Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನೀವೆಲ್ಲೂ ನೋಡಿರದ ಬಾಳೆಎಲೆ ಹಲ್ವಾ ಎಂಬ ಎಡವಟ್ಟು ರೆಸಿಪಿ..!
ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಸಿಹಿತಿಂಡಿಯನ್ನು ಮಾಡುವಾಗ ಹಲ್ವಾವನ್ನು ತಯಾರಿಸಲಾಗುವುದು. ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾ, ಬಾದಾಮಿ ಹಲ್ವಾ ಹೀಗೆ ಹತ್ತಾರು ಬಗೆಯ ಹಲ್ವಾ ತಯಾರಿಸಲಾಗುತ್ತದೆ. ಹಬ್ಬದಲ್ಲಂತು ವಿವಿಧ ರೀತಿಯ ಹಲ್ವಾ ಮಾಡಲಾಗುತ್ತೆ. ಹಲ್ವಾದ ರುಚಿ ಮಾರುಹೋಗದವರೇ ಇಲ್ಲ.
ಹಲ್ವಾದಲ್ಲಿ ಹತ್ತಾರು ವಿಧಗಳಿವೆ ಅನ್ನೋದು ತಿಳಿದಿದೆ. ಆದ್ರೆ ಇತ್ತೀಚಿಗೆ ಆನ್‌ಲೈನ್‌ನಲ್ಲಿ ಹೊಸ ಹೊಸ ರೆಸಿಪಿಗಳ ಟ್ರೈ ಮಾಡುವುದನ್ನು ನಾವು ನೋಡಬಹುದು.

ಆದ್ರೆ ಇಲ್ಲೊಬ್ಬ ಹೊಸ ರೆಸಿಪಿ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಹಲ್ವಾ ರೆಸಿಪಿಯಲ್ಲಿ ಹೊಸ ರೀತಿ ಮಾಡಲು ಹೋಗಿ ಆತ ಯಾರು ಮಾಡದ ರೆಸಿಪಿ ಮಾಡಿದ್ದಾನೆ. ಹೌದು ಯುವಕನೊಬ್ಬ ಬಾಳೆ ಎಲೆಯಲ್ಲಿ ಹಲ್ವಾ ಮಾಡಲು ಹೋಗಿ ಯಡವಟ್ಟು ಮಾಡಿದ್ದಾನೆ.
ನೀವು ಎಂದಾದರೂ ಬಾಳೆ ಎಲೆಯ ಹಲ್ವಾವನ್ನು ನೋಡಿದ್ದೀರಾ? ಇತ್ತೀಚೆಗೆ, ಒಬ್ಬ ವ್ಲಾಗರ್ ಈ ಅಸಾಮಾನ್ಯ ಖಾದ್ಯವನ್ನು ತಯಾರಿಸಲು ಪ್ರಯತ್ನಿಸಿದ್ದಾನೆ. great_indian_asmr ಅವರ Instagram ನಲ್ಲಿ ಅವರು ಹೊಸ ರೆಸಿಪಿ ಹಂಚಿಕೊಂಡಿದ್ದಾರೆ. ಆದರೆ ಕೊನೆಯಲ್ಲಿ ಇದರ ರುಚಿ ನೊಡಿ ಅವರೇ ದಂಗಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋ ಆರಂಭದಲ್ಲಿ ಆತ ಬಾಳೆ ಎಲೆಗಳನ್ನು ಸ್ವಚ್ಛಗೊಳಿಸುವುದನ್ನು ನೋಡಬಹುದು. ಸುಮಾರು ಐದಾರು ಬಾಳೆ ಎಲೆಗಳನ್ನು ಸ್ವಚ್ಛಗೊಳಿಸಿದ ಆತ ಅದನ್ನು ಚೆನ್ನಾಗಿ ಸಿಗಿದು ಮಿಕ್ಸಿಗೆ ಹಾಕಿದ್ದಾನೆ. ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡು ಅದನ್ನು ಒಂದು ಬಟ್ಟೆಗೆ ಹಾಕಿ ಒಂದು ಪಾತ್ರೆಗೆ ಚೆನ್ನಾಗಿ ಹಿಂಡಿಕೊಳ್ಳುತ್ತಾನೆ.
