ಜುಲೈ 22-29ರವರೆಗಿನ ವಾರ ಭವಿಷ್ಯ: ಈ ವಾರ 12 ರಾಶಿಗಳಿಗೆ ಹೇಗಿರಲಿದೆ?

ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ಹೇಳಲಾಗಿದೆ. ಯಾವ ರಾಶಿಯವರಿಗೆ ಈ ವಾರ ಉತ್ತಮವಾಗಿದೆ, ಯಾವ ರಾಶಿಯವರು ಯಾವ ವಿಷಯದಲ್ಲಿ ಜಾಗ್ರತೆವಹಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ತುಂಬಾ ಶುಭವಾಗಿರಲಿದೆ. ಆದರೆ ಆರೋಗ್ಯದಲ್ಲಿ ಈ ವಾರ ಏರಿಳಿತಗಳು ಕಂಡು ಬರಬಹುದು, ಆದ್ದರಿಂದ ಆರೋಗ್ಯದ ಕಡೆ ಸ್ವಲ್ಪ ಜಾಗ್ರತೆವಹಿಸಿ. ನೀವು ಕೆಲಸದ ವಿಷಯದಲ್ಲಿ ಅವಸರ ಮಾಡಬೇಡಿ, ತಾಳ್ಮೆಯಿಂದ ನಿಭಾಯಿಸಿ. ಕೆಲಸದ ಸ್ಥಳದಲ್ಲಿ ನೀವು ನಿರ್ಧಾರಗಳನ್ನು ಆಲೋಚನೆ ಮಾಡಿ ತೆಗೆದುಕೊಂಡರೆ ಒಳ್ಳೆಯದು. ನಿಮ್ಮ ನಿರ್ಧಾರಗಳು ಭವಿಷ್ಯದಲ್ಲಿ ನಿಮಗೆ ಫಲ ನೀಡಲಿದೆ. ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳನ್ನು ತಾಳ್ಮೆಯಿಮದ ನಿಭಾಯಿಸಿ.
ಅದೃಷ್ಟದ ಬಣ್ಣ: ನೇರಳೆ.
ಪರಿಹಾರ: ನೀವು ಪ್ರತಿದಿನ ಸುರ್ಯನಿಗೆ ಆರ್ಘ್ಯ ಅರ್ಪಿಸಿದರೆ ಒಳ್ಳೆಯದು.

Weekly Horoscope From July 22 To July 29 In Kannada

ವೃಷಭ ರಾಶಿ

ಈ ವಾರ ನೀವು ದೇವರಲ್ಲಿ ಹಾಗೂ ನಿಮ್ಮ ಆತ್ಮವಿಶ್ವಾಸದಲ್ಲಿ ನಂಬಿಕೆ ಇಟ್ಟುಕೊಂಡು ಮುಂದುವರೆಯಿರಿ, ಈ ವಾರ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ವ್ಯಾಪಾರಸ್ಥರಿಗೆ ಈ ವಾರ ಅನುಕೂಲಕರವಾಗಿದೆ, ಕೆಲಸದಲ್ಲಿ ಇರುವ ಅಡೆತಡೆಗಳು ದೂರಾಗಲು ಹನುಮಂತನ ಪ್ರಾರ್ಥಿಸಿದರೆ ಒಳ್ಳೆಯದು, ನೀವು ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸಿ. ಈ ವಾರ ಅದೃಷ್ಟದ ಬಲ ಇರುವುದರಿಂದ ನಿಮ್ಮ ಸಮಸ್ಯೆ ತನ್ನಿಂದ ತಾನೇ ದೂರಾಗುವುದು. ವೈ
ಅದೃಷ್ಟ ಬಣ್ಣ: ಹಸಿರು.
ಪರಿಹಾರ: ನಿಮ್ಮ ಆಲೋಚನೆಗಳನ್ನು ಧನಾತ್ಮಕವಾಗಿಡುವುದೇ ದೊಡ್ಡ ಪರಿಹಾರವಾಗಿದೆ.

