ಜುಲೈ ತಿಂಗಳು ವೃಶ್ಚಿಕ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ

ಗ್ರಹಗತಿಗಳ ಆಧಾರದ ಮೇಲೆ ಜುಲೈ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ವೃಶ್ಚಿಕ ರಾಶಿಯವರಿಗೆ ಜೂನ್‌ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ವ್ಯಾಪಾರ, ಆರೋಗ್ಯ, ಕುಟುಂಬ ಹಾಗೂ ಪ್ರೀತಿಯ ಭವಿಷ್ಯದ ಬಗ್ಗೆ ಹೇಳಲಾಗಿದೆ. ಅಷ್ಟಕ್ಕು ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರ ಬಾಳಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.

ವೃಶ್ಚಿಕ ರಾಶಿಯವರ ಆರನೇ ಮನೆಯಲ್ಲಿ ರಾಹು ಇರುವುದರಿಂದ ಈ ತಿಂಗಳು ಈ ರಾಶಿಯವರು ತಮ್ಮ ಪ್ರಯತ್ನಗಳನ್ನು ಬಲವಾದ ಇಚ್ಛಾಶಕ್ತಿ ಮತ್ತು ನಿರ್ಣಯದಿಂದ ಮುಂದುವರಿಸುತ್ತಾರೆ. ಇದರೊಂದಿಗೆ ಆರನೇ ಮನೆಯಲ್ಲಿ ರಾಹು ಇರೋದ್ರಿಂದ ವೃಶ್ಚಿಕ ರಾಶಿಯವರಿಗೆ ಆರೋಗ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಇನ್ನೂ ನಿಮ್ಮ ಹನ್ನೆರಡನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯಿಂದ ಗೌರವದ ಜೊತೆಗೆ ಮನಸ್ಸಿನಲ್ಲಿ ಉದ್ವೇಗ ಮತ್ತು ಗೊಂದಲ ಹೆಚ್ಚಾಗುತ್ತದೆ.

Vrischika Rashi (Scorpio) July 2023 Monthly Horoscope in Kannada

ವೃತ್ತಿ ಜೀವನ

ಜುಲೈ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಈ ತಿಂಗಳು ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿರುತ್ತಾನೆ. ಈ ಕಾರಣದಿಂದಾಗಿ ನೀವು ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ವಿಳಂಬ ಮಾಡಬೇಕಾಗುತ್ತದೆ. ಕೆಲಸದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ನಿಮ್ಮ ಕೆಲಸದ ಕಡೆಗೆ ನೀವು ಗಮನ ಕೊಡದಿದ್ದರೆ ಕೆಲಸದಲ್ಲಿ ತಪ್ಪುಗಳು ಆಗುವ ಸಾಧ್ಯತೆಯಿದೆ.

ಈ ತಿಂಗಳು ಆರನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು ನಿಮ್ಮ ವೃತ್ತಿ ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು. ಉದಾಹರಣೆಗೆ ನೀವು ಈ ತಿಂಗಳು ಕೆಲಸದಲ್ಲಿ ಬದಲಾವಣೆ ಅಥವಾ ಸಂತೃಪ್ತಿಯ ಕೊರತೆಯನ್ನು ಅನುಭವಿಸಬಹುದು. ಈ ರಾಶಿಯ ಕೆಲವರು ಉದ್ಯೋಗಕ್ಕೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಿಗೆ ಹೋಗಬಹುದು. ಇನ್ನೂ ಏಕಾಗ್ರತೆಯ ಕೊರತೆಯು ನಿಮ್ಮನ್ನು ಕಾಡುತ್ತದೆ.

ಆರ್ಥಿಕ ಜೀವನ

ಜುಲೈ ತಿಂಗಳು ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಅಂದರೆ ಲಾಭದ ಜೊತೆಗೆ ನಿಮ್ಮ ವೆಚ್ಚಗಳು ಸಹ ಹೆಚ್ಚಾಗಬಹುದು. ಈ ತಿಂಗಳು ಗುರು ನಿಮ್ಮ ಆರನೇ ಮನೆಯಲ್ಲಿದ್ದಾನೆ. ಹೀಗಾಗಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಕಷ್ಟವಾಗಬಹುದು. ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀವು ಸಾಲವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

