Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
Wow: ಪತ್ನಿಗಾಗಿ ತಾಜ್‌ಮಹಲ್ ಶೈಲಿಯ ಬಂಗಲೆ ನಿರ್ಮಿಸಿದ ಪತಿ! ಬೆಲೆ ತಿಳಿದ್ರೆ ಬೆಚ್ಚಿಬೀಳ್ತೀರಾ
ಇದು ಪತ್ನಿಯ ಮೇಲಿನ ಅಪಾರ ಪ್ರೀತಿಯ ಪ್ರತೀಕ. ಪ್ರೀತಿಯ ಸಂಕೇತವಾಗಿ 'ತಾಜ್ ಮಹಲ್' ನಂತಹ ಮನೆಯೇ ನಿರ್ಮಾಣ. ಹೌದು, ಪ್ರೀತಿಯ ಹೆಂಡತಿಗಾಗಿ 7ನೇ ಅದ್ಭುತವನ್ನೇ ನಿರ್ಮಿಸಿದ್ದಾನೆ ಪತಿರಾಯ. ತಾಜ್‌ಮಹಲ್ (Taj Mahal) ಅನ್ನೇ ಮಿರಿಸುತ್ತೆ ಈ ಹೊಸ ಬಂಗಲೆ. ತಾಜ್ ಮಹಲ್ ಶೈಲಿಯ ಬಂಗಲೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆಲೆ ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. ಈ ಬಂಗಲೆಯನ್ನು ಮಕ್ರಾನಾ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ತಾಜ್‌ಮಹಲ್ ರೀತಿಯ ಬಂಗಲೆ (Taj Mahal-Style House) ಕಟ್ಟಲು ತುಂಬಾನೇ ಹಣ ಖರ್ಚಾಯಿತು ಎಂದು ದಂಪತಿ ಹೇಳಿಕೊಂಡಿದ್ದಾರೆ. ಹಾಗಿದ್ರೆ, ಈ ಬಂಗಲೆ ಎಲ್ಲಿದೆ? ಇದಕ್ಕೆ ಎಷ್ಟು ಕೋಟಿ ಖರ್ಚಾಯಿತು? ಎಂಬ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಸ್ತುತ ದಿನಗಳಲ್ಲಿ ಒಂದು ಚಿಕ್ಕ ಮನೆ ಕಟ್ಟುವುದು ಎಂದರೆ ದೊಡ್ಡ ಸಾಧನೆ. ದುಬಾರಿ ಬೆಲೆಯ ನಡುವೆ ಒಂದು ಚಿಕ್ಕ ಮನೆ ನಿರ್ಮಾಣ ಮಾಡಲು 3 ರಿಂದ 10 ಲಕ್ಷ ರೂ.ಗಿಂತ ಹೆಚ್ಚು ಹಣ ಬೇಕು. ಆದರೆ, ಇಲ್ಲೊಬ್ಬ ಉದ್ಯಮಿ ತನ್ನ ಪ್ರೀತಿಯ ಹೆಂಡತಿಗಾಗಿ ತಾಜ್ ಮಹಲ್ ಶೈಲಿಯಲ್ಲಿಯೇ ಭವ್ಯ ಬಂಗಲೆಯನ್ನು ಕಟ್ಟಿ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಹೆಸರು ಆನಂದ್ ಪ್ರಕಾಶ್ ಚೌಕ್ಸೆ. ತನ್ನ ಪತ್ನಿಗಾಗಿ ತಾಜ್‌ಮಹಲ್ ಶೈಲಿಯಲ್ಲಿ ಮನೆ ಕಟ್ಟಿಸಿ ಮಾದರಿಯಾಗಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ದಂಪತಿ ಮತ್ತು ಬಂಗಲೆ ಎರಡನ್ನೂ ಹೊಗಳುತ್ತಿದ್ದಾರೆ.

ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ತಾಜ್ ಮಹಲ್ ಒಂದು. ಮಧ್ಯಪ್ರದೇಶದಲ್ಲಿ ದಂಪತಿಯೊಂದು ತಾಜ್‌ಮಹಲ್ ಶೈಲಿಯಲ್ಲಿ ಮನೆ ಕಟ್ಟಿ ಎಲ್ಲರ ಹುಬ್ಬೇರಿಸಿದ್ದಾರೆ. ಬುರ್ಹಾನ್‌ಪುರದಲ್ಲಿ ತಾಜ್‌ಮಹಲ್ ಕಟ್ಟಡವನ್ನೇ ಹೋಲುವಂತೆ 4 ಬಿಹೆಚ್‌ಕೆ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ತಾಜ್ ಮಹಲ್ ಪ್ರತಿನಿಧಿಸುವುದು ಪ್ರೀತಿ. ಹೀಗಾಗಿ, ಉದ್ಯಮಿ ಆನಂದ್ ಪ್ರಕಾಶ್ ಚೌಕ್ಸೆ ಅವರು ಇದು ನನ್ನ ಪತ್ನಿಗೆ ಸಮರ್ಪಣೆ ಮಾಡುತ್ತೇನೆ ಎಂದಿದ್ದಾರೆ. ಜೊತೆಗೆ ಇದರಿಂದ ನಮ್ಮ ಪ್ರೀತಿ ನಮ್ಮೊಂದಿಗೆ ಬಲವಾಗಿ ನಿಂತಿದೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಈ ಬಂಗಲೆ ಕಟ್ಟಲು ಎಷ್ಟು ಕೋಟಿ ಖರ್ಚಾಯಿತು?
