Weekly Career Horoscope 17-23 July 2023 : ಈ ವಾರ ನಿಮ್ಮ ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ?

ಈ ವಾರ ಗ್ರಹಗತಿಗಳ ಬದಲಾವಣೆಯಿಂದಾಗಿ ಮೇಷ, ವೃಷಭ ಸೇರಿದಂತೆ 5 ರಾಶಿಯವರಿಗೆ ಆರ್ಥಿಕ ಪ್ರಗತಿಯ ಸಾಧ್ಯತೆಗಳು ಕಂಡುಬರುತ್ತಿವೆ. ಇತ್ತ ಮಿಥುನ ಮತ್ತು ತುಲಾ ರಾಶಿಯವರು ಖರ್ಚಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗುತ್ತದೆ.

ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವೊಂದು ರಾಶಿಯವರಿಗೆ ಶುಭ ಫಲಗಳಿದ್ರೆ ಇನ್ನೂ ಕೆಲವು ರಾಶಿಯವರಿಗೆ ಅಶುಭ ಫಲಗಳಿದೆ. ಅಷ್ಟಕ್ಕು ಈ ವಾರ ದ್ವಾದಶ ರಾಶಿಗಳ ವೃತ್ತಿ ಜೀವನ ಹಾಗೂ ಆರ್ಥಿಕ ಭವಿಷ್ಯ ಹೇಗಿದೆ ಅನ್ನೋದನ್ನು ತಿಳಿಯೋಣ.

Weekly Career Horoscope in Kannada 17-23 July 2023: These 5 Zodiac signs are benefited in Kannada

ಮೇಷ ರಾಶಿ

ಈ ವಾರ ಮೇಷ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಪ್ರಗತಿಯ ಸಾಧ್ಯತೆಗಳಿದ್ದು ಧನ ಲಾಭವಾಗಲಿದೆ. ಈ ವಾರ ನೀವು ಕೈಗೊಂಡ ಪ್ರಯಾಣಗಳ ಮೂಲಕ ಯಶಸ್ವಿ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಕೌಟುಂಬಿಕ ವಿಷಯದ ಬಗ್ಗೆ ಮನಸ್ಸಿನಲ್ಲಿ ಸಂದೇಹ ಹಾಗೆಯೇ ಉಳಿಯುತ್ತದೆ. ಇದರಿಂದ ನಿಮ್ಮಲ್ಲಿ ಚಡಪಡಿಕೆ ಕೂಡ ಹೆಚ್ಚಾಗಬಹುದು. ಈ ವಾರದ ಕೊನೆಯಲ್ಲಿ ಯಾವುದೋ ವಿಚಾರದ ಬಗ್ಗೆ ತುಂಬಾನೇ ಕೊರಗುತ್ತೀರಿ. ಮತ್ತು ನಿಮ್ಮ ದುಃಖ ಮತ್ತಷ್ಟು ಹೆಚ್ಚಾಗಬಹುದು.
ಶುಭ ದಿನ : 18,20

ವೃಷಭ ರಾಶಿ

ಈ ವಾರ ಆರ್ಥಿಕ ದೃಷ್ಟಿಯಿಂದ ನೋಡೋದಾದ್ರೆ ವೃಷಭ ರಾಶಿಯವರಿಗೆ ಧನ ಪ್ರಾಪ್ತಿಯಾಗುವುದು. ಧನ ವೃದ್ಧಿಯಾಗುವ ಶುಭ ಸೂಚನೆಗಳು ದೊರೆಯುತ್ತದೆ. ಪಾಲುದಾರಿಕೆಯಲ್ಲಿ ಮಾಡಿದ ಹೂಡಿಕೆಗಳು ನಿಮಗೆ ಶುಭ ಫಲಿತಾಂಶಗಳನ್ನು ತರುತ್ತವೆ. ಆಸ್ತಿ ಮೂಲಕವೂ ನೀವು ಉತ್ತಮ ಲಾಭವನ್ನು ಪಡೆಯಬಹುದು. ಈ ವಾರ ನೀವು ನಿಮ್ಮ ಆಲೋಚನೆಗೆ ಅನುಗುಣವಾಗಿ ಲಾಭವನ್ನು ಪಡೆಯುತ್ತೀರಿ.

