Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್‌ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಕ್ರಿಕೆಟ್ ಮಾತ್ರವಲ್ಲ ಆದಾಯದಲ್ಲೂ ವಿರಾಟ್ ಕಿಂಗ್..!! ಐಷಾರಾಮಿ ಜೀವನ ಹೇಗಿದೆ ಗೊತ್ತಾ?
ಕ್ರಿಕೆಟ್ ಅಂದ ತಕ್ಷಣ ನಿಮಗೆ ಒಂದಿಷ್ಟು ಜನರ ಹೆಸರು ನೆನಪಾಗಬಹುದು. ನೀವು ಕ್ರಿಕೆಟ್ ಪ್ರಿಯರಾಗದೇ ಇದ್ದರೂ ಒಂದಿಷ್ಟು ಜನರ ಹೆಸರಂತು ಕೇಳಿರುತ್ತೀರಿ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಹಾಗೆ ಈ ಪೀಳಿಗೆಯ ಹೆಸರಲ್ಲಿ ವಿರಾಟ್ ಕೊಹ್ಲಿ. ವಿರಾಟ್ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಚಾರ್ಮಿಂಗ್ ಫೇಸ್. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಆಟಗಾರ ಎಂದರೂ ತಪ್ಪಾಗಲಾರದು.
ಇಂದು ವಿರಾಟ್ ಕೊಹ್ಲಿ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿರಾಟ್ ಕ್ರಿಕೆಟ್‌ನಲ್ಲಿ ಜನಪ್ರಿಯ ಆಟಗಾರ ಎಂಬುವುದರಲ್ಲಿ ಅನುಮಾನವೇ ಇಲ್ಲ. ವಿಶ್ವದಾದ್ಯಂತ ಅವರು ಲಕ್ಷ ಲಕ್ಷ ಮಂದಿ ಅಭಿಮಾನಿಗಳ ಹೊಂದಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅತ್ಯಂತ ಸುದೀರ್ಘ ಪ್ರಯಾಣ ಮಾಡುತ್ತಿರುವ ಏಕೈಕ ಆಟಗಾರ ಕೂಡ ಹೌದು.

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರ ಜೊತೆ ವಿವಾಹವಾಗಿದ್ದ ಅವರು ಇಬ್ಬರು ಮುದ್ದಾದ ಮಕ್ಕಳಿಗೆ ತಂದೆಯೂ ಆಗಿದ್ದಾರೆ. ಈ ಮೂಲಕ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಕ್ರಿಕೆಟ್‌ನಲ್ಲಿ ಎಷ್ಟೇ ಬ್ಯೂಸಿ ಇದ್ದರೂ ಕುಡ ವಿರಾಟ್ ತನ್ನ ಕುಟುಂಬಕ್ಕೆ ಸಮಯ ನೀಡುತ್ತಾರೆ. ಕ್ರಿಕೆಟ್‌ನಿಂದ ವಿರಾಮ ಪಡೆದಾಗ ಬಹುತೇಕ ಸಮಯ ಅವರು ಕುಟುಂಬದ ಜೊತೆಗೆ ಇರುತ್ತಾರೆ.
ಇನ್ನು ಏಷ್ಯಾದ ಅತ್ಯಂತ ಜನಪ್ರಿಯ ಕ್ರೀಡಾಪಟು ವಿರಾಟ್ ಕೊಹ್ಲಿ ಆಗಿದ್ದಾರೆ. ಇದು ಅವರ ಅಭಿಮಾನಿಗಳ ಸಂಖ್ಯೆಯಿಂದ ಮಾತ್ರವಲ್ಲ ಅವರ ಆದಾಯದ ದೃಷ್ಟಿಯಿಂದಲೂ ಅವರು ಕಿಂಗ್ ಎನಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಆದಾಯ, ಆಸ್ತಿ, ಅಭಿಮಾನಿಗಳು, ಕೀರ್ತಿ ಹೆಚ್ಚುತ್ತಲೇ ಇದೆ. ಹಾಗಾದ್ರೆ ಕಿಂಗ್ ಕೊಹ್ಲಿ ಅವರ ಆಸ್ತಿ ಎಷ್ಟಿದೆ. ಅವರ ಐಷಾರಾಮಿ ಜೀವನದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಸ್ಪೋಟ್ಸ್‌ಕಿಡಾ ಪ್ರಕಾರ ವಿರಾಟ್ ಕೊಹ್ಲಿ ಅವರ ನಿವ್ವಳ ಆಸ್ತಿ ಮೌಲ್ಯವು ಸುಮಾರು 1,050 ಕೋಟಿ ರೂಪಾಯಿ ಆಗಿದೆ (ಅಂದಾಜು USD 127 ಮಿಲಿಯನ್) ಎಂದು ಅಂದಾಜಿಸಲಾಗಿದೆ. 2022ರಲ್ಲಿ ಸ್ಪೋರ್ಟಿಕೊ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪೈಕಿ ವಿರಾಟ್ 61ನೇ ಸ್ಥಾನದಲ್ಲಿದ್ದರು. ಹಾಗೆ ಅಗ್ರಹ 100ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಏಷ್ಯಾದ 2ನೇ ಕ್ರೀಡಾಪಟು ಕೂಡ ವಿರಾಟ್ ಆಗಿದ್ದರು.
