Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೆಟ್ಟದ ಕಡೆ ಮೇಲ್ಮುಖವಾಗಿ ಹರಿಯುತ್ತಿದೆ ನೀರು..! ಅಚ್ಚರಿಯ ವಿಡಿಯೋ
ನೀರು ಎಂಬುದು ಗಾತ್ರ, ವಾಸನೆ, ಬಣ್ಣವಿಲ್ಲದ ದ್ರವ ವಸ್ತು ಎಂದು ನಾವು ಓದಿದ್ದೇವೆ. ಇದು ಸರ್ವಕಾಲಿಕ ಸತ್ಯವೂ ಸಹ ಹೌದು, ನಾವು ಅದಕ್ಕೆ ಏನನ್ನೂ ಬೆರೆಸದೆ ಇದ್ದರೆ ಅದಕ್ಕೆ ಬಣ್ಣ, ವಾಸನೆ ಬರಲು ಸಾಧ್ಯವಿಲ್ಲ, ಅದು ಯಾವ ವಸ್ತುವಿನಲ್ಲಿ ಇರುತ್ತೋ ಅದೇ ಅದರ ಗಾತ್ರ ರೂಪ. ಜೊತೆಗೆ ನೀರು ಯಾವಾಗಲು ಮೇಲಿನಿಂದ ಕೆಳಗೆ ಹರಿಯುತ್ತದೆ ಎಂಬುದು ಸಹ ಅಷ್ಟೇ ಸತ್ಯ.
ಅಂದರೆ ಇಳಿಜಾರು ಕಡೆಗೆ ನೀರು ಸಾಗುತ್ತದೆ, ಎಂದಿಗೂ ನೀರು ಇಳಿಜಾರಿನಿಂದ ಎತ್ತರಕ್ಕೆ ಹರಿಯುವುದಿಲ್ಲ ಎಂದು ನಾವು ನೋಡಿದ್ದೇವೆ, ಓದಿದ್ದೇವೆ ಕೂಡ. ಆದರೆ ಇಲ್ಲೊಂದು ಕಡೆ ಈ ಎಲ್ಲಾ ನಿಯಮಗಳು ತಲೆಕೆಳಗಾಗಿದೆ. ಹೌದು ನೀರು ಇಳಿಜಾರಿನಿಂದ ಎತ್ತರ ಪ್ರದೇಶಕ್ಕೆ ಹರಿಯುತ್ತದೆ. ನೀವು ಅಚ್ಚರಿಗೆ ಒಳಗಾಗಬಹುದು, ಇಲ್ಲಿ ವಿಜ್ಞಾನವೇ ತಲೆಕೆಳಗಾಗುವ ಅಂಶವಿದೆ.

ಆದರೆ ಈ ಪ್ರಕ್ರಿಯೆಗೂ ಅದೇ ವಿಜ್ಞಾನ ಕಾರಣವಾಗಿದೆ. ನೀರು ಇಳಿಜಾರಿನಿಂದ ಎತ್ತರಕ್ಕೆ ಹರಿಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇಂತಹ ವಿಚಿತ್ರ ವಿದ್ಯಮಾನ ಕಂಡು ಜನ ನಿಬ್ಬೆರಗಾಗಿದ್ದಾರೆ. ನದಿಗಳು ಪರ್ವತ ಪ್ರದೇಶಗಳಲ್ಲಿ ಹುಟ್ಟುತ್ತವೆ, ಹಾಗೆ ಇಳಿಜಾರಿನತ್ತ ಸಾಗುತ್ತವೆ. ಇದು ಎಲ್ಲಾ ಕಡೆಗಳಲ್ಲೂ ಇರುವ ಸಾಮಾನ್ಯ ಸತ್ಯ ಸಂಗತಿ, ಇದನ್ನು ನಾವು ಸಹ ಬದಲಿಸಲು ಸಾಧ್ಯವಿಲ್ಲ.
