Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೃಹತ್ ಮರ ಬೀಳಿಸುತ್ತೆ..ಕಪ್ಪೆಗೂ ಹೆದರುತ್ತೆ.! ಆನೆಗಳ ವರ್ತನೆ ಹೀಗ್ಯಾಕೆ..?
ಸದ್ಯ ಭೂಮಿ ಮೇಲೆ ವಾಸಿಸುತ್ತಿರುವ ಬೃಹತ್ ಪ್ರಾಣಿಗಳಲ್ಲಿ ಆನೆಗಳ ಮೊದಲ ಸ್ಥಾನದಲ್ಲಿವೆ. ಭಾರತದಲ್ಲಿ ಆನೆಗಳ ಸಂಖ್ಯೆ ಕೆಡಿಮೆ ಏನಿಲ್ಲ. ಭಾರತದಲ್ಲ ಸುಮಾರು 25ರಿಂದ 30 ಸಾವಿರ ಸಂಖ್ಯೆಯ ಆನೆಗಳಿವೆ. ಕಾಡು ಪ್ರದೇಶಗಳು ಇಂದು ನಾಶವಾಗಿರೋದ್ರಿಂದ ಆನೆಗಳು ಆಹಾರ ಹುಡುಕಿ ನಗರಗಳತ್ತ ಬರುತ್ತಿವೆ.
ಇನ್ನು ಆನೆಗಳು ಬುದ್ಧವಂತಿಕೆಗೆ ಹೆಸರಾಗಿರುವ ಪ್ರಾಣಿಗಳು, ಅದರಲ್ಲೂ ಭಾರತದಲ್ಲಿ ಅವುಗಳನ್ನು ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತದೆ. ಬಹುತೇಕ ದೇವಾಲಯಗಳಲ್ಲಿ ಆನೆಗಳಿಗೆ ಪೂಜೆ ನಡೆಯುತ್ತವೆ. ದೇವಾಲಯದ ಪೂಜೆ, ಜಾತ್ರೆಗಳಲ್ಲಿ ಆನೆಗಳು ಭಾಗಿಯಾಗುತ್ತವೆ. ಈ ಆನೆಗಳನ್ನು ಹಿಡಿದು ಪಳಗಿಸಲಾಗಿರುತ್ತದೆ.
ಆನೆಗಳು ಎಷ್ಟು ಬುದ್ಧಿವಂತ ಪ್ರಾಣಿಗಳು ಅನ್ನೋದು ಹಲವು ಬಾರಿ ಸಾಬೀತು ಸಹ ಆಗಿದೆ. ಅವು ಮಾನವರನ್ನು ತನ್ನ ಮಾವುತನನ್ನು ಕುಟುಂಬದ ಸದಸ್ಯನಂತೆ ಕಾಣುತ್ತವೆ. ಆದರೆ ಕೆಲವೊಂದು ಬಾರಿ ಅದೇ ಮಾವುತ ಹಾಗೂ ದಾರಿಯಲ್ಲಿ ಸಿಕ್ಕವರ ಮೇಲೆ ದಾಳಿಗೂ ಮುಂದಾಗುತ್ತವೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನದಿಂದ ಆನೆಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಒಂದರಲ್ಲಿ ಆನೆಯೊಂದು ದೊಡ್ಡ ಮರವನ್ನೇ ನೆಲಸಮ ಮಾಡಿ ಅದರ ಸೊಪ್ಪು ಸೇವಿಸಲು ಮುಂದಾದರೆ ಇನ್ನೊಂದು ವಿಡಿಯೋದಲ್ಲಿ ಆನೆಯೊಂದು ಸಾಕು ನಾಯಿಯ ನೋಡಿ ಹೆದರಿಕೊಂಡು ಬದಿಯಲ್ಲಿ ಚಲಿಸುತ್ತಿದೆ. ಇದಿಷ್ಟೆ ಅಲ್ಲ ಸಾಕಾನೆಯೊಂದು ಸ್ನಾನ ಮಾಡುವಾಗ ಪುಟ್ಟ ಕಪ್ಪೆಯೊಂದನ್ನು ಕಂಡು ಹೆದರಿಕೊಂಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು.
ಈ ಎಲ್ಲಾ ವಿಡಿಯೋಗಳ ನೋಡಿದ ಮಂದಿಗೆ ಅಚ್ಚರಿ ಕಾಡಿದೆ. ಕೆಲವೊಮ್ಮೆ ಆನೆಗಳು ದೈತ್ಯ ಸಿಂಹ, ಹುಲಿ ಅಷ್ಟೇ ಏಕೆ ದೊಡ್ಡ ದೊಡ್ಡ ಮರವನ್ನು ತಮ್ಮ ಬಲಶಾಲಿ ಸೊಂಡಿಲಲ್ಲಿ ಮುರಿದು ಬೀಳಿಸುತ್ತವೆ. ಇನ್ನು ಕೆಲವೊಮ್ಮೆ ಸಣ್ಣ ಪುಟ್ಟ ಪ್ರಾಣಿಗಳಿಗೂ ಹೆದರಿ ತಣ್ಣಗಾಗುತ್ತವೆ.
