Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ: ಡಿಸೆಂಬರ್ 8ರವರೆಗೆ ಈ 6 ರಾಶಿಯವರಿಗೆ ಅದೃಷ್ಟಕರ
ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ನೋಡುವುದಾದರೆ ಈ 6 ರಾಶಿಯವರಿಗೆ ಅದೃಷ್ಟಕರ....
ವೃಷಭ ರಾಶಿ
ಹಣಕಾಸಿನ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಅದೃಷ್ಟದ ವಾರವಾಗಿದೆ. ಆರ್ಥಿಕವಾಗಿ ಈ ವಾರ ನಿಮಗೆ ಅನುಕೂಲಕರವಾಗಿದೆ. ಏನಾದರೂ ಆಸ್ತಿ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ. ಉದ್ಯೋಗಿಗಳಿಗೆ ಈ ವಾರ ಕೆಲಸದ ವಿಷಯದಲ್ಲಿ ಉತ್ತಮವಾಗಿರಲಿದೆ. ವ್ಯಾಪಾರಿಗಳು ಆರ್ಥಿಕ ಲಾಭ ಪಡೆಯಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಈ ವಾರ ನಿಮ್ಮ ಆರೋಗ್ಯವು ಸುಧಾರಿಸುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ, ವೈಯಕ್ತಿಕ ಜೀವನದಲ್ಲಿ ಖುಷಿ ಇರಲಿದೆ. ಈ ಅವಧಿಯಲ್ಲಿ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಆರ್ಥಿಕ ದೃಷ್ಟಿಯಿಂದ ಈ ವಾರ ತುಂಬಾ ಒಳ್ಳೆಯದು, ಈ ವಾರದಲ್ಲಿ ನಿಮಗೆ ಕಳೆಯ ಸಾಲ ತೀರಿಸಲು ಕೂಡ ಸಾಧ್ಯವಾಗುವುದು. ವಾರದ ಕೊನೆಯಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಇತ್ತೀಚೆಗೆ ದೊಡ್ಡ ಕಂಪನಿಯಲ್ಲಿ ಉದ್ಯೋಗ ಸಂದರ್ಶನವನ್ನು ನೀಡಿದ್ದರೆ, ನೀವು ಸಕಾರಾತ್ಮಕ ಉತ್ತರವನ್ನು ಪಡೆಯಬಹುದು.
ಕರ್ಕ ರಾಶಿ
ವಾರದ ಆರಂಭ ನಿಮಗೆ ಚೆನ್ನಾಗಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ನೀವು ಚಿಕ್ಕ ನಿರ್ಧಾರಗಳನ್ನು ಕೂಡ ಜಾಗ್ರತೆಯಿಂದ ತೆಗೆದುಕೊಳ್ಳಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನಿಮ್ಮ ಪೂರ್ವಜರ ವ್ಯವಹಾರದೊಂದಿಗೆ ನೀವು ಸಂಬಂಧ ಹೊಂದಿದ್ದರೆ ಈ ಅವಧಿಯಲ್ಲಿ ಒಳ್ಳೆಯ ಲಾಭಗಳಿಸುವಿರಿ. ನಿಮ್ಮ ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದಿಂದ ನೀವು ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ವಾರ ಖರ್ಚುಗಳು ಕಡಿಮೆಯಾಗುತ್ತವೆ, ಇದರಿಂದ ಆರ್ಥಿಕವಾಗಿ ಒಳ್ಳೆಯದಿದೆ. ಈ ಸಮಯದಲ್ಲಿ, ನೀವು ಯಾವುದೇ ಹಳೆಯ ಸಣ್ಣ ಸಾಲವನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರಸ್ಥರಿಗೆ ಈ ವಾರ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿಯಲ್ಲಿ ಯಾವುದೇ ದೊಡ್ಡ ಸಮಸ್ಯೆಗಳಿರಲ್ಲ.
ಕುಂಭ ರಾಶಿ
ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಉತ್ತಮ. ನಿಮ್ಮ ಆದಾಯ ಚೆನ್ನಾಗಿರಲಿದೆ. ಈ ಸಮಯದಲ್ಲಿ, ಹಣದ ಕೊರತೆಯಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸವೂ ಪೂರ್ಣಗೊಳ್ಳುತ್ತದೆ. ವೈವಾಹಿಕ ಜೀವನದಲ್ಲಿಖುಷಿ ಇರಲಿದೆ. ನಿಮ್ಮ ಸಂಗಾತಿಯು ಕೆಲವು ಉತ್ತಮ ಯಶಸ್ಸನ್ನು ಸಾಧಿಸಬಹುದು. ಕೆಲಸದ ವಿಷಯದಲ್ಲಿ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ತೊಡಗಿರುವವರು ಕಾನೂನುಬಾಹಿರವಾಗಿ ಯಾವುದೇ ಕಾರ್ಯ ಮಾಡಬೇಡಿ. ವಾರದ ಕೊನೆಯಲ್ಲಿ ಆರೋಗ್ಯದಲ್ಲಿ ಹಠಾತ್ ಕ್ಷೀಣತೆಯಿಂದಾಗಿ ನಿಮ್ಮ ಕೆಲವು ಯೋಜನೆಗಳಿಗೆ ತೊಂದರೆಯಾಗಬಹುದು.
ಮೀನ ರಾಶಿ
ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಮತ್ತಷ್ಟು ಬಲಗೊಳ್ಳುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಈ ವಾರ ಉದ್ಯಮಿಗಳಿಗೆ ಉತ್ತಮ ಸೂಚನೆಗಳಿವೆ. ನಿಮ್ಮ ಯಾವುದೇ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ



Click it and Unblock the Notifications