Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಮುದ್ರ ನೀಡುತ್ತಿರುವ ಸೂಚನೆ ಏನು..? ಗ್ರಿಡ್ ಅಲೆ..ಓರ್ಫಿಶ್..ಸೀಡೆವಿಲ್ ಗೋಚರ ಆಗಿದ್ಯಾಕೆ?
ಸಮುದ್ರ ನೋಡಲು ಎಷ್ಟು ಶಾಂತವಾಗಿ ಕಾಣಿಸತ್ತೋ ಅಷ್ಟೇ ಭೀಕರವಾಗಿಯೂ ಕೆಲವೊಮ್ಮೆ ಪರಿಣಮಿಸುವುದು ನೋಡಬಹುದು. ಸುನಾಮಿ, ಚಂಡಮಾರುತದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಾಗಿ ಭೂಮಿಯನ್ನು ನಾಶಮಾಡುವಷ್ಟು ಭೀಕರತೆ ಪಡೆದುಕೊಳ್ಳುತ್ತೆ. ಹೀಗಾಗಿ ಸಾಗರ ಕೆರಳಿದರೆ ಜೀವರಾಶಿ ನಾಶವಾಗುತ್ತೆ ಎಂಬ ಭಯ ಕಾಡುವುದು. ಹಾಗೆ ಸಾಗರದಾಳದಲ್ಲಿ ಉಂಟಾಗುವ ಹಲವು ವಿದ್ಯಮಾನಗಳು ಈ ಭಯ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಸಾಗರದಾಳದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು, ಪ್ರಶ್ನೆ ಹುಟ್ಟುಹಾಕುವಂತಹ ಘಟನೆಗಳು ನಡೆಯುವುದು ನೋಡಬಹುದು. ಈಗ ವೈರಲ್ ಆಗಿರುವ ವಿಡಿಯೋ ಕೂಡ ಇಂತಹ ಅಚ್ಚರಿಗೆ ಕಾರಣವಾಗುತ್ತಿದೆ. ಸಾಗರದ ಮೇಲಿನ ಅಲೆಗಳು ಚೌಕಾಕಾರವಾಗಿ ಕಾಣಿಸಿಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಚಚೌಕವಾಗಿ ಸಮುದ್ರದ ಅಲೆಗಳು ಮೂಡಿರುವ ಹಿಂದೆ ಯಾವ ವಿದ್ಯಮಾನ ನಡೆದಿದೆ ಎಂಬ ಕುತೂಹಲ ಮೂಡಿದೆ.

ಅಮೇಜಿಂಗ್ ನೇಚರ್ ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸಮುದ್ರದ ಮಧ್ಯದಲ್ಲಿ ತೆರಳುತ್ತಿದ್ದ ಬೋಟ್‌ನಿಂದ ವಿಡಿಯೋ ಸೆರೆ ಹಿಡಿಯಲಾಗಿದೆ. ಸಾಗರದ ಅಲೆಗಳು ಟೈಲ್ಸ್ ಆಕಾರದಲ್ಲಿ ಚಚೌಕವಾಗಿ ಕಾಣಿಸಿಕೊಂಡಿದೆ. ಇದು ನೋಡಲು ಭಯಾನಕವಾಗಿ ಕಾಣಿಸುತ್ತಿದೆ. ಸಾಗರ ಮೇಲೆ ಈ ರೀತಿ ಅಲೆ ಉದ್ಭವಿಸುವುದಕ್ಕೆ ಗ್ರಿಡ್ ಅಲೆಗಳು ಎಂದು ಕರೆಯಲಾಗುತ್ತದೆ.
ಸಮುದ್ರದಲ್ಲಿ ಈ ರೀತಿಯ ಗ್ರಿಡ್ ಅಲೆಗಳ ನೋಡಿದ ತಕ್ಷಣ ಅಲ್ಲಿಂದ ನೀವು ಹೊರಬನ್ನಿ ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಇದು ಸಮುದ್ರ ಯಾವುದೋ ಸಂದೇಶ ನೀಡುತ್ತಿರಬಹುದು ಎಂದು ಕೂಡ ಹೇಳಲಾಗಿದೆ. ಆದ್ರೆ ಈ ರೀತಿಯ ವಿದ್ಯಮಾನ ಸಂಭವಿಸುವುದು ಏಕೆ ಎಂಬುದು ನಿಖರವಾಗಿ ಯಾರು ಕೂಡ ದೃಢಪಡಿಸಿಲ್ಲ.
ಆದ್ರೆ ಈ ರೀತಿ ಅಲೆ ಉಂಟಾಗಲು ಕೆಲವೊಂದು ಊಹೆಗಳನ್ನು ಹೇಳಲಾಗಿದೆ. ಪ್ರಮುಖವಾಗಿ ಸಮುದ್ರದ ಮೇಲ್ಮೈಯಲ್ಲಿ ಉಂಟಾಗುವ ಗಾಳಿಯ ಒತ್ತಡವು ಈ ಅಲೆಯ ಸೃಷ್ಟಿಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ ಸಮುದ್ರ ಭಾಗದ ಯಾವುದಾದರು ಒಂದು ಕಡೆಯಲ್ಲಿ ಪರ್ವತ ಶ್ರೇಣಿಗಳಿದ್ದು ಅಲ್ಲಿಂದ ಗಾಳಿಯು ವಿರುದ್ಧ ದಿಕ್ಕಿನಲ್ಲಿ ಕ್ರಮಿಸಿ ವಾಪಾಸು ಬಂದಾಗ ಸಮುದ್ರ ಅಲೆಗಳ ಚಲನೆಯಲ್ಲಿ ಏರುಪೇರು ಉಂಟಾಗಿ ಈ ಪ್ರಕ್ರಿಯೆ ಉಂಟಾಗಬಹುದು ಎನ್ನಲಾಗಿದೆ.
