Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್!
ಏನಪ್ಪಾ, ಸಮಾಧಿಗೂ ಬಂತು QR ಕೋಡ್! ಸ್ಕ್ಯಾನ್ ಮಾಡಿದ್ರೆ ಮೃತರ ಎಲ್ಲಾ ಮಾಹಿತಿ ಲಭ್ಯ.. ಎಲ್ಲಿ?
ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಸಮಾಧಿಯ ಮೇಲೆ ಕ್ಯೂಆರ್ ಕೋಡ್! ಸ್ಕ್ಯಾನ್ ಮಾಡಿದರೆ ಮೃತರ ಸಂಪೂರ್ಣ ಜೀವನ ಕಥೆ ಲಭ್ಯ. ಕೇರಳದಲ್ಲಿ ಹೊಸ ಕ್ರಾಂತಿ. ಹೌದು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರೀತಿಪಾತ್ರರ ನೆನಪುಗಳನ್ನು ಶಾಶ್ವತವಾಗಿ ಉಳಿಸಲು ಬಯಸುತ್ತಾನೆ. ಆದರೆ, ಸಮಾಧಿಯ ಬಳಿ ಕುಳಿತುಕೊಂಡು, ಕೇವಲ ಒಂದು ಸ್ಕ್ಯಾನ್ ಮೂಲಕ ವ್ಯಕ್ತಿಯ ಜೀವನ ಚರಿತ್ರೆಯನ್ನು ತಿಳಿಯಲು ಸಾಧ್ಯವೇ? ಕೇರಳದಲ್ಲಿ ಇಂತಹದ್ದೇ ಒಂದು ವಿಡಿಯೋ ವೈರಲ್ (Kerala Graves QR code) ಆಗಿದೆ. ಇದು ತಂತ್ರಜ್ಞಾನ ಮತ್ತು ಭಾವನೆಗಳ ಸಂಗಮಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಜನರ ಹೃದಯ ಗೆದ್ದಿದೆ.
ವೈರಲ್ ಆದ ಈ ವಿಡಿಯೋದಲ್ಲಿ, ಸಮಾಧಿ ಕಲ್ಲಿನ ಮೇಲೆ ಕ್ಯೂಆರ್ ಕೋಡ್ (QR code) ಅಳವಡಿಸಲಾಗಿದೆ. ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ, ಮೃತ ವ್ಯಕ್ತಿಯ ಜನ್ಮ ದಿನಾಂಕ, ಕುಟುಂಬದ ವಿವರಗಳು, ವೃತ್ತಿ, ಫೋಟೋಗಳು ಮತ್ತು ಅವರ ಜೀವನದ ಪ್ರಮುಖ ಘಟನೆ ಸೇರಿದಂತೆ ಸಂಪೂರ್ಣ ಜೀವನದ ಬಗ್ಗೆ ತಿಳಿಯಬಹುದು. ಈ ನವೀನ ಪರಿಕಲ್ಪನೆಯು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ನೆಟ್ಟಿಗರು ಇದಕ್ಕೆ ತರಹೇವಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಸ್ಮಶಾನಕ್ಕೆ ಹೋಗಿ ಸಮಾಧಿಯ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಾನೆ. ಕೋಡ್ ಸ್ಕ್ಯಾನ್ ಮಾಡಿದ ತಕ್ಷಣವೇ ಒಂದು ವೆಬ್ಸೈಟ್ ತೆರೆದುಕೊಳ್ಳುತ್ತದೆ. ಅದರಲ್ಲಿ ಮೃತ ವ್ಯಕ್ತಿಯ ಹೆಸರು, ಹುಟ್ಟಿದ ಸ್ಥಳ, ಭಾವಚಿತ್ರ (ಫೋಟೋ), ವೃತ್ತಿ ಮತ್ತು ಕುಟುಂಬದ ವಿವರಗಳು ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
ಒಂದು ವೇಳೆ ಯಾರಾದರೂ ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಮಾಹಿತಿ ಬೇಕಿದ್ದರೆ, ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ವಿಕಿಪೀಡಿಯಾದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ವೈರಲ್ ವಿಡಿಯೋ ಮಾಡಿದ ಅಚ್ಚರಿ
ವ್ಯಕ್ತಿಯು ಸಮಾಧಿಯ ಮೇಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ತೆರೆದ ವೆಬ್ಸೈಟ್ ಹಲವರನ್ನು ಅಚ್ಚರಿಗೊಳಿಸಿದೆ. ಆ ವೆಬ್ಸೈಟ್ನಲ್ಲಿ 'ನೆನಪುಗಳು' ಮತ್ತು 'ಟೈಮ್ಲೈನ್' ನಂತಹ ಟ್ಯಾಬ್ ಅಥವಾ ಆಯ್ಕೆಗಳಿವೆ. ವಿಡಿಯೋ ಮುಂದುವರಿದಂತೆ, ಮೃತ ವ್ಯಕ್ತಿಯ ಪತ್ನಿ, ಮಕ್ಕಳು, ಕುಟುಂಬ ಮತ್ತು ಅತ್ತೆಯ ಮನೆಯ ಸಂಬಂಧಿತ ಎಲ್ಲಾ ಮಾಹಿತಿಗಳು ತೆರೆದುಕೊಂಡವು. ವಿಡಿಯೋದ ಕೊನೆಯಲ್ಲಿ, 'ಇದು ಕೇವಲ ಸಮಾಧಿಯಲ್ಲ, ಜೀವಂತ ಕಥೆ' ಎಂದು ಬರೆಯಲಾಗಿದೆ.
