Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಟೀ ಮಾರುತ್ತಿದ್ದವನಿಗೆ ಒಲಿದ ಅದೃಷ್ಟ..! ಅಂಗಡಿ ವಿಸ್ತರಿಸಲು 1 ಕೋಟಿ ರೂ. ಹೂಡಿಕೆ!
ಟೀ ಮಾರಾಟ ಅನ್ನೋದು ಈಗ ಬೀದಿ ಬದಿಯ ವ್ಯಾಪಾರವಾಗಿ ಉಳಿದಿಲ್ಲ. ಬದಲಿಗೆ ಒಂದು ಉದ್ಯಮವಾಗಿ ರೂಪಾಂತರಗೊಂಡಿದೆ. ಚಾಯ್ ವಾಲಾ ಒಂದು ದೊಡ್ಡ ಬ್ಯುಸಿನೆಸ್ ಮಾಡಲ್ ಆಗಿ ಬದಲಾಗಿದೆ. ಭಾರತವೂ ಸೇರಿ ವಿಶ್ವದ ಹಲವು ಭಾಗದಲ್ಲಿ ಟೀ ಅತೀ ಜನಪ್ರಿಯ ಪಾನಿಯದಲ್ಲಿ ಒಂದಾಗಿದೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ್, ಶ್ರೀಲಂಕಾ, ಚೀನಾ ಹೀಗೆ ಏಷ್ಯನ್ ದೇಶದಲ್ಲಿ ಮಾತ್ರವಲ್ಲ ಯೂರೋಪ್‌ನಲ್ಲೂ ಬಹಳ ಫೇಮಸ್.
ಹಾಗೆ ನಾವು ಟೀ ಉದ್ಯಮದಲ್ಲಿ ಲಾಭ ಮಾಡುತ್ತಿರುವವರನ್ನು ಕೂಡ ಈಗ ನೋಡುತ್ತಿದ್ದೇವೆ, ಹಿಂದೆಲ್ಲಾ ಚಾಯ್, ಟೀ ಅಂಗಡಿ ಅಂದರೆ ಕೇರ್ ಲೆಸ್ ಆಗಿ ನೋಡುತ್ತಿದ್ದವರು ಈಗ ಚಾಯ್ ವಾಲಾ ಅಂಗಡಿಗಳ ಅವರ ಶಾಪ್‌ಗಳು, ಫ್ರಾಂಚೈಸಿ ನೋಡಿ ಬೆರವಾಗಿದ್ದಾರೆ. ಅಂತಹ ಕೆಲವು ಉದಾಹರಣೆ ಕೂಡ ನಮ್ಮ ನಡುವೆ ಇದೆ. ಎಂಬಿಎ ಚಾಯ್ ವಾಲಾ ಇದಕ್ಕೊಂದು ಉದಾಹರಣೆ.

ಹಾಗೆ ನಾವಿಂದು ಟೀ ಮಾರುತ್ತಿದ್ದ ಯುವಕನೊಬ್ಬನಿಗೆ ಈಗ ಕೋಟಿ ರೂಪಾಯಿ ಹೂಡಿಕೆ ಹರಿದು ಬಂದಿರುವ ಕುರಿತಂತೆ ತಿಳಿದುಕೊಳ್ಳೋಣ. ಪಾಕಿಸ್ತಾನದ ಬೀದಿಯಲ್ಲಿ ಟೀ ಮಾರುತ್ತಿದ್ದ ಯುವಕ ಏಕಾಏಕಿ ಸುದ್ದಿಯಾಗಿ ಈಗ ಬರೋಬ್ಬರಿ 1 ಕೋಟಿ ರೂಪಾಯಿಯ ಹೂಡಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಯಾರಾತ? ಅವನಿಗೆ 1 ಕೋಟಿ ರೂಪಾಯಿ ಹೂಡಿಕೆ ಬಂದಿದ್ದು ಎಲ್ಲಿಂದ? ಆತನ ಒಂದು ದಿನದ ಆದಾಯ ಎಷ್ಟು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
2016ರ ಕಾಲವದು, ಆಗ ಪಾಕಿಸ್ತಾನದಲ್ಲಿಯೂ ಕೂಡ ಆನ್‌ಲೈನ್ ಮಾಧ್ಯಮಗಳು ಚಿಗುರು ಒಡೆಯುತ್ತಿದ್ದ ಕಾಲ. ಆಗ ಪಾಕಿಸ್ತಾನದ ಇಸ್ಲಾಮಾಬಾದ್‌ನ ಬೀದಿಯಲ್ಲಿ ಒಬ್ಬ ಯುವಕ ಟೀ ಮಾರುತ್ತಿದ್ದ ಆದ್ರೆ ಆತನಿಗೆ ಮುಂದೊಂದು ದಿನ ತಾನು ಫೇಮಸ್ ಆಗುತ್ತೇನೆ ಎಂಬ ಯಾವುದೇ ಸುಳಿವು ಕೂಡ ಇರಲಿಲ್ಲ. ಆತನ ಹೆಸರು ಅರ್ಷದ್ ಖಾನ್. ನೀಡಲು ಮಾಡೆಲ್‌ನಂತಿದ್ದ ಆತ ಹೊಳೆಯುವ ನೀಲಿ ಬಣ್ಣದ ಕಣ್ಣುಗಳ ಹೊಂದಿದ್ದ.
