Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಸಂಖ್ಯಾಶಾಸ್ತ್ರ ಪ್ರಕಾರ ಆಗಸ್ಟ್ 19ರಿಂದ 26ರವರೆಗಿನ ಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ದಿನಾಂಕಕ್ಕೆ ತಕ್ಕಂತೆ ಈ ವಾರದ ಭವಿಷ್ಯ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
ಸಂಖ್ಯೆ 1 (ಜನ್ಮ ದಿನಾಂಕ 1,10,19,28)
ಈ ವಾರ ನಿಮಗೆ ತುಂಬಾ ಶುಭಕರವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯ ಪ್ರಕಾರ ಪೂರ್ಣವಾಗುವುದರಿಂದ ಈ ವಾರ ನಿರಾಳವಾಗಿರುತ್ತೀರಿ. ಈ ಸಮಯದಲ್ಲಿ ನೀವು ಕೆಲವು ಉತ್ತಮ ಸುದ್ದಿಗಳನ್ನು ಪಡೆಯಬಹುದು. ವಾರದ ಕೊನೆಯಲ್ಲಿ ಧನಲಾಭವಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಮದುವೆಗಾಗಿ ಸಂಬಂಧ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಮದುವೆ ಸಂಬಂಧ ಬರಲಿದೆ, ಆರೋಗ್ಯವು ಸುಧಾರಿಸುತ್ತದೆ, ಯಾವುದೇ ಹೆಚ್ಚಿನ ಚಿಂತೆಯಿಲ್ಲದೆ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದು.

ಸಂಖ್ಯೆ 2 ( ಜನ್ಮ ದಿನಾಂಕ 2,11,20,29)
ಈ ವಾರ ನಿಮ್ಮ ಯಾವುದೋ ಪ್ರಮುಖ ಚಿಂತೆಯೊಂದು ದೂರಾಗಲಿದೆ. ಈ ಅವಧಿಯಲ್ಲಿ ನೀವು ಕೆಲವೊಮದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ನಿಮ್ಮ ಯಾವುದೇ ಕೆಲಸದಲ್ಲಿ ಅಡೆತಡೆಗಳು ಕಂಡುಬಂದರೆ, ಅದು ದೂರವಾಗುವ ಬಲವಾದ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ವಿದೇಶ ಪ್ರವಾಸವನ್ನೂ ಮಾಡಬಹುದು. ನೀವು ಈ ವಾರ ಹೊಸ ಹುರುಪಿನಿಂದ ಕೂಡಿರುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ.
ಸಂಖ್ಯೆ 3 ( ಜನ್ಮ ದಿನಾಂಕ 3, 12, 21, 30)
ಪ್ರೇಮಿಗಳಿಗೆ, ವಿವಾಹಿತರಿಗೆ ಈ ವಾರ ತುಂಬಾ ರೊಮ್ಯಾಂಟಿಕ್ ಆಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ವಿವಾಹಿತರಿಗೆ ಈ ಸಮಯವು ಬಹಳ ಮುಖ್ಯವಾಗಿರುತ್ತದೆ. ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ವೆಚ್ಚಗಳು ಕಡಿಮೆಯಾಗುವುದು, ಈ ಸಮಯದಲ್ಲಿ ಹೆಚ್ಚು ಉಳಿತಾಯ ಮಾಡಲು ಕಷ್ಟವಾಗುವುದು.
ಸಂಖ್ಯೆ 4 ( ಜನ್ಮ ದಿನಾಂಕ 4, 13, 22, 31)
ಕೆಲವು ದಿನಗಳಿಂದ ಕೆಲಸದಲ್ಲಿ ಏರುಪೇರು ಉಂಟಾಗಿದ್ದರೆ, ಈ ವಾರ ಸುಧಾರಣೆ ಕಂಡು ಬರಲಿದೆ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಈ ಅವಧಿಯಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ನೀವು ಈ ಅವಧಿಯಲ್ಲಿ ತುಂಬಾ ಧನಾತ್ಮಕವಾಗಿರುತ್ತೀರಿ.