ವಿಡಿಯೋಗೆ ಜನರ ಪ್ರತಿಕ್ರಿಯೆ ಇದು
ಕೇರಳದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿದೆ. ಅನೇಕ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು, 'ನನಗೆ ಬೇರೆಯವರ ಬಗ್ಗೆ ತಿಳಿದಿಲ್ಲ, ಆದರೆ ನನಗೂ ಇದೇ ರೀತಿಯ ಸಮಾಧಿ ಕಲ್ಲು ಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು 'ಇದು ತುಂಬಾ ಒಳ್ಳೆಯದು' ಎಂದಿದ್ದಾರೆ. 'ಇದು ನಮ್ಮವರನ್ನು ನೆನಪಿಟ್ಟುಕೊಳ್ಳಲು ಉತ್ತಮವಾದ ಕಲ್ಪನೆ' ಎಂದು ಇನ್ನೊಬ್ಬರು ಕೊಂಡಾಡಿದ್ದಾರೆ.
ಕ್ಯೂಆರ್ ಕೋಡ್ ಹಿಂದಿನ ಪ್ರೇರಣೆ
ಕೇರಳದ ತ್ರಿಶೂರ್ನಲ್ಲಿ ವಾಸಿಸುವ ಫ್ರಾನ್ಸಿಸ್ ಮತ್ತು ಲೀನಾ ದಂಪತಿಗಳು ಈ ಕ್ಯೂಆರ್ ಕೋಡ್ ಪರಿಕಲ್ಪನೆಯನ್ನು ಮೊದಲು ಪ್ರಾರಂಭಿಸಿದರು. 2021 ರಲ್ಲಿ ತಮ್ಮ 26 ವರ್ಷದ ಮಗ ಇವಿನ್ ಫ್ರಾನ್ಸಿಸ್ನನ್ನು ಕಳೆದುಕೊಂಡ ನಂತರ, ಅವರು ತೀವ್ರ ದುಃಖಿತರಾದರು. ಇವಿನ್ ಬ್ಯಾಡ್ಮಿಂಟನ್ ಆಡುವಾಗ ಕುಸಿದು ಬಿದ್ದು ನಿಧನರಾದರು. ಅವರನ್ನು ಸೇಂಟ್ ಜೋಸೆಫ್ ಚರ್ಚ್ನಲ್ಲಿ ಸಮಾಧಿ ಮಾಡಲಾಯಿತು.
ಅಪ್ಪ, ಅಣ್ಣನ ಬಗ್ಗೆ ಬರೆಯೋಣ!
ಇವಿನ್ ತಂದೆ ಫ್ರಾನ್ಸಿಸ್ ಅವರು, 'ನನ್ನ ಮಗ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆಗಳನ್ನು ಮಾಡಿದನು. ಆತ ಎಲ್ಲರನ್ನೂ ಪ್ರಭಾವಿಸಿದ್ದನು. ಹಾಗಾಗಿ, ಮರಣದ ನಂತರವೂ ಆತ ನೆನಪಿನಲ್ಲಿ ಉಳಿಯಬೇಕೆಂದು ನಾನು ಬಯಸಿದೆ. ಆಗ ನನ್ನ ಮಗಳು, 'ಅಪ್ಪ, ಅಣ್ಣನ ಬಗ್ಗೆ ಬರೆಯೋಣ' ಎಂದು ಸಲಹೆ ನೀಡಿದಳು' ಎಂದಿದ್ದಾರೆ. ನಂತರ, ಅವರು ಇವಿನ್ ಅವರ ಜೀವನ ಚರಿತ್ರೆಯ ಕ್ಯೂಆರ್ ಕೋಡ್ ಸಿದ್ಧಪಡಿಸಿ ಸಮಾಧಿಯ ಮೇಲೆ ಅಳವಡಿಸಿದರು. ಈ ಮೂಲಕ ಪ್ರೀತಿಪಾತ್ರರ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಸಲು ತಂತ್ರಜ್ಞಾನವನ್ನು ಬಳಸಿಕೊಂಡರು.



Click it and Unblock the Notifications
