Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಪ್ರಾಣಿ ಯಾವುದೆಂದು ಗುರುತಿಸುತ್ತೀರಾ? ಏನಿರಬಹುದು.?
ಕೆಲವು ಬಾರಿ ಆನ್‌ಲೈನ್‌ನಲ್ಲಿ ಎಂತಹ ವಿಚಿತ್ರಗಳು ಕಾಣಿಸುತ್ತವೆ ಅಂದ್ರೆ ಅದನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ ಪ್ರಾಣಿ, ಪಕ್ಷಗಳಿಗೆ ಸೇರಿದ ನೂರಾರು ವಿಡಿಯೋಗಳು ನಮ್ಮ ಕಣ್ಣನ್ನ ನಾವೇ ನಂಬದಂತೆ ಮಾಡುತ್ತವೆ. ನಿಸರ್ಗದಲ್ಲಿ ಇಂತಹ ನೂರಾರು ಅಚ್ಚರಿಗಳು ಎಲ್ಲರಿಗೂ ಎದುರಾಗುತ್ತಲೇ ಇರುತ್ತದೆ.
ಇದೇ ರೀತಿ ಇಲ್ಲೊಂದು ವಿಡಿಯೋ ಸಹ ನೋಡುಗರನ್ನು ದಂಗಾಗುವಂತೆ ಮಾಡಿದೆ. ಹಾವಿನ ಜಾತಿಗೆ ಸೇರಿದಂತೆ ಕಾಣುವ ವಿಚಿತ್ರ ಪ್ರಾಣಿಯೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಜನ ಈ ವಿಡಿಯೋದಲ್ಲಿರುವ ಪ್ರಾಣಿ ಯಾವುದೆಂದು ಗುರುತಿಸಲಾಗದೆ ತಲೆ ಕಡಿಸಿಕೊಂಡಿದ್ದಾರೆ.

ಇಂಟರ್‌ನೆಟ್‌ನಲ್ಲಿ ಇಂತಹ ಹತ್ತು ಹಲವು ವಿಡಿಯೋಗಳು ಸಿಕ್ಕರೂ ಈ ವಿಡಿಯೋ ಮಾತ್ರ ಅಚ್ಚರಿಯ ಜೊತೆಗೆ ನಿಗೂಢತೆಯ ತನ್ನಲ್ಲಿ ಉಳಿಸಿಕೊಂಡಿದೆ. ಕ್ಲಿಪ್ ಪಫ್ ಮುಖದಂತೆ ಕಾಣುವ ಈ ಹಾವು ಅಂಗಡಿಯಲ್ಲಿ ಸಿಗುವ ನಕಲಿ ಹಾವಿನಂತೆ ಕಂಡುಬರುತ್ತಿದೆ. ಮತ್ತೊಂದೆಡೆ ಡ್ರ್ಯಾಗನ್ ಹಾಗೂ ಹಾವಿನ ಮಿಶ್ರ ತಳಿಯಂತೆ ಇದು ಕಾಣಿಸುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಒಂದು ದೊಡ್ಡ ಹೊಂಡದಲ್ಲಿ ನೀರು ಇರುವುದು ಕಾಣಬಹುದು. ಇದರ ಮಧ್ಯದಲ್ಲಿ ಮೈಮೇಲೆ ಪಫ್ ಹೊಂದಿರುವ ವಿಚಿತ್ರ ಹಾವಿನ ರೀತಿಯ ಪ್ರಾಣಿಯೊಂದು ಅತ್ತಿಂದಿತ್ತ ಓಡಾಡುತ್ತಿದೆ. ವಿಡಿಯೋದಲ್ಲಿ ಸರೀಸೃಪವು ಅರ್ಧದಷ್ಟು ನೀರು ತುಂಬಿರುವ ತೊಟ್ಟಿಯಲ್ಲಿ ತೆವಳುತ್ತಿರುವುದನ್ನು ಹಾಗೂ ಮಧ್ಯದಲ್ಲಿ ಮಲಗುವುದು ನಾಲಿಗೆ ಹೊರಹಾಕುವುದು ಮಾಡುತ್ತಿದೆ. ಅಅಚ್ಚರಿ ಏನೆಂದರೆ ಇದು ನೀರಿನಲ್ಲಿ ವಾಸಿಸುವ ಹಾವಾಗಿರುವುದರಿಂದ ಅದರ ಮೈ ಮೇಲೆ ವಿಶೇಷ ರೀತಿಯ ಪಾಚಿ ರಚನೆಯಾಗಿದೆಯಂತೆ. ಈ ಹಾವು ಡ್ರ್ಯಾಗನ್ ಆಗಿ ಬದಲಾಗಿಲ್ಲ ಬದಲಾಗಿ ಅದರ ಮೈ ಮೇಲೆ ಪಾಚಿ ಬೆಳೆದಿದೆ ಎಂದು ತಿಳಿದುಬಂದಿದೆ.
ವೀಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ ಇದನ್ನು ಥೈಲ್ಯಾಂಡ್‌ನಲ್ಲಿ ಚಿತ್ರಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ವಿಶಿಷ್ಟ ರೀತಿಯ ಹಾವು ಕಂಡ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ, ಇದು ಯಾವುದು ಹೊಸ ಜಾತಿಯ ಹಾವು ಎಂದು ಕಣ್ಣು ಕಣ್ಣು ಬಿಟ್ಟು ವಿಡಿಯೋ ನೋಡುವಂತಾಗಿದೆ.
ಅಷ್ಟೇ ಅಲ್ಲ ಈ ಹಾವಿನ ಮೇಲೆ ಇಷ್ಟೊಂದು ಸುಂದರವಾಗಿ ಪಾಚಿ ಬೆಳೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಅದರ ಮೈಮೇಲೆ ಕೃತಕವಾಗಿ ಬಟ್ಟೆ ಹಾಕಿದಂತೆ ಕಂಡುಬರುತ್ತಿದೆ. ಕೆಲವರಂತು ಇದು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜನರು ವಿವಿಧ ರೀತಿಯ ಕಮೆಂಟ್‌ಗಳ ಮಾಡುತ್ತಿದ್ದಾರೆ.
ಈ ಹಾವು ಬೆಂಕಿಯನ್ನು ಉಗುಳುತ್ತದೆಯೇ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಅಚ್ಚರಿಯಾಗಿ ಅದು ನೋಡಲು ಚೀನಾದ ಡ್ರ್ಯಾಗನ್‌ನಂತೆ ಕಾಣುತ್ತಿರುವುದು ಈ ಪ್ರಶ್ನೆ ಹುಟ್ಟುಹಾಕಲು ಕಾರಣವಾಗಿದೆ. ಈ ಹಾವು ಇದು ತುಂಬಾನೆ ಭಯಾನಕವಾಗಿದೆ. ಇದನ್ನು ನೋಡಿದರೆ ಯಾರು ಸಹ ಇದು ಹಾವು ಎಂದು ಹೇಳಲಾಗುವುದಿಲ್ಲ. ಒಮ್ಮೆ ಅದನ್ನು ನೀರಿನಿಂದ ಹೊರತೆಗೆದು ಪರೀಕ್ಷಿಸಿ ನೋಡಿ ಎಂದು ಮತ್ತೊಬ್ಬ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಾನು ಮೊದಲ ಬಾರಿಗೆ ಹಾವನ್ನು ನೋಡಿದ್ದೇನೆ, ಇದಕ್ಕಿಂತ ದೊಡ್ಡ ಅಚ್ಚರಿ ನಿಸರ್ಗದಲ್ಲಿ ಇದೆ ಎಂದರೆ ನಾವು ನಂಬುವುದಿಲ್ಲ. ಇದೊಂದು ಅದ್ಭುತವೇ ಸರಿ ಎಂದಿದ್ದಾರೆ. ಇದು ಥೈಲ್ಯಾಂಡ್‌ನಲ್ಲಿ ಪತ್ತೆಯಾಗಿದೆ ಎನ್ನುತ್ತಿದ್ದಾರೆ ಹಾಗಾದ್ರೆ ಅವರು ಈ ಹಾವು ಮತ್ತಷ್ಟು ಫೇಮಸ್ ಆಗಲಿ ಎಂದು ನಕಲಿ ಪಾಚಿ ಅದರ ಮೈ ಮೇಲೆ ಬೆಳೆಸಿದ್ದಾರೆ ಎಂದು ಮತ್ತೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ 8 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.



Click it and Unblock the Notifications