ಹನ್ನೆರಡನೇ ಮನೆಯಲ್ಲಿ ಕೇತು ಮತ್ತು ಆರನೇ ಮನೆಯಲ್ಲಿ ಗುರು ಇರುವುದರಿಂದ ನಿಮಗೆ ಕೆಲಸದ ವಿಚಾರದಲ್ಲಿ ತೊಂದರೆಗಳು ಮತ್ತಷ್ಟು ಹೆಚ್ಚಾಗಬಹುದು. ಗ್ರಹಗಳ ಸ್ಥಾನ ಉತ್ತಮ ಸ್ಥಿತಿಯಲ್ಲಿ ಇಲ್ಲದ ಕಾರಣ ಸಾಲವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅದೇ ಸಮಯದಲ್ಲಿ ಶನಿಯು ನಾಲ್ಕನೇ ಮನೆಯಲ್ಲಿ ಪ್ರತಿಕೂಲ ಸ್ಥಾನದಲ್ಲಿರುತ್ತಾನೆ. ಈ ಕಾರಣದಿಂದಾಗಿ ಕುಟುಂಬದಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಶನಿಯ ಈ ಸ್ಥಾನವು ಈ ರಾಶಿಯವರಿಗೆ ಸೌಕರ್ಯಗಳ ಕೊರತೆಯನ್ನು ಎದುರಿಸುವಂತೆ ಮಾಡುತ್ತಾನೆ.

ಇನ್ನೂ ಆರನೇ ಮನೆಯಲ್ಲಿ ರಾಹು ಇರೋದ್ರಿಂದ ಕೊಂಚ ಸಮಾಧಾನ ನೀಡುತ್ತದೆ. ವೃಶ್ಚಿಕ ರಾಶಿಯವರು ಪೂರ್ವಜರ ಆಸ್ತಿ ಮೂಲಕ ಹಣದ ಪ್ರಯೋಜನಗಳನ್ನು ಪಡೆಯಬಹುದು. ಆದರೆ ನೀವು ಗಳಿಸಿದ ಹಣವು ನಿಮ್ಮ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಒಟ್ಟಿನಲ್ಲಿ ದುಡ್ಡಿನ ವಿಚಾರದಲ್ಲಿ ಈ ತಿಂಗಳು ಹಲವಾರು ಅಡೆ-ತಡೆಗಳನ್ನು ಅನುಭವಿಸಬೇಕಾಗುತ್ತದೆ.

ವ್ಯಾಪಾರ ಜೀವನ

ವ್ಯಾಪಾರಸ್ಥರು ಈ ತಿಂಗಳು ಸರಾಸರಿ ಫಲಿತಾಂಶಗಳನ್ನು ಪಡೆಯಬಹುದು. ಏಕೆಂದರೆ ನಾಲ್ಕನೇ ಮನೆಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಈ ತಿಂಗಳು ವ್ಯಾಪಾರ ಕ್ಷೇತ್ರದಲ್ಲಿ ಹೊಸ ಒಪ್ಪಂದಗಳು ಮತ್ತು ಪಾಲುದಾರಿಕೆಗಳನ್ನು ಮಾಡೋದಕ್ಕೆ ಹೋಗಬೇಡಿ. ಇನ್ನೂ ವೃಶ್ಚಿಕ ರಾಶಿಯವರು ಹೊರಗಿನ ಮೂಲದಿಂದ ವ್ಯಾಪಾರ ಮಾಡಬಹುದು. ಅದು ನಿಮಗೆ ಪ್ರಯೋಜನಕಾರಿಯಾಗಿದೆ.

ಈ ತಿಂಗಳು ವ್ಯಾಪಾರ ಮಾಡುವವರಿಗೆ ಉತ್ತಮವಾಗಿಲ್ಲ. ಈ ತಿಂಗಳು ಗುರು ಗ್ರಹವು ನಿಮ್ಮ ಆರನೇ ಮನೆಯಲ್ಲಿ ಕುಳಿತಿದೆ. ಈ ಕಾರಣದಿಂದಾಗಿ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿಲ್ಲ. ಇದರೊಂದಿಗೆ ಹನ್ನೆರಡನೇ ಮನೆಯಲ್ಲಿ ಕೇತು ಇರುವುದರಿಂದ ಈ ರಾಶಿಯವರು ವ್ಯಾಪಾರ ಕ್ಷೇತ್ರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಆರೋಗ್ಯ

ಈ ತಿಂಗಳು ವೃಶ್ಚಿಕ ರಾಶಿಯವರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗುರು ಆರನೇ ಮತ್ತು ಎರಡನೇ ಮನೆಯ ಅಧಿಪತಿಯಾಗಿ ಐದನೇ ಮನೆಯಲ್ಲಿ ಇರುತ್ತಾನೆ. ಶನಿಯು ಈಗಾಗಲೇ ನಾಲ್ಕನೇ ಮನೆಯಲ್ಲಿದ್ದಾನೆ. ಇನ್ನೂ ನಿಮ್ಮ ತಾಯಿಯ ಆರೋಗ್ಯದ ವಿಚಾರವಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.ಆದರೆ ನಿಮ್ಮ ರಾಶಿಯ ಅಧಿಪತಿಯಾಗಿ ಮಂಗಳನು ಹತ್ತನೇ ಮನೆಯಲ್ಲಿ ಅನುಕೂಲಕರ ಸ್ಥಾನದಲ್ಲಿರೋದ್ರಿಂದ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ರಾಶಿಯ ಅಧಿಪತಿ ಕೇತು ಹನ್ನೆರಡನೇ ಮನೆಯಲ್ಲಿ ಪ್ರತಿಕೂಲ ಸ್ಥಾನದಲ್ಲಿದ್ದಾನೆ. ಇದರಿಂದಾಗಿ ಅಸುರಕ್ಷಿತ ಭಾವನೆ ನಿಮ್ಮನ್ನು ಆಗಾಗ್ಗೆ ಕಾಡುತ್ತದೆ. ಹನ್ನೆರಡನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ತಲೆನೋವು, ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ನಿದ್ರೆಯ ಕೊರತೆಯನ್ನು ಅನುಭವಿಸುತ್ತೀರಿ.

