Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಿಮ್ಮ ದುಡಿಮೆ ಎಷ್ಟೇ ಆಗಿರಲಿ, ನೀವೂ ದುಡ್ಡು ಮಾಡಬೇಕೆ? ಈ 10 ಮಿಸ್ಟೇಕ್ಸ್ ಮಾಡಬಾರದಷ್ಟೇ!
ಕಾಯಿಲೆ ಬಂದಾಗ ಗುಣವಾಗಬೇಕೆಂದರೆ ಔಷಧಿ ತೆಗಿಯಲೇಬೇಕು ಅಲ್ವಾ? ಅದೇ ಆರ್ಥಿಕ ಸಂಕಷ್ಟದಿಂದ ಹೊರ ಬರಬೇಕೆಂದರೆ ನಾವು ಮಾಡುತ್ತಿರುವ ಕೆಲವೊಂದು ತಪ್ಪು ತಡೆಗಟ್ಟಲೇಬೇಕು, ಇಲ್ಲದಿದ್ದರೆ ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲಲ್ಲ, ಈ ಟಿಪ್ಸ್ ಕಲಿತರೆ ಎಷ್ಟು ಕಡಿಮೆ ದುಡಿದರೂ ಅದರಲ್ಲಿಯೂ ಒಂದು ಪಾಲು ಉಳಿಸಲು ಸಾಧ್ಯವಾಗುವುದು ನೋಡಿ:

ಹಣದ ಸಮಸ್ಯೆ ಉಂಟಾಗಲು ನಾವ ಮಾಡುತ್ತಿರುವ ತಪ್ಪು 1
ಈಗ ಖರೀದಿಸುವ ಮತ್ತೆ ಹಣ ಕೊಟ್ಟರಾಯ್ತು
ಈ ಅಭ್ಯಾಸ ತುಂಬಾ ಜನರಲ್ಲಿ ಇರುತ್ತದೆ, EMIನಲ್ಲಿ ಕೊಟ್ಟರಾಯ್ತು ಅಥವಾ ದುಡ್ಡು ಇದ್ದರೆ ಕೊಟ್ಟರಾಯ್ತು ಎಂದು ವಸ್ತುಗಳನ್ನು ಖರೀದಿಸುವುದು ಖಂಡಿತ ಒಳ್ಳೆಯ ಅಭ್ಯಾಸವಿಲ್ಲ. ಮತ್ತೆ ಕೊಟ್ಟರಾಯ್ತು ಎಂದು ನಾವು ವಸ್ತುಗಳನ್ನು ಖರೀದಿಸಿದರೆ ಅದು ಮನಸ್ಸಿನ ನೆಮ್ಮದು ಕಸಿಯುತ್ತದೆ, ಅಲ್ಲದೆ ಹೀಗೆ ಖರೀದಿಸುವ ವಸ್ತುಗಳಿಗೆ ನಾವು ಬಡ್ಡಿ ಕೂಡ ಕೊಡುತ್ತೇವೆ, ಹಾಗಾಗಿ ಉಳಿಯುವ ಅಲ್ಪಸ್ವಲ್ಪ ಹಣ ಬಡ್ಡಿಗೆ ಖರ್ಚಾಗುವುದು.
ತಪ್ಪು 2
ಹೊರಗಡೆಯಿಂದ ಹೆಚ್ಚಾಗಿ ತಿನ್ನುವುದು
ಅಪರೂಪಕ್ಕೆ ಹೊರಗಡೆ ತಿಂದರೆ ಖುಷಿ, ಅದೇ ಪ್ರತಿ ಊಟಕ್ಕೆ ಹೋಟೆಲ್ ಅವಲಂಬಿಸಿದರೆ ಹಣ ಉಳಿತಾಯ ಮಾಡುವುದು ಕಷ್ಟವಾಗುವುದು. ಮನೆಯಲ್ಲಿ ಊಟಕ್ಕೆ 100 ರುಪಾಯಿ ಖರ್ಚಾದರೆ ಅದೇ ಊಟ ಹೊರಗಡೆ ತಿನ್ನಲು ಹೋದರೆ 200-300 ರುಪಾಯಿ ಖರ್ಚು ಬೀಳುತ್ತೆ, ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಖರ್ಚು ಬೀಳಬಹುದು.
ತಪ್ಪು 3
ಸಾಲ ಮಾಡಿ ಐಷರಾಮಿ ವಸ್ತುಗಳನ್ನು ಖರೀದಿಸುವುದು
ಸಾಲ ಮಾಡಿ ಕಾರು ಖರೀದಿಸುವುದು, ಸಾಲ ಮಾಡಿ ಐಷಾರಾಮಿ ಮನೆಕಟ್ಟುವುದು ಇವೆಲ್ಲಾ ನಮ್ಮನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ. ನಮ್ಮ ಆದಾಯ ಎಷ್ಟು, ಪ್ರತಿ ತಿಂಗಳು ಎಷ್ಟು ಹಣ ಖರ್ಚು ಮಾಡಬಹುದು ಎಂದೆಲ್ಲಾ ಲೆಕ್ಕಾಚಾರ ಮಾಡಿ ಸಾಲ ಮಾಡಬೇಕು. ಎಷ್ಟೋ ಜನ ಐಷರಾಮಿ ಮನೆ ಕಟ್ಟಿಸುತ್ತಾರೆ, ಕೊನೆಗೆ ಸಾಲ ತೀರಿಸಲು ಸಾಧ್ಯವಾಗದೆ ಮನೆ ಮಾರಬೇಕಾಗುತ್ತದೆ, ಹೀಗಾದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತೇವೆ, ಹಾಗಾಗಿ ಐಷಾರಾಮಿ ವಸ್ತುಗಳಿಗಳಾಗಿ ಸಾಲ ಮಾಡಬೇಡಿ.
