Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಕೊಹ್ಲಿಯ ಡ್ಯಾನ್ಸ್ ನೋಡಿದರೆ ಹೇಳುವಿರಿ ವಿರಾಟ್ ಇಷ್ಟು ಸೂಪರ್ ಡ್ಯಾನ್ಸ್ ಮಾಡ್ತಾರಾ? ಆ ಹುಡುಗಿ ಡ್ಯಾನ್ಸ್ ಅಂತೂ ಸೂಪರ್
ಎರಡು ಡ್ಯಾನ್ಸ್ ವೀಡಿಯೋ ಇಂದು ವೈರಲ್ ಆಗುತ್ತಿದೆ, ಒಂದು ಕ್ರಿಕೆಟ್ ಕಿಂಗ್ ಕೊಹ್ಲಿಯ ಡ್ಯಾನ್ಸ್, ಮತ್ತೊಂದು ಶಾಲಾ ಬಾಲಕಿಯ ಡ್ಯಾನ್ಸ್, ಈ ಎರಡೂ ಡ್ಯಾನ್ಸ್‌ಗೆ ಅತ್ಯಾದ್ಭುತ ಪ್ರತಿಕ್ರಿಯೆ ಬಂದರೆ. ಈ ಎರಡೂ ಡ್ಯಾನ್ಸ್ ನೋಡುವಾಗ ನಮ್ಮಲ್ಲಿ ಏನೇ ಟೆನ್ಷನ್ ಇರಲಿ ಅದೆಲ್ಲಾ ಮರೆತು ಇವರುಗಳ ಡ್ಯಾನ್ಸ್ ಎಂಜಾಯ್ ಮಾಡ್ತೀವಿ ಎಂಬುವುದರಲ್ಲಿ ಸಂಶಯವೇ ಇಲ್ಲ...

ಕೊಹ್ಲಿ ಉತ್ತಮ ಕ್ರಿಕಟಿಗ ಮಾತ್ರವಲ್ಲ ಸೂಪರ್ ಡ್ಯಾನ್ಸರ್ ಕೂಡ ಮಾಡ್ತಾರೆ ಎಂಬುವುದಕ್ಕೆ ಈ ವೀಡಿಯೋನೇ ಸಾಕ್ಷಿ
ನಾರ್ವೇಯ ಪ್ರಸಿದ್ಧ ಹಿಪ್‌ಹಾಪ್ ಅರ್ಬನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಇತ್ತೀಚೆಗೆ ಕೊಹ್ಲಿ ಬಗ್ಗೆ ಅವರು ತುಂಬಾ ಡೌನ್ ಡು ಅರ್ಥ್ ಮನುಷ್ಯ (ಒಂದಿಷ್ಟೂ ಅಹಂ, ಜಂಭವಿಲ್ಲ), ಅವರು ನಾವು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ,ಅವರ ಜೊತೆಗಿನ ಡ್ಯಾನ್ಸ್ ಅನುಭವ ತುಂಬಾನೇ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.
ಅವರು ಕೊಹ್ಲಿಯ ಡ್ಯಾನ್ಸ್ ವೀಡಿಯೋ ಶೇರ್ ಮಾಡಿದ್ದೇ ತಡ ವೀಡಿಯೋ ವೈರಲ್ ಆಗಿದೆ
ಕೊಹ್ಲಿ ಸ್ಟೆಪ್ಸ್ ನೋಡಿದರೆ ಯಾವ ಡ್ಯಾನ್ಸರ್‌ಗೂ ಕಡಿಮೆಯಿಲ್ಲ, ಅಷ್ಟು ಸೂಪರ್ ಆಗಿ ಹೆಜ್ಜೆ ಹಾಕಿದ್ದಾರೆ, ಅವರ ಡ್ಯಾನ್ಸ್ ಬಗ್ಗೆ ಮಾತನಾಡಿದ ಡ್ಯಾನ್ಸ್ ಗ್ರೂಪ್, ನಾವು ಕೊಹ್ಲಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಹಾಡು ಇದೆಯಲ್ಲಾ ಅದು ಅವರ ಫೇವರೆಟ್ ಸಾಂಗ್ ಆಗಿದೆ. ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಾಡು ನೋಡಿದ್ವಿ, ಕೇಳದ್ವಿ, ಆದರೆ ಆ ಹಾಡಿಗೆ ಸ್ಟೆಪ್ಸ್ ಪ್ರಾಕ್ಟೀಸ್ ಮಾಡಿರಲಿಲ್ಲ, ನಾವು ಕೊಹ್ಲಿ ಜೊತೆ ಮಾತನಾಡಿ ತಕ್ಷಣವೇ ಆ ಹಾಡಿಗೆ ಸ್ಟೆಪ್ ಹಾಕಿರುವುದು ಎಂದು ಹೇಳಿದ್ದಾರೆ. ಯಾವುದೇ ಡ್ಯಾನ್ಸ್ ಪ್ರಾಕ್ಟೀಸ್ ಇಲ್ಲದೆ ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕ್ರಿಕೆಟ್‌ನಲ್ಲಿ ಕೊಹ್ಲಿಯ ಆಟಕ್ಕೆ ಫಿದಾ ಆಗಿದ್ದವರು ಈಗ ಅವರ ಡ್ಯಾನ್ಸ್‌ಗೂ ಫಿದಾ ಆಗಿದ್ದಾರೆ.
