Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ರೀಲ್ಸ್ ಹುಚ್ಚು ಹೆಚ್ಚಾದರೆ ಇದೇ ಆಗುವುದು, ಪ್ರಸಿದ್ಧ ಯೂಟ್ಯೂಬರ್ ಮದುವೆ ದಿನ ಮಾಡಿದ ಕೆಲಸ ನೋಡಿ: ವೀಡಿಯೋ ವೈರಲ್
ಕೆಲವರಿಗೆ ಸಿಕ್ಕಾಪಟ್ಟೆ ರೀಲ್ಸ್ ಹಚ್ಚು, ಇನ್ನು ಕೆಲವರು ರೀಲ್ಸ್‌ನಿಂದಲೇ ಜೀವನ ಕೂಡ ಕಟ್ಟಿಕೊಂಡಿದ್ದಾರೆ, ತಿಂಗಳಿಗೆ ಲಕ್ಷ-ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ, ಇಂದು ಯೂಟ್ಯೂಬ್ ವೀಡಿಯೋ ಹಾಕದವರು, ರೀಲ್ಸ್ ಮಾಡದವರು ಬೆರಳಣಿಕೆಯಷ್ಟೇ ಸಿಗುತ್ತಾರೆ.
ಮಕ್ಕಳಿಂದ ಹಿಡಿದು- ಅಜ್ಜ-ಅಜ್ಜಿಯರಿಗೂ ಈ ರೀಲ್ಸ್ ಹುಚ್ಚು. ಆದರೆ ಕೆಲವರು ಮಾತ್ರ ತಮ್ಮ ಜೀವನದ ಪ್ರಮುಖ ಘಟ್ಟದಲ್ಲಿಯೂ ರೀಲ್ಸ್ ಮಾಡುತ್ತಾರೆ, ಅಂಥದ್ದೊಂದು ವೀಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ, ಅಲ್ಲದೆ ಜನರು ಈತನ ರೀಲ್ಸ್ ಹುಚ್ಚಾಟ ನೋಡಿ ನಗುತ್ತಿದ್ದಾರೆ..

ಹಾಯ್ ಫ್ರೆಂಡ್ಸ್ ಇವತ್ತು ನಾನು ತರಕಾರಿ ತರೋಕೆ ಬಂದಿದ್ದೇನೆ, ಹಾಯ್ ಫ್ರೆಂಡ್ ಇವತ್ತು ನಮ್ಮ ಮನೆಯಲ್ಲಿ ಪಲಾವ್ ಮಾಡ್ತಾ ಇದ್ದೀನಿ ಹೀಗೆ ಉಂಡದ್ದು, ತೇಗಿದ್ದು ಎಲ್ಲಾ ವೀಡಿಯೋ ಮಾಡುತ್ತಾರೆ, ರೀಲ್ಸ್ ಮಾಡುತ್ತಾರೆ, ಅವರು ಹೇಳುವುದನ್ನು ಕೇಳಿದಾಗ ಎಲ್ಲರ ಜೀವನದ ಸಾಮಾನ್ಯ ವಿಷಯವನ್ನು ಕೂಡ ಬ್ಲಾಗ್ ಮಾಡಿ ಹಾಕುತ್ತಿದ್ದಾರೆ ಎಂದನಿಸದೆ ಇರಲ್ಲ, ಇಲ್ಲೊಬ್ಬ ತನ್ನ ಮದುವೆ ದಿನ ಪತ್ನಿಗೆ ಸಿಂಧೂರ ತೊಟ್ಟು ನಂತರ ರೀಲ್ಸ್ ಮಾಡೋಕೆ ಶುರು ಮಾಡಿದ್ದಾನೆ ಆ ವೀಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.
ಆತ ಬಿಹಾರದ ಪ್ರಸಿದ್ಧ ಯೂಟ್ಯೂಬರ್, ಇತ್ತೀಚೆಗಷ್ಟೇ ಮದುವೆಯಾಗಿದ್ದಾನೆ, ಆತ ತನ್ನ ಮದುವೆ ವೀಡಿಯೋಗಳನ್ನು ಚಿತ್ರೀಕರಿಸಿ ಯೂಟ್ಯೂಬ್‌ನಲ್ಲಿ ಹಾಕುತ್ತಿದ್ದಾನೆ, ಈ ರೀತಿ ಎಲ್ಲರೂ ಮಾಡುತ್ತಾರೆ, ಈತ ಮಾಡಿದ್ದೇನು ವಿಶೇಷ ಅನಿಸಬಹುದು, ಆದರೆ ಈತ ಪತ್ನಿಗೆ ಸಿಂಧೂರ ಹಚ್ಚಿ ತಾನು ಮಧುಮಗ ಎಂಬುವುದನ್ನು ಮರೆತು ಹಾಡಿಗೆ ಲಿಪ್‌ಸಿಂಕ್ ಮಾಡಲಾರಂಭಿಸುತ್ತಾನೆ.
