Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಂಚೆಯಲ್ಲಿ ಹೋದ ವ್ಯಕ್ತಿಗೆ ಎಂಟ್ರಿ ನಿರಾಕರಿಸಿದ ಕೊಹ್ಲಿ ಒಡೆತನದ ಹೋಟೆಲ್: ವೀಡಿಯೋ ವೈರಲ್
ಬಟ್ಟೆ ನೋಡಿ ಮಣೆ ಹಾಕುವ ಕಾಲವಿದು. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡವರನ್ನು ನೋಡಿದರೆ ಅವರು ದೊಡ್ಡ ಕೆಲಸದಲ್ಲಿರಬಹುದು, ಅವರತ್ರ ದುಡ್ಡಿದೆ ಎಂದು ಭಾವಿಸುತ್ತಾರೆ. ಅದೇ ಸಾಧಾರಣವಾಗಿ, ಊರುಕಡೆ ಇರುವಂತೆ ನಮ್ಮ ಡ್ರೆಸ್ಸಿಂಗ್ ಸ್ಟೈಲ್ ಇದ್ದರೆ ಯಾವುದೋ ಹಳ್ಳಿಯಿಂದ ಬಂದವ/ಬಂದವಳು ಎಂದು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಅದರಲ್ಲೂ ದೊಡ್ಡ-ದೊಡ್ಡ ಹೋಟೆಲ್, ರೆಸ್ಟೋರೆಂಟ್, ಮಾಲ್‌ಗಳಿಗೆ ಹೋಗುವಾಗ ಮಾಡರ್ನ್ ಡ್ರೆಸ್ ಹೆಸರಿನಲ್ಲಿ ಮೈಮೇಲೆ ಸರಿಯಾಗಿ ಬಟ್ಟೆ ಇಲ್ಲದಿದ್ದರೂ ಒಕೆ, ಆದರೆ ಲಕ್ಷಣವಾಗಿ ಸೀರೆ, ಪಂಚೆ, ಕಚ್ಚೆ ಪಂಚೆ ಇವುಗಳನ್ನು ಹಾಕಿಕೊಂಡು ಹೋದರೆ ಒಳಗಡೆ ಬಿಡಲ್ಲ. ಈ ರೀತಿಯ ವರ್ತನೆ ಖಂಡಿತ ತಪ್ಪು, ಆದರೆ ಅಂಥ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಇದೀಗ ಕೊಹ್ಲಿ ಒಡೆತನದ ಹೋಟೆಲ್‌ಗೆ ಹೋದವರಿಗೆ ಇಂಥದ್ದೇ ಕಹಿ ಅನುಭವ ಆಗಿದೆ. ಅದನ್ನು ಅವರು ವೀಡಿಯೋ ಮಾಡಿ ಹಾಕಿದ್ದು ಆ ವೀಡಿಯೋ ವೈರಲ್ ಆಗುತ್ತಿದೆ.

ಮುಂಬೈನಲ್ಲಿ ಕೊಹ್ಲಿ ಒಡೆತನದ One8 Commune ಎಂಬ ಹೋಟೆಲ್ ಇದೆ. ಅಲ್ಲಿಗೊಬ್ಬರು ತಮಿಳುನಾಡಿನ ಸಾಂಪ್ರದಾಯಕ ಉಡುಗೆಯಾದ ಬಿಳಿ ಪಂಚೆ, ಶರ್ಟ್‌ನಲ್ಲಿ ಹೋಗಿದ್ದಾರೆ. ತಮಿಳು ನಾಡು ಮಾತ್ರವಲ್ಲ ಕರ್ನಾಟಕ, ಕೇರಳದಲ್ಲಿಯೂ ಬಿಳಿ ಪಂಚೆ ಸ್ಟೈಲ್‌ಗೆ ತುಂಬಾನೇ ಪ್ರಾಮುಖ್ಯತೆ ಇದೆ. ನಮ್ಮ ವರನಟ ಡಾಕ್ಟರ್ ರಾಜ್‌ಕುಮಾರ್ ಹೆಚ್ಚಾಗಿ ಪಂಚೆಯೇ ಧರಿಸುತ್ತಿದ್ದರು. ಆದರೆ ಈ ವ್ಯಕ್ತಿ ಪಂಚೆ ಧರಿಸಿದರು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಒಳಗಡೆ ಬಿಡಲಿಲ್ವಂತೆ!
