Weekly Career Horoscope 24 to 30 July 2023 : ಈ ವಾರ ನಿಮ್ಮ ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿ

ಪ್ರತಿಯೊಬ್ಬ ವ್ಯಕ್ತಿಗೂ ಆತನ ವೃತ್ತಿ ಜೀವನ ಹಾಗೂ ಆರ್ಥಿಕ ಪರಿಸ್ಥಿತಿ ತುಂಬಾನೇ ಮುಖ್ಯವಾಗುತ್ತದೆ. ಜುಲೈ ಕೊನೆಯ ವಾರದಲ್ಲಿ ಗ್ರಹಗಳು ತಮ್ಮ ಪಥವನ್ನು ಬದಲಾಯಿಸುತ್ತಿದ್ದು, ಶುಕ್ರನು ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿದೆ.

ಶುಕ್ರನ ಈ ಚಲನೆಯ ಪರಿಣಾಮವಾಗಿ ಕೆಲವು ರಾಶಿಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಇನ್ನೂ ಕೆಲವು ರಾಶಿಗಳಿಗೆ ಸಂಕಷ್ಟವೂ ಎದುರಾಗಲಿದೆ. ಅಷ್ಟಕ್ಕು ಈ ವಾರ ದ್ವಾದಶ ರಾಶಿಗಳ ಆರ್ಥಿಕ ಹಾಗೂ ವೃತ್ತಿ ಜೀವನ ಭವಿಷ್ಯ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

Weekly Career Horoscope in Kannada 24 to 30 July 2023: These 5 Zodiac signs are benefited in Kannada

ಮೇಷ ರಾಶಿ

ಮೇಷ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಮತ್ತು ಪಾಲುದಾರಿಕೆಯಲ್ಲಿ ಮಾಡಿದ ಕೆಲಸವು ನಿಮಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಆದರೆ ಮನಸ್ಸಿಗೆ ದುಃಖ ಉಂಟಾಗುವ ಘಟನೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಆರ್ಥಿಕ ವಿಷಯಗಳಲ್ಲೂ ಕ್ರಮೇಣ ಪ್ರಗತಿ ಕಂಡುಕೊಳ್ಳುವ ಸಾಧ್ಯತೆಗಳಿದೆ. ಕೌಟುಂಬಿಕ ವಿಚಾರದ ಬಗ್ಗೆ ಮನಸ್ಸು ಚಂಚಲವಾಗಿರುತ್ತದೆ. ಪ್ರಯಾಣ ಮಾಡುವಾಗ ಕೊಂಚ ಜಾಗರೂಕತೆ ವಹಿಸಿ. ವಾರದ ಕೊನೆಯಲ್ಲಿ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ.
ಅದೃಷ್ಟದ ದಿನ: 27

ವೃಷಭ ರಾಶಿ

ವರು ಈ ವಾರ ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಲಿದ್ದಾರೆ. ಹೊಸದನ್ನು ಕಲಿಯುವ ಮೂಲಕ ಮತ್ತು ನಿಮ್ಮ ಅಂತಃಪ್ರಜ್ಞೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳೋದ್ರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಈ ವಾರ ನೀವು ಕುಟುಂಬದಿಂದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈ ವಾರ ಪ್ರವಾಸವನ್ನು ಮುಂದೂಡಿದರೆ ಉತ್ತಮ. ಈ ವಾರ ನಿಮ್ಮ ಜೀವನದಲ್ಲಿ ಶಾಂತಿ ತುಂಬಿರುತ್ತದೆ.
ಶುಭ ದಿನಗಳು: 26, 28

