Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ನನ್ನ ಮದುವೆಯಾಗುವವಳಿಗೆ 50 ಎಕರೆ ಕಾಫಿ ಎಸ್ಟೇಟ್ ಬರೆಯುತ್ತೇನೆ ಎಂದ ಅಸಾಮಿ, ಆದರೂ ಆದ ಫುಲ್ ಟ್ರೋಲ್
ಇಲ್ಲೊಬ್ಬ ಅಸಾಮಿ ಹಾಯ್ ಫ್ರೆಂಡ್ಸ್, ಇಲ್ಲಿ ಕಾಣುವುದೆಲ್ಲಾ ಕಾಫಿ ಎಸ್ಟೇಟ್ , ನನ್ನ ಹೆಸರು ರವಿಚಂದ್ರನ್ ಅಂತ, ಈ ಎಸ್ಟೇಟ್ ಎಲ್ಲಾ ನಂದೇ, ಸುಮಾರು 50 ಎಕರೆ ಇದೆ, ನನ್ನ ಮದುವೆಯಾಗುವ ಹುಡುಗಿಗೆ ಈ ಎಸ್ಟೇಟ್ ಬರೆದುಕೊಡುತ್ತೇನೆ, ಪ್ಲೀಸ್ ಮ್ಯಾರಿ ಮಿ, ಯಾರಾದರೂ ರೆಡಿಯಾಗಿದ್ದಾರೆ ಎನಿ ಟೈಮ್ , ಎನಿವೇರ್ I am Ready ಎಂದು ಮದುವೆಗಾಗಿ ಅಂಗಲಾಚುವ ವೀಡಿಯೋ ವೀಕ್ಷಕರ ಮುಖನದಲ್ಲಿ ನಗು ಮೂಡಿಸುವಂತಿದೆ, ಜನರನ್ನು ರಂಜಿಸಲು ಆತ ಮಾಡಿರುವ ಪ್ರಯತ್ನವನ್ನು ಮೆಚ್ಚಿಕೊಳ್ಳಬೇಕು.

ಹಸಿ ಸುಳ್ಳು ಹೇಳುವ ಮೂಲಕ ಜನರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದಾರೆ, ಏಕೆಂದರೆ ಅವರು ಕಾಫಿ ಎಸ್ಟೇಟ್ ನಂದೇ ಎಂದು ತೋರಿಸಿದ್ದು ಮಾತ್ರ ಟೀ ಎಸ್ಟೇಟ್ ಅನ್ನು..... ಅದರಲ್ಲಿಯೇ ಗೊತ್ತಾಗುತ್ತೆ, ಆತ ಅದರ ಮಾಲೀಕವಲ್ಲ, ಸುಮ್ಮನೆ ಮನರಂಜನೆಗೆ ಹೀಗೆ ಮಾಡಿದ್ದಾನೆ. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ಕಮೆಂಟ್‌ಗಳು ಬರ್ತಿವೆ. ಅದು ಕಾಫಿ ಎಸ್ಟೇಟ್ ಗುರೂ ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನು ಕೆಲವರು ಈತ ಹೇಳಿರುವುದನ್ನು ನಿಜವಿರಬಹುದೆಂದು ನಂಬಿ ಮದುವೆಯಾಗುವ ಆತುರದಲ್ಲಿ ಆತ ಟೀ ಬದಲಿಗೆ ಕಾಫಿ ಎನ್ನುತ್ತಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆತನಿಗೂ ತಾನು ನಿಂತಿರುವುದು ಟೀ ಎಸ್ಟೇಟ್‌ನಲ್ಲಿ ಎಂಬುವುದು ಗೊತ್ತಿದೆ, ಫ್ರೆಂಡ್ಸ್ ಜೊತೆ ಕೇರಳ ಟ್ರಿಪ್ ಮಾಡುವಾಗ ಅಲ್ಲಿಯ ಟೀ ಎಸ್ಟೇಟ್‌ವೊಂದರಲ್ಲಿ ಮಾಡಿರುವ ವೀಡಿಯೋ ಅದಾಗಿದ್ದು, ತಮಾಷೆಗಾಗಿ ಮಾಡಿರುವ ವ ವೀಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಸಕತ್ ಫನ್ನಿಯಾಗಿ ಗಮನ ಸೆಳೆದಿದ್ದಾರೆ. ಆತ ಅದನ್ನು ಕಾಫಿ ಎಸ್ಟೇಟ್ ಎಂದಿರುವುದು ಆತನ ಪುಣ್ಯ, ಇಲ್ಲದಿದ್ದರೆ ಅದರ ನಿಜವಾದ ಓನರ್ ಆಘಾತಕ್ಕೆ ಒಳಗಾಗುತ್ತಿದ್ದ ಅಲ್ವಾ?
ಹಾಯ್ ಫ್ರೆಂಡ್ಸ್ ನಾನು ಬೆಳಗ್ಗೆ ಎದ್ದೆ, ಹಲ್ಲುಜ್ಜಿದೆ ಎಂದು ಮಾಡುವ ವೀಡಿಯೋಗಿಂತ ನಗು ಮೂಡಿಸುವ ಇಂಥ ವೀಡಿಯೋ ಸೂಪರ್ ಆಗಿದೆ ಅಲ್ವಾ?



Click it and Unblock the Notifications
