Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅದೃಷ್ಟವೆಂದರೆ ಹೀಗಿರಬೇಕು: ಕೋಟಿ ಬೆಲೆಯ ಕಾರು ಖರೀದಿಸಿದರು ಬೀದಿ ಬದಿಯಲ್ಲಿ ವಡಾಪಾವ್ ಮಾರುತ್ತಿರುವ ಈ ಮಹಿಳೆ
ದೆಹಲಿಯ ವಡಾಪಾವ್ ಮಾರುವ ಹುಡುಗಿ(ಮಹಿಳೆ, ಸೋಷಿಯಲ್ ಮೀಡಿಯಾದಲ್ಲಿ ವಡಾಪಾವ್ ಗರ್ಲ್ ಎಂದೇ ಸೆನ್ಸೇಷನ್ ಮೂಡಿಸದವರು) ಸೆನ್ಸೇಷನ್ ಚಂದ್ರಿಕಾ ದೀಕ್ಷಿತ್ ದುಬಾರಿ ಬೆಲೆಯ ಕಾರು ಖರೀದಿಸುವ ಮೂಲಕ ಮತ್ತೊಮ್ಮೆ ತುಂಬಾನೇ ಸದ್ದು ಮಾಡಿದ್ದಾರೆ.

ಬೆಳವಣಿಗೆ ಎಂದರೆ ಹೀಗಿರಬೇಕು ಎಂದು ಜನರು ಮಾತನಾಡುತ್ತಿದ್ದಾರೆ. ಸುಮಾರು ಕೋಟಿ ಬೆಲೆ ಬಾಳುವ ಒಡತಿ ಈ ವಡಾಪಾವ್ ಮಾರುವ ಹುಡುಗಿ.
ಫೋರ್ಡ್ ಮುಸ್ತಾಂಗ್ (Ford Mustang) ದುಬಾರಿ ಕಾರು ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ದೆಹಲಿಯಲ್ಲಿ ವಡಾಪಾವ್ ಮಾಡುತ್ತಿರುವ ಈ ಹುಡುಗಿ ತುಂಬಾನೇ ಫೇಮಸ್. ಇವರು ದಿನದಲ್ಲಿ 50 ಸಾವಿರಕ್ಕೂ ಅಧಿಕ ವ್ಯಾಪಾರ ಮಾಡುತ್ತಾರೆ ಎಂದು ಹೇಳಲಾಗುವುದು, ಇವರು ನೀಡುವ ವಡಾಪಾವ್ ತುಂಬಾನೇ ಫೇಮಸ್ ಆಗಿದ್ದು ಜನರು ವಡಾಪಾವ್ ಖರೀದಿಸಲು ಕ್ಯೂ ನಿಲ್ಲುತ್ತಾರೆ.
ಸೋಷಿಯಲ್ ಮೂಲಕ ಸ್ಟಾರ್ ಆದರು
ಈ ಸೋಷಿಯಲ್ ಮೀಡಿಯಾ ಯಾರನ್ನುಯಾವಾಗ ಸ್ಟಾರ್ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇವರು ಕೂಡ ಹಾಗೆಯೇ ಇದ್ದಕ್ಕಿದ್ದಂತೆ ಸ್ಟಾರ್ ಆದವರು. ಅಮಿತ್ ಜಿಂದಾಲ್ ಎಂಬ ಫುಡ್ ವ್ಲೋಗರ್ ಇವರ ಅಂಗಡಿಗೆ ಹೋಗಿ ಇಲ್ಲಿ ಸಿಗುವ ವಡಾಪಾವ್ ಬಗ್ಗೆ ರಿವ್ಯೂವ್ ನೀಡಿದ್ದೇ ತಡ ಇವರು ಸ್ಟಾರ್ ಆದರು. ದಿನದಲ್ಲಿ ಸಾವಿರಾರುಗಟ್ಟಲೆ ದುಡಿಯುತ್ತಾರೆ ಎಂದ ಮೇಲೆ ವ್ಯಾಪಾರ ಹೇಗಿರಬೇಡ. ಜನ ಹುಡುಕಿಕೊಂಡು ಇವರ ಅಂಗಡಿಗೆ ಬರುತ್ತಾರೆ, ಅನೇಕ ಮಾಧ್ಯಮಗಳು ಇವರ ಬಗ್ಗೆ ಸ್ಪೆಷಲ್ ಸ್ಟೋರಿ ಮಾಡಿದೆ.
ಕೆಲಸ ಬಿಟ್ಟಾಗ ಹೊಟ್ಟೆ ಪಾಡಿಗಾಗಿ ಬೀದಿ ಬದಿಯ ಅಂಗಡಿ ಪ್ರಾರಂಭಿಸಿದರು
ಇವರ ಮಗನಿಗೆ ಡೆಂಗ್ಯೂ ಬಂದಾಗ ಅವರ ಕೆಲಸವನ್ನು ಬಿಡಬೇಕಾಯಿತು. ಅವರ ಗಂಡ Rapido ಟ್ಯಾಕ್ಸಿ ಓಡಿಸುತ್ತಾರೆ. ಆಗ ತನಗೆ ಇಷ್ಟವಾದ ಅಡುಗೆಯನ್ನೇ ವೃತ್ತಿಯನ್ನಾಗಿ ಮಾಡುತ್ತಾರೆ.