ವರದಿಯ ಪ್ರಕಾರ, ಈ ಭವ್ಯ ಬಂಗಲೆಯನ್ನು ನಿರ್ಮಿಸಲು ಸುಮಾರು 2 ಕೋಟಿ ರೂ. ಖರ್ಚು ಮಾಡಲಾಗಿದೆ. ಇದನ್ನು ಉದ್ಯಮಿಯು ತನ್ನ 50 ಎಕರೆ ಜಾಗದೊಳಗೆ ಕಟ್ಟಿಸಿದ್ದಾರೆ. ಇದರಲ್ಲಿ ಅವರು ಸ್ಥಾಪಿಸಿದ ಶಾಲೆಯೂ ಸೇರಿದೆ. ಮನೆಯಲ್ಲಿ ನಾಲ್ಕು ಮಲಗುವ ಕೋಣೆಗಳು, ಧ್ಯಾನ ಕೊಠಡಿ, ಗ್ರಂಥಾಲಯ, ಕೆತ್ತಿದ ಕಂಬಗಳು ಮತ್ತು ಕಮಾನಿನ ಬಾಗಿಲುಗಳಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋವನ್ನು 14.7 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 1.3 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ತಾಜ್ ಮಹಲ್ ರೀತಿಯೇ ಇರುವ ಮನೆ ಕಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಚೌಕ್ಸೆ ಹೇಳಿದ್ದೇನು?
ತಾಜ್‌ಮಹಲ್ ಶೈಲಿಯ ಈ ಕಟ್ಟಡವನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಆಗ್ರಾದಲ್ಲಿರುವ ಐಕಾನಿಕ್ ಸ್ಮಾರಕದಲ್ಲಿ ಬಳಸಲಾದ ಅಮೃತಶಿಲೆಯಿಂದ ಕಟ್ಟಿಸಲಾಗಿದೆ. ಇದು ರಿಯಲ್ ತಾಜ್ ಮಹಲ್ನ ಮೂರನೇ ಒಂದರಷ್ಟು ದೊಡ್ಡದಾಗಿದೆ. ಜೊತೆಗೆ ಈ ರೀತಿ ಕಟ್ಟಡ ಕಟ್ಟೋಕೆ ಕಾರಣವನ್ನು ಅವರು ರಿವೀಲ್ ಮಾಡಿದ್ದಾರೆ. ಮೊದಲು ತಾಜ್ ಮಹಲ್ ಪ್ರತಿನಿಧಿಸುವುದು ಪ್ರೀತಿ. ಹೀಗಾಗಿ, ಇದನ್ನು ನನ್ನ ಪತ್ನಿಗೆ 100% ಸಮರ್ಪಣೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ನಮ್ಮ ಪ್ರೀತಿ ನಮ್ಮೊಂದಿಗೆ ಬಲವಾಗಿ ನಿಂತಿದೆ ಎಂದು ಉದ್ಯಮಿ ಆನಂದ್ ಪ್ರಕಾಶ್ ಚೌಕ್ಸೆ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಸೋಶಿಯಲ್ ಮೀಡಿಯಾ ಬಳಕೆದಾರರು ಬಂಗಲೆ ಮತ್ತು ದಂಪತಿಯ ಬಗ್ಗೆ ಹೊಗಳಿದ್ದಾರೆ. ಒಬ್ಬರು, 'ಒಂದು ಶಾಲೆ, ಒಂದು ಸ್ಮಾರಕ ಮತ್ತು ಸಂದೇಶ - ಎಲ್ಲವೂ ಒಂದರಲ್ಲಿ. ಅದ್ಭುತ.' ಎಂದಿದ್ದಾರೆ. ಮತ್ತೊಬ್ಬರು, 'ವಾವ್! ಮಾಲೀಕರಿಂದ ಎಂತಹ ಆಲೋಚನೆ! ಮನೆಯ ಪ್ರವೇಶವು ಅವನ ವಿನಮ್ರ ಆರಂಭವನ್ನು ನೆನಪಿಸುತ್ತದೆ ಮತ್ತು ಅವನು ಅದನ್ನು ಎಂದಿಗೂ ಮರೆಯಬಾರದು! ಇದು ಒಂದು ಉತ್ತಮ ಪಾಠ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ನಂಬಲಾಗದು! ಈ ಯುಗದಲ್ಲಿ ಪ್ರೀತಿಗೆ ಇದು ಅತ್ಯಂತ ಹುಚ್ಚುತನದ ಸಮರ್ಪಣೆ' ಎಂದು ಹೇಳಿದ್ದಾರೆ.



Click it and Unblock the Notifications