ಮಿಥುನ ರಾಶಿ

ಮಿಥುನ ರಾಶಿಯವರೇ ಈ ವಾರ ಸ್ವಲ್ಪ ಎಚ್ಚರಿಕೆವಹಿಸಿ, ಈ ವಾರ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುವುದರಿಂದ ಆರೋಗ್ಯದ ಕಡೆಗೆ ಗಮನಹರಿಸಿ. ಕೆಲಸದ ವಿಷಯದಲ್ಲಿ ಉತ್ತಮವಾಗಿರಲಿದೆ, ಈ ಸಮಯದಲ್ಲಿ ನೀವು ಉತ್ತಮ ನಿರ್ಧಾರ ತೆಗೆದುಕೋಳ್ಳುತ್ತೀರಿ. ಆಧ್ಯಾತ್ಮಿಕ ಕ್ಷೇತ್ರದ ಕಡೆ ಒಲವು ಹೆಚ್ಚಾಗಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ. ಈ ವಾರ ಯಾರನ್ನೂ ಕಣ್ಮುಚ್ಚಿ ನಂಬಬೇಡಿ.
ಅದೃಷ್ಟದ ಬಣ್ಣ: ಗುಲಾಬಿ.
ಪರಿಹಾರ: ಶಿವನಿಗೆ ಅಭಿಷೇಕ ಮಾಡಿಸಿ.

ಕರ್ಕ ರಾಶಿ

ಕರ್ಕ ರಾಶಿಯವರು ಈ ವಾರ ಅನಗ್ಯತ ವಿಷಯಗಳ ಕಡೆ ಗಮನಹರಿಸದೆ ತಮ್ಮ ಕೌಶಲ್ಯದ ಕಡೆಗೆ ಗಮನಹರಿಸಿ. ಈ ವಾರ ಕೆಲಸದ ಒತ್ತಡ, ಜವಾಬ್ದಾರಿಗಳ ಒತ್ತಡ ಇರಲಿದೆ. ನೀವು ಪ್ರತಿನಿತ್ಯ ಧ್ಯಾನ ಮಾಡಿ. ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಈ ವಾರ ನಿಮಗೆ ಅನುಕೂಲಕರವಾಗಿದೆ. ವೈಯಕ್ತಿಕ ಜೀವನದಲ್ಲಿ, ಅನುಭವಿ ವ್ಯಕ್ತಿಯ ಸಲಹೆಯು ನಿಮಗೆ ಸಹಾಯಕವಾಗುವುದು.
ಅದೃಷ್ಟ ಬಣ್ಣ: ಕೆಂಪು.
ಪರಿಹಾರ: ನಿಮ್ಮ ಕುಲ ದೇವರನ್ನು ಪ್ರಾರ್ಥಿಸಿ ನಿಮ್ಮ ದಿನದ ಕಾರ್ಯಗಳನ್ನು ಪ್ರಾರಂಭಿಸಿ.

ಸಿಂಹ ರಾಶಿ

ಸಿಂಹ ರಾಶಿಯವರು ಈ ವಾರ ಜಾಗರೂಕರಾಗಿರಬೇಕು. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು, ಹಲ್ಲುನೋವು, ಬೆನ್ನುನೋವಿನ ಸಮಸ್ಯೆ ಉಂಟಾಗಬಹುದು. ಈ ವಾರ ಯಾವುದೇ ಹಣದ ವ್ಯವಹಾರ ಮಾಡಬೇಡಿ, ನಷ್ಟವಾಗಬಹುದು . ವೈಯಕ್ತಿಕ ಜೀವನದ ಸಮಸ್ಯೆಗಳನ್ನು ತಾಳ್ಮೆಯಿಂದ ನಿಭಾಯಿಸಲು ಪ್ರಯತ್ನಿಸಿ . ಇತರರ ಮಾತು ಕೇಳುವ ಬದಲಿಗೆ ನಿಮ್ಮ ನಿರ್ಧಾರಗಳನ್ನು ನೀವೇ ಆಲೋಚಿಸಿ ತೆಗೆದುಕೊಳ್ಳಿ. ಬೇರೆಯವರ ಮಾತಿಗೆ ಪ್ರಭಾವಿತರಾಗಿ ಯಾವುದೇ ತಪ್ಪು ಕಾರ್ಯ ಮಾಡಬೇಡಿ.
ಅದೃಷ್ಟ ಬಣ್ಣ: ಬಿಳಿ.
ಪರಿಹಾರ: ಶಿವನ ಆರಾಧಿಸಿ