ನೀವು ನಿಮ್ಮ ಸಂಗಾತಿಯೊಂದಿಗೆ ಇರುವುದು ಉತ್ತಮ. ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಬಾಹ್ಯ ಹಸ್ತಕ್ಷೇಪವನ್ನು ತಪ್ಪಿಸಿ. ಕುಟುಂಬದಲ್ಲಿ ನೀವು ನೀಡಿದ್ದ ಭರವಸೆಗಳು ಕೂಡ ಈ ವಾರ ಈಡೇರುವ ಲಕ್ಷಣ ಕಾಣುತ್ತಿಲ್ಲ. ಈ ವಾರ ಪ್ರಯಾಣದಿಂದ ದೂರವಿರುವುದು ಉತ್ತಮ. ವಾರದ ಕೊನೆಯಲ್ಲಿ ಹೊಸ ಆಲೋಚನೆಯೊಂದಿಗೆ ಜೀವನದಲ್ಲಿ ಮುನ್ನಡೆದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
ಶುಭ ದಿನಗಳು: 17, 18, 21

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇದು ಲಾಭದಾಯಕ ವಾರ. ಈ ವಾರದ ಪ್ರಯಾಣವು ನಿಮಗೆ ಶುಭ ಫಲಿತಾಂಶಗಳನ್ನು ಹೊತ್ತು ತರುತ್ತದೆ. ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಹಣಕಾಸಿನ ವೆಚ್ಚಗಳಿಗೆ ಗಮನ ಕೊಡಲು ಮರೆಯದಿರಿ. ಅತಿಯಾಗಿ ಖರ್ಚು ಮಾಡೋದಕ್ಕೆ ಹೋಗಬೇಡಿ. ಕೆಲಸದ ಸ್ಥಳದಲ್ಲಿ ಹೊಸ ಯೋಜನೆಯು ನಿಮಗೆ ಅಸಮಾಧಾನ ಉಂಟುಮಾಡಬಹುದು. ವಾರದ ಕೊನೆಯಲ್ಲಿ ಪ್ರೀತಿಪಾತ್ರರೊಂದಿಗಿನ ಅಂತರವು ಹೆಚ್ಚಾಗಬಹುದು.
ಶುಭ ದಿನ : 18,19,20

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಈ ವಾರ ಲಾಭದಾಯಕವಾಗಿರುತ್ತದೆ. ಕರ್ಕಾಟಕ ರಾಶಿಯವರು ಕೆಲಸದ ಸ್ಥಳದಲ್ಲಿ ವಾರದ ಆರಂಭದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಮತ್ತು ನಿಮ್ಮ ಯೋಜನೆಗಳು ಮಂಗಳಕರವಾಗುತ್ತದೆ. ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತವೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಈ ವಾರ ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಅವರು ನಿಮ್ಮ ಜೀವನದಲ್ಲಿ ಬದಲಾವಣೆ ತರಬಲ್ಲರು. ಈ ವಾರದ ಕೊನೆಯಲ್ಲಿ ಮಾತುಕತೆಯ ಮೂಲಕ ವಿಷಯಗಳನ್ನು ಪರಿಹರಿಸುವುದು ನಿಮಗೆ ಅನುಕೂಲಕರವಾಗಿರುತ್ತದೆ.
ಶುಭ ದಿನಗಳು: 19, 20

ಸಿಂಹ ರಾಶಿ

ಸಿಂಹ ರಾಶಿಯವರ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು. ನಿಮ್ಮ ಯೋಜನೆಗಳೆಲ್ಲಾ ಯಶಸ್ವಿಯಾಗುತ್ತದೆ. ಈ ವಾರ ನೀವು ತುಂಬಾನೇ ಸಂತೋಷವಾಗಿ ಇರುತ್ತೀರಿ. ಪಾಲುದಾರಿಕೆ ಹೂಡಿಕೆಯಲ್ಲಿ ನಿಮಗೆ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಉತ್ತಮ. ಕೌಟುಂಬಿಕ ಸಂತೋಷವಿರುತ್ತದೆ. ಈ ವಾರ ಪ್ರಯಾಣದ ಮೂಲಕ ಶುಭ ಫಲಿತಾಂಶ ಸಿಗಲಿದೆ. ವಾರದ ಕೊನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಣುತ್ತೀರಿ.
ಶುಭ ದಿನಗಳು: 18, 19, 20

