Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
'ವೈಮೊರೊಜ್ಕಾ' ವಿಶ್ವದ ಅತ್ಯಂತ ಕಷ್ಟಕರ ಕೆಲಸ..! ಹೀಗಂದ್ರೆ ಏನು..? ಇದ್ಯಾವ ಕೆಲಸ ಗೊತ್ತಾ?
ವಿಶ್ವದಲ್ಲಿ ಅದೆಷ್ಟು ಕಠಿಣ ಕೆಲಸಗಳ ಮಾಡುವ ಮಂದಿ ಇದ್ದಾರೆ ಅಂದ್ರೆ ನೀವು ಊಹಿಸಲು ಸಾಧ್ಯವಿಲ್ಲ. ಕೆಲವು ಕೆಲಸಗಳಂತೂ ಜೀವಕ್ಕೆ ಅಪಾಯ ತರುವಂತವಾಗಿರುತ್ತವೆ. ಇನ್ನು ಅತ್ಯಂತ ಕಷ್ಟದ ಕೆಲಸ ಯಾವುದು ಅಂದ್ರೆ ಥಟ್ ಅಂತ ನಾವು ಪೊಲೀಸರು, ಸೈನಿಕರು ಇಲ್ಲವೆ ರೈತರು ಅಂದು ಬಿಡುತ್ತೇವೆ. ಇದು ಕೂಡ ತಪ್ಪೇನಲ್ಲ ಬಿಡಿ. ಏಕೆಂದರೆ ಸೈನಿಕರ ಕೆಲಸ ಸಹ ಅಷ್ಟೇ ಕಷ್ಟಕರವಾಗಿರುತ್ತದೆ.
ಆದರೆ ಇದೆಲ್ಲದರಕ್ಕಿಂತಲೂ ಕಷ್ಟಕರವಾದ ಕೆಲಸವೊಂದಿದೆಯಂತೆ. ಇದು ವಿಶ್ವದ ಅತ್ಯಂತ ಕಷ್ಟಕರ ಕೆಲಸ ಎನಿಸಿಕೊಂಡಿದೆ. ಹಾಗಾದರೆ ಆ ಕೆಲಸ ಯಾವುದು? ಆ ಕೆಲಸಗಾರರು ಅನುಭವಿಸುವ ಕಷ್ಟ ಯಾವ ತರಹದ್ದು ಎಂಬ ಮಾಹಿತಿ ಇಲ್ಲಿದೆ ನೋಡಿ.
ರಷ್ಯಾದ ದೂರದ ಪೂರ್ವದಲ್ಲಿ ಹಿಮದಿಂದ ಆವೃತವಾದ ಬಂದರಿನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಕೆಲಸವು ವಿಶ್ವದ ಅತ್ಯಂತ ಕಠಿಣ ಕೆಲಸ ಎಂದು ಕರೆಯಲಾಗಿದೆ. ಇದನ್ನು 'ವೈಮೊರೊಜ್ಕಾ' ಎಂದು ಕರೆಯಲಾಗಿದೆ. ಅಂದರೆ ಫ್ರೀಜಿಂಗ್ ಔಟ್ ಎಂಬ ಅರ್ಥ ನೀಡುತ್ತದೆ.

ಏಕೆಂದರೆ ಬರೋಬ್ಬರಿ ಮೈನಸ್ 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಲ್ಲಿ ಕಾರ್ಮಿಕರು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಚಳಿಗಾಲದಲ್ಲಿ ಇಲ್ಲಿ ಹಿಮ ಎಷ್ಟು ಬೀಳುತ್ತದೆ ಎಂದರೆ ಇಡೀ ಮನೆ ಒಂದೇ ರಾತ್ರಿಯಲ್ಲಿ ಹಿಮದಿಂದ ಮುಚ್ಚಿಹೋಗುತ್ತದೆ. ಇನ್ನು ಕಾರ್ಮಿಕರ ಪಾಡು ನೀವೆ ಯೋಚಿಸಿ.
ಕೊರೆಯುವ ಚಳಿಯಲ್ಲಿ ಕಾರ್ಮಿಕರು ಹಡಗುಗಳ ಮೇಲೆ ಬಿದ್ದಿರುವ ಹಿಮವನ್ನು ತೆರವುಗೊಳಿಸಬೇಕು. ಜೊತೆಗೆ ಹಡಗಿನ ಕೆಳಗೆ ಬಿದ್ದಿರುವ ಹಿಮವನ್ನು ಕತ್ತರಿಸಿ ತೆಗೆಯಬೇಕಾಗುತ್ತದೆ. ಹಿಮವು ಅಷ್ಟು ಗಟ್ಟಿಯಾಗುತ್ತದೆ. ಈ ಕೆಲಸ ಅತ್ಯಂತ ಕಷ್ಟಕರ ಮತ್ತು ಜೀವಕ್ಕೂ ಅಪಾಯ ತರುವಂತದ್ದಾಗಿದೆ.
