Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ (ಏಪ್ರಿಲ್ 9-15) ನಿಮಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರದಲ್ಲಿ ನಾವು ಜನಿಸಿದ ದಿನಾಂಕಕ್ಕೆ ಅನುಗುಣವಾಗಿ ನಮಗೆ ಯಾವ ಸಂಖ್ಯೆ ಬರುತ್ತದೆ ಎಂದು ಹೇಳಲಾಗುವುದು. ಏಪ್ರಿಲ್ 9-15ರವರೆಗೆ ನಿಮ್ಮ ಭವಿಷ್ಯ ಹೇಗಿರಲಿದೆ ಎಂದು ನೋಡೋಣ:

ಸಂಖ್ಯೆ 1
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಸಂಖ್ಯಾ 1ರ ಆರ್ಥಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಕೂಡ ಸಾಧಾರಣವಾಗಿರಲಿದೆ. ಈ ಅವಧಿಯಲ್ಲಿ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆವಹಿಸಬೇಕು. ಅಲ್ಲದೆ ಒಂಟಿಯಾಗಿರುವವರು ಸಂಬಂಧದವನ್ನು ಬೆಳೆಸುವಾಗ ಅವರ ಬಗ್ಗೆ ಚೆನ್ನಾಗಿ ವಿಚಾರಿಸಿ ಪ್ರೀತಿಯಲ್ಲಿ ಬೀಳುವುದು ಒಳ್ಳೆಯದು. ಬದುಕಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಚೆನ್ನಾಗಿ ಯೋಚಿಸಿ ತೆಗೆದುಕೊಳ್ಳಿ.
ಸಂಖ್ಯೆ 2
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಈ ವಾರ ಕಠಿಣವಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ. ಈ ಅವಧಿಯಲ್ಲಿ ನೀವಾಡುವ ಮಾತುಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯ ಸಮಸ್ಯೆಯೂ ಕಾಡಬಹುದು. ಆದ್ದರಿಂದ ಈ ವಾರ ನೀವು ತುಂಬಾನೇ ಜಾಗ್ರತೆವಹಿಸಿ. ಅನಗ್ಯತವಾಗಿ ಯಾವುದೇ ವಿಚಾರಗಳಿಗೆ ತಲೆಹಾಕಲು ಯೋಗಬೇಡಿ, ಅನಗ್ಯತ ಚರ್ಚೆಗಳಿಂದ ದೂರವಿರಿ.
ಸಂಖ್ಯೆ 3
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಈ ವಾರ ನೀವು ದಾರ್ಮಿಕ ಕಾರ್ಯಗಳ ಕಡೆಗೆ ಹೆಚ್ಚು ಆಸಕ್ತಿವಹಿಸುತ್ತೀರಿ. ಈ ವಾರ ನೀವು ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಈ ವಾರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ಹೂಡಿಕೆಗೆ ಈ ಸಮಯ ಉತ್ತಮವಾಗಿದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ.
ಈ ವಾರ ಎಲ್ಲಾ ರೀತಿಯಿಂದಲೂ ನಿಮಗೆ ಉತ್ತಮವಾಗಿದೆ.
ಸಂಖ್ಯೆ 4
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಈ ವಾರ ನೀವು ಖುಷಿ-ಖುಷಿಯಾಗಿ ಕಳೆಯುವಿರಿ. ಈ ವಾರದಲ್ಲಿ ನೀವು ಈ ಹಿಂದೆ ಮಾಡಿದ ಹೂಡಿಕೆಯ ಫಲವನ್ನು ಪಡೆಯುವಿರಿ. ನೀವು ಈ ವಾರ ಅತಿಯಾದ ಚಿಂತೆ ಬಿಟ್ಟು ಖುಷಿಯಿಂದ ಕಾಲ ಕಳೆಯುವುದು ಎಂದು ಸಲಹೆ ನೀಡಲಾಗುವುದು. ನೀವು ಧ್ಯಾನ, ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಿಸಿಕೊಳ್ಳುತ್ತೀರಿ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.
