Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಮರದ ಬುಡದಿಂದ ಚಿಮ್ಮುತ್ತಿದೆ ನೀರು..! ಇದು ಹೇಗೆ ಸಾಧ್ಯ..!
ನಿಸರ್ಗವು ಎಷ್ಟು ವಿಚಿತ್ರ, ವಿಸ್ಮಯಗಳ ತನ್ನಲ್ಲಿಟ್ಟುಕೊಂಡಿದೆ ಎಂಬುದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಕೆಲವೊಂದು ಭಾರಿ ನಾವು ಅಂದುಕೊಂಡಿದ್ದಕ್ಕಿಂತಲು ಈ ನಿಸರ್ಗ ವಿಚಿತ್ರ ಎಂಬುದನ್ನು ತೋರಿಸಿಕೊಡುತ್ತೆ. ಅದರಲ್ಲೂ ಅರಣ್ಯದಲ್ಲಿ ನಡೆಯುವ ಅದೇಷ್ಟೋ ವಿದ್ಯಮಾನಗಳಿಗೆ ಉತ್ತರ ಹುಡುಕಲು ನಿಂತರೆ ಅಲ್ಲಿ ಬರಿ ಪ್ರಶ್ನೆಗಳು ಮಾತ್ರ ಉಳಿದುಬಿಡುತ್ತವೆ.
ಈಗ ಇಲ್ಲೊಂದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮರದಿಂದ ನೀರು ಹರಿಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಹೌದು ಮರವೊಂದರಿಂದ ಧಾರಾಕಾರವಾಗಿ ನೀರು ಹರಿಯುತ್ತಿದೆ. ದಟ್ಟ ಕಾಡಿನಲ್ಲಿ ಈ ವಿಡಿಯೋ ಚಿತ್ರಿಸಲಾಗಿದೆ. ಒಂದು ಮರದ ಬುಡದಿಂದ ನೀರು ಹರಿಯುತ್ತಿರುವುದನ್ನು ನಾವು ನೋಡಬಹುದು.

ವಿಡಿಯೋದಲ್ಲಿ ನೀರು ಮರದ ಬುಡದಿಂದ ಚಿಮ್ಮುತ್ತಿರುವುದನ್ನು ಕಾಣಬಹುದು. ಮರವನ್ನು ಗರಗಸದಿಂದ ಕತ್ತರಿಸಿರುವ ಗೆರೆ ಸಹ ಮರದಲ್ಲಿ ಕಾಣಿಸುತ್ತಿದೆ. ಮರ ಕತ್ತರಿಸುವಾಗ ಮರದಿಂದ ನೀರು ಹೊರಚಿಮ್ಮಿರುವುದು ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಅಸಲಿಗೆ ಹೀಗೆ ಮರದಿಂದ ಇಷ್ಟು ಪ್ರಮಾಣದಲ್ಲಿ ನೀರು ಹೊರಬರಲು ಕಾರಣವೇನು ಎಂಬ ಕುರಿತು ಚರ್ಚೆ ಹುಟ್ಟುಹಾಕಿದೆ.
ಮರದಿಂದ ಸುಮಾರು 20 ರಿಂದ 30 ಲೀಟರ್‌ನಷ್ಟು ನೀರು ಹೊರಗೆ ಚಿಮ್ಮುತ್ತಿರುವುದು ಕಾಣಬಹುದು. ಮರದಲ್ಲಿ ಅಷ್ಟೊಂದು ಪ್ರಮಾಣದ ನೀರು ಸೇರಿದ್ದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಆದರೆ ಮಳೆ ಕಾಡಿನಲ್ಲಿ ಈ ರೀತಿ ಮರಗಳಿಂದ ನೀರು ಬರುವುದು ಸಹ ಇದೆ ಎಂಬ ವಾದವೂ ಇದೆ. ಮಳೆ ಬಿದ್ದಾಗ ಈ ಜಾತಿಯ ಮರಗಳು ನೀರನ್ನು ಹಿಡಿದಿಟ್ಟುಕೊಂಡಿರುತ್ತವೆ. ಅವು ಅಗತ್ಯವಿದ್ದಾಗ ಈ ನೀರನ್ನು ಬಳಸುತ್ತವೆ ಎಂಬ ಚರ್ಚೆಯೂ ಇದೆ.
