿಗುವುದರಿಂದ ಆರಂಭದ ದಿನಗಳಲ್ಲಿ ತುಂಬಾ ನಿರಾಸೆ ಪಡಬೇಕಾಗಿಲ್ಲ, ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಸಮತೋಲನ ಕಾಪಾಡಿ, ನಿಮ್ಮ ಕೆಲಸ ಕಾರ್ಯಗಳಿಗೆ ಪರಿಣಿತರ ಸಲಹೆ ಪಡೆಯಿರಿ.
ಅದೃಷ್ಟದ ಸಂಖ್ಯೆ 6
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ವಾರ: ಬುಧವಾರ

ಸಂಖ್ಯೆ 2
ಈ ವಾರ ನಿಮ್ಮ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ಈ ವಾರ ತುಂಬಾ ಒಳ್ಳೆಯದಿದೆ, ಸಿಕ್ಕ ಅವಕಾಶ ಮಿಸ್ ಮಾಡಬೇಡಿ. ನಿಮ್ಮ ವ್ಯಕ್ತಿತ್ವ ಇತರರ ಗಮನ ಸೆಳೆಯಲಿದೆ, ಈ ವಾರ ನಿಮಗೆ ಉತ್ತಮವಾಗಿರಲಿದೆ.
ಅದೃಷ್ಟದ ಸಂಖ್ಯೆ 2
ಅದೃಷ್ಟದ ಬಣ್ಣ ಬೂದು
ಅದೃಷ್ಟದ ದಿನ ಸೋಮವಾರ
ಸಂಖ್ಯೆ 3
ಈ ವಾರ ತುಂಬಾ ಬ್ಯುಸಿಯಾಗಿರುತ್ತೀರಿ. ನಿಮ್ಮ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ಕಡೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಆದರೆ ಯಾವುದನ್ನು ಲಘುವಾಗಿ ಪರಿಗಣಿಸಬೇಡಿ. ದೇವರ ದಯೆಯಿಂದ ಎಲ್ಲವೂ ಚೆನ್ನಾಗಿ ನಡೆಯಲಿದೆ. ನಿಮ್ಮಗುಣವೇ ನಿಮ್ಮ ಶಕ್ತಿಯಾಗಲಿದೆ.
ಅದೃಷ್ಟದ ಸಮಖ್ಯೆ 1
ಅದೃಷ್ಟದ ಬಣ್ಣ : ಗೋಲ್ಡನ್
ಅದೃಷ್ಟದ ದಿನ ಭಾನುವಾರ
ಸಂಖ್ಯೆ 4
ಈ ವಾರ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ತಡಮಾಡಬಾರದು, ಆರೋಗ್ಯದ ಕಡೆ ಗಮನಹರಿಸಿ, ವಾರದ ಮಧ್ಯದಲ್ಲಿ ತುಂಬಾನೇ ಒತ್ತಡ ಎದುರಿಸಬೇಕು. ಆರ್ಥಿಕವಾಗಿ ಈ ವಾರ ಚೆನ್ನಾಗಿರಲಿದೆ.
ಅದರಷ್ಟದ ಸಂಖ್ಯೆ 5
ಅದೃಷ್ಟದ ಬಣ್ಣ ನೀಲಿ
ಅದೃಷ್ಟದ ದಿನ ಬುಧವಾರ
ಸಂಖ್ಯೆ 5
ನೀವು ಒತ್ತಡದ ದಿನಗಳನ್ನು ಕಳೆಯುತ್ತಿದ್ದರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅವಾಹಿತರಾಗಿದ್ದರೆ ಈ ವಾರ ಮದುವೆ ಸಂಬಂಧ ಕೂಡಿ ಬರಲಿದೆ. ಸಂಬಂಧದ ವಿಷಯದಲ್ಲಿ ಈ ವಾರ ಚೆನ್ನಾಗಿರಲಿದೆ. ಎಲ್ಲವೂ ಸರಿಯಾಗುವವರೆಗೆ ಸ್ವಲ್ಪ ಸಮಯ ಕಳೆಯಿರಿ.
