ಜೂನ್ 11ರಿಂದ 17ರವವರೆಗೆ ಈ 6 ರಾಶಿಯವರಿಗೆ ಲಕ್ಷ್ಮಿಕೃಪೆ ಇದೆ

ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಭವಿಷ್ಯ ಹೇಗಿರಲಿದೆ ಎಂದು ವೈದಿಕ ಶಾಸ್ತ್ರದಲ್ಲಿ ಊಹಿಸಲಾಗುವುದು. ಅದರಂತೆ ಜೂನ್ 11ರಿಂದ 17 ಈ 6 ರಾಶಿಯವರಿಗೆ ಅನುಕೂಲಕರವಾಗಿದ್ದು ಹಣದ ಬಗ್ಗೆ ಈ ವಾರ ಯಾವುದೇ ಚಿಂತೆ ಇರಲ್ಲ, ಅಷ್ಟರ ಮಟ್ಟಿಗೆ ಲಕ್ಷ್ಮಿ ಕೃಪೆ ಇದೆ...

Weekly Horoscope

ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರ ತುಂಬಾ ಉತ್ತಮವಾಗಿರಲಿದೆ. ಮನೆಯಲ್ಲಿ ಆಗಿರಲಿ, ಉದ್ಯೋಗದ ಸ್ಥಳದಲ್ಲಿ ಆಗಿರಲಿ ಅನಗ್ಯತ ಚರ್ಚೆಗೆ ಹೋಗಬೇಡಿ. ವಾರದ ಮಧ್ಯದಲ್ಲಿ ಅಧಿಕ ಕೆಲಸ ಇರುವುದರಿಂದ ಈ ದಿನಗಳಲ್ಲಿ ತುಂಬಾ ಮಾನಸಿಕ ಒತ್ತಡ ಅನುಭವಿಸುತ್ತೀರಿ. ಮೇಷ ರಾಶಿಯವರಿಗೆ ವಾರದ ಮಧ್ಯ ನಿಮಗೆ ಹೆಚ್ಚು ಫಲಫ್ರದವಾಗಿರಲಿದೆ. ಈ ಸಮಯದಲ್ಲಿ, ನಿಮ್ಮ ಮನೆಯ ವಾತಾವರಣದಲ್ಲಿ ದೊಡ್ಡ ಸುಧಾರಣೆ ಕಂಡು ಬರಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ಪಡೆಯಬಹುದು.

ಕರ್ಕ ರಾಶಿ
ಕರ್ಕಾಟಕ ರಾಶಿಯವರಿಗೆ ಈ ವಾರ ತುಂಬಾ ಶುಭವಾಗಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಕೆಲಸ-ಕಾರ್ಯಗಳು ತುಂಬಾ ಸುಗಮವಾಗಿ ನಡೆಯಲದೆ. ಪಾರ್ಟ್ನರ್‌ನಲ್ಲಿ ಕೆಲಸ ಮಾಡುವವರು ಹೆಚ್ಚಿನ ಲಾಭ ಗಳಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ಈ ಅವಧಿಯಲ್ಲಿ ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತೀರಿ. ಹಣದ ಚಿಂತೆ ಇರುವುದಿಲ್ಲ, ಅಲ್ಲದೆ ಉಳಿತಾಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದು, ಆರೋಗ್ಯ ಕೂಡ ಚೆನ್ನಾಗಿರಲಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವಾರ ಶುಭವಾಗಿದೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರು ಈ ವಾರ ತಮ್ಮ ಶ್ರಮಕ್ಕೆ ಉತ್ತಮ ಫಲ ಪಡೆಯಬಹುದು. ವ್ಯಾಪಾರಸ್ಥರು ಈ ವಾರದಲ್ಲಿ ಒಳ್ಳೆಯ ಲಾಭಗಳಿಸಬಹುದು, ಆದರೆ ಹೂಡಿಕೆ ಮಾಡಲು ಹೋಗಬೇಡಿ. ಹಣದ ವಿಷಯದಲ್ಲಿ ಈ ವಾರ ಸರಾಸರಿಯಾಗಿರಲಿದೆ. ವಾರದ ಕೊನೆಯಲ್ಲಿ, ಸಂಗಾತಿಯ ಆರೋಗ್ಯದ ಕಡೆಗೆ ಅಧಿಕ ಗಮನಹರಿಸಿ.