ಕೊಹ್ಲಿ ಸಂಭಾವನೆ ಎಷ್ಟು ಗೊತ್ತಾ?
ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿಯ ಆದಾಯವು ವಿಶ್ವದಲ್ಲೇ ಅತ್ಯಧಿಕವಾಗಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (BCCI) ಯೊಂದಿಗಿನ ಒಪ್ಪಂದದ ಅಡಿಯಲ್ಲಿ ಕೊಹ್ಲಿ ವಾರ್ಷಿಕವಾಗಿ ಸುಮಾರು 7 ಕೋಟಿ ರೂಪಾಯಿ ವೇತನವಾಗಿ ಪಡೆಯುತ್ತಾರೆ. ಹಾಗೆ ಐಪಿಎಲ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡಿರುವ ಆಟಗಾರ ವಿರಾಟ್ ಆಗಿದ್ದಾರೆ. ಈವರೆಗೆ ಅವರು ಸುಮಾರು 180 ಕೋಟಿ ರೂಪಾಯಿಗೂ ಅಧಿಕ ಮೊತ್ತ ಫ್ರಾಂಚೈಸಿ ಕಡೆಯಿಂದ ಪಡೆದಿದ್ದಾರೆ ಎನ್ನಲಾಗಿದೆ. ಹಾಗೆ ಅವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಒಂದು ಮಾರ್ಕೆಟಿಂಗ್ ಪೋಸ್ಟ್‌ಗಾಗಿ ಬರೋಬ್ಬರಿ 11.45 ಕೋಟಿ ರೂ. ಶುಲ್ಕ ವಿಧಿಸುತ್ತಾರೆ.
ಎಷ್ಟು ಕಂಪನಿಗಳಲ್ಲಿ ಹೂಡಿಕೆ?
ವಿರಾಟ್ ಕ್ರಿಕೆಟ್ ಮಾತ್ರವಲ್ಲ ಬ್ಯುಸಿನೆಸ್‌ನಲ್ಲೂ ಮುಂದೆ ಇದ್ದಾರೆ ಹಲವು ಕಂಪನಿಗಳಲ್ಲಿ ಅವರು ಪತ್ನಿಯ ಜಂಟಿಯಾಗಿ ಹೂಡಿಕೆ ಸಹ ಮಾಡಿದ್ದಾರೆ. ಮುಖ್ಯವಾಗಿ ಬ್ಲೂ ಟ್ರೈಬ್, ರೇಜ್ ಕಾಫಿ, One8, ಹೈಪರೈಸ್, ಚಿಸೆಲ್ ಫಿಟ್‌ನೆಸ್, ಡಿಜಿಟಲ್ ಇನ್ಸುರೆನ್ಸ್, ಯೂನಿವರ್ಸಲ್ ಸ್ಟ್ರೋರ್ಟ್ಸ್ ಬಿಜ್ ಪ್ರೈ.ಲಿ, Wrogn, ಗಲಕ್ಟಸ್ ಫನ್‌ವೇರ್ ಟೆಕ್ನಾಲಜಿ ಪ್ರೈ.ಲಿ, ಎಫ್‌ಸಿ ಗೋವಾ, ನ್ಯುವಾ ರೆಸ್ಟೋರೆಂಟ್, ಸ್ಟ್ರೋರ್ಟ್ಸ್ ಕಾನ್ವೋ, ಟೀಮ್ ಬ್ಲೂ ರೈಸಿಂಗ್,
ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಮುಂಬೈನಲ್ಲಿ ಸುಮಾರು 34 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ, ಅವರು 2022 ರಲ್ಲಿ ಅಲಿಬಾಗ್‌ನಲ್ಲಿ ಸುಮಾರು 19.24 ಕೋಟಿ ರೂಪಾಯಿಗಳಿಗೆ 8 ಎಕರೆ ಫಾರ್ಮ್‌ಹೌಸ್ ಅನ್ನು ಖರೀದಿಸಿದ್ದರು. ಹಾಗೆ ಗುರುಗಾವ್‌ನಲ್ಲಿ 80 ಕೋಟಿ ಮೌಲ್ಯದ ಅದ್ದೂರಿಯ ಬಂಗಲೆ ಹೊಂದಿದ್ದಾರೆ ಎಂದು ಸಹ ವರದಿಯಾಗಿದೆ.
ಕೊಹ್ಲಿ ಬಳಿ ಇವೆ ಐಷಾರಾಮಿ ಕಾರು
ಕೊಹ್ಲಿ ಬಳಿ ಐಷಾರಾಮಿ ದುಬಾರಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಅವರ ಬಳಿ ಲಂಬೋರ್ಗಿನಿ ಹುರಾಕನ್, ಆಡಿ A8L QW12 ಕ್ವಾಟ್ರೊ, Audi R8 V10, Audi R8 LMX ಲಿಮಿಟೆಡ್ ಎಡಿಷನ್, ಬೆಂಟ್ಲಿ ಕಾಂಟಿನೆಂಟಲ್ GT ಮುಲಿನರ್ ಮತ್ತು ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಸೇರಿ ದೇಶಿಯ ಕಾರುಗಳ ದೊಡ್ಡ ಕಲೆಕ್ಷನ್ ಇದೆ.



Click it and Unblock the Notifications