ಅದೃಷ್ಟದ ಸಂಖ್ಯೆ 6
ಅದೃಷ್ಟದ ಬಣ್ಣ ತೆಳು ನೀಲಿ
ಅದೃಷ್ಟದ ದಿನ ಶುಕ್ರವಾರ
ಸಂಖ್ಯೆ 6
ಈ ವಾರ ನೀವು ಪ್ರಯಾಣ ಮಾಡಬಹುದು. ನಿಮ್ಮ ಬದುಕಿನಲ್ಲಿ ಎಲ್ಲವೂ ನೀವು ಬಯಸಿದಂತೆ ನಡೆಯುವುದರಿಂದ ಖುಷಿಯಾಗಿರುತ್ತೀರಿ. ಈ ವಾರ ಪೂರ್ತಿ ನೀವು ಖುಷಿಯಿಂದ ಕಳೆಯುತ್ತೀರಿ.
ಅದೃಷ್ಟದ ಸಂಖ್ಯೆ 4
ಅದೃಷ್ಟದ ಬಣ್ಣ ಕಂದು
ಅದೃಷ್ಟದ ದಿನ ಮಂಗಳವಾರ
ಅದೃಷ್ಟದ ಸಂಖ್ಯೆ 7
ನೀವು ತುಂಬಾ ಸಮಯದಿಂದ ಬಯಸುತ್ತಿದ್ದ ವಿಷಯದಲ್ಲಿ ನ್ಯಾಯ ಸಿಗಲಿದೆ. ಆದರೆ ಈ ಸಮಯದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ನೀವು ನಿರ್ಧಾರಗಳನ್ನು ಸ್ವಲ್ಪ ಜಾಗ್ರತೆಯಿಂದ ತೆಗೆದುಕೊಳ್ಳಬೇಕು. ವಾರದ ಕೊನೆಯಲ್ಲಿ ಹೊಸ ಪ್ಲ್ಯಾನ್ ಮಾಡಬಹುದು.
ಅದೃಷ್ಟದ ಸಂಖ್ಯೆ 3
ಅದೃಷ್ಟದ ಕಿತ್ತಳೆ
ಅದೃಷ್ಟದ ದಿನ ಗುರುವಾರ
ಸಂಖ್ಯೆ 7
ಈ ವಾರ ನೀವು ಆರೋಗ್ಯ ಸಮಸ್ಯೆಯಿಂದ ಬಳಲಬಹುದು. ಕಷ್ಟದ ಸಂದರ್ಬದಲ್ಲಿ ನೀವು ಗಟ್ಟಿ ನಿರ್ಧಾರ ತೆಗೆದುಕೊಳ್ಳಿ. ಹಲವು ಗೊಂದಲಗಳಿದ್ದರೂ ವಾರದ ಕೊನೆಯಲ್ಲಿ ಪರಿಹಾರ ಕಂಡುಕೊಳ್ಳುವಿರಿ. ಈ ವಾರ ನೀವು ಎಲ್ಲವನ್ನು ಧೈರ್ಯದಿಂದ ಎದುರಿಸಿ.
ಅದೃಷ್ಟದ ಸಂಖ್ಯೆ 8
ಅದೃಷ್ಟದ ಬಣ್ಣ ನೇರಳೆ
ಅದೃಷ್ಟದ ದಿನ ಶನಿವಾರ
ಸಂಖ್ಯೆ 9
ಈ ವಾರ ಏರಳಿತಗಳಿಂದ ಕೂಡಿರಲಿದೆ. ಸಂಬಂಧದ ವಿಷಯದಲ್ಲಿ ಹಲವು ಸಮಸ್ಯೆಗಳಿರಬಹುದು. ವಾರದ ಆರಂಭದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ತಾಳ್ಮೆಯಿಂದ ವರ್ತಿಸಿ. ಯೋಗ, ಧ್ಯಾನದ ಕಡೆ ಗಮನಹರಿಸಿ. ಕೆಲಸದ ಸ್ಥಳದಲ್ಲಿ ನಿಮ್ಮ ವರ್ತನೆ ಕಡೆ ಗಮನಹರಿಸಿ. ಸಹೋದ್ಯೋಗಿಗಳ ಜೊತೆ ಘರ್ಷಣೆಗೆ ಇಳಿಯಬೇಡಿ. ಇದರಿಂದ ನಿಮ್ಮ ಕೆಲಸಗಳಿಗೆ ತೊಂದರೆಯಾಗಬಹುದು. ತಾಳ್ಮೆಯಿಂದ ವರ್ತಿಸಿ.
ಅದೃಷ್ಟದ ಸಂಖ್ಯೆ 7
ಅದೃಷ್ಟದ ಬಣ್ಣ ಬಿಳಿ
ಅದೃಷ್ಟದ ದಿನ ಬುಧವಾರ



Click it and Unblock the Notifications