ಮಿಥುನ ರಾಶಿ

ಈ ವಾರ ಮಿಥುನ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು. ವಾರದ ಆರಂಭದಲ್ಲಿ ನಿಮ್ಮ ಹೂಡಿಕೆಗಳ ಬಗ್ಗೆ ನೀವು ಸ್ವಲ್ಪ ಚಿಂತೆ ಮಾಡಬೇಕಾಗುತ್ತದೆ. ಆದರೆ ನೀವು ಧೈರ್ಯದಿಂದ ಹೂಡಿಕೆ ಮಾಡಲು ಮುಂದಾದರೆ, ಉತ್ತಮ ಫಲಿತಾಂಶಗಳು ಹೊರಹೊಮ್ಮುತ್ತವೆ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು. ಮತ್ತು ನಿಮ್ಮ ಯೋಜನೆಗಳು ಪೂರ್ಣಗೊಳ್ಳುವುದು. ಈ ವಾರ ಪ್ರಯಾಣಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಈ ವಾರ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ವಾರದ ಕೊನೆಯಲ್ಲಿ ನಿಮ್ಮ ಜೀವನವನ್ನು ನೀವು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಶುಭ ದಿನಗಳು: 24, 28

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಈ ವಾರ ಪ್ರಾರಂಭವಾದ ಯಾವುದೇ ಹೊಸ ಯೋಜನೆಗಳು ದೀರ್ಘಕಾಲದವರೆಗೆ ಲಾಭವನ್ನು ತರಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿನ ಹಿರಿಯರ ಆಶೀರ್ವಾದದಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ವಾರ ಪ್ರಯಾಣದ ಮೂಲಕ ಯಶಸ್ಸನ್ನು ಸಾಧಿಸುವ ವಾರವಾಗಿದೆ. ಪ್ರಯಾಣದ ಬಗ್ಗೆ ಕೊಂಚ ಜಾಗರೂಕರಾಗಿರಿ.
ಶುಭ ದಿನಗಳು: 27, 27

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಈ ವಾರ ಶುಭದಾಯಕವಾಗಿದೆ. ಮತ್ತು ನೀವು ಮಾಡಿದ ಹೂಡಿಕೆಗಳು ಉತ್ತಮ ಲಾಭವನ್ನು ತರುತ್ತವೆ. ಕೆಲಸದ ಸ್ಥಳದಲ್ಲಿಯೂ ಪ್ರಗತಿ ಇರುತ್ತದೆ. ಈ ವಾರದ ಆರಂಭದಲ್ಲಿ ನಿಮ್ಮ ಯೋಜನೆಗೆ ಸಂಬಂಧಿಸಿದಂತೆ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಈ ವಾರ ಪ್ರವಾಸವನ್ನು ಮುಂದೂಡಿದರೆ ಉತ್ತಮ. ವಾರದ ಕೊನೆಯಲ್ಲಿ ನಿಮ್ಮ ಪ್ರೀತಿಪಾತ್ರರ ಬಗ್ಗೆ ನೀವು ತುಂಬಾ ಜವಾಬ್ದಾರರಾಗಿರುತ್ತೀರಿ.
ಶುಭ ದಿನಗಳು: 26, 27

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರ ವೃತ್ತಿ ಜೀವನದಲ್ಲಿ ಪ್ರಗತಿ ಇರುತ್ತದೆ. ಮಹಿಳೆಯ ಸಹಾಯದಿಂದ ನಿಮ್ಮ ಯೋಜನೆಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ನೀವು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ಆರ್ಥಿಕ ವಿಷಯಗಳಲ್ಲಿ ನೀಡಿದ ಭರವಸೆಗಳು ಈ ವಾರ ಈಡೇರುವುದಿಲ್ಲ. ಈ ವಾರ ನೀವು ಪ್ರಯಾಣವನ್ನು ಮಾಡದಿದ್ದರೆ ಉತ್ತಮ. ವಾರದ ಕೊನೆಯಲ್ಲಿ ನಿಮ್ಮ ಅಹಂಕಾರವೇ ನಿಮಗೆ ಮುಳವಾಗಬಹುದು. ಹೀಗಾಗಿ ಜಾಗರೂಕತೆ ವಹಿಸಿ.
ಶುಭ ದಿನಗಳು: 25, 28