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ವಾರ ಹಣಕಾಸಿನ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ಮನಸ್ಸಿನಲ್ಲಿ ದುಃಖಗಳು ಕಾಡುತ್ತದೆ. ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡೋದಕ್ಕೆ ಆಗೋದಿಲ್ಲ. ಎಲ್ಲಿಂದಲೋ ಹಣ ಬರುವ ಸಾಧ್ಯತೆಯಿದೆ. ನಿಮ್ಮ ಖರ್ಚು ಹೆಚ್ಚಾಗಲಿದೆ. ಈ ವಾರದ ಕೊನೆಯಲ್ಲಿ ಭಾವನಾತ್ಮಕ ಸನ್ನಿವೇಶಗಳನ್ನು ಎದುರಿಸುತ್ತೀರಿ.
ಶುಭ ದಿನಗಳು: 18,20

ತುಲಾ ರಾಶಿ

ತುಲಾ ರಾಶಿಯವರಿಗೆ ಲಾಭದಾಯಕ ದಿನ. ಈ ವಾರ ಬುದ್ಧಿವಂತಿಕೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಕೆಲಸದ ಸ್ಥಳದಲ್ಲಿ ನೀವು ಈ ವಾರ ಆಕ್ಟೀವ್ ಆಗಿರುತ್ತೀರಿ ಮತ್ತು ಯಶಸ್ವಿಯಾಗುತ್ತೀರಿ. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯವನ್ನು ಪಡೆಯಲು ನಿಮ್ಮ ಕಡೆಯಿಂದ ನೀವು ಹೆಚ್ಚು ಶ್ರಮಿಸಬೇಕು. ಈ ವಾರ ಭಾವನಾತ್ಮಕ ಕಾರಣಗಳಿಂದಾಗಿ ಹಣಕಾಸಿನ ವೆಚ್ಚಗಳು ಸಹ ಹೆಚ್ಚಾಗಬಹುದು. ಈ ವಾರ ಪ್ರವಾಸವನ್ನು ಮುಂದೂಡಿದರೆ ಉತ್ತಮ. ವಾರದ ಕೊನೆಯಲ್ಲಿ ಚಿಂತಾಕ್ರಾಂತರಾಗುತ್ತೀರಿ.
ಅದೃಷ್ಟದ ದಿನ: 18

ವೃಶ್ಚಿಕ ರಾಶಿ

ಈ ವಾರ ವೃಶ್ಚಿಕ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಪ್ರಗತಿ ಇರುತ್ತದೆ. ಮತ್ತು ನಿಮ್ಮ ಯೋಜನೆಯ ಯಶಸ್ಸಿನ ಬಗ್ಗೆ ನೀವು ಸಂತೋಷಪಡುತ್ತೀರಿ. ಈ ವಾರ ಖರ್ಚುಗಳು ಅಧಿಕವಾಗಬಹುದು. ಮತ್ತು ಹೊಸ ಹೂಡಿಕೆಯಿಂದ ನಿಮ್ಮ ಮನಸ್ಸಿಗೆ ಬೇಸರವಾಗಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಅತಿಯಾದ ಒತ್ತಡದಿಂದಾಗಿ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು. ಹಣದ ವಿಷಯದಲ್ಲಿ ಬುದ್ಧಿವಂತಿಕೆಯಿಂದ ಖರ್ಚು ಮಾಡಿ ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಅದೃಷ್ಟದ ದಿನ: 19

ಧನು ರಾಶಿ

ಈ ವಾರ ಧನು ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಪ್ರಗತಿ ಕಂಡುಬರಲಿದೆ. ನಿಮಗೆ ಆರ್ಥಿಕ ಲಾಭವಾಗಲಿದೆ. ನಿಮ್ಮ ಯೋಜನೆಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಆರ್ಥಿಕ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳುವ ಅವಶ್ಯಕತೆಯಿದೆ ಆಗ ಮಾತ್ರ ಪ್ರಗತಿ ಇರುತ್ತದೆ. ಈ ವಾರ ಪ್ರಯಾಣವನ್ನು ತಪ್ಪಿಸುವುದು ಉತ್ತಮ. ವಾರದ ಕೊನೆಯಲ್ಲಿ ಪ್ರೀತಿ ಬಲಗೊಳ್ಳುತ್ತದೆ. ಮತ್ತು ನಿಮ್ಮ ಆಪ್ತರೊಂದಿಗೆ ನೀವು ಆಹ್ಲಾದಕರ ಸಮಯವನ್ನು ಕಳೆಯಲು ಬಯಸುತ್ತೀರಿ.
ಶುಭ ದಿನಗಳು: 18, 20