ಆದ್ರೆ ಚಚೌಕವಾಗಿ ಅಳತೆ ಹಿಡಿದಂತಹ ಅಲೆಗಳ ಸೃಷ್ಟಿ ಆಗುವುದು ಏಕೆ ಎಂಬುದನ್ನು ನಿಖರವಾಗಿ ಹೇಳಲಾಗಿಲ್ಲ. ಹಾಗೆ ಸಮುದ್ರದ ಆಳದಲ್ಲಿ ನಡೆಯುವ ಯಾವ ಪ್ರಕ್ರಿಯೆಯು ಇಂತಹ ವಿಚಿತ್ರ ವಿದ್ಯಮಾನಕ್ಕೆ ಕಾರಣವಾಗುತ್ತಿದೆ ಎಂಬುದು ಕೂಡ ಪತ್ತೆ ಮಾಡಲಾಗಿಲ್ಲ.
ಮೆಕ್ಸಿಕೋ ತೀರಕ್ಕೆ ಬಂದಿತ್ತು ಅಪರೂಪದ ಓರ್‌ಫಿಶ್
ಕಳೆದೊಂದು ವಾರದ ಹಿಂದೆ ಮೆಕ್ಸಿಕೋ ಕಡಲ ತೀರದಲ್ಲಿ ಅಪರೂಪದ ಡೋಮ್ಸ್‌ಡೇ ಓರ್‌ಫಿಶ್ ಪತ್ತೆಯಾಗಿತ್ತು. ಆಳ ಸಮುದ್ರದ ಜೀವಿ ಏಕಾಏಕಿ ಸಮುದ್ರದ ದಡಕ್ಕೆ ಬಂದಿರುವುದು ಕಂಡು ಎಲ್ಲರು ಶಾಕ್ ಆಗಿದ್ದರು. ಹಲವರು ಇದೇ ಮೊದಲ ಬಾರಿಗೆ ಈ ಮೀನು ನೋಡಿ ಅಚ್ಚರಿಗೂ ಒಳಗಾದರು. ಇದು ದುರಂತದ ದಿನಗಳ ಮಹಾ ಸೂಚನೆ ಎಂದು ಕರೆಯಲಾಯಿತು.
ಈ ಮೀನನ್ನು "ರ್ಯುಗು ನೋ ಟ್ಸುಕೈ" ಎಂದು ಕರೆಯಲಾಗುತ್ತದೆ, ಇದು ಜಪಾನಿನ ಪುರಾಣಗಳಲ್ಲಿ 'ಸಮುದ್ರ ದೇವರ ಸಂದೇಶವಾಹಕ ಎಂದು ಹೇಳಲಾಗುತ್ತದೆ. 2011ರ ಜಪಾನ್ ಸುನಾಮಿ ದುರಂತಕ್ಕೂ ಮೊದಲು 20 ಓರ್‌ಫಿಶ್‌ಗಳು ಸಮುದ್ರದ ಅಂಚಿನಲ್ಲಿ ಪತ್ತೆಯಾಗಿದ್ದವು. ಈಗ ಈ ಮೆಕ್ಸಿಕೋ ಸಮುದ್ರ ತೀರದಲ್ಲಿ ಈ ಮೀನು ಪತ್ತೆಯಾಗಿದೆ.
ಇದೆಷ್ಟೇ ಅಲ್ಲ ಇತ್ತೀಚಿಗೆ ಆಫಿಕಾದ ಕ್ಯಾನರಿ ದ್ವೀಪಗಳ ಸಾಲಿನಲ್ಲಿ ಮೊದಲ ಬಾರಿಗೆ ಬ್ಲಾಕ್ ಸೀಡೆವಿಲ್ ಫಿಶ್ ಪತ್ತೆಯಾಗಿತ್ತು, ಇದು ಸಮುದ್ರ ಅತ್ಯಂತ ಆಳ ಪ್ರದೇಶದಲ್ಲಿ ವಾಸಿಸುವ ಏಕೈಕ ಮೀನಾಗಿದೆ. ಆದ್ರೆ ಸಮುದ್ರದ ಮೇಲ್ಮೈಯಲ್ಲಿ ಇದು ಕಂಡುಬಂದಿತ್ತು. ಈ ವಿದ್ಯಮಾನ ಕೂಡ ಹಲವರಲ್ಲಿ ಅಚ್ಚರಿಯ ಜೊತೆಗೆ ಆಘಾತಕ್ಕೆ ಕಾರಣವಾಯಿತು.



Click it and Unblock the Notifications