ತುಲಾ ರಾಶಿ

ತುಲಾ ರಾಶಿಯ ಜನರು ಈ ವಾರ ತಮ್ಮ ಯೋಜನೆಯನ್ನು ನಿರ್ಧರಿಸಿದರೆ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಕುಟುಂಬದಲ್ಲಿ ಹೊಸ ಆರಂಭವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಯೋಜನೆಯನ್ನು ತರುತ್ತದೆ. ಈ ವಾರ ತಾಯಿಯ ಸಹಾಯದಿಂದ ಪ್ರಯಾಣವು ಯಶಸ್ವಿಯಾಗುತ್ತದೆ. ವಾರದ ಕೊನೆಯಲ್ಲಿ ಆಸ್ತಿ ಅಥವಾ ಯಾವುದೇ ಪಾಲುದಾರಿಕೆಯ ಕೆಲಸಕ್ಕೆ ಸಂಬಂಧಿಸಿದಂತೆ ಮನಸ್ಸಿನಲ್ಲಿ ಹೆಚ್ಚು ಉದ್ವಿಗ್ನತೆ ಇರುತ್ತದೆ.
ಶುಭ ದಿನಗಳು: 26, 27

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಇದು ಶುಭ ವಾರ. ಕೆಲಸದ ಸ್ಥಳದಲ್ಲಿ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ಈ ವಾರ ನಿರಾಳರಾಗಿ ಇರುತ್ತೀರಿ. ಆರ್ಥಿಕ ವಿಷಯಗಳಲ್ಲಿ ಗಮನಹರಿಸಬೇಕು ಆಗ ಮಾತ್ರ ಪ್ರಗತಿ ಇರುತ್ತದೆ. ಕುಟುಂಬದ ಸುಂದರ ಭವಿಷ್ಯಕ್ಕಾಗಿ ಯೋಜನೆಯನ್ನು ಹಾಕಿಕೊಂಡರೆ ಉತ್ತಮ. ಈ ವಾರ ಪ್ರಯಾಣದ ಮೂಲಕವೂ ಶುಭ ಸಂದೇಶಗಳು ಬರಲಿದ್ದು, ಪ್ರಯಾಣ ಯಶಸ್ವಿಯಾಗಲಿದೆ. ಈ ವಾರದ ಕೊನೆಯಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ.
ಶುಭ ದಿನಗಳು: 25, 27

ಧನು ರಾಶಿ

ಧನು ರಾಶಿಯವರ ಯೋಜನೆಗಳು ಈ ವಾರ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಕೆಲವು ಸ್ಥಗಿತಗೊಂಡ ಯೋಜನೆಗಳು ಸಹ ಪ್ರಾರಂಭವಾಗುತ್ತವೆ. ಹಾಗೂ ನೀವು ಯಶಸ್ಸು ಪಡೆಯೋದಕ್ಕೆ ಸಾಧ್ಯವಾಗುತ್ತದೆ. ನಿಮ್ಮ ಪ್ರೇಮ ಜೀವನವನ್ನು ಬಲಪಡಿಸಲು ನೀವು ಹಿರಿಯರ ಆಶೀರ್ವಾದವನ್ನು ಪಡೆಯುತ್ತೀರಿ. ಈ ವಾರ ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ದೃಢ ನಿರ್ಧಾರವನ್ನು ಮಾಡಿ ಆಗ ಮಾತ್ರ ನೀವು ಯಶಸ್ಸನ್ನು ಪಡೆಯುತ್ತೀರಿ. ಈ ವಾರದ ಪ್ರಯಾಣದ ಮೂಲಕ ಶುಭ ಸಂದೇಶಗಳು ಬರುತ್ತವೆ.
ಶುಭ ದಿನಗಳು: 25, 27