ಸಂಖ್ಯೆ 5
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಈ ವಾರ ನೀವು ಅಧಿಕ ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ, ಅನಗ್ಯತ ಚಿಂತೆಗಳನ್ನು ಬಿಟ್ಟು ನೀವು ಕೆಲಸದ ಕಡೆಗೆ ಗಮನಹರಿಸಿ. ಈ ಅವಧಿಯಲ್ಲಿ ಸಂಬಂಧದಲ್ಲಿ ಕೆಲ ಸಮಸ್ಯೆಗಳು ಬರಬಹುದು, ಎಚ್ಚರದಿಂದ ಬಗೆಹರಿಸಲು ಪ್ರಯತ್ನಿಸಿ. ಮುಕ್ತವಾಗಿ ಮಾತನಾಡುವ ಮೂಲಕ ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.
ಸಂಖ್ಯೆ 6
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಈ ವಾರ ಸಕಾರಾತ್ಮಕ ವಾರವಾಗಿರುತ್ತದೆ. ಈ ವಾರ ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಆರ್ಥಿಕವಾಗಿಯೂ ಈ ಅವಧಿ ನಿಮಗೆ ಒಳ್ಳೆಯದಿದೆ. ವ್ಯಾಪಾರಸ್ಥರಿಗೆ ಈ ವಾರ ಹೆಚ್ಚು ಲಾಭದಾಯಕವಾಗಿರುತ್ತದೆ. ಪ್ರೇಮಿಗಳಿಗೂ ಈ ವಾರ ಧನಾತ್ಮಕವಾಗಿರುತ್ತದೆ. ಅವಾಹಿತರ ಮದುವೆ ಮಾತುಕತೆ ನಡೆಯಬಹುದು, ವಿವಾಹಿತ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
ಸಂಖ್ಯೆ 7
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ನೀವು ಏನಾದರೂ ನಿರ್ಧಾರ ತೆಗೆದುಕೊಳ್ಳುವ ಮುನ್ನ ತುಂಬಾ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ಹೊಸ ಉದ್ಯಮ ಅಥವಾ ಹೂಡಿಕೆ ಮಾಡುವುದಾದರೆ ಸ್ವಲ್ಪ ಕಾಯುವುದು ಒಳ್ಳೆಯದು. ಅಲ್ಲದೆ ಸಂಬಂಧದಲ್ಲೂ ನೀವು ಹೆಚ್ಚಿನ ಗಮನ ನೀಡಬೇಕಾಗಿದೆ. ವೃತ್ತಿ ಹಾಗೂ ಕುಟುಂಬ ಜೀವನದಲ್ಲಿ ಸಮತೋಲನ ಕಾಪಾಡಿ.
ಸಂಖ್ಯೆ 8
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಸಂಖ್ಯೆ 8 ಬರುವವರು ಈ ವಾರ ನಿಮ್ಮ ಹಣದ ನಿರ್ವಹಣೆಯನ್ನು ನೀವು ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಆರ್ಥಿಕ ತೊಂದರೆ ಉಂಟಾಗಬಹುದು. ಖರ್ಚುಗಳನ್ನು ಮಿತಿಯಲ್ಲಿ ಮಾಡಿದರೆ ಮುಂದಿನ ವಾರಕ್ಕೆ ಒಳ್ಳೆಯದು. ಯಾವುದೇ ವ್ಯಾಪಾರ ವಹಿವಾಟು ಅಥವಾ ಹೂಡಿಕೆಯನ್ನು ಯೋಚಿಸಿ ಮಾಡಿ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ.
ಸಂಖ್ಯೆ 9
ಸಂಖ್ಯಾಶಾಸ್ತ್ರದ ಏಪ್ರಿಲ್ 9-15ರವರೆಗಿನ ಸಾಪ್ತಾಹಿಕ ಜಾತಕ ಪ್ರಕಾರ ಈ ವಾರ ನೀವು ಎಲ್ಲಾ ಪರಿಸ್ಥಿತಿಗಳನ್ನು ಶಾಂತವಾಗಿ ನಿಭಾಯಿಸಿ. ಈ ವಾರ ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನ ಹರಿಸಿ. ಆರೋಗ್ಯದ ಕಡೆ ಕೂಡ ಗಮನಹರಿಸಿ. ಈ ವಾರ ನಿಮ್ಮ ಕಾರ್ಯಗಳು ಯೋಜನೆಯಂತೆಯೇ ಪೂರ್ಣವಾಗಲಿದೆ. ಈ ವಾರ ನಿಮಗೆ ಉತ್ತಮವಾಗಿರಲಿದೆ. ಆರ್ಥಿಕವಾಗಿ ಈ ವಾರ ಚೆನ್ನಾಗಿರಲಿದೆ.



Click it and Unblock the Notifications
