Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೆಮಾಲ್ ಚಂಡಮಾರುತದ ವೀಡಿಯೋ ನೋಡುತ್ತಿದ್ದರೆ ಎದೆಯಲ್ಲಿ ತಣ್ಣನೆಯ ನಡುಕ ಹುಟ್ಟುವುದು
ಈಗ ರೆಮಾಲ್ ಚಂಡಮಾರುತದಿಂದಾಗಿ ದೇಶದ ಹಲವೆಡೆ ಮಳೆ ಬೀಸುತ್ತಿದೆ, ಒಂದು ವಾರದಿಂದ ಮಳೆ ಸುರಿಯುತ್ತಿದೆ, ಈ ಚಂಡ ಮಾರುತ ಉಂಟಾದಾಗ ರಭಸವಾದ ಗಾಳಿ ಬೀಸುವುದನ್ನು ನೋಡುತ್ತೇವೆ, ಆದರೆ ಮೋಡಗಳು ಯಾವ ರೀತಿ ಕಾಣುತ್ತದೆ ಎಂಬ ವೀಡಿಯೋ ವೈರಲ್ ಆಗಿದೆ.
ಆ ವೀಡಿಯೋ ನೋಡಿದಾಗ ಈ ಚಂಡಮಾರುತ ಎಂಬುವುದು ಎಷ್ಟೊಂದು ಭೀಕರವಾಗಿರುತ್ತದೆ ಎಂಬುವುದು ತಿಳಿಯುವುದು. ಆ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎದೆಯಲ್ಲಿ ತಣ್ಣನೆ ನಡುಕ ಉಂಟಾಗುವುದು, ಅಬ್ಬಾ ಪ್ರಕೃತಿ ಮುನಿದರೆ ಎಂಥ ರೌದ್ರಾವತಾರ ಅಲ್ವಾ? ಎಂದನಿಸುವುದು.

ಈ ವೀಡಿಯೋವನ್ನು ಬಂಗ್ಲಾದೇಶದ ಡೈಲಿ ದಿ ಡೈಲಿ ಸ್ಟಾರ್ ವೀಡಿಯೋಗ್ರಾಫರ್ ವೀಡಿಯೋ ಮಾಡಿದ್ದು ಇದೀಗ ಆ ವೀಡಿಯೋ ತುಂಬಾ ವೈರಲ್ ಆಗಿದೆ. ಕಪ್ಪು ಮೋಡಗಳು ಸುರುಳಿ ಸುರುಳಿಯಾಗಿ ಆಕಾಶದಲ್ಲಿ ಕಂಡು ಬರುತ್ತಿದೆ, ಆ ಮೋಡಗಳು ಸಮುದ್ರವನ್ನು ತಟ್ಟುವಂತಿದೆ, Spectacular shot of #CycloneRemal formation in the Bay of #Bengal by Daily Star #Bangladesh ಎಂಬ ಕ್ಯಾಪ್ಷನ್ ಅಡಿಯಲ್ಲಿ ಇಂದ್ರಜಿತ್ ಕುಂಡು ಎಂಬವವರು ಈ ವೀಡಿಯೋ ಶೇರ್ ಮಾಡಿದ್ದು ವೀಡಿಯೋ ತುಂಬಾನೇ ವೈರಲ್ ಆಗಿದೆ.
ಭಾರತದ ಹವಮಾನ ಇಲಾಖೆ ಪ್ರಕಾರ ಭಾನುವಾರ ಬೆಳಗ್ಗೆ 8:30ಕ್ಕೆ ಚಂಡಾಮಾರುತ ಉಂಟಾಗಿ ನಂತರ ಉತ್ತರದ ಕಡೆಗೆ ಚಲಿಸಿದೆ, ನಂತರ ಸೋಮವಾರಕ್ಕೆ ಚಂಡಾಮಾರುತದ ತೀವ್ರತೆ ಕಡಿಮೆಯಾಗುತ್ತಾ ಬಂತು
ಈ ಚಂಡಾಮಾರುತದ ಪ್ರಭಾವದಿಂದ ಭಾರತದ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ
ಭಾರತದ ಹಲವು ಕಡೆ ಅಸ್ಸಾಂ, ಮೆಘಾಲಯ. ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮಿಝೋರಾಂ, ಮಣಿಪುರ, ತ್ರಿಪುರ ಈ ಕಡೆಗಳಲ್ಲಿ ಮೇ ತಿಂಗಳ ಮೇ 28ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Spectacular shot of #CycloneRemal formation in the Bay of #Bengal by Daily Star #Bangladesh pic.twitter.com/WWT39HpFou
— Indrajit Kundu | ইন্দ্রজিৎ (@iindrojit) May 26, 2024
ರೆಮಾಲ್ ಚಂಡಮಾರುತದಿಂದ ಹಲವಾರು ನಷ್ಟ ಸಂಭವಿಸಿದೆ
ಬಾಂಗ್ಲಾದೇಶದಲ್ಲಿ ಎದ್ದ ರೇಮ್ ಚಂಡಮಾರುತದಿಂದಾಗಿ ಹಲವಾರು ನಷ್ಟಗಳು ಉಂಟಾಗಿವೆ. ಈ ಚಂಡಾಮಾರುತ 120 kmph ವೇಗದಲ್ಲಿ ಅಪ್ಪಳಿಸಿತ್ತು, 7 ಜನರು ಚಂಡಾಮಾರುತದಿಂದಾಗಿ ಸಾವನ್ನಪ್ಪಿದ್ದರು. ಹಲವು ಕಡೆ 12 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿದು ಹೋಗಿತ್ತು. ಬಾಂಗ್ಲಾದೇಶದ ಅಧಿಕಾರಿಗಳು ಭಾನುವಾರ 800,000 ಜನರನ್ನು ಸ್ಥಾಳಾಂತರ ಮಾಡಿದ್ದರಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ.



Click it and Unblock the Notifications