ಬಳಿಕ ಆತ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಬಾಳೆ ಎಲೆಯಿಂದ ತೆಗೆದ ಹಸಿರು ರಸವನ್ನು ಸೇರಿಸುತ್ತಾನೆ. ಬಳಿಕ ಸಕ್ಕರೆ, ಕಾರ್ನ್ ಫ್ಲೋರ್ ಮತ್ತು ಡ್ರೈ ಫ್ರೂಟ್ಸ್‌ಗಳನ್ನು ಸಹ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಾನೆ. ಇದು ದಪ್ಪವಾಗುವರರೆಗೂ ಮಿಕ್ಸ್ ಮಾಡುತ್ತಾನೆ. ಇಷ್ಟು ಮಾಡಿದ ಬಳಿಕ ಬಾಳೆ ಎಲೆ ಹಲ್ವಾ ರೆಡಿಯಾಗಿರುತ್ತದೆ.
ಆದ್ರೆ ಈ ಹಲ್ವಾ ಅನ್ನು ಆತ ರುಚಿ ನೋಡಿದ್ದಾನೆ. ಆದ್ರೆ ಇದು ಅಷ್ಟೊಂದು ರುಚಿಸುವುದಿಲ್ಲ ಎಂದು ಆತನ ಎಕ್ಸ್‌ಪ್ರಶನ್ ನೋಡಿದರೇ ತಿಳಿಯುತ್ತೆ. ಈ ವಿಡಿಯೋ ಈವರೆಗೆ ಬರೋಬ್ಬರಿ 50 ಮಿಲಿಯನ್ ವೀಕ್ಷಣೆ ಕಂಡಿದೆ. ಬಾಳೆ ಎಲೆ ಹಲ್ವಾ ಕಂಡು ಜನ ನಿಬ್ಬೆರಗಾಗಿದ್ದಾರೆ. ಆದ್ರೆ ಬಾಳೆ ಎಲೆಯಿಂದ ಆತ ಹಲ್ವಾ ಮಾಡಲು ಹೋಗಿದ್ದು ಏಕೆ ಎಂಬುದೇ ಪ್ರಶ್ನೆಯಾಗಿದೆ.
ನೆಟ್ಟಿಗರು ಹೇಳೋದೇನು.?
ಈ ಯುವಕನ ವಿಚಿತ್ರ ರೆಸಿಪಿ ಕಂಡ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ರೀತಿ ಬಾಳೆ ಎಲೆಯಲ್ಲಿ ಹಲ್ವಾ ಮಾಡುವ ಬದಲು ಅದೇ ಸಮಯದಲ್ಲಿ ಅಷ್ಟೇ ಪದಾರ್ಥ ಬಳಸಿ ಬೇರೆ ವಸ್ತುವಿನಲ್ಲಿ ಹಲ್ವಾ ಮಾಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ್ರೆ ಈ ರೀತಿ ಹೊಸ ರೆಸಿಪಿ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ನೆಟ್ಟಿಗರ ಸಲಹೆಯಾಗಿದೆ. ಯಾರಾದರು ಹೊಸ ರೆಸಿಪಿ ಮಾಡುವ ಮುನ್ನ ಎಚ್ಚರಿಕೆ ವಹಿಸೋದು ಉತ್ತಮ.
ಇದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಬಾಳೆಹಣ್ಣು ಮತ್ತು ಚಾಕಲೆಟ್ ಹಾಕಿ ದೋಸೆ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ದೋಸೆಗೆ ಚಟ್ನಿ ಹಾಗೂ ಆಲೂಗಡ್ಡೆ ಪಲ್ಯ ಹಾಕಿ ಮಾಡುವ ದೋಸೆ ಒಂದೆಡೆಯಾದರೆ ಇತ್ತ ಇಲ್ಲೊಬ್ಬ ರಸ್ತೆ ಬಡಿ ವ್ಯಾಪಾರಿ ವಿಶೇಷ ರೀತಿ ದೋಸೆ ಮಾಡಿದ್ದ. ಆತ ದೋಸೆಗೆ ಚಾಕಲೆಟ್ ಹಾಗೂ ಬಾಳೆಹಣ್ಣು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಮಂದಿ ದೋಸೆ ತಿನ್ನೋದನ್ನೇ ಬಿಟ್ಟರೆ ಒಳ್ಳೆಯದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಆತ ಬಾಳೆಹಣ್ಣು ಬಳಸಿ ಈ ದೋಸೆ ಮಾಡಿರುವುದು ನೋಡುಗರಿಗೆ ಅಚ್ಚರಿ ಮೂಡಿಸಿದೆ.



Click it and Unblock the Notifications