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ, ನೀವು ನಿಮ್ಮ ಕೆಲಸದಿಂದ ಇತರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತೀರಿ, ಆದರೆ ಆರೋಗ್ಯದ ಕಡೆಗೆ ಗಮನಹರಿಸಿ, ಕೋಪವನ್ನು ನಿಯಂತ್ರಿಸಿ, ಹಠಕ್ಕೆ ಬಿದ್ದು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ಶೀಘ್ರದಲ್ಲೇ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಸುದ್ದಿ ಪಡೆಯುವಿರಿ.
ಅದೃಷ್ಟ ಬಣ್ಣ: ಹಳದಿ.
ಪರಿಹಾರ: ಶ್ರೀಗಣೇಶನಿಗೆ ಕೆಂಪುಗಳನ್ನು ಅರ್ಪಿಸಿ ಪೂಜಿಸಿ

ತುಲಾ ರಾಶಿ

ತುಲಾ ರಾಶಿಯವರು ಈ ವಾರ ಒಳ್ಳೆಯ ಸುದ್ದಿಗಳನ್ನು ಕೇಳಬಹುದು, ಈ ಅವಧಿಯಲ್ಲಿ ನೀವು ನಿಮ್ಮ ಸೌಕರ್ಯ ಹೆಚ್ಚಿಸಲು ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ಹಣದ ಸ್ಥಿತಿ ಚೆನ್ನಾಗಿರಲಿದೆ, ಈ ಅವಧಿಯಲ್ಲಿ ಬಹು ಸಮಯದಿಮದ ನಿರೀಕ್ಷಿಸುತ್ತಿದ್ದ ಕಾರ್ಯ ನೆರವೇರಲಿದೆ. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ, ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ಅರೋಗ್ಯ ಚೆನ್ನಾಗಿರಲಿದೆ. ಅನಗ್ಯತ ವಿಷಯಗಳಿಗೆ ತಲೆಹಾಕಲು ಹೋಗಬೇಡಿ
ಅದೃಷ್ಟ ಬಣ್ಣ: ಗೋಲ್ಡನ್.
ಪರಿಹಾರ: ಅಗ್ಯತವಿರುವವರಿಗೆ ನಿಮ್ಮಿಂದಾಗುವ ಸಹಾಯ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ವಾರ ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದರೆ ಒಳ್ಳೆಯದು, ನೀವು ನಿಮ್ಮ ಆರೋಗ್ಯದ ಕಡೆ ಗಮನ ನೀಡಿ. ಇತರರನ್ನು ಸಂತೋಷಪಡಿಸುವ ಭರದಲ್ಲಿ ನಿಮ್ಮ ಬಗ್ಗೆ ಮರೆಯಬೇಡಿ, ನೀವು ವಿಶ್ರಾಂತಿ ಕಡೆ ಗಮನಹರಿಸಿ. ನೀವು ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುತ್ತೀರಿ, ಆದರೆ ಕೆಲಸದ ಜಾಗದಲ್ಲಿ ನಿಮ್ಮೆಲ್ಲಾ ವಿಚಾರಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಹೋಗಬೇಡಿ, ವೈಯಕ್ತಿಕ ಜೀವನದಲ್ಲಿ ಹೊರಗಿನವರ ಮಾತುಗಳಲ್ಲಿ ಕೇಳಬೇಡಿ. ತರಾತುರಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ.
ಅದೃಷ್ಟದ ಬಣ್ಣ: ಗುಲಾಬಿ
ಪರಿಹಾರ: ಶಿವನ ಆರಾಧಿಸಿ

