Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
Weekly Career Horoscope 11 to 17 september 2023 : ಈ ವಾರ ನಿಮ್ಮ ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು
ಪ್ರತಿವಾರ ಗ್ರಹಗಳು ತಮ್ಮ ಪಥವನ್ನು ಬದಲಾಯಿಸುತ್ತಾ ಇರುತ್ತವೆ. ಇದರ ಪರಿಣಾಮ ನೇರವಾಗಿ ದ್ವಾದಶ ರಾಶಿಗಳ ಮೇಲೆ ಬೀರಲಿದೆ. ಅದ್ರಲ್ಲೂ ವೃತ್ತಿ ಭವಿಷ್ಯದ ಮೇಲೆ ಹೆಚ್ಚು ಪರಿಣಾಮ ಬೀರೋದನ್ನು ನಾವಿಲ್ಲಿ ಕಾಣಬಹುದು. ಕೆಲವೊಂದು ರಾಶಿಗಳಿಗೆ ಇದರಿಂದ ಒಳ್ಳೆಯದಾದ್ರೆ ಇನ್ನೂ ಕೆಲವು ರಾಶಿಯವರು ಕೆಟ್ಟ ಪರಿಣಾಮಗಳನ್ನು ಎದುರಿಸಲಿದ್ದಾರೆ. ಅಷ್ಟಕ್ಕೂ ಹನ್ನೆರಡು ರಾಶಿಗಳ ಮೇಲೆ ಆಗುವ ಪರಿಣಾಮ ಎಂತಹದ್ದು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಈ ವಾರ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ನಿಮಗೆ ಕೊಂಚ ಕಷ್ಟವಾಗುತ್ತದೆ. ನೀವು ಅಂದುಕೊಂಡಿರೋದು ನೆವೇರೋದು ಕೊಂಚ ಕಷ್ಟವೇ ಸರಿ. ಆದ್ದರಿಂದ ನಿರುತ್ಸಾಹಗೊಳ್ಳಬೇಡಿ ಮತ್ತು ನಿರಾಶೆಗೊಳ್ಳಬೇಡಿ, ಕಷ್ಟಪಟ್ಟು ಕೆಲಸ ಮಾಡಿ. ಮುಂಬರುವ ದಿನಗಳಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯಲಿದ್ದೀರಿ.
ವೃಷಭ ರಾಶಿ
ಈ ವಾರ ನೀವು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ನೀವು ಬಯಸಿದ ಕೆಲಸವನ್ನು ಪಡೆಯುತ್ತೀರಿ. ನೀವು ವಿದೇಶ ಪ್ರವಾಸ ಇತ್ಯಾದಿ ಮಾಡಬಹುದು. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸೋದಕ್ಕೆ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.
ಮಿಥುನ ರಾಶಿ
ವೃತ್ತಿಯ ದೃಷ್ಟಿಯಿಂದ ಈ ವಾರ ಮಹತ್ವದ್ದಾಗಿದೆ. ನೀವು ಬಯಸಿದ ವೃತ್ತಿಯನ್ನು ನೀವು ಪಡೆಯುತ್ತೀರಿ. ವಿಶೇಷ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ನೀವು ವಿಶೇಷ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ
ನಿಮ್ಮ ವೃತ್ತಿಜೀವನದಲ್ಲಿ ಈ ವಾರ ನೀವು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಅಪೇಕ್ಷಿತ ಯಶಸ್ಸನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ. ನಿರುತ್ಸಾಹಗೊಳ್ಳಬೇಡಿ, ನಿಮ್ಮ ಕೆಲಸಕ್ಕೆ ಸಮರ್ಪಿತರಾಗಿರಿ.
ಸಿಂಹ ರಾಶಿ
ಈ ವಾರ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ನೀವು ಮಾಡಿದ ಕಠಿಣ ಪರಿಶ್ರಮವು ಈ ವಾರ ನಿಮಗೆ ಉತ್ತಮ ಯಶಸ್ಸನ್ನು ತರುತ್ತದೆ. ವಿದೇಶಕ್ಕೆ ಹೋಗುವ ಸಾಧ್ಯತೆಯೂ ಇರಬಹುದು.
ಕನ್ಯಾ ರಾಶಿ
ಈ ವಾರ ವೃತ್ತಿಜೀವನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ವಾರ ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ನೀವು ಪಡೆಯಬಹುದು. ಅಲ್ಲದೆ ನೀವು ಬಯಸಿದ ಉದ್ಯೋಗದಲ್ಲೇ ಯಶಸ್ಸನ್ನು ಪಡೆಯುವುದರಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಕೆಲವು ಹೊಸ ಕೆಲಸದ ಯೋಜನೆಗಳು ನಿಮ್ಮ ಮನಸ್ಸಿಗೆ ಬರಬಹುದು.