ಅವರು ಅದನ್ನು ವೀಡಿಯೋ ಮಾಡಿ Xನಲ್ಲಿ ಶೇರ್ ಮಾಡಿದ್ದಾರೆ. ಅವರು ಹಳೆಯ ಪಂಚೆಯನೂ ಉಟ್ಟು ಹೋಗಿಲ್ಲ, ಶುಭ್ರವಾದ ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಹೋಗಿದ್ದರು. ಆದರೆ ಅವರ ಡ್ರೆಸ್ ನೋಡಿ ಅವರನ್ನು ಹೋಟೆಲ್ ಒಳಗಡೆ ಬಿಡಲಿಲ್ಲ. ಅವರಿಗೆ ಮುಂಬೈಗೆ ಹೋದಾಗ ಕೊಹ್ಲಿ ಹೋಟೆಲ್‌ಗೆ ಹೋಗಬೇಕೆನಿಸಿದೆ, ಹಸಿವು ಬೇರೆ ಆಗ್ತಾ ಇತ್ತು, ಆದರೆ ರೆಸ್ಟೋರೆಂಟ್‌ನವರು ತುಂಬಾ ಕೆಟ್ಟ ವರ್ತನೆ ತೋರಿದ್ದಾರೆ.
ಇದರಿಂದ ನನಗೆ ಬೇಸರವಾಗಿದ್ದು ಮಾತ್ರವಲ್ಲ ತುಂಬಾ ನೋವಾಯ್ತು ಎಂಬುವುದಾಗಿ ಹೇಳಿದರು. ನಾನು ಶಾರ್ಟ್ಸ್ ಅಥವಾ ಕಲರ್ ಲುಂಗಿ ಕಟ್ಟಿಕೊಂಡು ಬಂದಿದ್ದರೆ ಹೀಗೆ ವರ್ತಿಸಿದರೆ ಏನೂ ಅನಿಸ್ತಾ ಇರಲಿಲ್ಲ, ಆದರೆ ತಮಿಳುನಾಡಿನ ಸಾಂಪ್ರದಾಯಕ ಉಡುಗೆಯನ್ನು ಧರಿಸಿಕೊಂಡು ಹೋದಾಗ ಒಳಗಡೆ ಹೋಗಲು ಅನುಮತಿ ನೀಡದಿದ್ದಾಗ ಈ ಬಿಳಿ ಪಂಚೆ ಎಂಬುವುದು ನಮ್ಮ ಸಂಪ್ರದಾಯ, ಅದಕ್ಕೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಒಬ್ಬರು ಕಾರ್ ಶೋ ರೂಮ್‌ಗೆ ಹೋದಾಗ ಅವರ ಡ್ರೆಸ್ಸಿಂಗ್ ನೋಡಿ ಶೋರೂಂ ಅವರು ಅವರಿಗೆ ಕಾರು ತೋರಿಸಲು ಹಿಂದೇಟು ಹಾಕಿ, ಅದೇ ಶೋ ರೂಮ್‌ನಿಂದ ಕ್ಯಾಶ್ ಆನ್ ಟೆಲಿವರಿ ಮಾಡಿ ದುಬಾರಿ ಬೆಲೆಯ ಕಾರು ಖರೀದಿಸಿದ್ದ ಘಟನೆ ನಿಮಗೆ ನೆನಪಿರಬಹುದು. ಯಾವತ್ತೂ ಯಾರನ್ನು ಅವರ ಬಟ್ಟೆ ನೋಡಿ ಅಳೆಯಬಾರದು.
ತನ್ನ ರೆಸ್ಟೋರೆಂಟ್‌ನಲ್ಲಿ ಈ ಬಗೆಯ ವಿಷಯ ನಡೆದಿರುವುದು ಕೊಹ್ಲಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಆ ಹೋಟೆಲ್‌ನವರ ವರ್ತನೆ ಮಾತ್ರ ಖಂಡನೀಯ... ನಿಮ್ಮ ಅಭಿಪ್ರಾಯವೇನು?
Person with Veshti was not allowed in @imVkohli 's Restaurant
— உன்னைப்போல் ஒருவன் (@Sandy_Offfl) December 2, 2023
Very nice da👌 pic.twitter.com/oTNGVqzaIz



Click it and Unblock the Notifications