ಆತನ ನೋಡಿದವರು ಇವನ್ಯಾರೋ ನಟ ಟೀ ಮಾರುತ್ತಿದ್ದಾನೆ ಎಂದುಕೊಂಡಿದ್ರು. ಆತನ ಟೀ ಮಾರುವ ಶೈಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ನೋಡ ನೋಡುತ್ತಲೇ ಆತ ಸ್ಟಾರ್ ಆಗಿಬಿಟ್ಟಿದ್ದ. ಭಾರತದಲ್ಲಿ ಡಾಲಿ ಚಾಯ್‌ವಾಲಾನಂತೆಯೇ ಆತನೂ ಕೂಡ ಸಿಕ್ಕಾಪಟ್ಟೆ ಫೇಮಸ್ ಆದ. ಆತನ ಹುಡುಕಿಕೊಂಡು ಹೋಗಿ ಟೀ ಕುಡಿಯುವವರಿದ್ದರು.
ಆದ್ರೆ ಆತ ತನ್ನ ಟೀ ಅಂಗಡಿಯನ್ನು ಇನ್ನಷ್ಟು ವಿಶಾಲವಾಗಿ ಹರಡಲು ಮುಂದಾದ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಸಲಾಗುವ ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋಗೆ ತೆರಳಿದ. ಆದ್ರೆ ಆತನ ಜೊತೆಗೆ ಮತ್ತೊಬ್ಬ ಪಾಲುದಾರ ಕಾಜಿಮ್ ಹನಸ್ ಕೂಡ ಇದ್ದ. ಬಳಿಕ ಕಾರ್ಯಕ್ರಮದಲ್ಲಿ ಆತನ ವ್ಯಹವಾರಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಹೂಡಿಕೆ ದೊರಕಿತು, ಇದು ಆತನ ಕಂಪನಿಯ ಶೇ.5ರಷ್ಟು ಈಕ್ವಿಟಿಯ ಬದಲಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ.
1 ಕೋಟಿ ಪಾಕಿಸ್ತಾನಿ ರೂಪಾಯಿ ಅಂದರೆ ಭಾರತದಲ್ಲಿ 30 ಲಕ್ಷ ರೂಪಾಯಿಯಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತ ಪಡೆದ ಆತ ತನ್ನ ಅಂಗಡಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಇಚ್ಛೆ ಹೊರಹಾಕಿದ್ದಾನೆ.
ಕಾಸಿಂ ಹಸನ್ ಮಾರ್ಚ್ 2020 ರಲ್ಲಿ ಇಸ್ಲಾಮಾಬಾದ್‌ನಲ್ಲಿ ತಮ್ಮ ಮೊದಲ ರೂಫ್‌ಟಾಪ್ ಕೆಫೆ ಆರಂಭಿಸಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಕೆಫೆ ಮುಚ್ಚಲಾಗಿತ್ತು. ಬಳಿಕ ಮತ್ತೆ ಇದೇ ಕೆಫೆಯನ್ನು ತೆರೆದರು. ಅವರು 35 ಸಾವಿರ ಪಾಕಿಸ್ತಾನಿ ರೂಪಾಯಿಗೆ ತಮ್ಮ ಫ್ರಾಂಚೈಸಿ ಹಕ್ಕು ಮಾರಾಟ ಮಾಡುತ್ತಾರೆ. ಇದಿಷ್ಟೆ ಅಲ್ಲ ಯುಕೆಯಲ್ಲಿಯೂ ಒಂದು ಕೆಫೆಯನ್ನು ಹೊಂದಿದ್ದಾರೆ. ಅಲ್ಲಿಯೂ ಫ್ರಾಂಚೈಸಿ ಬ್ಯೂಸಿನೆಸ್ ನಡೆಯುತ್ತಲೇ ಇದೆ. ಈ ನಡುವೆ ಅರ್ಷದ್ ಜೊತೆ ಸೇರಿ ಪಾಕಿಸ್ತಾನದಲ್ಲಿ 1 ಕೋಟಿ ರೂಪಾಯಿ ಹೂಡಿಕೆ ಸೇಳೆದಿದ್ದಾರೆ.



Click it and Unblock the Notifications