ತುಲಾ ರಾಶಿ
ಈ ವಾರ ನೀವು ಕಠಿಣ ಪರಿಶ್ರಮ ಪಟ್ಟರೆ ಯಶಸ್ಸನ್ನು ಪಡೆಯೋದಕ್ಕೆ ಸಾಧ್ಯವಾಗುತ್ತದೆ. ಈ ವಾರ ನಿಮ್ಮ ಜೀವನದಲ್ಲಿ ನಿರಾಶೆಯಾಗುವಂತಹ ಘಟನೆಗಳು ಸಂಭವಿಸೋದಿಲ್ಲ. ನೀವು ಮಾಡಿರೋ ಪ್ರತಿಯೊಂದು ಕೆಲಸದಲ್ಲೂ ತಕ್ಕಮಟ್ಟಿಗೆ ಯಶಸ್ಸನ್ನು ಪಡೆಯೋದಕ್ಕೆ ಸಾಧ್ಯವಾಗುತ್ತದೆ.
ವೃಶ್ಚಿಕ ರಾಶಿ
ಈ ವಾರ ನೀವು ನಿಮ್ಮ ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾಗಬಹುದು.ಹಲವು ಆಯ್ಕೆಗಳು ನಿಮ್ಮ ಮುಂದೆ ಬರುತ್ತವೆ. ಇದರಿಂದಾಗಿ ನಿಮ್ಮ ಮನಸ್ಸು ವಿಚಲಿತವಾಗಬಹುದು. ನಿಮ್ಮ ಕೆಲಸದ ಸ್ಥಳವು ಬದಲಾಗಬಹುದು. ಆದರೆ ಈ ವಾರ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುವಲ್ಲಿ ಕೆಲವು ಅನುಮಾನಗಳಿವೆ. ವಿರೋಧಿಗಳು ನಿಮ್ಮ ಕೆಲಸವನ್ನು ಹಾಳು ಮಾಡಬಹುದು.
ಧನು ರಾಶಿ
ಈ ವಾರ ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತೇನೆಂದು ನಿರೀಕ್ಷೇಗಳನ್ನು ಇಟ್ಟುಕೊಳ್ಳಬೇಡಿ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಕಡೆ ಇರುವುದಿಲ್ಲ. ಆದರೆ ವಾರದ ಮಧ್ಯದಲ್ಲಿ ವಿಶೇಷ ವ್ಯಕ್ತಿಯ ಸಂಪರ್ಕವು ನಿಮಗೆ ಒಳ್ಳೆಯದನ್ನು ಮಾಡಬಹುದು.
ಮಕರ ರಾಶಿ
ಈ ವಾರ ನಿಮ್ಮ ವೃತ್ತಿಜೀವನದ ಬಗ್ಗೆ ನೀವು ಗೊಂದಲಕ್ಕೊಳಗಾಗಬಹುದು. ನಿಮಗೆ ಅನೇಕ ಆಯ್ಕೆಗಳನ್ನು ನೀಡಲಾಗುವುದು. ಇದರಿಂದಾಗಿ ನಿಮ್ಮ ಮನಸ್ಸು ವಿಚಲಿತವಾಗಬಹುದು. ನಿಮ್ಮ ಕೆಲಸದ ಸ್ಥಳ ಬದಲಾಗಬಹುದು. ಆದರೆ ಈ ವಾರ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವುದು ಅನುಮಾನ. ಎದುರಾಳಿ ವರ್ಗವು ನಿಮ್ಮ ಕೆಲಸವನ್ನು ಹಾಳುಮಾಡಬಹುದು.
ಕುಂಭ ರಾಶಿ
ವೃತ್ತಿಯ ದೃಷ್ಟಿಯಿಂದ ಈ ವಾರ ಮಹತ್ವದ್ದಾಗಿದೆ. ನೀವು ಬಯಸಿದ ವೃತ್ತಿಯನ್ನು ನೀವು ಪಡೆಯುತ್ತೀರಿ. ವಿಶೇಷ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ನೀವು ವಿಶೇಷ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ.
ಮೀನ ರಾಶಿ
ಈ ವಾರ ನೀವು ನಿಮ್ಮ ವೃತ್ತಿಜೀವನಕ್ಕಾಗಿ ತಜ್ಞರನ್ನು ಭೇಟಿ ಮಾಡಬಹುದು. ನಿಮ್ಮ ವೃತ್ತಿಜೀವನದಲ್ಲಿ ನೀವು ಕೆಲವು ಗೊಂದಲಗಳನ್ನು ಅನುಭವಿಸುತ್ತೀರಿ. ಇದರಿಂದ ಯಾವ ಕಾರ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಉಂಟಾಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ವಿಶೇಷ ವ್ಯಕ್ತಿಯಿಂದ ಸಲಹೆಯನ್ನು ಸ್ವೀಕರಿಸಿ. ಮತ್ತು ಕೊಂಚ ಶ್ರಮಪಟ್ಟ ಮೇಲೆ ನೀವು ಯಶಸ್ಸನ್ನು ಸಾಧಿಸುವಿರಿ.



Click it and Unblock the Notifications