ಮಕರ ರಾಶಿ

ಮಕರ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಈ ವಾರ ಅನುಕೂಲಕರವಾಗಿದೆ. ಹಾಗೂ ವಿತ್ತೀಯ ಲಾಭದ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ. ನೀವು ತಂದೆಯಂತಹ ವ್ಯಕ್ತಿಯ ಸಹಾಯವನ್ನು ಪಡೆಯಬಹುದು ಮತ್ತು ಅವರ ಸಲಹೆಯೊಂದಿಗೆ ನಿಮ್ಮ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಕೌಟುಂಬಿಕ ಸಂತೋಷವನ್ನು ಪಡೆಯುತ್ತೀರಿ. ಉತ್ತಮ ಆರ್ಥಿಕ ಹಿಡಿತ ಹೊಂದಿರುವ ಮಹಿಳೆಯಿಂದ ನೀವು ಸಹಾಯ ಪಡೆಯಬಹುದು. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಕತಾಳೀಯವಾಗಬಹುದು. ಈ ವಾರ ಪ್ರವಾಸವನ್ನು ಮುಂದೂಡಿದರೆ ಉತ್ತಮ. ವಾರದ ಕೊನೆಯಲ್ಲಿ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ
ಶುಭ ದಿನಗಳು: 25, 26, 28

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ವಾರ ತುಂಬಾ ಆಹ್ಲಾದಕರವಾಗಿರುತ್ತದೆ. ನೀವು ಹೊಸ ಆರೋಗ್ಯ ಚಟುವಟಿಕೆಯತ್ತ ಆಕರ್ಷಿತರಾಗಬಹುದು. ಈ ಮೂಲಕ ಫಿಟ್‌ನೆಸ್ ಸಾಧಿಸಬಹುದು. ಕೆಲಸದ ಸ್ಥಳದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಆರ್ಥಿಕ ವಿಷಯಗಳಲ್ಲಿ ಖರ್ಚು ಅಧಿಕವಾಗಲಿದ್ದು, ಈ ಬಗ್ಗೆ ಗಮನಹರಿಸುವ ಅಗತ್ಯವಿದೆ. ಈ ವಾರ ಪ್ರಯಾಣವನ್ನು ತಪ್ಪಿಸುವುದು ಅಗತ್ಯ. ವಾರದ ಕೊನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯು ತುಂಬಿರುತ್ತದೆ.
ಶುಭ ದಿನಗಳು: 26, 28

ಮೀನ ರಾಶಿ

ಮೀನ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ. ಮತ್ತು ನಿಮ್ಮ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳುವುದು. ಆರ್ಥಿಕ ದೃಷ್ಟಿಕೋನದಿಂದ ಈ ಸಮಯವು ಉತ್ತಮವಾಗಿರುತ್ತದೆ. ನಿಮ್ಮ ಹೂಡಿಕೆಗಳನ್ನು ಸಂಪೂರ್ಣ ನಿಯಂತ್ರಣದಲ್ಲಿಡಲು ನಿಮಗೆ ಸಾಧ್ಯವಾಗುತ್ತದೆ. ಈ ವಾರ ಮಾಡಿದ ಪ್ರಯಾಣಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ. ಮತ್ತು ಸಿಹಿ ನೆನಪುಗಳನ್ನು ಸೃಷ್ಟಿಸುತ್ತವೆ. ಆರೋಗ್ಯದಲ್ಲಿ ಭಾವನಾತ್ಮಕ ಕಾರಣಗಳಿಂದ ಚಡಪಡಿಕೆ ಹೆಚ್ಚಾಗುತ್ತದೆ. ವಾರದ ಕೊನೆಯಲ್ಲಿ ಹಿರಿಯರ ಸಹಾಯದಿಂದ ನೀವು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುತ್ತೀರಿ.
ಶುಭ ದಿನಗಳು: 25, 27

English summary

Weekly Career Horoscope in Kannada 24 to 30 July 2023: These 5 Zodiac signs are benefited in Kannada

Weekly Horoscope for Career Growth 24 to 30 July 2023: Explore the weekly Career Astrology Prediction for Leo, Sagittarius, Pisces, Aries, Gemini and other zodiac signs in Kannada. Read more.
Story first published: Tuesday, July 25, 2023, 11:22 [IST]
X
Desktop Bottom Promotion