Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಾರ ಭವಿಷ್ಯ (ಮೇ 14-20): ಈ 4 ರಾಶಿಯವರಿಗೆ ಅದೃಷ್ಟದ ವಾರವಿದು
ಗ್ರಹಗತಿಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು. ಈ ವಾರದ ವಾರ ಭವಿಷ್ಯ ನೋಡಿದರೆ 4 ರಾಶಿಯವರಿಗೆ ಈ ವಾರ ತುಂಬಾನೇ ಅನುಕೂಲಕರವಾಗಿದೆ. ಆ 4 ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಈ ವಾರ ಮೇಷ ರಾಶಿಯವರಿಗೆ ಅದೃಷ್ಟದ ವಾರವೆಂದೇ ಹೇಳಬಹುದು. ಈ ಯಾವುದೋ ಒಂದು ಪ್ರಮುಖ ಸಮಸ್ಯೆ ಬಹುದಿನಗಳಿಂದ ಕಾಡುತ್ತಿದ್ದರೆ ಈ ವಾರ ಅದಕ್ಕೆ ಒಳ್ಳೆಯ ಪರಿಹಾರ ಸಿಗಲಿದೆ. ವಾರದ ಮಧ್ಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಿಹಿ ಸುದ್ದಿ ಪಡೆಯಬಹುದು. ಈ ಅವಧಿಯಲ್ಲಿ, ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಹಣದ ವಿಷಯದಲ್ಲಿ ಸ್ವಲ್ಪ ದುಬಾರಿಯಾದರೂ ದುಂದುವೆಚ್ಚ ಆಗದಂತೆ ಎಚ್ಚರವಹಿಸಿದರೆ ಯಾವುದೇ ಸಮಸ್ಯೆ ಇರಲ್ಲ.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರಿಗೆ ಉತ್ತಮವಾಗಿದೆ. ಕೆಲಸದ ಒತ್ತಡ ಕಡಿಮೆ ಇರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನೀವು ಉಳಿದಾಯದತ್ತ ಗಮನಹರಿಸಬಹುದು. ವಾರದ ಮಧ್ಯದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಸಿಹಿಸುದ್ದಿ ದೊರೆಯಲಿದೆ. ಅಲ್ಲದೆ ಪ್ರೇಮಿಗಳಿಗೆ ಈ ವಾರ ತುಂಬಾನೇ ಚೆನ್ನಾಗಿದೆ. ಮದುವೆಯಾಗಲು ತೀರ್ಮಾನಿಸಿದರೆ ಮನೆಯವರ ಒಪ್ಪಿಗೆ ಸಿಗಲಿದೆ. ಇನ್ನು ಆರೋಗ್ಯದಲ್ಲೂ ದೊಡ್ಡ ಸಮಸ್ಯೆಗಳಿರಲ್ಲ.
ಕನ್ಯಾ ರಾಶಿ
ಈ ವಾರ ನಿಮಗೆ ಕೆಲಸದ ವಿಷಯದಲ್ಲಿ ತುಂಬಾನೇ ಚೆನ್ನಾಗಿದೆ. ನಿಮ್ಮ ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಮುಂದುವರೆಯಲಿದೆ. ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಪ್ರಯತ್ನಸುತ್ತಿದ್ದರೆ ಈ ವಾರ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುವುದು. ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಮಕರ ರಾಶಿ
ಈ ಅವಧಿಯಲ್ಲಿ ನಿಮ್ಮ ಪ್ರಮುಖ ಚಿಂತೆವೊಂದು ದೂರಾಗಲಿದೆ. ಈ ವಾರ ಕುಟುಂಬದ ಜೊತೆಗೆ ಸಂತೋಷ ಸಮಯ ಕಳೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಅಲ್ಲದೆ ನೀವು ಮನೆ ಅಥವಾ ಆಸ್ತಿ ಖರೀದಿಸಲು ತುಂಬಾ ಸಮಯದಿಂದ ಪ್ರಯತ್ನಿಸುತ್ತಿದ್ದರೆ ಈ ವಾರ ನಿಮ್ಮ ಆಸೆ ನೆರವೇರಲಿದೆ. ಉದ್ಯೋಗವಿರಲಿ, ವ್ಯಾಪಾರವಿರಲಿ ನಿಮ್ಮ ಎಲ್ಲಾ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವೆ. ಈ ಅವಧಿಯಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರದಿಂದ ಮತ್ತಷ್ಟು ಪ್ರಯೋಜನ ಪಡೆಯುವಿರಿ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಈ ವಾರ ಸುಧಾರಣೆ ಕಂಡು ಬರುವುದು.



Click it and Unblock the Notifications