ಒಂದೇ ತಿಂಗಳಿನಲ್ಲಿ ಬದಲಾಯ್ತು ಬದುಕು
ಇವರು ಅಳುತ್ತಿರುವ ವೀಡಿಯೋ ಮಾರ್ಚ್‌ನಲ್ಲಿ ವೈರಲ್ ಆಯ್ತು. ದೆಹಲಿಯ ಮುನ್ಸಿಪಲ್ ಕಾರ್ಪೋರೇಷನ್ ಅವರು ಅವರು ಅಂಗಡಿ ಇಟ್ಟಿರುವ ಕಡೆ ವ್ಯಾಪಾರ ಮಾಡುವಂತಿಲ್ಲ ಎಂದು ಒತ್ತಡ ಹಾಕಲಾಯ್ತು. ಆಕೆ ಅವರಿಗೆ 35,000 ಕೊಟ್ಟರೂ ಹಣಕ್ಕಾಗಿ ಮತ್ತೆ ಬೇಡಿಕೆ ಇಡುತ್ತರೆ ಎಂದು ಚಣದ್ರಿಕಾ ದೀಕ್ಷಿತ್ ಹೇಳಿದ್ದರು. ಇತರರು ಪರ್ಮಿಷನ್ ಇಲ್ಲದೆ ಕೂಡ ಅಂಗಡಿ ನಡೆಸುತ್ತಾರೆ, ಆದರೆ ನನಗೆ ಮಾತ್ರ ತೊಂದರೆ ಕೊಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ಅವರು ಅಳುತ್ತಿರುವ ವೀಡಿಯೋ ವೈರಲ್ ಆಗಿತ್ತು.
ಅವರ ಬ್ಯೂಟಿಯಿಂದಾಗಿ ತುಂಬಾನೇ ಗಮನ ಸೆಳೆದವರು
ನೋಡಿದರೆ ಸಿನಿಮಾ ನಟಿಯಷ್ಟು ಆಕರ್ಷಕವಾಗಿದ್ದಾರೆ, ಅಷ್ಟೊಂದು ಸುಂದರವಾಗಿರುವ ಅವರು ಸಕತ್ ಸ್ಟೈಲಿಷ್ ಆಗಿ ಕೂಡ ಕಾಣಿಸುತ್ತಾರೆ. ಹೀಗಾಗಿ ಇವರ ವೀಡಿಯೋ ಬ್ಯೂಟಿಪುಲ್ ವಡಾಪವ್ ಗರ್ಲ್ ಎಂದು ವೈರಲ್ ಆಯ್ತು.
ಸೆಲೆಬ್ರಿಟಿಗಳು ಕೂಡ ಇಲ್ಲಿಗೆ ಬರುತ್ತಾರೆ
ಇಲ್ಲಿ ವಡಾಪಾವ್ ಸವಿಯಲು ಸೆಲೆಬ್ರಿಟಿಗಳು ಬರುತ್ತಾರೆ. ಇನ್‌ಸ್ಟಾಗ್ರಾಂ ಅನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹೌದು ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ವ್ಯಾಪಾರದ ಬಗ್ಗೆ ವೀಡಿಯೋ ಮಾಡಿ ಹಾಕುತ್ತಿದ್ದರು. ಮುರು ಸಾವಿರಕ್ಕೂ ಅಧಿಕ ಫಾಳೋವರ್ಸ್ ಕೂಡ ಇದೆ. ಇದೀಗ ವಡಾಪಾವ್ ಮಾರುತ್ತಲೇ ಸೆಲೆಬ್ರಿಟಿ ಆಗಿದ್ದಾರೆ. ಸೆಲೆಬ್ರಿಟಿಗಳು ಇವರ ಬಳಿ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ.
ಕಷ್ಟಪಟ್ಟು ದುಡಿದರೆನಖಂಡಿತ ಫಲ ಸಿಗುತ್ತದೆ. ಚಪ್ರಿ ಚಾಯ್ ವಾಲಾ ಕೂಡ ಇದೇ ರೀತಿ ಟೀ ಮಾಡಿ ಕೋಟಿಗಟ್ಟಲೆ ದುಡಿದಿದ್ದಾರೆ, ಶ್ರಮದ ಜೊತೆಗೆ ಅದೃಷ್ಟ ಕೂಡ ಇದ್ದರೆ ಈ ರೀತಿ ಸ್ಟಾರ್ ಕೂಡ ಆಗುತ್ತಾರೆ...



Click it and Unblock the Notifications
