Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3 ಲಕ್ಷ ಹಣ ತಿಂದ ನಾಯಿ, ಆದರೆ ಅವರಿ 2.9 ಲಕ್ಷ ಮರಳಿ ಸಿಕ್ತು, ಹೇಗೆ ಗೊತ್ತಾ? ವೈರಲ್ ವೀಡಿಯೋ
ಯುಎಸ್‌ಎನಲ್ಲಿ ವಾಸಿಸುತ್ತಿರುವ ಆ ದಂಪತಿಗೆ . ಹೃದಯಾಘಾತವಾಗುವೆಂದು ಬಾಕಿ, ಇದನ್ನು ನಾವು ಹೇಳುತ್ತಿಲ್ಲ, ಅವರೇ ಹೇಳಿರುವುದು, ಅವರ ನಾಯಿ ಮಾಡಿರುವ ಕಾರ್ಯಕ್ಕೆ ದಂಗಾಗಿ ಹೋಗಿದ್ದರು, ಏಕೆಂದರೆ ಅವರ ಮುದ್ದಿನ ನಾಯಿ ಬರೋಬರಿ $4000 ಅಂದರೆ ಭಾರತದ ರುಪಾಯಿಗೆ ಹೋಲಿಸಿದರೆ 3 ಲಕ್ಷ ಹಣವನ್ನು ತಿಂದು ಬಿಟ್ಟಿತ್ತು.

ಅವರು ನೋಡಿದರೆ ಅವರ ಮನೆಯ ಹಾಲ್‌ನಲ್ಲಿ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಕೆಲವೊಂದು ನೋಟುಗಳು ಹರಿದಿತ್ತು, ಅವರಿಗೆ ಸುಮಾರು 1 ಲಕ್ಷ ರುಪಾಯಿ ಸಿಕ್ಕಿತ್ತು, ನಂತರ ನಾಯಿ ವಾಂತಿ ಮಾಡಿದಾಗ ಅದರಲ್ಲಿ ಬಂದ ನೋಟುಗಳನ್ನು ತೊಳೆದಾಗ ಸುಮಾರು 20,000 ರುಪಾಯಿ ಸಿಕ್ತು, ನಂತರದ ದುಡ್ಡಿಗೆ ಅವರ ನಾಯಿ ಕಕ್ಕ ಹಾಕುವುದನ್ನು ಕಾಯಬೇಕಾಗಿ ಬಂತು.
ಫಹಾದ್ ಫಾಸಿಲ್ ಅಭಿನಯದ ತೊಂಡಿಮುದುಲಂ ದ್ರಿಕ್‌ಸಾಕ್ಸಿಯಂ ಎಂಬ ಮಲಯಾಳಂ ಚಿತ್ರದ ಕತೆ ಈ ಸ್ಟೋರಿಗೆ ಚೆನ್ನಾಗಿ ಹೋಲುತ್ತದೆ. ಆ ಸಿನಿಮಾ ಕಳ್ಳ ಚೈನ್ ನುಂಗಿದಾಗ ಅವನು ಮಲವಿಸರ್ಜನೆ ಮಾಡುವುದನ್ನು ಕಾಯುತ್ತಾರೆ ಪೊಲೀಸರು, ಅದೇ ರೀತಿ ಈ ದಂಪತಿ ಕೂಡ ತಮ್ಮ ಮುದ್ದಿನ ನಾಯಿ ಯಾವಾಗ ಕಕ್ಕ ಹಾಕುವುದೋ ಎಂದು ಕಾಯುತ್ತಾ ನಿಲ್ಲುತ್ತಾರೆ.