ತುಲಾ ರಾಶಿ
ಕೆಲಸದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಅನುಕೂಲಕರವಾಗಿರಲಿದೆ, ನೀವು ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಹೊಸ ಉದ್ಯೋಗಗಳು ಸಿಗಬಹುದು. ವ್ಯಾಪಾರಸ್ಥರು ಈ ವಾರ ಲಾಭ ಗಳಿಸುತ್ತೀರಿ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರದಲ್ಲಿ ಲಾಭ ಇರಲಿದೆ. ಏನಾದರೂ ಆಸ್ತಿ ವಿವಾದವಿದ್ದರೆ ಅದು ಇತ್ಯರ್ಥವಾಗಬಹುದು. ನಿಮ್ಮ ದೊಡ್ಡ ಚಿಂತೆ ದೂರಾಗಲಿದೆ. ಈ ವಾರದಲ್ಲಿ ನಿಮ್ಮ ದೊಡ್ಡ ಸಮಸ್ಯೆಗೆ ಪರಿಹಾರ ಸಿಗಲಿದೆ, ಆರೋಗ್ಯ ಚೆನ್ನಾಗಿರಲಿದೆ.

ವೃಶ್ಚಿಕ ರಾಶಿ
ನೀವು ಪ್ರೇಮಿಗಳಾಗಿದ್ದರೆ ಮನೆಯಲ್ಲಿ ಮದುವೆ ಬಗ್ಗೆ ಹೇಳಲು ಇದು ಸೂಕ್ತ ಸಮಯವಾಗಿದೆ. ವಿವಾಹಿತರ ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಾಗಲಿದೆ. ನಿ ಹಣಕಾಸು ಕೂಡ ಚೆನ್ನಾಗಿರಲಿದೆ. ಆದರೆ ಇತರರನ್ನು ಮೆಚ್ಚಿಸಲು ಅಧಿಕ ಖರ್ಚು ಮಾಡಬೇಡಿ, ಹಾಗೆ ಮಾಡಿದರೆ ಭವಿಷ್ಯದಲ್ಲಿ ಹಣದ ಸಮಸ್ಯೆ ಉಂಟಾಗಬಹುದು. ನಿಮ್ಮ ಕೆಲಸದಲ್ಲಿ ಸ್ವಲ್ಪವೂ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಎಲ್ಲಾ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಆದರೆ ಯಾವುದಾದರೂ ಹೊಸ ವ್ಯವಹಾರ ಮಾಡುವುದಾದರೆ ಜಾಗ್ರತೆ.

ಕುಂಭ ರಾಶಿ
ಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ, ಈ ವಾರ ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದು, ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಈ ಅವಧಿಯಲ್ಲಿ ಕೆಲಸದಲ್ಲಿ ತುಂಬಾ ತೃಪ್ತಿ ಇರಲಿದೆ. ಕೆಲಸದ ಹೊರೆ ತುಂಬಾ ಕಡಿಮೆ ಇರುವುದರಿಂದ ಕುಟುಂಬದ ಜೊತೆ ಟ್ರಿಪ್ ಹೋಗಲು ಅಥವಾ ಕುಟುಂಬದ ಜೊತೆ ಅಧಿಕ ಸಮಯ ಕಳೆಯಲು ಪ್ರಯತ್ನಿಸಬಹುದು. ಈ ಸಮಯವು ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಬಹುದು. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿದರೆ ಒಳ್ಳೆಯದು, ಆರೋಗ್ಯ ಚೆನ್ನಾಗಿರಲಿದೆ.

English summary

Weekly Horoscope June 11 to 17: Lucky Zodiac Signs In This Week In Kannada

Weekly Horoscope June 11 to 17: These 6 zodiac signs get more benefits, read on..
Story first published: Sunday, June 11, 2023, 19:41 [IST]
X
Desktop Bottom Promotion