ಗಂಡನಾಗಿ, ಅಪ್ಪನಾಗಿ ಕೂಡ ಕಿಂಗ್ ಕೊಹ್ಲಿ ಗಮನ ಸೆಳೆಯುತ್ತಾರೆ
ಕೊಹ್ಲಿ ಕುಟುಂಬಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎಂಬುವುದು ಹಲವಾರು ಬಾರಿ ಸಾಬೀತಾಗಿದೆ. ಅಷ್ಟು ಸಾವಿರ ಜನರಿರುವ ಸ್ಟೇಡಿಯಂನಲ್ಲಿ ಕೊಹ್ಲಿ ಕಣ್ಣುಗಳು ಹುಡುಕುವುದು ಅನುಷ್ಕಾರನ್ನ. ಗ್ರೌಂಡ್‌ನಲ್ಲಿ ಇರುವಾಗಲೇ ಮಗಳ ಜೊತೆ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೀಡಿಯೋ ಕೂಡ ವೈರಲ್ ಆಗಿತ್ತು. ಯಾರು ತನ್ನವರನ್ನು ಪ್ರೀತಿಸುತ್ತಾರೋ ಅವರು ಎಷ್ಟೇ ಬ್ಯುಸಿಯಿದ್ದರೂ ತನ್ನವರಿಗೆ ಸಮಯ ಕೊಡುತ್ತಾರೆ ಎಂದು ಮಹಿಳೆಯರು ಬ್ಯುಸಿ ಎಂದು ಹೇಳುವ ತಮ್ಮ ಗಂಡನ ಕೇಳಿದ್ದರು. ಒಬ್ಬ ಕ್ರಿಕೆಟಿಗ ಎಂಬುವುದರ ಆಚೆಗೆ ಕೊಹ್ಲಿಯಲ್ಲಿರುವ ಈ ಗುಣಗಳು ಜನರನ್ನು ತುಂಬಾ ಆಕರ್ಷಿಸಿದೆ.
ಶಾಲಾ ಬಾಲಕಿಯ ಸೂಪರ್ ಡ್ಯಾನ್ಸ್
ತನ್ನ ಸ್ನೇಹಿತರ ಜೊತೆ ಆ ಹುಡುಗಿ ಡ್ಯಾನ್ಸ್ ಮಾಡ್ತಾರೆ ಅಂದುಕೊಂಡರೆ ಇಲ್ಲ ಅವರು ಸುಮ್ಮನೆ ನಿಂತು ಬಿಡ್ತಾರೆ, ಆ ಬಾಲಕಿ ತುಂಬಾ ಚೆನ್ನಾಗಿ ಸ್ಟೆಪ್ಸ್ ಹಾಕ್ತಾಳೆ. ಶಾಲೆಯ ಡ್ಯಾನ್ಸರ್ ಗರ್ಲ್‌ಗೆ ಟ್ಯಾಗ್ ಮಾಡಿ ಎಂಬ ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿರುವ ಈ ಡ್ಯಾನ್ಸ್ ವೀಡಿಯೋ ಕೂಡ ತುಂಬಾನೇ ಗಮನ ಸೆಳೆದಿದೆ.
ಶ್ರದ್ಧಾ ಕಪೂರ್ ಕೂಡ ಕಮೆಂಟ್ ಮಾಡಿದ್ದಾರೆ
ಈ ಬಾಲಕಿಯ ಡ್ಯಾನ್ಸ್ ನೋಡಿ ಅರೆ ವಾವ್.. ಈ ರೀತಿಯ ಆತ್ಮವಿಶ್ವಾಸ ನನಗೂ ಬೇಕೆಂದು ಬಯಸುತ್ತೇನೆ, ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ. ಎಲ್ಲಾ ಹುಡುಗಿಯರು ಸುಮ್ಮನೆ ನಿಂತಿರುವಾಗ ಸ್ವಲ್ಪವೂ ಹಿಂಜರಿಕೆಯಿಲ್ಲದೆ ಈಕೆ ಹಾಕಿರುವ ಸೂಪರ್ ಸ್ಟೆಪ್ಸ್ ಗಮನ ಸೆಳೆದಿದೆ.
ಈ ವೀಡಿಯೋವನ್ನು ಒಂದೂವರೆ ತಿಂಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು ಈ ವೀಡಿಯೋಗೆ ಉತ್ತಮ ರೆಸ್ಪಾನ್ಸ್ ಬರ್ತಾ ಇದೆ. ಇದುವರೆಗೆ 80 ಸಾವಿರಕ್ಕೂ ಅಧಿಕ ವ್ಯೂವ್ಸ್ ಬಂದಿದೆ.ಆಕೆಯ ಡ್ಯಾನ್ಸ್ ನೋಡಿ ಕೆಲವರು ಆಕೆ ನನಗಿಂತ ಚೆನ್ನಾಗಿಡ್ಯಾನ್ಸ್ ಮಾಡ್ತಾ ಇದ್ದಾಳೆ, ಆಕೆಯ ಡ್ಯಾನ್ಸ್ ನೋಡಿದ ಮೇಲೆ ನನಗೆ ನನ್ನ ಬಗ್ಗೆ ನಾಚಿಕೆಯಾಗುತ್ತಿದೆ, ಡ್ಯಾನ್ಸ್ ಅಂದರ ಇದಪ್ಪಾ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಈಕೆಯ ಪ್ರೊಫೈಲ್ ನೋಡುವಾಗ ಈಗಷ್ಟೇ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿಕೊಟ್ಟಂತೆ ಇದೆ, ಆದರೆ ತನ್ನ ನೃತ್ಯ ಮೂಲಕ ನೆಟ್ಟಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.



Click it and Unblock the Notifications