ಸಂಖ್ಯೆ 5 ( ಜನ್ಮ ದಿನಾಂಕ 5,14,23)
ಕೆಲಸದ ದೃಷ್ಟಿಯಿಂದ ಈ ವಾರ ತುಂಬಾ ಚೆನ್ನಾಗಿರಲಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ ಅದರಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಬಡ್ತಿ ಪಡೆಯಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಬಲವಿರುತ್ತದೆ. ಹೊಸ ಆದಾಯದ ಮೂಲ ಸಿಗಲಿದೆ. ವಾರದ ಕೊನೆಯಲ್ಲಿ ನೀವು ದೀರ್ಘ ಪ್ರಯಾಣ ಮಾಡುವುದಾದರೆ ಆ ಪ್ರಯಾಣ ಸ್ಮರಿಣೀಯವಾಗಿರಲಿದೆ.
ಸಂಖ್ಯೆ 6 ( ಜನ್ಮ ದಿನಾಂಕ 6, 15, 24)
ಈ ಅವಧಿಯಲ್ಲಿ ಮಾನಸಿಕವಾಗಿ ತುಂಬಾ ಉತ್ತಮವಾಗಿರುತ್ತೀರಿ. ನೀವು ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ , ಅಗತ್ಯವಿರುವವರಿಗೆ ಸಹಾಯ ಮಾಡುವಿರಿ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಪ್ರೀತಿಪಾತ್ರರ ಬೆಂಬಲ ಸಿಗಲಿದೆ.
ಸಂಖ್ಯೆ 7 ( ಜನ್ಮ ದಿನಾಂಕ 7, 16, 25)
ನ್ಯಾಯಾಲಯದ ಏನಾದರೂ ಪ್ರಕರಣವಿದ್ದರೆ ಈ ಅವಧಿಯಲ್ಲಿ ನೀವು ವಕೀಲರಿಂದ ಕೆಲವು ಉತ್ತಮ ಸಲಹೆಯನ್ನು ಪಡೆಯಬಹುದು. ಈ ವಾರ ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ತಪ್ಪನ್ನು ಮಾಡಬೇಡಿ, ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಒಳಗಾಗಬಹುದು. ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾದರೆ ನಿರ್ಲಕ್ಷ್ಯ ಮಾಡಬೇಡಿ.
ಸಂಖ್ಯೆ 8 (ಜನ್ಮ ದಿನಾಂಕ 8, 17, 26)
ವೃತ್ತಿ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ಈ ಅವಧಿಯಲ್ಲಿ ನೀವು ಉತ್ತಮ ಪ್ರಯೋಜನವನ್ನು ಪಡೆಯುವಿರಿ, ಹಣಕಾಸಿನ ವಿಚಾರದಲ್ಲಿ ನೋಡುವುದಾದರೆ ಈ ವಾರ ಮಿಶ್ರ ಫಲ. ಸಾಲ ಪಡೆಯುವುದು, ಕೊಡುವುದು ಎರಡೂ ಮಾಡಬೇಡಿ, ಕೌಟುಂಬಿಕ ಜೀವನದ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಜನ್ಮ ದಿನಾಂಕ (ಜನ್ಮ ದಿನಾಂಕ 9, 18, 27)
ಕೆಲಸದ ವಿಚಾರದಲ್ಲಿ, ಈ ವಾರ ನಿಮಗೆ ತುಂಬಾ ಒಳ್ಳೆಯದು. ನಿಮ್ಮ ಸ್ವಂತ ಕಾರ್ಯಕ್ಷಮತೆಯಿಂದ ನೀವು ಸಾಕಷ್ಟು ತೃಪ್ತರಾಗುತ್ತೀರಿ. ಆರ್ಥಿಕ ಪರಿಸ್ಥಿತಿಯಲ್ಲಿ ಬಲವಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಯೋಜನವಾಗಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ದೂರವಾಗಿದ್ದರೆ ಈ ಅವಧಿಯಲ್ಲಿ ನಿಮ್ಮ ನಡುವೆ ಇರುವ ಸಮಸ್ಯೆ ಬಗೆಹರಿಯಬಹುದು, ಆದರೆ ಇಬ್ಬರು ಮುಕ್ತವಾಗಿ ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು ಒಳ್ಳೆಯದು.



Click it and Unblock the Notifications