ತಪ್ಪು 4
ಕ್ರೆಡಿಟ್ ಕಾರ್ಡ್ ಲಿಮಿಟ್ ಎಷ್ಟಿದೆಯೋ ಅಷ್ಟೂ ಬಳಸುವುದು
ನಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ 50,000 ಇದ್ದರೆ ಅದರಲ್ಲಿ ಒಂದು 5000 ರುಪಾಯಿಯಷ್ಟು ಬಳಸಿದರೆ ಒಕೆ, ಆದರೆ 50, 000 ಲಿಮಿಟ್ ಎಷ್ಟಿದೆಯೋ ಅಷ್ಟೂ ಕ್ರೆಡಿಟ್ ಬಳಸಿದರೆ ಆ ಸಾಲದಿಂದ ಹೊರಬರುವುದು ತುಂಬಾನೇ ಕಷ್ಟ.
ತಪ್ಪು 5
ಒಂದೇ ಆದಾಯದ ಮೂಲ
ಇದು ತುಂಬಾನೇ ಅಪಾಯಕಾರಿ, ಆ ಮೂಲ ನಿಂತು ಹೋದರೆ ಅಥವಾ ದುಡಿಯುತ್ತಿರುವ ವ್ಕಕ್ತಿಗೆ ಏನಾದರು ಆದರೆ ಆರೋಗ್ಯ ಕೈ ಕೊಟ್ಟರೆ ಮನೆಯ ಪರಿಸ್ಥಿತಿ ದುಸ್ಥರವಾಗುವುದು.
ತಪ್ಪು 6
ಎಮರ್ಜೆನ್ಸಿ ಫಂಡ್ ಇಡದೆ ಇರುವುದು
ಎಮರ್ಜೆನ್ಸಿ ಫಂಡ್ ಪ್ರತಿಯೊಬ್ಬರು ಇಡಲೇಬೇಕು. ನಾವು ದಿನದಲ್ಲಿ 1000 ರುಪಾಯಿ ದುಡಿಯುತ್ತೇವೆ ಅಂದರ ಅದರಲ್ಲಿ 50-10 ರುಪಾಯಿ ಆದರೂ ಎಮರ್ಜೆನ್ಸಿ ಫಂಡ್ ಆಗಿ ಇಡಲೇಬೇಕು.
ತಪ್ಪು 7
ಬೇಗನೆ ಶ್ರೀಮಂತರಾಗಲು ಜೂಜು ಆಡುವುದು
ಜೂಜು ಆಡಿದರೆ ಬೇಗನೆ ಶ್ರೀಮಂತರಾಗಬಹುದು ಎಂದು ಜೂಜು ಆಡುವುದು, ಜೂಜು ಆಡಿದಾಗ ಮೊದ ಮೊದಲು ಹಣ ಬಂದಾಗ ಆಸೆಯಾಗುತ್ತದೆ, ಆದರೆ ನಮ್ಮ ಕೈಯಲ್ಲಿರುವ ಹಣ ಖಾಲಿಯಾಗಿ ಸಂಪೂರ್ಣ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತೇವೆ.
ತಪ್ಪು 8
ಬೇರೆಯವರ ಸಲಹೆ ಕೇಳಿ ದೊಡ್ಡ ಹೂಡಿಕೆ ಮಾಡುವುದು
ಸಲಹೆ ನೂರು ಜನರು ಕೊಡುತ್ತಾರೆ, ಆದರೆ ಯಾವುದು ತೆಗೆದುಕೊಳ್ಳಬೇಕು, ಯಾವುದು ನಿರ್ಲಕ್ಷ್ಯ ಮಾಡಬೇಕು ಎಂಬುವುದು ನಮಗೆ ತಿಳಿದಿರಬೇಕು, ಇಲ್ಲದಿದ್ದರೆ ಹಣ ಕಳೆದುಕೊಳ್ಳುತ್ತೇವೆ.
ತಪ್ಪು 9
ಬಜೆಟ್ ಪ್ಲ್ಯಾನ್ ಇಲ್ಲದಿರುವುದು
ಬಜೆಟ್ ಪ್ಲ್ಯಾನ್ ತುಂಬಾನೇ ಮುಖ್ಯ, ಬಜೆಟ್ ಪ್ಲ್ಯಾನ್ ಸರಿಯಾಗಿ ಇಲ್ಲದಿದ್ದರೆ ಹಣದ ಖರ್ಚು ಹೆಚ್ಚಾಗುವುದು, ಸಾಲ ಮಾಡಬೇಕಾಗುತ್ತದೆ.
ತಪ್ಪು 10
ಹಣವನ್ನು ಹೂಡಿಕೆ ಮಾಡದೆ ಇರುವುದು
ನಮ್ಮ ಕೈಯಲ್ಲಿ ಹಣವಿದೆ, ಅದನ್ನು ಮನೆಯಲ್ಲಿಯೇ ಇಡುವುದರಿಂದ ಏನೂ ಪ್ರಯೋಜನವಿಲ್ಲ. ಹಣ ಹೆಚ್ಚು ಬರಬೇಕೆಂದರೆ ನೀವು ಹೂಡಿಕೆ ಮಾಡಬೇಕಾಗುತ್ತದೆ, ಹೂಡಿಕೆಯಿಂದ ಲಾಭ ದೊರೆಯಲಿದೆ



Click it and Unblock the Notifications