ಹಾಗಾದ್ರೆ ಭೂಮಿ ಮೇಲಿನ ದೊಡ್ಡ ಪ್ರಾಣಿಗಳ ಈ ರೀತಿಯ ನಡವಳಿಕೆಗೆ ಕಾರಣವೇನು? ಅವುಗಳಿಗೆ ಏಕೆ ಭಯವಾಗುತ್ತದೆ.? ಒಮ್ಮೆ ಬಲಶಾಲಿಯಾಗಿ ಮೈ ಮೇಲೆ ಎರಗುವ ಪ್ರಾಣಿ ಕೆಲವೊಮ್ಮೆ ಈ ರೀತಿ ವರ್ತಿಸುವುದನ್ನು ಕಂಡು ಜನ ಬೆರಗಾಗಿದ್ದಾರೆ. ಅಚ್ಚರಿ ವಿಚಾರ ಎಂದರೆ ಆನೆಗಳು ಭೂಮಿ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತೀ ದೊಡ್ಡ ಮೆದುಳು ಹೊಂದಿವೆ. ಅವು ನೂರಾರು ವರ್ಷ ಕಳೆದರು ಒಮ್ಮೆ ಭೇಟಿ ನೀಡಿರುವ ಸ್ಥಳ ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಹೊಂದಿವೆ.
ಒಮ್ಮೆ ಅವು ನೀರಿನ ಮೂಲ ಹುಡುಕಿದ್ದರೆ ಅಲ್ಲಿಗೆ ಮತ್ತೆ ಹಿಂತಿರುಗಿ ಬರುವಷ್ಟು ನೆನಪಿನ ಶಕ್ತಿಯಂತು ಹೊಂದಿವೆ ಎಂಬುದು ನ್ಯೂಯಾರ್ಕ್ ಸಿಟಿ ಯುನಿವರ್ಸಿಟಿ ಅಧ್ಯಯನವೊಂದರಲ್ಲಿ ತಿಳಿದುಬಂದಿದೆ. ಆದ್ರೆ ಇಲ್ಲಿ ಮೂರು ವಿಡಿಯೋದಲ್ಲಿ ಒಂದೊಂದು ರೀತಿಯ ವರ್ತನೆ ನಾವು ನೋಡಬಹುದು. ಒಂದು ವಿಡಿಯೋದಲ್ಲಿ ಆನೆ ದೈತ್ಯಾಕಾರದ ದೊಡ್ಡ ಮರವನ್ನೇ ನೆಲಸಮ ಮಾಡಿದ್ದರೆ ಮತ್ತೊಂದರಲ್ಲಿ ಸಣ್ಣ ಕಪ್ಪೆಗೂ ಹೆದರಿಕೊಳ್ಳುತ್ತಿದೆ.
ವಿಡಿಯೋದಲ್ಲಿ ಏನಿದೆ?
ಆಹಾರ ಹುಡುಕುತ್ತಿರುವ ಆನೆಯೊಂದು ತನ್ನ ದೇಹಕ್ಕಿಂತ ದೊಡ್ಡದಾದ ಮರವನ್ನು ಬೀಳಿಸಲು ಯತ್ನಿಸುತ್ತಿದೆ. ಅದು ಆಹಾರಕ್ಕಾಗಿ ಈ ಕೆಲಸಕ್ಕೆ ಕೈ ಹಾಕಿದೆ. ಇನ್ಜೊಂದು ವಿಡಿಯೋದಲ್ಲಿ ಆನೆ ನಡೆದು ಬರುವ ದಾರಿಯಲ್ಲಿಯೇ ನಾಯಿಯೊಂದು ಮಲಗಿದ್ದು, ನಾಯಿಯನ್ನು ಕಂಡು ಆನೆ ಹೆದರಿ ಬದಿಯಲ್ಲಿ ನಡೆದು ಹೋಗಿದೆ. ಇದರಲ್ಲಿ ಆನೆ ಬೃಹತ್ ಆಕೃತಿಯಾಗಿದ್ದರೂ ಬಲಶಾಲಿಯಾಗಿದ್ದರೂ ಈ ರೀತಿ ಭಯ ಪಡುತ್ತಿರುವುದನ್ನು ಕಂಡು ಜನ ಅಚ್ಚರಿಗೊಳಗಾಗಿದ್ದಾರೆ.
ಇದಕ್ಕೂ ಮೊದಲು ಕಪ್ಪೆಯೊಂದನ್ನು ಕಂಡ ಆನೆ ಹೆದರಿಕೊಂಡಿದ್ದ ವಿಡಿಯೋ ಸಹ ಹರಿದಾಡಿತ್ತು. ಆದ್ರೆ ಆನೆಗಳು ಈ ರೀತಿ ಯಾಕೆ ವರ್ತಿಸುತ್ತವೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ಆನೆಗಳು ಗುಂಪಿನಲ್ಲಿದ್ದಾಗ ಅವು ಯಾವ ಬೆದರಿಕೆಗಳಿಗೂ ಹೆದರುವುದಿಲ್ಲವಂತೆ. ಆದರೆ ಒಂಟಿಯಾಗಿದ್ದಾಗ ಅವುಗಳು ವಿಚಲಿತವಾಗುತ್ತವೆ ಎನ್ನಲಾಗಿದೆ. ಅಂದರೆ ಆನೆಗಳು ಗುಂಪಿನಲ್ಲಿ ನಾಯಕ ಎಂಬಂತೆ ಒಂದು ಆನೆಯನ್ನೇ ಹೊಂಬಾಲಿಸುತ್ತವೆ. ಆದರೆ ಒಂಟಿಯಾಗಿದ್ದಾಗ ತಾವಾಗಿಯೇ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಅವು ವಿಚಲಿತಗೊಂಡಂತೆ ಕಾಣುತ್ತವೆ. ಹೀಗಾಗಿ ನೀವು ಒಂಟಿ ಆನೆಗಳು ಈ ರೀತಿ ಸಣ್ಣ ಪುಟ್ಟ ಪ್ರಾಣಿಗಳ ಕಂಡು ಭಯ ಬೀಳುವುದನ್ನು ನಾವು ನೋಡಬಹುದು.



Click it and Unblock the Notifications
