Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ವಾರ ಭವಿಷ್ಯ(ಸೆ.9-16): ಈ 4 ರಾಶಿಗಳಿಗೆ ಈ ವಾರ ವಿಶೇಷವಾಗಿರಲಿದೆ
ಈ ವಾರ ದ್ವಾದಶಗಳಲ್ಲಿ ಕೆಲವು ರಾಶಿಗಳಿಗೆ ಅನುಕೂಲಕರವಾಗಿದೆ. ಈ ವಾರ ಮೇಷ ರಾಶಿ, ಸಿಂಹ ರಾಶಿ, ಮಕರ ರಾಶಿ, ಮೀನ ರಾಶಿಯವರಿಗೆ ಅನುಕೂಲಕರವಾಗಿದೆ. ಯಾವೆಲ್ಲಾ ವಿಷಯದಲ್ಲಿ ಈ ವಾರ ಈ 4 ರಾಶಿಗಳಿಗೆ ಅನುಕೂಲಕರವಾಗಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಈ ಅವಧಿ ನಿಮಗೆ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಪೂಜೆ, ಹವನ ಇತ್ಯಾದಿಗಳನ್ನು ಆಯೋಜಿಸಬಹುದು. ಈ ವಾರ ಖರ್ಚು ಮಾತ್ರ ನೋಡಿಕೊಂಡು ಮಾಡಿ. ವಾರದ ಮಧ್ಯದಲ್ಲಿ ನೀವು ಇದ್ದಕ್ಕಿದ್ದಂತೆ ಕೆಲಸಕ್ಕಾಗಿ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಬುಧನು ಚಂದ್ರನ ರಾಶಿಯಿಂದ ಐದನೇ ಮನೆಯಲ್ಲಿರುವುದರಿಂದ ವಿದ್ಯಾರ್ಥಿಗಳು ಈ ವಾರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ನೀವು ಪರೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ.
ಪರಿಹಾರ: ದುರ್ಗಾ ಚಾಲೀಸಾ ಪಠಣೆ ಮಾಡಿ.
ಸಿಂಹ ರಾಶಿ
ಈ ವಾರ ನಿಮಗೆ ಅನುಕೂಲಕರವಾಗೊದೆ, ಈ ವಾರ ನಿಮ್ಮ ದೊಡ್ಡ ಚಿಂತೆಯೊಂದು ಬಗೆಹರಿಯಲಿದೆ.ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ. ಈ ಸಮಯವು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ, ನೀವು ಈ ವಾರ ಹೆಚ್ಚುವರಿ ಹಣವನ್ನು ಗಳಿಸಬಹುದು. ನಿಮ್ಮ ಕುಟುಂಬ ಜೀವನದಲ್ಲಿ ಸಂದರ್ಭಗಳು ಈ ವಾರ ನಿಮ್ಮ ಪರವಾಗಿಲ್ಲದಿದ್ದರೆ, ಅವುಗಳನ್ನು ಇನ್ನಷ್ಟು ಹದಗೆಡಿಸುವ ಬದಲು, ನೀವು ತಾಳ್ಮೆಯಿಂದಿರಬೇಕು. ಶನಿಯು ಏಳನೇ ಮನೆಯಲ್ಲಿ ಸ್ಥಿತರಿರುವುದರಿಂದ, ಈ ವಾರ ನೀವು ಯಾರೊಂದಿಗೂ ಹೊಸ ಯೋಜನೆ ಅಥವಾ ಪಾಲುದಾರಿಕೆ ವ್ಯವಹಾರವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕಾಗಿದೆ.
ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವ್ಯವಹಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿರಲಿದೆ. ಉದ್ಯೋಗಸ್ಥರಿಗೆ ಈ ವಾರ ಬಹಳ ಶುಭವಾಗಿರಲಿದೆ.
ಪರಿಹಾರ: ಪ್ರತಿದಿನ 19 ಬಾರಿ "ಓಂ ಭಾಸ್ಕರಾಯ ನಮಃ" ಎಂದು ಜಪಿಸಿ.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ. ಯಾವುದೇ ಪ್ರಮುಖ ವೃತ್ತಿ ಸಂಬಂಧಿತ ಸಮಸ್ಯೆ ಬಗೆಹರಿಯಲಿದೆ. ಜೀವನದ ಕೆಟ್ಟ ಸಮಯದಲ್ಲಿ, ನಾವು ಉಳಿಸಿದ ಹಣ ಮಾತ್ರ ಕಷ್ಟದಲ್ಲಿ ಸಹಾಯಕ್ಕೆ ಬರುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳುತ್ತಾರೆ. ವಿದಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಪ್ರಸ್ತುತ ಕೆಲಸದಿಂದ ನೀವು ತೃಪ್ತರಾಗದಿದ್ದರೆ ನೀವು ಕೆಲಸ ಬದಲಾಯಿಸಲು ಪ್ರಯತ್ನಿಸಿದರೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳು ಈ ಅವಧಿ ಅನುಕೂಲಕರವಾಗಿದೆ, ನೀವು ಲಾಭ ಗಳಿಸುವಿರಿ.. ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಒಳ್ಳೆಯ ಫಲಿತಾಂಶ ನೀಡಲಿದೆ. ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ವಾರದ ಕೊನೆಯಲ್ಲಿ ಬರಬೇಕಾಗಿರುವ ಹಣ ನಿಮ್ಮ ಕೈ ಸೇರಲಿದೆ.
ಪರಿಹಾರ: ಶನಿವಾರ ಅಂಗವಿಕಲರಿಗೆ ಮೊಸರು ಅನ್ನವನ್ನು ದಾನ ಮಾಡಿ.
ಮೀನ ರಾಶಿ
ಈ ವಾರ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು, ಆರೋಗ್ಯ ಸಂಬಂಧಿತ ಸಮಸ್ಯೆಗಳು ದೂರವಾಗಲಿದೆ. ಹಣಕಾಸಿನ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರಲಿದೆ, ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಬಹುದು. ವಾರದ ಕೊನೆಯಲ್ಲಿ, ನೀವು ಯಾವುದೇ ಹಳೆಯ ಸಾಲವನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಈ ವಾರದಲ್ಲಿ ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತವಾದ ಫಲಿತಾಂಶವನ್ನು ನೀವು ಖಂಡಿತವಾಗಿ ಪಡೆಯುತ್ತೀರಿ. ವಿದೇಶ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಈ ವಾರ ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ 43 ಬಾರಿ "ಓಂ ಕೇತ್ವೇ ನಮಃ" ಎಂದು ಜಪಿಸಿ.



Click it and Unblock the Notifications