ಹಡಗಿನ ಕೆಳಭಾಗದಲ್ಲಿ ಹಿಮವನ್ನು ಕತ್ತರಿಸಿ ತೆಗೆದು ಹಡಗಿನ ದುರಸ್ಥಿ ಮಾಡಬೇಕಾಗುತ್ತದೆ. ಬೇಸಿಗೆಯಲ್ಲಿ ಉಕ್ಕಿಹರಿಯುವ ಲೆನಾ ನದಿಯು ಚಳಿಗಾಲದಲ್ಲಿ ಅಕ್ಷರಶಃ ಹಿಮವಾಗುತ್ತದೆ.
ಹಿಮದಲ್ಲಿ ನಿರಂತರ ಕೆಲಸ ಮಾಡುವುದರಿಂದ ಅವರ ದೇಹದ ಭಾಗಗಳು ಫ್ರೀಜ್ ಆಗಲು ಆರಂಭವಾಗುತ್ತವೆ. ಇದರಿಂದ ಅವರು ಕೆಲಸ ಮಾಡಲಾಗದೆ ಕುಸಿಯುತ್ತಾರೆ. ಜೊತೆಗೆ ಹಿಮ ರಕ್ತವನ್ನು ಫ್ರೀಜ್ ಮಾಡುವುದರಿಂದ ದೇಹದ ಭಾಗ ನಿಷ್ಕ್ರಿಯವಾಗುತ್ತದೆ. ಅಂತಹ ಸಮಯದಲ್ಲಿ ಕಾರ್ಮಿಕರು ಕೆಲಸ ಮಾಡಲಾಗದೆ ಅಲ್ಲಿಂದ ಮೇಲೆ ಬಂದು ಕೆಲವು ಸಮಯ ಬೆಂಕಿಯ ಮುಂದೆ ವಿಶ್ರಾಂತಿ ಪಡೆಯುತ್ತಾರೆ.
ರಷ್ಯಾದ ಈ ಯಕೂಟಿಯಾ ಭಾಗವೂ ವರ್ಷದ ಬಹುಪಾಲು ದಿನಗಳಲ್ಲಿ ಹಿಮದಿಂದಲೇ ಕೂಡಿರುತ್ತದೆ. ಇಲ್ಲಿನ ಜನರು ಕೂಡ ಹಿಮ ಮತ್ತು ತೀವ್ರ ರೀತಿಯ ಚಳಿಗೆ ಒಗ್ಗಿಕೊಂಡಿದ್ದಾರೆ. ಆದರೆ ಈ ಬಂದರುಗಳಲ್ಲಿ ಕೆಲಸ ಮಾಡುವವರು ಮಾತ್ರ ಎಂತಹ ವಿಷಮ ಸ್ಥಿತಿಯಲ್ಲೂ ಅಲ್ಲಿ ಕೆಲಸ ಮಾಡಲು ಮುಂದಾಗುತ್ತಾರೆ. ಅದು ಅವರಿಗೆ ಅನಿವಾರ್ಯವೂ ಆಗಿದೆ. ಹೀಗಾಗಿ ಇದನ್ನು ವಿಶ್ವದ ಅತ್ಯಂತ ಕಷ್ಟಕರವಾದ ಕೆಲಸ ಎಂದು ಹೆಸರಿಸಲಾಗಿದೆ.
ಭಾರತದಲ್ಲೂ ಯಕೂಟಿಯಾ ರೀತಿಯ ಪರಿಸ್ಥಿತಿ ಇಲ್ಲದಿದ್ದರೂ ಸಿಯಾಚಿನ್ ಪ್ರದೇಶ ಅತ್ಯಂತ ಶೀತ ಪ್ರದೇಶ ಎಂದು ಪರಿಗಣಿಸಲಾಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರು ಮೈಕೊರೆಯುವ ಮೈನಸ್ ಡಿಗ್ರಿ ಚಳಿಯನ್ನು ಅನುಭವಿಸುತ್ತಾರೆ. ಭಾರತದಲ್ಲೇ ಕೆಲಸ ನಿರ್ವಹಿಸಲು ಅತ್ಯಂತ ಕಷ್ಟಕರವಾದ ಪ್ರದೇಶ ಯಾವುದಾದರು ಇದ್ದರೆ ಅದು ಸಿಯಾಚಿನ್ ಆಗಿದೆ. ಅಲ್ಲಿ ಪ್ರತಿ ವರ್ಷ ಚಳಿಗಾಲದಲ್ಲಿ ತಾಪಮಾನ ಮೈನಸ್ ಡಿಗ್ರಿಗೆ ಕುಸಿಯುತ್ತದೆ. ಅಲ್ಲದೆ ವಿಪರೀತ ಹಿಮಗಾಳಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಇಂತಹ ಸ್ಥಿತಿಯಲ್ಲೂ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ.



Click it and Unblock the Notifications