ಪ್ರೀತಿ ಮತ್ತು ವೈವಾಹಿಕ ಜೀವನ

ಈ ತಿಂಗಳು ನೀವು ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿದ್ದಾನೆ. ಹೀಗಾಗಿ ಈ ಸಮಯವು ಪ್ರೀತಿಯಲ್ಲಿ ಯಾವುದೇ ವಿಶೇಷ ಅವಕಾಶಗಳನ್ನು ಒದಗಿಸುವುದಿಲ್ಲ. ಇನ್ನೂ ನಾಲ್ಕನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ಸಂಬಂಧದಲ್ಲಿನ ಪ್ರೀತಿ ಮತ್ತು ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಪರಸ್ಪರ ಸಾಮರಸ್ಯದ ಕೊರತೆ ಉಂಟಾಗಬಹುದು.

ಹನ್ನೆರಡನೇ ಮನೆಯಲ್ಲಿ ಕೇತು ಇರುವಿಕೆಯು ಇಬ್ಬರ ನಡುವಿನ ಪ್ರೀತಿ ಕಡಿಮೆಯಾಗುವಂತೆ ಮಾಡಬಹುದು. ಲಾಭದಾಯಕ ಗ್ರಹ ಗುರು ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿ ಆರನೇ ಮನೆಯಲ್ಲಿದ್ದಾನೆ. ಈ ಕಾರಣದಿಂದಾಗಿ ಪ್ರೀತಿಯಲ್ಲಿ ಇರುವವರು ಸರಾಸರಿ ಫಲಿತಾಂಶಗಳನ್ನು ಪಡೆಯಬಹುದು.

6 ನೇ ಮನೆಯಲ್ಲಿ ಗುರುವಿನ ಪ್ರತಿಕೂಲ ಸ್ಥಾನದಿಂದಾಗಿ ವೃಶ್ಚಿಕ ರಾಶಿಯವರು ಪ್ರೀತಿಯಲ್ಲಿ ಆಕರ್ಷಣೆಯನ್ನು ಕಳೆದುಕೊಳ್ಳಬಹುದು. ಮತ್ತು ಸಂಬಂಧದಲ್ಲಿ ಅಭದ್ರತೆಯ ಭಾವನೆಯನ್ನು ಅನುಭವಿಸಬಹುದು. ನೀವು ಈ ತಿಂಗಳು ನೀವು ಮದುವೆಯ ಬಗ್ಗೆ ಯೋಚಿಸುತ್ತಿದ್ದರೆ ಅದನ್ನು ಸ್ವಲ್ಪ ಮುಂದೂಡಿದರೆ ಒಳ್ಳೆಯದು. ಯಾಕಂದ್ರೆ ಈ ತಿಂಗಳು ನಿಮಗೆ ಕಂಕಣ ಭಾಗ್ಯದ ಸಾಧ್ಯತೆ ಕಡಿಮೆ.

ವಿವಾಹಿತರಿಗೂ ಕೂಡ ಈ ತಿಂಗಳು ಯಾವುದೇ ವಿಶೇಷ ಫಲಿತಾಂಶಗಳನ್ನು ನೀಡುವುದಿಲ್ಲ. ಏಕೆಂದರೆ ಗುರುವು ನಿಮ್ಮ ಆರನೇ ಮನೆಯಲ್ಲಿ ಇರುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷದ ಕೊರತೆ ಇರುತ್ತದೆ. ಹೀಗಾಗಿ ನೀವು ಸಂಬಂಧದಲ್ಲಿ ನಿಮ್ಮ ಸಂಯಮವನ್ನು ಕಾಪಾಡಿಕೊಳ್ಳಬೇಕು.

ಪರಿಹಾರ

  • ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಿ.
  • "ಓಂ ಕೇತ್ವೇ ನಮಃ" ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ.
  • "ಓಂ ಮಂದಾಯ ನಮಃ" ಮಂತ್ರವನ್ನು ಪ್ರತಿದಿನ 41 ಬಾರಿ ಜಪಿಸಿ.

English summary

Vrischika Rashi (Scorpio) July 2023 Monthly Horoscope in Kannada

Here Jully Month Vrischika Rashi (Scorpio) People career, financial, Health, love-family horoscope Read on.
X
Desktop Bottom Promotion