ನಂತರ ಮಲದಿಂದ ಆ ದುರ್ವಾಸನೆ ಸಹಿಸಿ ಬಂದ ಹಣ್ಣದ ನೋಟುಗಳನ್ನು ತೊಳೆದು ಒಣಗಿಸುತ್ತಾರೆ ಹೀಗೆ ಅವರಿಗೆ ಒಟ್ಟು 2.9 ಲಕ್ಷ ಹಣ ಮರಳಿ ಸಿಗುತ್ತದೆ, ಸುಮಾರು $450 ಅಂದರೆ ರು. 37000 ರುಪಾಯಿ ನಷ್ಟವಾಯಿತು ಅವರಿಗೆ.
ಹಣವೆಂದರೆ ಕಕ್ಕದಲ್ಲಿ ಬಂದರೂ ಒಳೆದು ಬಳಸುತ್ತಾರೆ
ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತೆ ಎಂಬ ಮಾತಿದೆ, ಹಣ ಹೇಸಿಗೆಯಲ್ಲಿ ಬಿದ್ದಿದ್ದರೂ ಎರಕುತ್ತಾರೆ, ಅದಕ್ಕೆ ಇದುವೇ ಒಂದು ಸಾಕ್ಷಿ. ನಾಯಿ ತಿಂದ ಹಣವನ್ನು ಅವರು ಮರಳಿ ಪಡೆದಿದ್ದದು. ನಾಯಿ ಮಲವಿಸರ್ಜನೆ ಮಾಡಿದಾಗ ಆ ಹಣ ಅವರಿಗೆ ದೊರೆಯುವುದು.
ಇದನ್ನು ಓದಿದವರು ನಾಯಿಗೆ ಸಿಗುವಂತೆ ಅಷ್ಟೊಂದು ಕೇರ್‌ಲೆಸ್ ಆಗಿ ಹಣ ಇಟ್ಟಿದ್ದು ಏಕೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಬಹುತೇಕ ಶ್ವಾನ ಪ್ರೇಮಿಗಳು ನಾಯಿಯನ್ನು ಮನೆಯೊಳಗಡೆ ಬಿಟ್ಟುಕೊಳ್ಳುತ್ತಾರೆ, ತಮ್ಮ ಬೆಡ್‌ನಲ್ಲಿಯೇ ಮಲಗಿಸುತ್ತಾರೆ. ಇವರು ಕೂಡ ಈ ನಾಯಿಯನ್ನು ತುಂಬಾ ಮುದ್ದಿನಿಂದ ಸಾಕಿದ್ದರು, ಅದು ಹಣ ಏನೂ ಮಾಡಲ್ಲ ಎಂದು ಇಟ್ಟಿರಬಹುದು ಆದರೆ ಹಣವನ್ನು ಅದರ ಕಕ್ಕದಿಂದ ತೆಗೆಯಬೇಕೆಂಬ ಯೋಗ ಅವರಿಗೆ ಇತ್ತೇನೋ...
ದಂಪತಿ ತಮಗಾದ ನಷ್ಟದ ಬಗ್ಗೆ ಬ್ಯಾಂಕ್‌ನವರಿಗೆ ತಿಳಿಸಿದಾಗ ಅವರು ನೋಟುಗಳನ್ನು ಸ್ವೀಕರಿಸುವುದಾಗಿ ತಿಳಿಸಿರುವುದರಿಂದ ಅವರಿಗೆ ತುಂಬಾ ಹಣ ನಷ್ಟವಾಗಿಲ್ಲ. ಅಲ್ಲದೆ ನಾಯಿಗೂ ಏನೂ ಆಗಿಲ್ಲ, ಆ ನಾಯಿ ಸ್ವಲ್ಪ ದೊಡ್ಡದಾಗಿರುವುದರಿಂದ ನಾಯಿಗೆ ಏನೂ ತೊಂದರೆಯಾಗಿಲ್ಲ, ಆದರೆ ಮರಿ ನಾಯಿಯಾಗಿದ್ದರೆ ಸಮಸ್ಯೆಯಾಗುತ್ತಿತ್ತು ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಈ ಕತೆ ಕೇಳಿ ನಿಮಗೇನಿಸಿತು?



Click it and Unblock the Notifications