Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿರಾಟ್ ನಿವೃತ್ತಿ ಭವಿಷ್ಯ ಬಹಿರಂಗಪಡಿಸಿದ ಜ್ಯೋತಿಷಿ: ಕೋಹ್ಲಿ ಜಾತಕದಲ್ಲಿ ಏನಿದೆ ಗೊತ್ತಾ?
ಕ್ರಿಕೆಟ್ ಲೋಕದ ದಿಗ್ಗಜರು ಅಂದಕೂಡಲೆ ನಿಮಗೆ ಹಲವರ ಹೆಸರುಗಳು ನೆನಪಿಗೆ ಬರಬಹುದು. ಆದ್ರೆ ಈ ದಶಕದ ಅತ್ಯಂತ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ವಿರಾಟ್ ಭಾರತ ಕ್ರಿಕೆಟ್ ತಂಡದ ಪರವಾಗಿ ಆಡುತ್ತಿದ್ದರೂ ವಿಶ್ವದಾದ್ಯಂತ ಅಭಿಮಾನಿಗಳ ಸಂಪಾದಿಸಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸುವರ್ಣ ಯುಗದ ಸಮಯವನ್ನು ಮುನ್ನಡೆಸಿದ ಖ್ಯಾತಿ ಅವರದಾಗಿದೆ.
ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡವನ್ನು ಹಲವು ವರ್ಷಗಳ ಕಾಲ ನಾಯಕನಾಗಿ ಮುಂದುವರೆಸಿದ್ದಾರೆ. ಆದ್ರೆ ವಿವಾಹದ ಬಳಿಕ ಅವರು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಕಡಿಮಯಾಗಿತ್ತು. ಹಾಗೆ ಟೆಸ್ಟ್ ಕ್ರಿಕೆಟ್‌ಗೆ ಇತ್ತೀಚಿಗೆ ವಿದಾಯ ಹೇಳಿದ್ದ ಅವರು ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಆದ್ರೆ ವಿರಾಟ್ ಕೊಹ್ಲಿ ಹಾಗೆ ರೋಹಿತ್ ಶರ್ಮಾ ಅವರ ನಿವೃತ್ತಿ ಕುರಿತಾಗಿಯೂ ಬಹಳಷ್ಟು ಚರ್ಚೆಗಳು ಹುಟ್ಟುಕೊಂಡಿವೆ. ಹಾಗೆ ಆಸ್ಟ್ರೇಲಿಯಾ ಸರಣಿಯಲ್ಲಿ ಈಗ ವಿರಾಟ್ ಕೊಹ್ಲಿ ಎರಡು ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಮೊದಲ ಏಕದಿನ ಪಂದ್ಯ ಹಾಗೂ ಇಂದು ನಡೆದ 2ನೇ ಏಕದಿನ ಪಂದ್ಯದಲ್ಲೂ ಅವರು ಯಾವುದೇ ರನ್ ಗಳಿಸದೆ ಔಟಾದರು.
ಆದ್ರೆ ಔಟಾದ ಬಳಿಕ ಅವರು ತಮ್ಮ ಗ್ಲೌಸ್ ಅನ್ನು ಮೇಲೆ ಎತ್ತಿ ಅಭಿಮಾನಿಗಳತ್ತ ಕೈಬೀಸಿದ ಫೋಟೋಗಳು ಹರಿದಾಡುತ್ತಿವೆ. ಇದು ಅವರ ನಿವೃತ್ತಿಯ ಮುನ್ಸೂಚನೆ ಎಂದು ಅಂದಾಜಿಸಲಾಗುತ್ತದೆ. ಆದ್ರೆ ಇಲ್ಲೊಬ್ಬ ಜ್ಯೋತಿಷ್ಯ ಹೇಳಿರುವ ಪ್ರಕಾರ ವಿರಾಟ್ ಕೊಹ್ಲಿ ಈ ವರ್ಷ ನಿವೃತ್ತಿ ಹೇಳುತ್ತಿಲ್ಲ. ಜ್ಯೋತಿಷಿಯೊಬ್ಬರು 2016ರಲ್ಲೇ ಈ ಕುರಿತು ಭವಿಷ್ಯ ನುಡಿದಿರುವುದು ಈಗ ವೈರಲ್ ಆಗುತ್ತಿದೆ.
ವಿರಾಟ್ ಕೋಹ್ಲಿ ಕುರಿತಾಗಿ ಜ್ಯೋತಿಷಿ ಹೇಳಿರುವುದೇನು? ಕೋಹ್ಲಿ ನಿವೃತ್ತಿಯ ವರ್ಷ ಯಾವುದು ಅನ್ನೋದನ್ನು ತಿಳಿದುಕೊಳ್ಳಿ.