ಆದರೆ ಇದು ಹೇಗೆ ಸಾಧ್ಯ ಎಂಬುದು ಬಹುದೊಡ್ಡ ಪ್ರಶ್ನೆ. ಇದಕ್ಕೂ ಮೊದಲು ನಾವು ಆಂಧ್ರ ಪ್ರದೇಶದ ಅರಣ್ಯ ಒಂದರಲ್ಲಿ ಇದೇ ರೀತಿ ಮರದಿಂದ ನೀರು ಚಿಮ್ಮುತ್ತಿರುವ ಘಟನೆ ನಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಲ್ಲಿಯೂ ಅರಣ್ಯ ಸಿಬ್ಬಂದಿ ಮರವನ್ನು ಕಡಿದಾಗ ಅದರಿಂದ ನೀರು ಹೊರ ಚಿಮ್ಮಿತ್ತು.
ಆಂಧ್ರ ಪ್ರದೇಶದ ಪಾಪಿಕೊಂಡಲು ರಾಷ್ಟ್ರೀಯ ಉದ್ಯಾನವನದಲ್ಲಿ, ವಿಶೇಷವಾಗಿ ಕಿಂಟುಕೂರು ಅರಣ್ಯದಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಇಂಡಿಯನ್ ಲಾರೆನ್ ಅಥವಾ ನಲ್ಲ ಮಡ್ಡಿ ಎಂದೂ ಕರೆಯಲ್ಪಡುವ ಟರ್ಮಿನಾಲಿಯಾ ಎಲಿಪ್ಟಿಕಾ ಎಂಬ ಜಾತಿಯ ಮರದಿಂದ ಈ ನೀರು ಚಿಮ್ಮುತ್ತಿತ್ತು, ಈ ವಿಡಿಯೋದಲ್ಲಿಯೂ ಸಹ ಇದೇ ಜಾತಿಯ ಮರ ಎಂದು ಕಾಣಿಸುತ್ತಿದೆ. ಈ ಮರಗಳು ಹೆಚ್ಚಾಗಿ ದಕ್ಷಿಣ ಏಷ್ಯಾ ಭಾಗದಲ್ಲಿ ಕಂಡುಬರುತ್ತವೆ. ಅಂದರೆ ನೇಪಾಳ, ಬಾಂಗ್ಲಾದೇಶ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳದಲ್ಲೂ ಈ ಜಾತಿ ಮರಗಳನ್ನು ನಾವು ಕಾಣಬಹುದು. ಈ ಮರಗಳ ಮೇಲ್ಭಾಗದಲ್ಲಿ ಟೊಳ್ಳಾದ ಆಕೃತಿಯಿಂದಾಗಿ ಅವು ಮಳೆ ಬಂದಾಗ ನೀರನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳಲು ನೆರವಾಗಿತ್ತದೆ. ಇದು ಇಡೀ ಪರಿಸರ ವ್ಯವಸ್ಥೆಯ ಜೀವರಾಶಿಗಳ ಉಳುವಿಗೆ ಸಹಕಾರಿಯಾಗಿವೆ.
ಈ ವಿಡಿಯೋದಲ್ಲಿಯೂ ಸಹ ಇದೇ ರೀತಿ ಮರದಿಂದ ನೀರು ಬರುತ್ತಿರುವುದು ನೋಡುಗರಲ್ಲಿ ಹಾಗೂ ಪರಿಸರ ಪ್ರೇಮಿಗಳ ಆಕರ್ಷಣೆಗೆ ಕಾರಣವಾವಿದೆ, ಇಂತಹ ಜಾತಿ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಕಾಡಿನ ಹಾಗೂ ಇಡೀ ಪರಿಸರದ ಸಮತೋಲನಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಮರದ ಬುಡದಿಂದ ಇಷ್ಟು ನೀರು ಇರುವುದು ನೋಡಿ ಆ ಮರ ಕಡಿದಿರುವುದು ಏಕೆ ಎಂಬ ಆತಂಕ ಸಹ ವ್ಯಕ್ತಪಡಿಸಿದ್ದಾರೆ. ಮಾನವರ ದುರಾಸೆಗೆ ಸಿಕ್ಕು ಇಡೀ ಅರಣ್ಯ ಸಂಪತ್ತು ಈಗ ಅಪಾಯದಲ್ಲಿದೆ. ಅದರಲ್ಲೂ ಇಂತಹ ವಿಭಿನ್ನ ಜಾತಿಯ ಮರಗಳನ್ನು ರಕ್ಷಿಸುವ ಗುರಿ ನಮ್ಮ ಮೇಲಿರಬೇಕು ಎಂದು ಸಲಹೆ ನೀಡಿದ್ದಾರೆ.



Click it and Unblock the Notifications