ಧನು ರಾಶಿ

ಧನು ರಾಶಿಯವರಿಗೆ ಈ ವಾರ ಅತ್ಯುತ್ತಮವಾಗಿದೆ. ಈ ವಾರ ಆರ್ಥಿಕವಾಗಿ ಉತ್ತಮವಾಗಿದೆ. ಅದೃಷ್ಟ ಬಲವಿರುವುದರಿಂದ ಈ ವಾರ ನಿಮ್ಮ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ವೈಯಕ್ತಿಕ ಜೀವನದಲ್ಲಿ ಖುಷಿ ಇರಲಿದೆ. ಆಹಾರಕ್ರಮದ ಗಮನಹರಿಸಿ.
ಅದೃಷ್ಟದ ಬಣ್ಣ: ಬಿಳಿ.
ಪರಿಹಾರ: ಪ್ರತಿ ದಿನ ಸೂರ್ಯ ಬೀಜ ಮಂತ್ರ ಪಠಿಸಿ

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ಶುಭವಾಗಿದೆ, ಏನದರೂ ಆರೋಗ್ಯ ಸಮಸ್ಯೆ ಇದ್ದರೆ ಈ ವಾರ ಆರೋಗ್ಯವು ಸುಧಾರಿಸುತ್ತದೆ, ವೃತ್ತಿ ಜೀವನದ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. ಕಠಿಣ ಪರಿಶ್ರಮದ ಫಲ ಪಡೆಯುವಿರಿ. ನಿಮ್ಮ ಕಾರ್ಯಗಳಿಗೆ ಕುಟುಂಬದವರ ಬೆಂಬಲ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.
ಅದೃಷ್ಟದ ಬಣ್ಣ: ಗೋಲ್ಡನ್

ಕುಂಭ ರಾಶಿ

ಕುಂಭ ರಾಶಿಯವರು ನಕರಾತ್ಮಕ ಚಿಂತನೆಗಳನ್ನು ದೂರವಿಟ್ಟು ಸಕರಾತ್ಮಕವಾಗಿರುವುದು ಒಳ್ಳೆಯದು. ಆರೋಗ್ಯದಲ್ಲಿ ಏರಳಿತ ಇರಲಿದೆ, ನೀವು ಅನಗ್ಯತ ಚಿಂತೆಯಿಂದ ದೂರವಿದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಕೆಲಸ-ಕಾರ್ಯಗಳ ಕಡೆ ಅಧಿಕ ಗಮನಹರಿಸಿ, ಇತರರ ಬಗ್ಗೆ ಅಸೂಯೆಪಡಬೇಡಿ. ವೈಯಕ್ತಿಕ ಜೀವನದಲ್ಲಿ ಖುಷಿ ಇರಲಿದೆ
ಅದೃಷ್ಟ ಬಣ್ಣ: ಕಂದು.
ಪರಿಹಾರ: ಧ್ಯಾನ ಮಾಡಿ

ಮೀನ ರಾಶಿ

ಮೀನ ರಾಶಿಯವರು ಈ ವಾರ ವೈಯಕ್ತಿಕ ಜೀವನದ ಕಡೆ ಗಮನ ಹರಿಸುವುದು ಒಳ್ಳೆಯದು. ಈ ವಾರ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ಬೆಳವಣಿಗೆ ಕಂಡು ಬರಲಿದೆ. ವ್ಯಾಪಾರಸ್ಥರು ಲಾಭ ಗಳಿಸುತ್ತೀರಿ. ಹಠಾತ್ ಹಣದ ಲಾಭ ಉಂಟಾಗಲಿದೆ. ವೈಯಕ್ತಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಪ್ಪು.
ಪರಿಹಾರ: ಇಷ್ಟ ದೇವರನ್ನು ಧ್ಯಾನಿಸಿ

English summary

Weekly Horoscope From July 22 To July 29 In Kannada

Here are weekly horoscope of 12 zodiac signs from July 22 to July 29, read on.
Story first published: Friday, July 21, 2023, 17:30 [IST]
X
Desktop Bottom Promotion