ಆದರೆ ಇಲ್ಲೊಂದು ಕಡೆ ನೀರು ಇಳಿಜಾರಿನಿಂದ ಎತ್ತರ ಪ್ರದೇಶಕ್ಕೆ ಹರಿದು ಹೋಗುತ್ತಿರುವುದನ್ನು ನಾವು ನೋಡಬಹುದು. ಇದು ಛತ್ತೀಸ್‌ಗಢದ ಸಣ್ಣ ಹಳ್ಳಿಯೊಂದರಲ್ಲಿ ಈ ರೀತಿ ವಿಚಿತ್ರ ವಿದ್ಯಮಾನ ನಡೆಯುತ್ತದೆ. ಕಂಟೆಂಟ್ ಕ್ರಿಯೇಟರ್ ರಜತ್ ಜೇಥಿ ಅವರು ಮೈನ್‌ಪರ್ ಹಳ್ಳಿಯಲ್ಲಿರುವ ಈ ವಿಚಿತ್ರ ವಿದ್ಯಮಾನವನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ನೀರು ಸಣ್ಣದಾಗಿ ಹರಿಯುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ ಅದು ಕೆಳಮುಖವಾಗಿ ಹರಿಯುತ್ತಿದೆಯೇ ಅಥವಾ ಮೇಲ್ಮುಖವಾಗಿ ಹರಿಯುತ್ತಿದೆಯೇ ಎಂಬುದನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾಗುತ್ತಿದೆ. ಈ ವೇಳೆ ನೀರಿನ ಮೇಲೆ ಗಿಡದ ಎಲೆ ಹಾಕಿದಾಗ ಎಲೆ ನೀರಿನ ಜೊತೆ ಮೇಲ್ಮುಖವಾಗಿ ಚಲಿಸುವುದು ಕಾಣಬಹುದು. ಅಚ್ಚರಿ ಎಂದರೆ ನೀರು ಇಳಿಜಾರಿನಿಂದ ಬೆಟ್ಟದ ಕಡೆ ಸಾಗುತ್ತಿದೆ.
ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 6 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಆದರೆ ನಿಯಮಗಳ ಪ್ರಕಾರ ನೀರು ಎಂದಿಗೂ ಇಳಿಜಾರಿನಿಂದ ಮೇಲ್ಮುಖವಾಗಿಯೇ ಹರಿಯಬೇಕಿದ್ದು, ಈ ರೀತಿಯ ವಿದ್ಯಮಾನಕ್ಕೆ ಕಾರಣವೇನು ಎಂಬುದು ಹಲವರ ಪ್ರಶ್ನೆಯಾಗಿದೆ.
ನೀರು ನಿಜವಾಗಲೂ ಮೇಲ್ಮುಖವಾಗಿ ಚಲಿಸುತ್ತಾ?
ನೀವು ನಂಬದಿದ್ದರೂ ಈ ವಿದ್ಯಮಾನ ಸರಿಯಾಗಿದೆ. ಕೆಲವು ಭಾಗದಲ್ಲಿ ಗುರುತ್ವಾಕರ್ಷಣ ಬಲದ ಪ್ರಕಾರವಾಗಿ ನೀರು ಮೇಲ್ಮುಖನಾಗಿ ಚಲಿಸುತ್ತದೆ. ಇದಕ್ಕೆ ಹಲವು ವೈಜ್ಞಾನಿಕ ಕಾರಣಗಳು ಸಹ ಇವೆ. ಈ ರೀತಿ ನೀರು ಮೇಲ್ಮುಖವಾಗಿ ಚಲಿಸುವುದು ಹಲವು ಕಡೆಗಳಲ್ಲಿ ಕಂಡು ಬರುತ್ತದೆ.
ಆದರೆ ಇಲ್ಲಿ ನೀಡಿರುವ ವಿಡಿಯೋದಲ್ಲಿ ನೀರು ಮೇಲ್ಮುಖವಾಗಿ ಹರಿಯುತ್ತಿದ್ದರೂ ಇದೊಂದು ಆಪ್ಟಿಕಲ್ ಇಲ್ಯೂಷನ್ ಎಂದು ಹಲವರು ವಾದಿಸುತ್ತಿದ್ದಾರೆ. ಏಕೆಂದರೆ ಬೆಟ್ಟದ ಮೇಲೆ ನಿಂತು ಅದರ ಕೆಳಮುಖವಾಗಿ ನೀರು ಹರಿಯುತ್ತಿದ್ದರು ಒಮ್ಮೆ ನಿಮಗೆ ಮೇಲ್ಮುಖವಾಗಿ ಹರಿಯುತ್ತಿದೆ ಎಂದು ಭಾಸವಾಗುತ್ತದೆ ಎಂದು ಹಲವರು ವಾದಿಸುತ್ತಿದ್ದಾರೆ. ಆದರೆ ಇಲ್ಲಿ ನೀರು ಬೆಟ್ಟದ ಕಡೆ ಹರಿಯುತ್ತಿರುವುದನ್ನು ನಾವು ನೋಡಬಹುದು. ಇನ್ನು ಇಲ್ಲಿ ದುರ್ಬಲ ಗುರುತ್ವಾಕರ್ಷಣಾ ಬಲದ ಕಾರಣದಿಂದಾಗಿ ನೀರು ಎತ್ತರಕ್ಕೆ ಹರಿಯುತ್ತದೆ ಎಂಬ ವಾದವನ್ನು ಜನ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ನಿಮ್ಮಲ್ಲಿ ಯಾವ ಪ್ರಶ್ನೆ ಮೂಡಿರಬಹುದು.



Click it and Unblock the Notifications