ಈತ ಮಾಡಿದ್ದನ್ನು ನೋಡಿ ಮನೆಯವರು ಒಂದು ಕ್ಷಣ ಏನಾಗುತ್ತಿದೆ ಇಲ್ಲಿ ಎಂಬಂತೆ ನೋಡುತ್ತಾರೆ, ಕೆಲವರು ಈತ ರೀಲ್ಸ್ ಮಾಡುತ್ತಿರುವುದನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದಾರೆ, ಹುಡುಗಿಯಂತೂ ಏನು ರಿಯಾಕ್ಷನ್ ನೀಡಬೇಕೆಂದು ತಿಳಿಯದೆ ಸುಮ್ಮನೆ ಆತನ ನೋಡುತ್ತಾಳೆ. ಒಟ್ಟಿನಲ್ಲಿ ಇವುಗಳನ್ನು ನೋಡುವಾಗ ಜನ ಮರಳೋ ಜಾತ್ರೆ ಮರಳೋ ಗೊತ್ತಾಗುವುದಿಲ್ಲ.ರೀಲ್ಸ್ ಹುಚ್ಚಾಟಕ್ಕೆ ಕೆಲ ಸಂಸಾರಗಳೇ ಹಾಳಾಗುತ್ತಿದೆ
When you take reels too seriously 😭 pic.twitter.com/Fpp80gNzpr
— Aarohi Tripathy 🇮🇳 (@aarohi_vns) February 14, 2024
ರೀಲ್ಸ್‌ಗಾಗಿಯೇ ಮದುವೆಯೇ, ಬದುಕಿಗಾಗಿ ಮದುವೆಯೇ
ಈತನ ಹೆಸರು ರಾಜ, ತನ್ನ ಕುಟುಂಬದವರ ಜೊತೆಗೆ ಮದುವೆಯಾಗಲು ಉತ್ತರ ಪ್ರದೇಶಕ್ಕೆ ಹೋಗುತ್ತಾನೆ, ಇದೆಲ್ಲವನ್ನೂ ವೀಡಿಯೋ ಮಾಡಿ ಹಾಕಿದ್ದ, ಅಲ್ಲದೆ ತನ್ನ ಪತ್ನಿ ಮುಖವನ್ನು ತೋರಿಸಲು ಅಂತಲೇ ಒಂದು ವೀಡಿಯೋ ಮಾಡಿದ್ದ, ಹೀಗೆ ಮದುವೆ ಶಾಸ್ತ್ರದ ವೀಡಿಯೋ ಮಾಡುತ್ತಿದ್ದ ಪತ್ನಿಗೆ ಸಿಂಧೂರ ಹಚ್ಚುವುದು ಮದುವೆ ಶಾಸ್ತ್ರದಲ್ಲಿ ತುಂಬಾನೇ ಮುಖ್ಯವಾದದ್ದು, ಈತ ಸಿಂಧೂರ ಹಚ್ಚುವಾಗ ಸ್ವಲ್ಪ ನರ್ವಸ್ ಆದಂತೆ ಕಾಣುತ್ತಿದ್ದ, ತಕ್ಷಣವೇ ಕ್ಯಾಮರಾ ಕಡೆಗೆ ಮುಖ ಮಾಡಿ ಹಾಡಿಗೆ ಲಿಪ್‌ಸಿಂಕ್ ಮಾಡುತ್ತಾನೆ, ಈತನ ಈ ನಡವಳಿಕೆಗೆ ಈಗ ವ್ಯಾಪಕ ಟೀಕೆಗಳು ಬರುತ್ತಿವೆ, ಅಂದ ಹಾಗೆ ಈತನಿಗೆ 1.5 ಮಿಲಿಯನ್ ಸಬ್‌ಸ್ಕ್ರೈಬರ್ ಇದ್ದಾರೆ.
ಬದುಕು ಬೇರೆ, ವೃತ್ತಿ ಬೇರೆ ಅಂತ ಇದ್ದರೆ ಚೆಂದ
ನಮ್ಮ ಬದುಕಿನ ಪ್ರತಿಯೊಂದು ವಿಷಯವನ್ನು ಮತ್ತೊಬ್ಬರಿಗೆ ಹೇಳಿದರೆ ಅದು ಸಂಸಾರಕ್ಕೆ ಒಳ್ಳೆಯದಲ್ಲ, ಆದರೆ ಇತ್ತೀಚೆಗೆ ನೋಡಿದರೆ ವ್ಲೋಗ್ ಎಂಬ ಹೆಸರಿನಲ್ಲಿ ಕೆಲವರು ತುಂಬಾ ವಿಚಿತ್ರವಾದ ವೀಡಿಯೋಗಳನ್ನು ಮಾಡುತ್ತಾರೆ, ಅವರ ಮನೆ ನಾಯಿಗೆ ಫುಡ್ ಕೊಟ್ಟಿದ್ದು ಹಿಡಿದು ಮನೆಯಲ್ಲಿ ಬಾಂಡ್ಲಿ ತಿಕ್ಕುವುದು ಕೂಡ ತೋರಿಸುತ್ತಾರೆ, ಎಷ್ಟೋ ಜನರ ವೀಡಿಯೋದಲ್ಲಿ ಕ್ರಿಯೇಟಿವಿಟಿ ಎಂಬುವುದೇ ಕಾಣಲ್ಲ.
ಆದರೆ ಜನರಿಗೆ ಉಪಯುಕ್ತವಾಗಿ ವೀಡಿಯೋ ಮಾಡುವವರು ತುಂಬಾ ಜನರಿದ್ದಾರೆ, ಡಾ.ಬ್ರೋ, ಫ್ಲೈಯಿಂಗ್ ಪಾಸ್‌ಪೋರ್ಟ್, ಅನುಅಕ್ಕ ಹೀಗೆ ಅನೇಕರು ನಮ್ಮ ನಡುವೆ ಇದ್ದಾರೆ..



Click it and Unblock the Notifications