''ವಿರಾಟ್ 2016 ಮತ್ತು 2017 ರಲ್ಲಿ ಹೆಚ್ಚು ಫೇಮಸ್ ಆಗುತ್ತಾರೆ. ಅವರ ಕ್ರಿಕೆಟ್ ಖ್ಯಾತಿ ಬೆಳೆಯುತ್ತಲೇ ಹೋಗುತ್ತದೆ. 2017ರಲ್ಲಿ ಅವರ ಯಶಸ್ಸು ಉತ್ತುಂಗಕ್ಕೆ ಏರಿರಲಿದೆ. ವಿವಾಹದ ನಂತರ ಅವರು ಅನುಮೋದನೆಗಳಿಂದ ಆದಾಯವನ್ನು ಗಳಿಸುತ್ತಾರೆ ಮತ್ತು ಫೆಬ್ರವರಿ 2018 ಮತ್ತು ಸೆಪ್ಟೆಂಬರ್ 2020 ರ ನಡುವೆ ಅವರಿಗೆ ಮಗುವಾಗುತ್ತದೆ. ಮಗು ತಂದೆಗೆ ಅಪಾರ ಅದೃಷ್ಟವನ್ನು ತರುತ್ತದೆ''
''ವಿರಾಟ್‌ಗೆ ಸೆಪ್ಟೆಂಬರ್ 2020 ರಿಂದ ಸೆಪ್ಟೆಂಬರ್ 2021ರ ವರೆಗೆ ನಿಧಾನಗತಿಯ ಅವಧಿ ಆಗಿರಲಿದೆ. ವಿರಾಟ್ ಸೆಪ್ಟೆಂಬರ್ 2021 ರಿಂದ 2025 ರ ವರೆಗೆ ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಭಾರಿ ಯಶಸ್ಸನ್ನು ಗಳಿಸಿ ಮತ್ತೆ ಬಲವಾಗಿ ಮರಳುತ್ತಾರೆ. ಹೆಚ್ಚುವರಿಯಾಗಿ, ವಿರಾಟ್ ಅವರ ವೃತ್ತಿಜೀವನ ಆಗಸ್ಟ್ 2025 ರಿಂದ ಫೆಬ್ರವರಿ 2027ರ ವರೆಗೆ ಭಾಗಶಃ ವಿಫಲಗಳು ಹೆಚ್ಚಾಗುತ್ತವೆ. ವಿರಾಟ್ ಅವರ ವೃತ್ತಿಜೀವನ 2027 ರಲ್ಲಿ ಉತ್ತಮಗೊಳ್ಳುತ್ತದೆ ಮತ್ತು ಅವರು ಮಾರ್ಚ್ 2028 ರ ಮೊದಲ 6 ತಿಂಗಳ ನಡುವೆ ನಿವೃತ್ತರಾಗುತ್ತಾರೆ''
ಈ ರೀತಿಯಾಗಿ ಕೋಹ್ಲಿ ಅವರ ಭವಿಷ್ಯ ನುಡಿಯಲಾಗಿದೆ. ಸದ್ಯ ಇಲ್ಲಿ ಹೇಳಿರುವಂತೆಯೇ ಬಹುತೇಕ ಸತ್ಯವಾಗಿದೆ. ಹಾಗೆ ಅವರ ನಿವೃತ್ತಿ ವಿಚಾರದಲ್ಲೂ ಸತ್ಯವಾಗಬಹುದು ಎನ್ನಲಾಗುತ್ತಿದೆ, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೆ ವಿರಾಟ್ ನಿವೃತ್ತಿ ಕುರಿಯಾದ ಹಲವು ಚರ್ಚೆಗಳಲ್ಲಿ ಈಗ ಈ ಭವಿಷ್ಯವಾಣಿ ಕೂಡ ಬಹಳ ಚರ್ಚೆ ಹುಟ್ಟುಹಾಕಿದೆ. ಈ ಭವಿಷ್ಯದಂತೆ ಕೋಹ್ಲಿ ಜೀವನದಲ್ಲೂ ನಡೆದರೆ ವಿರಾಟ್ ಇನ್ನೊಂದು ವಿಶ್ವಕಪ್ ಟೂರ್ನಿ ಆಡಲಿದ್ದಾರೆ. ಇದು ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಲಿದೆ.



Click it and Unblock the Notifications