ಮಕರ ರಾಶಿ

ಈ ವಾರ ಮಕರ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಹಣದ ಲಾಭವಾಗಲಿದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಗೌರವವೂ ಹೆಚ್ಚಾಗುತ್ತದೆ. ಪ್ರಯಾಣದ ಮೂಲಕ ಯಶಸ್ಸು ಸಿಗಲಿದೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯು ಕಾಕತಾಳೀಯವಾಗಿ ಬರುತ್ತದೆ. ನೀವು ಕೆಲಸದ ಸ್ಥಳದಲ್ಲಿ ಸ್ವಲ್ಪ ನಿರ್ಬಂಧವನ್ನು ಅನುಭವಿಸುತ್ತೀರಿ. ಸಂಕಷ್ಟದಲ್ಲಿದ್ದಾಗ ನಿಮ್ಮ ಸಹಾಯಕ್ಕೆ ಯಾರಾದರೂ ಬರುತ್ತಾರೆ.
ಶುಭ ದಿನಗಳು: 19, 21

ಕುಂಭ ರಾಶಿ

ಕುಂಭ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು. ನೀವು ಹಾಕಿಕೊಂಡ ಯೋಜನೆಗಳು ಯಶಸ್ವಿಯಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯ ಇರುತ್ತದೆ. ಮತ್ತು ಈ ವಾರದ ಆರಂಭದಲ್ಲಿ ಕುಟುಂಬದ ವಿಷಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಈ ವಾರ ಹಣಕಾಸಿನ ವೆಚ್ಚಗಳು ಹೆಚ್ಚಾಗಬಹುದು. ಮತ್ತು ನೀವು ಈ ಬಗ್ಗೆ ಗಮನ ಹರಿಸಬೇಕು. ಈ ವಾರ ಪ್ರವಾಸವನ್ನು ಮುಂದೂಡಿದರೆ ಉತ್ತಮ. ವಾರದ ಕೊನೆಯಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಶುಭ ದಿನಗಳು: 18, 19

ಮೀನ ರಾಶಿ

ಈ ವಾರ ಮೀನ ರಾಶಿಯವರ ಕೆಲಸದ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಮತ್ತು ಈ ವಾರದಿಂದ ನಿಮ್ಮ ಕಾರ್ಯಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಈ ವಾರ ನಿಮಗೆ ಹಣಕಾಸಿನ ಲಾಭವಿದೆ. ಯಾವುದಾದರೂ ಹೂಡಿಕೆಯ ಬಗ್ಗೆ ಮನಸ್ಸು ಚಿಂತಿಸುತ್ತಿರಬಹುದು. ಈ ವಾರ ಪ್ರಯಾಣದ ಮೂಲಕ ಯಶಸ್ಸನ್ನು ಸಾಧಿಸಸುತ್ತೀರಿ. ಮತ್ತು ಹೊಸ ಬದಲಾವಣೆಗಳು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತವೆ. ನಿಮ್ಮ ಆಸೆ ಹಾಗೂ ಕನಸುಗಳು ಈಡೇರಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ವಾರದ ಕೊನೆಯಲ್ಲಿ ಹೊಸ ಆರಂಭವು ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಶಾಂತಿಯನ್ನು ತರುತ್ತದೆ.
ಶುಭ ದಿನಗಳು: 20, 21

English summary

Weekly Career Horoscope in Kannada 17-23 July 2023: These 5 Zodiac signs are benefited in Kannada

Weekly Horoscope for Career Growth 17-23 July 2023: Explore the weekly Career Astrology Prediction for Leo, Sagittarius, Pisces, Aries, Gemini and other zodiac signs in Kannada.
X
Desktop Bottom Promotion